Link copied!
Sign in / Sign up
1
Shares

ನಿಮಗೆ ಗೊತ್ತಿಲ್ಲದ ಯೋನಿಯ ಬಗೆಗಿನ ಕೆಲವು ಆಶ್ಚರ್ಯಚಕಿತ ಸಂಗತಿಗಳು (ಭಾಗ -2)!

ಯೋನಿಯ ಬಗೆಗಿನ ಕೆಲವು ವಿಷಯಗಳು ಸರಿಯಾಗಿ ಎಲ್ಲರಿಗು ತಿಳಿದಿಲ್ಲ. ಪುರುಷರು ಇರಲಿ ಹೆಂಗಳೆಯರ ಆಕರ್ಷಕ ಅಂಗದ ಬಗ್ಗೆ ಅವರಿಗೆ ಪೂರ್ಣವಾಗಿ ತಿಳಿದಿಲ್ಲ. ಸಂಪೂರ್ಣವಾಗಿ ತಿಳಿದಿರಲು ನಾವು ಸಕಲಕಲಾವಲ್ಲಬರಲ್ಲ. ನೀವು ಕೇಳಿರದ, ಆದರೆ ಕೇಳಿದರೆ ಆಶ್ಚರ್ಯ ಪಡುವಂತಹ ನಿಮ್ಮ ಯೋನಿಯ ಬಗೆಗಿನ ಕೆಲವು ವಿಚಿತ್ರ ಸತ್ಯ ಸಂಗತಿಗಳನ್ನು ಈ ಲೇಖನದಿಂದ ತಿಳಿದುಕೊಳ್ಳಿ.

೧.ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ರಂಧ್ರದಿಂದ ಮೂತ್ರ ಮಾಡುವುದಿಲ್ಲ. ಇದು ಸತ್ಯ, ಆದರೆ ಎಷ್ಟು ಜನರಿಗೆ ಈ ವಿಷಯ ತಿಳಿದಿದೆ.

೨.ಯೋನಿಯು ತನ್ನ ನಿಜವಾದ ಸುತ್ತಳತೆಗಿಂತ ಮೂರುಪಟ್ಟು ಹೆಚ್ಚು ಸುತ್ತಳತೆಗೆ ಹಿಗ್ಗುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯವಾಗಿ ಯೋನಿಯ ವ್ಯಾಸ ೩ಸೆಂಟಿ ಮೀಟರ್, ಇದು ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು. ಹಾಗೆಯೆ ಜನಿಸುವ ಮಗುವಿನ ತಲೆಯ ವ್ಯಾಸ ೧೦ ಸೆಂಟಿ ಮೀಟರ್.

೩.ಯೋನಿಯು ತಾನಿರುವ ಉದ್ದಕ್ಕಿಂತ ಶೇಕಡಾ ೫೦ರಷ್ಟು ಉದ್ದವನ್ನು ಹೆಚ್ಚು ಪಡೆಯಬಹುದು. ಆಕೆ ಪ್ರಚೋದನೆಗೆ ಒಳಗಾದಾಗ ಅದು ತಾನಾಗಿಯೇ ಉದ್ದವಾಗುತ್ತದೆ. ಒಬ್ಬ ಮಹಿಳೆಯ ಹೇಳಿಕೆ ಪ್ರಕಾರ ಅವಳು ಸ್ವತಃ ತಾನೇ ಉದ್ವೇಗಕ್ಕೆ ಒಳಗಾದಾಗ ೭ಸೆಂಟಿ ಮೀಟರ್ ಉದ್ದ ಇದ್ದ ಯೋನಿ ೧೦ ಸೆಂಟಿ ಮೀಟರ್ ಉದ್ದವಾಯಿತಂತೆ.

೪.ಯೋನಿಯು ತನ್ನನ್ನು ತಾನೇ ಸ್ವಯಂ ಶುಚಿಗೊಳಿಸಿಕೊಳ್ಳುತ್ತದೆ. ಅಂದರೆ ಯೋನಿಯನ್ನು ಯೋನಿಯೇ ಸ್ವಚ್ಛ ಮಾಡುತ್ತದೆ.

೫.ಸ್ವಯಂ ನಯಗೊಳಿಸುವಿಕೆಯನ್ನು ಮಾಡಿಕೊಳ್ಳುತ್ತದೆ. ಅನೇಕ ಮಹಿಳೆಯರು ಪ್ರಚೋದನೆಗೆ ಅಥವಾ ಉದ್ವೇಗಕ್ಕೆ ಒಳಗಾದೊಡನೆ ಯೋನಿಯು ತೇವಾಂಶವಾಗಲು ಪ್ರಾರಂಭಿಸುತ್ತದೆ. ಇದು ಸಂಭೋಗ ಮಾಡುವಾಗ ಯೋನಿಯನ್ನು ನಯವಾಗಿಸಲು ಸಹಾಯ ಮಾಡುತ್ತದೆ.

೬.ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯು ಪ್ರಚೋದನೆಗೆ ಅಥವಾ ಉದ್ವೇಗಕ್ಕೆ ಒಳಗಾದರು ಅದು ಆಕೆಗೆ ಬಿಟ್ಟು ಯಾರಿಗೂ ತಿಳಿಯುದಿಲ್ಲ. ಹುಡುಗರು ಸಾರ್ವಜನಿಕ ಸ್ಥಳಗಳಲ್ಲಿ ಒಳಗಾದರೆ ಸ್ವಲ್ಪ ತಲೆಕೆಡಿಸಿಕೊಳ್ಳುವ ಸಂದರ್ಭ ಎದುರಾಗುತ್ತದೆ. ಆದರೆ ಮಹಿಳೆಯರಿಗೆ ಇದರ ಚಿಂತೆ ಇಲ್ಲ.

೭.ಎಲ್ಲಾ ಮಹಿಳೆಯರು ತಮ್ಮ ಋತುಚಕ್ರವನ್ನು ಒಂದೇ ರೀತಿಯಲ್ಲಿ ಅನುಭವಿಸುವುದಿಲ್ಲ.

೮.ಯೋನಿಯು ಶಿಶು ಹೊರ ಬರುವಷ್ಟು ದೊಡ್ಡ ರಂಧ್ರವಾಗಿ ಪರಿವರ್ತನಗೊಳ್ಳುತ್ತವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon