Link copied!
Sign in / Sign up
9
Shares

ಯೋನಿಯ ಬಗ್ಗೆ ನೀವು ಕೇಳಲು ಮುಜುಗರ ಪಡುವ ಈ ಪ್ರಶ್ನೆಗಳು ತಪ್ಪು ಅಲ್ಲವೇ ಅಲ್ಲ!

ಮಹಿಳೆಯರು ಹೆಚ್ಚು ಮಾತನಾಡುವರು ಅವರಷ್ಟು ಮಾತನಾಡುವವರಿಲ್ಲ ಎಂದರು ಸಹ ಅವರು ತಮ್ಮ ಖಾಸಗಿ ಅಂಗಗಳ ಬಗ್ಗೆ ಅಥವಾ ತಮ್ಮ ಗುಪ್ತ ಸಮಸ್ಯೆಯ ಬಗ್ಗೆ ಮಾತನಾಡಲು ಮುಜುಗರ ಪಡುತ್ತಾರೆ, ಆ ವಿಷಯದ ಬಗ್ಗೆ ಅವರಿಗೆ ಹಲವು ಅನುಮಾನವಿದ್ದರು ಅವರ ಆಪ್ತ ಸ್ನೇಹಿತೆ ಅಥವಾ ವೈದ್ಯರ ಬಳಿ ಅದನ್ನು ಹೇಳಿಕೊಳ್ಳಲು ಅವರು ಮುಜುಗರ ಪಟ್ಟುಕೊಳ್ಳುತ್ತಾರೆ. ಅಂತಹ ನಿಮ್ಮ ಗೊಂದಲಗಳನ್ನು ಇಲ್ಲಿ ಬಗೆಹರಿಸಿಕೊಳ್ಳಿ ಅದರ ಬಗ್ಗೆ ತಿಳಿದುಕೊಳ್ಳಿ.

೧.ಮೂತ್ರಮಾಡುವಾಗ ಪ್ರಚೋದನೆಯಂತೆ ಭಾವಿಸುವುದು ಸಾಮಾನ್ಯವೇ?

ಡಾಕ್ಟರ್ ಕೇಟ್ ಹೋಲೋವೇ ಪ್ರಕಾರ ಹಲವು ವಿಭಿನ್ನ ಮಹಿಳೆಯರು ಹಲವು ವಿಭಿನ್ನ ಸಂಗತಿಗಳಿಂದ ಪ್ರಚೋದನೆಗೆ ಒಳಗಾಗುತ್ತಾರೆ. ಕೆಲವು ಸಂಗತಿಗಳು ಸಹಜ ಮತ್ತು ಅಸಹಜ ಎಂದು ಹೇಳಲಾಗುವುದಿಲ್ಲ, ಕೆಲವರು ಅಲ್ಲಿ ಕುಳಿತುಕೊಂಡಾಗ ಕೋಪವನ್ನು ಪಡೆಯಬಹುದು, ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಕೆಲವರು ಮೂತ್ರ ಮಾಡುವಾಗ ನಾಳದಿಂದ ಬರುವ ಅನುಭವ ಪಡೆದು ಪ್ರಚೋದನೆಗೆ ಒಳಗಾಗುವರು ಇದು ನಿಮಗೆ ಏನು ತೊಂದರೆ ಮಾಡುವುದಿಲ್ಲ. ನಿಮಗೆ ಯಾವುದೇ ತರಹದ ಅಸಹಜತೆ ಅಥವಾ ನಿಮಗೆ ಸಮಂಜಸವಾಗಿಲ್ಲ ಎಂದು ಅನಿಸಿದರೆ ಅಥವಾ ಮೂತ್ರ ಮಾಡುವಾಗ ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

೨.ನನಗೆ ಏಕೆ ವಾಸನೆಯುಳ್ಳ ಬಿಳಿ ವಿಸರ್ಜನೆ ಇದೆ?

ಇದು ತುಂಬಾ ಸಾಮಾನ್ಯವಾದ ಹಲವು ಮಹಿಳೆಯರ ಪ್ರಶ್ನೆ ಮತ್ತು ದೂರು, ಇದರ ಬಗ್ಗೆ ನೀವು ಹೆಚ್ಚು ಚಿಂತಿಸಬೇಕಿಲ್ಲ, ನೀವು ಸರಿಯಾಗಿ ತಿಳಿದುಕೊಳ್ಳಬೇಕಾಗಿರುವುದು, ಕೆಲವು ಶೇಕಡವಾರು ಪ್ರಮಾಣದಷ್ಟು ವಿಸರ್ಜನೆಯಾಗುವುದು ಸಾಮಾನ್ಯ, ಇದಕ್ಕೆ ನಿಮ್ಮ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆ ಮತ್ತು ನಿಮ್ಮ ಋತುಚಕ್ರದಲ್ಲಿ ಆಗುವ ಕೆಲವು ಬದಲಾವಣೆಗಳು ಕಾರಣ. ಆದರೆ ನಿಮ್ಮ ಮೂತ್ರ ವಿಸರ್ಜನೆಯಲ್ಲಿ ವಾಸನೆ ಬಂದರೆ ಅದು ಬ್ಯಾಕ್ಟೀರಿಯಾದಿಂದ ಆಗಿರುವ ಸೋಂಕು ಅಥವಾ ಲೈಂಗಿಕ ಕ್ರಿಯೆಯಿಂದ ಉಂಟಾದ ಸೋಂಕು ಇರಬಹುದು, ಇದನ್ನು ವೈದ್ಯರಲ್ಲಿ ತೋರಿಸುವುದು ಒಳ್ಳೆಯದು.

೩.ತಿಂಗಳಲ್ಲಿ ಎರಡು ಬಾರಿ ಋತುಚಕ್ರವಾಗಲು ಕಾರಣ

ಸರಾಸರಿ ಮಹಿಳೆಯರ ಋತುಚಕ್ರ ಅವಧಿಯು ೨೫ ರಿಂದ ೩೫ ದಿನ ಇರುತ್ತದೆ. ನೀವು ಆ ದಿನಗಳಿಗಿಂತ ಬೇಗನೆ ಋತುಮತಿ ಆಗುತ್ತಿದ್ದಿರಿ ಎಂದರೆ ಇದಕ್ಕೆ ಹಾರ್ಮೋನುಗಳ ಬದಲಾವಣೆಯೇ ಕಾರಣ ಅಥವಾ ನಿಮ್ಮ ಅಂಡಾಶಯ ಗರ್ಭನಿಲ್ಲಲು ಸಹಾಯ ಮಾಡುತ್ತಿಲ್ಲ ಎಂದು. ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

೪.ನನ್ನ ಯೋನಿಯ ಸುತ್ತ ಗುಳ್ಳೆಗಳು ಬರುತ್ತವೆ!

ಅವು ಮೊಡವೆಗಳಲ್ಲ, ಅವು ನೀವು ಅಲ್ಲಿರುವ ರೋಮಗಳನ್ನು ತೆಗೆಯುವುದರ ವಿಧಾನದ ಸೋಂಕಿನಿಂದ ಆಗಿರಬಹುದು. ನಿಮ್ಮ ಅಲ್ಲಿರುವ ಕೂದಲನ್ನು ತೆಗೆಯುವುದನ್ನು ಸ್ವಲ್ಪ ದಿನಗಳ ವರೆಗೆ ನಿಲ್ಲಿಸಿ. ಅದು ಸೋಂಕು ಅಥವಾ ರೇಝರ್ ಉಪಯೋಗಿಸುವುದರಿಂದ ಆಗಿಲ್ಲ ಎಂದರೆ ಅಥವಾ ಕೆಲವು ದಿನ ಕಳೆದರು ಅದು ಕಡಿಮೆಯಾಗಿಲ್ಲ ಎಂದರೆ ವೈದ್ಯರನ್ನು ಭೇಟಿ ಮಾಡಿ.

೫.ನನ್ನ ಪಿರಿಯಡ್ ಗು ಮೊದಲೇ ಯೋನಿಯಲ್ಲಿ ಕಡಿತ ಅಥವಾ ನವೆ ಉಂಟಾಗಲು ಕಾರಣ?

ಅದಕ್ಕೆ ಕಾರಣ ನಿಮ್ಮ ಸ್ತ್ರೀ ಹಾರ್ಮೋನುಗಳು. ನಿಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಯು ಈಸ್ಟ್ರೋಜೆನ್ ಮಟ್ಟವನ್ನು ಮುಟ್ಟಿಗು ಮೊದಲೇ ಕಡಿಮೆ ಮಾಡುತ್ತದೆ. ಯೋನಿಯ ಚರ್ಮವನ್ನು ಅದು ಸಣ್ಣದಾಗಿ ಮಾಡುತ್ತದೆ, ಮತ್ತು ಯೋನಿಯನ್ನು ಒಣಗಿಸುತ್ತದೆ, ಕಡಿತ ಬರುವಂತೆ ಮಾಡುತ್ತದೆ. ಅದು ಹಾಗೆಯೆ ಮುಂದುವರಿದರೆ ವೈದ್ಯರನ್ನು ಭೇಟಿ ಮಾಡಿ. ಯೋನಿಯ ಸೋಂಕು ಕೂಡ ಇದಕ್ಕೆ ಕಾರಣವಾಗಿರಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon