Link copied!
Sign in / Sign up
13
Shares

ಯೋನಿಯ ಲೋಳೆಯಿಂದ ನಿಮ್ಮ ಫಲವತ್ತಾದ ದಿನ ಯಾವುದೆಂದು ತಿಳಿಯಿರಿ

ಮಾರುಕಟ್ಟೆಯಲ್ಲಿ ನೀವು ಅಂಡೋತ್ಪತ್ತಿ ಮಾಡುವ ದಿನ ಯಾವುದೆಂದು ಲೆಕ್ಕ ಹಾಕಲಿಕ್ಕೆ ಹಲವಾರ ಸಾಧನಗಳು ದೊರೆಯುತ್ತವೆ, ಆದರೆ ಹೆಣ್ಣಿನ ದೇಹದಲ್ಲೇ ನೈಸರ್ಗಿಕಾವದ ಒಂದು ಕ್ಯಾಲ್ಕುಲೇಟರ್ ಇದೆ. ರುತುಚಕ್ರದಲ್ಲಿನ ಬದಲಾವಣೆಗಳ ಅನುಗುಣವಾಗಿ ಉತ್ಪನ್ನವಾಗುವ ಗರ್ಭಕಂಠದ ಲೋಳೆ, ನಿಮ್ಮ ಋತುಚಕ್ರದ ಬಗ್ಗೆ ಮಾಹಿತಿ ಮತ್ತು ನಿಮ್ಮ ಅತ್ಯಂತ ಫಲವತ್ತಾದ ದಿನಗಳ ಬಗ್ಗೆ ಮಾಹಿತಿ ಕೊಡುತ್ತದೆ. ದೇಹದ ತಳಭಾಗದ ಉಷ್ಣಾಂಶ (ಬೇಸಲ್ ಬಾಡಿ ಟೆಂಪರೆಚರ್) ನೀವು ಅಂಡೋತ್ಪತ್ತಿ ಮಾಡುವ ಸಮಯದಲ್ಲಿ ಬದಲಾಗುತ್ತದೆ, ಆದರೆ ಈ ಗರ್ಭಕಂಠದ ಲೋಳೆಯು ನೀವು ಅಂಡೋತ್ಪತ್ತಿ ಮಾಡುವ ದಿನ ಅಂದರೆ ನಿಮ್ಮ ಅತ್ಯಂತ ಫಲವತ್ತಾದ ದಿನಕ್ಕಿಂತ ಕೆಲವು ದಿನಗಳು ಮುಂಚೆಯೇ ಬದಲಾಗುವುದರಿಂದ, ನೀವು ನಿಮ್ಮ ಲೈಂಗಿಕ ಕಾರ್ಯಗಳಿಗೆ ಅವಾಗಿನಿಂದಲೇ ಚುರುಕು ಮುಟ್ಟಿಸಬಹುದು.

ಗರ್ಭಕಂಠ ಎಂದರೆ ಗರ್ಭಕೋಶದ ಕಂಠ. ಇದು ಯೋನಿಗೆ ಕೂಡಿಕೊಂಡಿರುತ್ತದೆ. ಈ ನಾಳದಿಂದಲೇ ಗರ್ಭಕಂಠದ ಲೋಳೆಯು ಉತ್ಪತ್ತಿ ಆಗಿ ಬಿಡುಗಡೆ ಹೊಂದುವುದು. ಹೆಣ್ಣಿನ ಋತುಚಕ್ರದಲ್ಲಿ ದಿನಗಳು ಕಳೆದಂತೆ ಆಗುವ ಹಾರ್ಮೋನ್ ಬದಲಾವಣೆ, ಈ ಲೋಳೆಯ ಪ್ರಮಾಣ ಮತ್ತು ನಿಖರತೆಯ ಮೇಲೆ ಪ್ರಭಾವ ಬೀರುತ್ತದೆ.

ಇನ್ನೂ ಸರಿಯಾಗಿ ಹೇಳಬೇಕೆಂದರೆ ಸಂತಾನ ಕಾರ್ಯದ ಕಾವಲುಗಾರನೇ ಈ ಗರ್ಭಕಂಠದ ಲೋಳೆ. ಯೋನಿಯೊಳಗೆ ನುಗ್ಗುವ ವೀರ್ಯವು, ಈ ಲೋಳೆ ಒಳಗಿನಿಂದಲೇ ಗರ್ಭಕಂಠ ದಾಟಿ, ಗರ್ಭಕೋಶವನ್ನು ಮುಟ್ಟಿದರೆ, ಆ ವೀರ್ಯವು ಅಂಡಾಣು ಜೊತೆ ಫಲೀಕರಣ ಹೊಂದುವುದು.

ನೀವು ಗಮನಿಸಬೇಕಾದದ್ದು ಏನು?

ಹೆಂಗಸರು ತಮ್ಮ ಗರ್ಭಕಂಠದ ಲೋಳೆಯ ಪ್ರಮಾಣ ಮತ್ತು ನಿಖರತೆಯನ್ನ ಗಮನಿಸಬಹುದು. ಯೋನಿಯೋಳಗಿನ ಈ ಲೋಳೆಯು ಹಸಿಯಾಗಿದೆಯೋ, ಒಣ ಒಣ ಇದೆಯೋ, ಅಂಟಂಟು ಇದೆಯೋ ಎಂದು ಗಮನಿಸಿದರೆ ನಿಮ್ಮ ಫಲವತ್ತಾದ ದಿನದ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ಬಣ್ಣ (ಬಿಳಿ, ಕೆನೆ ಬಣ್ಣ, ಬಣ್ಣವಿಲ್ಲದ್ದು) ಯಾವುದೆಂದು ಮತ್ತು ನಿಖರತೆ (ಹಸಿ, ಒಣ, ಅಂಟಂಟು) ಯಾವುದೆಂದು ತಿಳಿದರೆ ನಿಮಗೆ ಅಂಡೋತ್ಪತ್ತಿ ದಿನ ಯಾವಗಿದೆ ಎಂದು ಒಂದು ಐಡಿಯಾ ಸಿಗುತ್ತದೆ. ನೀವು ಲೋಳೆಯ ಪರೀಕ್ಷೆ ಮಾಡಲು ನಿಮ್ಮ ಒಳಉಡುಪಿಗೆ ಅಂಟಿರುವ ಲೋಳೆಯನ್ನಾಗಲಿ ಅಥವಾ ಶುಚಿಯಾದ ಬೆರಳುಗಳಿಂದ ನೀವೇ ಹೊರತೆಗೆದ ಲೋಳೆಯನ್ನಾಗಲಿ ಗಮನಿಸಬಹುದು.

ಇಲ್ಲಿ ಕೆಳಗೆ ನೀಡಿರುವ ಚಾರ್ಟ್ ನಿಮಗೆ ಲೋಳೆಯನ್ನ ಪರೀಕ್ಷಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಸುತ್ತದೆ


Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon