Link copied!
Sign in / Sign up
7
Shares

ನಿಮ್ಮ ಯೋನಿಯನ್ನು ಶುಚಿಗೊಳಿಸಲು ಸರಿಯಾದ ಮಾರ್ಗಗಳು

ಸ್ನಾನದ ಕೋಣೆಯಲ್ಲಿ ಉಜ್ಜಿ ತಿಕ್ಕಿಕೊಳ್ಳುವುದು ಅರ್ಥಗರ್ಭಿತ ಪ್ರಕ್ರಿಯೆಯಾಗಿದೆ ಆದರೆ ಅದು ನಿಮ್ಮ ಗುಪ್ತಾಂಗಕ್ಕೆ ಬರುವವರೆಗೆ ಅಷ್ಟೇ. ಯಾವ ತರಹದ ಸೋಪನ್ನು ಬಳಸಬೇಕು? ನೀವು ತುಂಬಾ ಹೆಚ್ಚಾಗಿ ಮಾಡುತ್ತಿರುವಿರಾ? ಅಥವಾ ತೀರಾ ಕಡಿಮೆ ಮಾಡುತ್ತಿರುವಿರಾ? ತಪ್ಪು ಮಾರ್ಗಗಳು ನಿಮ್ಮ ಯೋನಿಯು ಕಿರಿಕಿರಿ ಅನುಭವಿಸುವುದನ್ನು ಅಥವಾ ಈಸ್ಟ್ ಸೋಂಕನ್ನು ಎದುರಿಸುವಂತೆ ಮಾಡುತ್ತದೆ. ಕೆಳಗಿನ ಜಾಗದಲ್ಲಿ ಆರಾಮದಾಯಕವಾಗಿಲ್ಲ ಎನಿಸಿದರೆ ಎಲ್ಲಾ ಕಡೆನೂ ಆರಾಮದಾಯಕವಾಗಿಲ್ಲ ಎನಿಸುವುದು ಸಹಜ. ಯೋನಿಯನ್ನು ತಾಜಾವಾಗಿ, ಆರೋಗ್ಯವಾಗಿ ಮತ್ತು ನಾಜೂಕಾಗಿರುವಂತೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಇದನ್ನು ಮಾಡಿ : ಯೋನಿಯ ಸುತ್ತ ಇರುವ ಪ್ರದೇಶವನ್ನು ಗಮನಿಸಿ

ದೇಹದ ಹೊರ ಭಾಗ ಕೆಳಗಿನ ಪ್ರದೇಶದಲ್ಲಿರುವ ನಿಮ್ಮ ಯೋನಿಗೆ ಕಾಳಜಿ ಮಾಡುವುದು ತುಂಬಾ ಮುಖ್ಯ. ಒಳ ಭಾಗಗಳು ಅದರ ಬಗ್ಗೆ ತಾವೇ ಚೆನ್ನಾಗಿ ಕಾಳಜಿಯನ್ನು ಮಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ತಜ್ಞರು ಹೇಳುವ ಪ್ರಕಾರ ಯೋನಿಯು ಶುಚಿಯಾಗಿರಲು ತನ್ನದೇ ಆದ ಉತ್ತಮ ಕಾರ್ಯವಿಧಾನಗಳನ್ನು ಹೊಂದಿದೆಯಂತೆ. ಮೃದುವಾದ ಕಾಟನ್(ಹತ್ತಿ) ಬಟ್ಟೆಯಿಂದ ಆ ಜಾಗವನ್ನು ಶುಚಿಮಾಡುವುದು ಉತ್ತಮ.


ಇದನ್ನು ಮಾಡಬೇಡಿ : ಅದಕ್ಕಾಗಿ ವಿಶೇಷ ಉತ್ಪನ್ನಗಳನ್ನು ಖರೀದಿಸಬೇಕು ಎನ್ನುವುದು

ಯೋನಿಯು ಸಾಮಾನ್ಯವಾಗಿ ೩.೫ - ೪.೫ Ph ಮಟ್ಟವನ್ನು ಹೊಂದಿದೆ. ನೀವು ನೈರ್ಮಲ್ಯ ಉತ್ಪನ್ನ ಅಥವಾ ಪದಾರ್ಥಗಳು - ಸೋಪು, ಕ್ರೀಮ್ ಗಳನ್ನು ಉಪಯೋಗಿಸಿದಾಗ ಇದು ಸಹಜವಾಗಿ ೮ರಷ್ಟು Ph ಮಟ್ಟವನ್ನು ಹೊಂದಿರುತ್ತದೆ, ಇದು ನಿಮ್ಮ Ph ಮಟ್ಟವನ್ನು ಪ್ರಯಾಸ ಪಡುವಂತೆ ಮಾಡುತ್ತದೆ, ಇದು ಕಿರಿಕಿರಿ, ತುರಿಕೆ, ಮತ್ತು ವಾಸನೆಗೆ ಕಾರಣವಾಗುತ್ತದೆ. ತಜ್ಞರು ಹೇಳುವ ಪ್ರಕಾರ ಸುಗಂಧ ವಾಸನೆ ಇರುವ ಸೋಪುಗಳು ಯೋನಿಯಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತವೆ. ನಿಮ್ಮ ಯೋನಿಯಲ್ಲಿ ಪದೇ ಪದೇ ಕಿರಿಕಿರಿ, ತುರಿಕೆ, ಅಸಹಜ ವಿಸರ್ಜನೆ ಕಂಡು ಬಂದರೆ ನೀವು ನಿಮ್ಮ ಸೋಪಿನ ಬಗ್ಗೆ ಗಮನ ನೀಡಿ ಅದನ್ನು ಬದಲಿಸುವುದು ಒಳ್ಳೆಯದು.


ಮಾಡಿ : ದಿನಕ್ಕೆ ಒಂದು ಬಾರಿ ಶುಚಿ ಮಾಡಿ

ನೀವು ಕಡಿಮೆ ಬಾರಿ ಶುಚಿ ಮಾಡಿದರೆ, ಬೆವರು ಅಥವಾ ತೇವಾಂಶ ಆ ಜಾಗದಲ್ಲಿ ಕಿರಿಕಿರಿ ಅಥವಾ ಸೋಂಕಿಗೆ ಕಾರಣವಾಗಬಹುದು. ನೀವು ದಿನಕ್ಕೆ ಒಂದಕ್ಕಿಂತ ಹೆಚ್ಚಿನ ಬಾರಿ ತೊಳೆಯುತ್ತಿದ್ದರೆ, ಯೋನಿಯ ಸಮತೋಲನವನ್ನು ಕಾಪಾಡುವುದರಲ್ಲಿ ತೊಂದರೆಯಾಗುತ್ತದೆ. ನೀವು ಒಂದು ಮೃದುವಾದ ಬಟ್ಟೆ ಅಥವಾ ನಿಮ್ಮ ಕೈ ಇಂದ ಸ್ವಚ್ಛ ಮಾಡಿಕೊಳ್ಳಿ.ಗಟ್ಟಿಯಾದ ಪದಾರ್ಥಗಳನ್ನು ಬಳಸಬೇಡಿ.ಹೆಚ್ಚು ಶುಚಿಮಾಡುವುದರಿಂದ ಅಸಹಜ ವಿಸರ್ಜನೆ ಮುಂತಾದ ತೊಡಕುಗಳನ್ನು ಎದುರಿಸಬೇಕಾಗುತ್ತದೆ.


ಇದನ್ನು ಮಾಡಬೇಡಿ : ನೀರಿನ ಸಿಂಪನ

ನಿಮ್ಮ ಯೋನಿಯ ಒಳಗೆ ಉತ್ತಮ ಮತ್ತು ಕೆಟ್ಟ ಬ್ಯಾಕ್ಟೀರಿಯಾ ಎರಡು ಇರುತ್ತವೆ. ನೀರನ್ನು ಜೋರಾಗಿ ಅಲ್ಲಿ ಹಾಕುವುದರಿಂದ ಮತ್ತು ಗಟ್ಟಿಯಾಗಿ ತಿಕ್ಕುವುದರಿಂದ ಅವೆರಡಕ್ಕೂ ಹಾನಿಯಾಗಬಹುದು. ಇದರಿಂದ ಉತ್ತಮವಾದ ಅವಶ್ಯ ಬ್ಯಾಕ್ಟೀರಿಯಾಗೆ ನೀವು ಹಾನಿ ಮಾಡಿದರೆ ಕೆಟ್ಟ ಬ್ಯಾಕ್ಟಿರಿಯಾಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಮತ್ತು ಇದರಿಂದ ಸೋಂಕು ಉಂಟಾಗಬಹುದು.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon