Link copied!
Sign in / Sign up
4
Shares

ಯೋನಿಯ ಈ ಪರಿಸ್ಥಿತಿಗಳನ್ನು ನೀವು ತಿಳಿದಿರಲೇಬೇಕು!

ಯೋನಿಯು ಒಂದು ಸ್ಥಿತಿತಪಾಕ, ಸ್ನಾಯುವಿನಿಂದ ಆಗಿರುವ ಮೃದುವಾದ, ಹೊಂದಿಕೊಳ್ಳುವ ರಚನೆಯ ನಾಳವಾಗಿದ್ದು ಅದು ನಯಗೊಳಿಸುವಿಕೆ ಮತ್ತು ಸಂವೇದನೆಯನ್ನು ಒದಗಿಸುತ್ತದೆ. ಯೋನಿಯು ಗರ್ಭಾಶಯವನ್ನು ಹೊರ ಪ್ರದೇಶಕ್ಕೆ ಸಂಪರ್ಕಿಸುತ್ತದೆ.

ಯೋನಿಯು ಸಂಭೋಗ ಮಾಡುವಾಗ ಶಿಶ್ನವನ್ನು ತನ್ನಲ್ಲಿ ಸೇರಿಸಿಕೊಳ್ಳುತ್ತದೆ, ಮತ್ತು ಇದರ ಜೊತೆಗೆ, ಗರ್ಭಾಶಯದ ಮುಟ್ಟಿನ ಹರಿವಿನ ಒಂದು ವಾಹಿನಿಯಾಗಿ ಕಾರ್ಯನಿರ್ವಹಿಸುತ್ತದೆ. ಹೆರಿಗೆ ಸಮಯದಲ್ಲಿ, ಮಗುವು ಯೋನಿಯ ಮೂಲಕ ಹೊರಬರುತ್ತದೆ(ಜನ್ಮ ಕಾಲುವೆ).

ಹೈಮೆನ್ ಎನ್ನುವುದು ಅಂಗಾಂಶದ ತೆಳುವಾದ ಪೊರೆಯಾಗಿದ್ದು, ಯೋನಿ ಶುಷ್ಕವನ್ನು ಸುತ್ತುವರೆಯುತ್ತದೆ ಮತ್ತು ಕಿರಿದಾಗುವಂತೆ ಮಾಡುತ್ತದೆ. ಇದು ವ್ಯಾಯಾಮ ಅಥವಾ ಲೈಂಗಿಕ ಕ್ರಿಯೆಯಿಂದ ಹರಿದಿರಬಹುದು ಅಥವಾ ಹರಿಯಬಹುದು.

ಯೋನಿಯ ಪರಿಸ್ಥಿತಿಗಳು

೧.ಯೋನಿ ನಾಳದ ಉರಿಯೂತ : ಯೋನಿಯಲ್ಲಿ ಉರಿಯೂತ ಕಾಣಿಸಿಕೊಳ್ಳಲು, ಸಾಮಾನ್ಯ ಕಾರಣವೆಂದರೆ, ಈಸ್ಟ್ ಸೋಂಕು ಅಥವಾ ಹೆಚ್ಚು ಬ್ಯಾಕ್ಟೀರಿಯಾಗಳ ಬೆಳವಣಿಗೆ. ಕಡಿತ, ನವೆ, ವಿಸರ್ಜನೆಯ ವಾಸನೆಯಲ್ಲಿ ಬದಲಾವಣೆ ಇದರ ಸಾಮಾನ್ಯ ಗುಣಲಕ್ಷಣವಾಗಿದೆ.

೨.ಯೋನಿ ಸಂಕೋಚನ : ಲೈಂಗಿಕ ಸಂಭೋಗದ ಸಮಯದಲ್ಲಿ ಯೋನಿ ಸ್ನಾಯುಗಳ ಅನೈಚ್ಛಿಕ ಸೆಳೆತ, ಲೈಂಗಿಕತೆ ಬಗ್ಗೆ ಭಾವನಾತ್ಮಕವಾಗಿ ತೊಂದರೆ ಅಥವಾ ನಿರಾಸೆ ಅಥವಾ ಔಷಧಿಗಳ ಪರಿಣಾಮ ಇದಕ್ಕೆ ಕಾರಣ. ಇದನ್ನು ಔಷದಿ ಅಥವಾ ಧ್ಯಾನ ಅಥವಾ ಎರಡನ್ನು ಉಪಯೋಗಿಸಿ ಚಿಕಿತ್ಸೆ ನೀಡುವರು.

೩.ಜನನಾಂಗದ ನರೂಲಿಗಳು : ಜನನಾಂಗದ ನರೂಲಿಗಳು ಯೋನಿ, ಜನನ ದ್ವಾರ, ಮತ್ತು ಗರ್ಭಕಂಠದ ಮೇಲೆ ಪರಿಣಾಮ ಬೀರಬಹುದು(ಸೋಂಕು ತಗುಲಿಸಬಹುದು). ಇದನ್ನು ಕಂಡರೆ ಕೂಡಲೇ ಚಿಕಿತ್ಸೆ ಪಡೆಯುವುದು ಒಳ್ಳೆಯದು.

೪.ಟ್ರೈಕೊಮೊನಿಯಾಸಿಸ್ : ಟ್ರೈಕೊಮೊನಸ್ ಎಂಬ ಸೂಕ್ಷ್ಮದರ್ಶಕ ಪರಾವಲಂಬಿಯಿಂದ ಆಗುವ ಯೋನಿಯ ಸೋಂಕು. ಇದು ಲೈಂಗಿಕತೆ ಇಂದ ಹರಡುತ್ತದೆ ಮತ್ತು ಇದನ್ನು ಸುಲಭವಾಗಿ ಗುಣಪಡಿಸಬಹುದು.

೫.ಬ್ಯಾಕ್ಟೀರಿಯಾದ ವ್ಯಾಜಿನೋಸಿಸ್ : ಯೋನಿಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಸಮತೋಲನವನ್ನು ಕಾಪಾಡುವಲ್ಲಿ ಅಡ್ಡಿಪಡಿಸುವುದು, ನಂತರ ಇದು ವಿಸರ್ಜನೆ ಮತ್ತು ವಾಸನೆಗೆ ಕಾರಣವಾಗುತ್ತದೆ. ಹೊಸ ಗೆಳೆಯನ ಜೊತೆ ಲೈಂಗಿಕ ಕ್ರಿಯೆ ನಡೆಸುವುದು ಇದಕ್ಕೆ ಕಾರಣವಾಗುತ್ತದೆ. ಆಂಟಿಬಯೋಟಿಕ್ ಅನ್ನು ತೆಗೆದುಕೊಳ್ಳುವುದರಿಂದ ಇದನ್ನು ಗುಣಪಡಿಸಬಹುದು.

೬.ಹೆರ್ಪ್ಸ್ ಸಿಂಪ್ಲೆಕ್ಸ್ ವೈರಸ್ : ಇದು ಯೋನಿ, ಜನನ ದ್ವಾರ ಮತ್ತು ಗರ್ಭಕಂಠಕ್ಕೆ ಸೋಂಕನ್ನು ಉಂಟುಮಾಡುತ್ತದೆ, ಮತ್ತು ಸಣ್ಣ ನೋವು, ಗುಳ್ಳೆಗಳು, ಮತ್ತು ಅಲ್ಸರ್ ಗೆ ಕಾರಣವಾಗುತ್ತದೆ. ಈ ಸೋಂಕು ಆದರೆ, ಯಾವುದೇ ರೋಗಲಕ್ಷಣಗಳನ್ನು ನೀವು ಕಾಣದೆ ಇರುವುದು ಒಂದು ಲಕ್ಷಣವಾಗಿದೆ. ಇದು ಲೈಂಗಿಕವಾಗಿ ವರ್ಗವಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡಬಹುದು ಆದರೆ ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ.

೭.ಯೋನಿ ಸಡಿಲತೆ (ಮುಂದೆ ಜಾರುವುದು) : ಶ್ರೋಣಿಯ ಸ್ನಾಯುಗಳು ದುರ್ಬಲವಾಗುವುದರಿಂದ, ಗುದನಾಳ, ಗರ್ಭಾಶಯ ಅಥವಾ ಮೂತ್ರನಾಳ ಯೋನಿಯನ್ನು ಮುಂದೆ ತಳ್ಳುತ್ತದೆ. ಕೆಲವೊಮ್ಮೆ ಯೋನಿಯ ದೇಹದ ಹೊರಗೆ ಬಂದಂತೆ ಆಗಿರುವ ಘಟನೆಯು ಇದೆ. ಶ್ರೋಣಿಯ ಸ್ನಾಯುಗಳು ದುರ್ಬಲವಾಗಲು ಸಾಮಾನ್ಯ ಕಾರಣವೆಂದರೆ ಹೆರಿಗೆ, ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಆಹಾರ ಸೇವಿಸುವುದರಿಂದ ಸ್ನಾಯುಗಳನ್ನು ದುರ್ಬಲವಾಗದಂತೆ ನೋಡಿಕೊಳ್ಳಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon