Link copied!
Sign in / Sign up
3
Shares

ಯೋನಿಯನ್ನು ದುರ್ವಾಸನೆಯಿಂದ ದೂರವಿರಿಸಿ ಆರೋಗ್ಯಕರವಾಗಿರಿಸಲು 7 ದಾರಿಗಳು

ನಿಮ್ಮ ಯೋನಿಯು ಉಪಯುಕ್ತ ಬ್ಯಾಕ್ಟೀರಿಯಾಗಳು ಮತ್ತು ದ್ರವ್ಯಗಳಿಂದ ಕೂಡಿದ್ದು, ಇವುಗಳು ನಿಮ್ಮನ್ನು ಆರೋಗ್ಯವಾಗಿ ಮತ್ತು ತಾಜಾವಾಗಿ ಇಡುತ್ತವೆ. ಆರೋಗ್ಯಕರ ಯೋನಿಯು ಉಪಕಾರಿ ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತದೆ ಮತ್ತು ಈ ಬ್ಯಾಕ್ಟೀರಿಯಾಗಳು ನಿಮ್ಮ ಯೋನಿಯನ್ನು ಸ್ವಚ್ಛಗೊಳಿಸುತ್ತವೆ ಮತ್ತು ಸೋಂಕಿನಿಂದ ದೂರ ಇಡುತ್ತವೆ. ಯೋನಿಯು ದುರ್ವಾಸನೆ ಬೀರುತ್ತಿದೆ ಎಂದರೆ ಅಲ್ಲಿ ಬೇಡದ ಬ್ಯಾಕ್ಟೀರಿಯಾಗಳು ಹೆಚ್ಚಿವೆ ಎಂದು ಅಥವಾ ಬ್ಯಾಕ್ಟೀರಿಯಾ ತುಲನೆ ಸರಿ ಇಲ್ಲವೆಂದು ಅಥವಾ ಸೋಂಕು ತಾಗಿದೆ ಎಂದರ್ಥ. ನಿಮ್ಮ ಯೋನಿಯು ದುರ್ವಾಸನೆ ಬಿರಡೆ ಆರೋಗ್ಯದಿಂದ ಕೂಡಿರಬೇಕು ಎಂದರೆ ಇಲ್ಲಿ ನಾವು ನೀಡಿರುವ ಸಲಹೆಗಳನ್ನ ಪಾಲಿಸಿ

೧. ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ

ಸರಿಯಾಗಿ ಹೇಳಬೇಕೆಂದರೆ ನೀರು ಜೀವಾಣು ವಿಷಗಳನ್ನು ದೇಹದಿಂದ ಹೊರತಳ್ಳುತ್ತದೆ. ಯೋನಿಯಿಂದ ದುರ್ವಾಸನೆ ಬರಲು ನಿರ್ಜಲೀಕರಣ (ಡಿಹೈಡ್ರೇಶನ್) ಕಾರಣ. ಹೀಗಾಗಿ ನಿಮ್ಮ ದೇಹವು ನಿರ್ಜಲೀಕರಣ ಹೊಂದದೆ ಇರಲು ನೀವು ಸಾಕಷ್ಟು ನೀರು ಸೇವಿಸಬೇಕು.

೨. ಯೀಸ್ಟ್ ಮತ್ತು ಸಕ್ಕರೆ ಹೆಚ್ಚಿರುವ ಆಹಾರಗಳನ್ನ ದೂರವಿಡಿ

ಸಕ್ಕರೆ ಮತ್ತು ಯೀಸ್ಟ್ ಹೆಚ್ಚಿರುವ ಪದಾರ್ಥಗಳು ಯೋನಿಯ ದುರ್ವಾಸನೆ ಉಂಟು ಮಾಡಬಹುದು. ಹೀಗಾಗಿ ನೀವು ಕೇಕ್, ಬ್ರೆಡ್, ಪೇಸ್ಟ್ರಿ, ಸಿಹಿತಿನಿಸುಗಳನ್ನ ಸೇವಿಸುವುದು ಆದಷ್ಟು ಕಡಿಮೆ ಮಾಡಬೇಕು. ಒಂದು ವೇಳೆ ನಿಮಗೆ ಸಿಹಿಯಾಗಿರುವುದು ಏನಾದರು ತಿನ್ನಲೇ ಬೇಕು ಎನಿಸಿದರೆ, ಡಾರ್ಕ್ ಚಾಕಲೇಟ್ ಸೇವಿಸಬಹುದು.

೩. ತರಕಾರಿಗಳು ಮತ್ತು ಹಣ್ಣುಗಳನ್ನು ಯೆಥೇಚ್ಛವಾಗಿ ಸೇವಿಸಿ

ತರಕಾರಿಗಳು ಮತ್ತು ಹಣ್ಣುಗಳಲ್ಲಿ ಸಾಕಷ್ಟು ಅಗತ್ಯ ಪೋಷಕಾಂಶಗಳು ಇದ್ದು, ಇವುಗಳು ಯೀಸ್ಟ್ ಅಥವಾ ಬ್ಯಾಕ್ಟೀರಿಯಾಲ್ ಸೋಂಕು, ಹೃದಯದ ಕಾಯಿಲೆಗಳು, ಇತ್ಯಾದಿಯನ್ನು ದೂರವಿಡುತ್ತವೆ.

೪. ಅತಿಯಾದ ಉಷ್ಣಾಂಶ ಇರುವ ನೀರಿನಲ್ಲಿ ಸ್ನಾನ ಮಾಡಬೇಡಿ

ತುಂಬಾ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಯೋನಿಯಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಅದರಿಂದ ಯೋನಿಯಿಂದ ಕೆಟ್ಟ ವಾಸನೆ ಬರುತ್ತದೆ. ಹೀಗಾಗಿ ಉಗರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು.

೫. ಒಳ ಉಡುಪುಗಳನ್ನು ದಿನಕ್ಕೆ ಎರಡು ಬಾರಿ ಬದಲಾಯಿಸಿ

ಕತ್ತಲೆ, ಬೆವರಿನಿಂದ ಕೂಡಿದ ಮತ್ತು ಯಾವಾಗಲೂ ಮುಚ್ಚಿರುವ ಜಾಗಗಳಲ್ಲೇ ಬ್ಯಾಕ್ಟೀರಿಯಾಗಳು ಹೆಚ್ಚು ಸುಗಮವಾಗಿ ಬೆಳೆಯುವುದು. ಹೀಗಾಗಿ ನೀವು ವ್ಯಾಯಾಮ, ವಾಕಿಂಗ್ ಅಥವಾ ಇನ್ಯಾವುದೋ ದೈಹಿಕ ಶ್ರಮವುಳ್ಳ ಕೆಲಸ ಮಾಡಿ ಬೆವರಿದರೆ ಕೂಡಲೇ ಒಳ ಉಡುಪು ಬದಲಾಯಿಸಿ ತುರಿಕೆ,ಸೋಂಕು ಅಥವಾ ದುರ್ವಾಸನೆ ಹುಟ್ಟುವುದನ್ನ ತಡೆಯಿರಿ.

೬. ಪಿರಿಯಡ್ಸ್ ಸಮಯದಲ್ಲಿ ಎಣ್ಣಿ ಮತ್ತು ಮಾಂಸ ಪದಾರ್ಥಗಳನ್ನು ಸೇವಿಸಬೇಡಿ

ಇದರಿಂದ pH ಗತಿ ತುಲನೆಯಲ್ಲೇ ಇರುತ್ತದೆ ಮತ್ತು ಜೀವಾಣು ವಿಷಗಳನ್ನು ಹೊರಹಾಕುವುದಕ್ಕೆ ತಡೆಯಾಗುವುದಿಲ್ಲ.

೭. ಆ ಭಾಗಕ್ಕೆ ಸೋಪ್ ಹಚ್ಚಬೇಡಿ

ಸೋಪ್ ಅಲ್ಲಿರುವ ಕೆಲವೊಂದು ರಾಸಾಯನಿಕಗಳಿಂದ ಯೋನಿಯಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾಗಳ ನಾಶವಾಗುತ್ತವೆ‌. ಹೀಗಾಗಿ ಆ ಭಾಗಕ್ಕೆ ಸೋಪ್ ಬಳಸುವುದು ಒಳ್ಳೆಯದಲ್ಲ.

Click here for the best in baby advice
What do you think?
0%
Wow!
0%
Like
100%
Not bad
0%
What?
scroll up icon