Link copied!
Sign in / Sign up
7
Shares

ನಿಮ್ಮ ಯೋನಿಯಲ್ಲಿ ನವೆ ಅಥವಾ ತುರಿಕೆಯನ್ನು ಕಂಡರೆ ಸ್ತ್ರೀರೋಗ ತಜ್ಞರ ಪ್ರಕಾರ ಇದನ್ನು ಮಾಡಬೇಕು

ನಿಮ್ಮ ಜೀವನದ ಒಂದು ಹಂತದಲ್ಲಿ, ಯೋನಿಯಲ್ಲಿ ನವೆ ಅಥವಾ ತುರಿಕೆ ಅಥವಾ ಕಿರಿಕಿರಿಯನ್ನು ನೀವು ಅನುಭವಿಸುವಿರಿ, ಅದು ಯೋನಿಯನ್ನು ಒಳಗೊಂಡಿರುವ ಒಂದು ಭಾಗ ಮಾತ್ರ. ಕೆಲವೊಮ್ಮೆ ಅದು ಖುಷಿ ನೀಡಿದರು, ಹೆಚ್ಚು ಸಮಯದಲ್ಲಿ ದುಃಸ್ವಪ್ನವಾಗಿ ಕಾಡುತ್ತದೆ.

ಯೋನಿಯಲ್ಲಿ ತುರಿಕೆ/ನವೆ ಅತ್ಯಂತ ಸಾಮಾನ್ಯ, ಆದರೆ ಸ್ವಲ್ಪ ನವೆ ಮತ್ತು ಅನೇಕ ಬಾರಿ ಅದನ್ನೇ ಸರಿಪಡಿಸಲು ಇರುವುದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ನಿಮಗೆ ಇದು ತುಂಬಾ ಕಿರಿಕಿರಿ ಉಂಟು ಮಾಡಿ, ತಲೆಕೆಡಿಸಿಕೊಳ್ಳುವಂತೆ ಮಾಡುತ್ತಿದ್ದರೆ ನೀವು ಇದನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸರಿಪಡಿಸಿಕೊಳ್ಳುವುದು ಒಳ್ಳೆಯದು.

ಸ್ಪಷ್ಟವಾಗಿ, ನಿಮಗೆ ಯೋನಿಯಲ್ಲಿ ತುರಿಕೆ ನಡೆಯುತ್ತಿದ್ದರೆ(/ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರೆ), ನೀವು ವೈದ್ಯರ ಬಳಿ ಹೋಗಿ ತೋರಿಸಿಕೊಂಡು ಸರಿಪಡಿಸಿಕೊಳ್ಳುವುದು ಉತ್ತಮ. ಕೆಳಗೆ ಗುಳ್ಳೆ ಅಥವಾ ದದ್ದುಗಳನ್ನು ನೀವು ಅನುಭವಿಸಿದರೆ ಅದು STI ನ ಲಕ್ಷಣ ಇರಬಹುದು ಎಂದು ವೈದ್ಯೆ ಸ್ಟ್ರೈಚರ್ ಅವರು ಹೇಳುತ್ತಾರೆ.

ನೀವು ಸಾಂದರ್ಭಿಕವಾಗಿ ಮಾತ್ರ ಯೋನಿಯ ತುರಿಕೆಯನ್ನು ಅನುಭವಿಸುವಿರಿ ಎಂದರೆ, ನಿಮಗೆ ಸಹಾಯ ಮಾಡಲು ಕೆಲವು ಮನೆ ಮದ್ದುಗಳಿವೆ.

ನಿಮ್ಮ ಯೋನಿಯು ನವೆಯನ್ನು ಅನುಭವಿಸಲು ಕೆಲವು ಕಾರಣಗಳಿದ್ದು, ಅದನ್ನು ಸರಿಪಡಿಸಲು ಮಾರ್ಗಗಳಿವೆ.

೧.ನಿಮ್ಮ ಸೋಪನ್ನು ಪರೀಕ್ಷಿಸಿ

ನಿಮ್ಮ ಯೋನಿ ತುಂಬಾ ಸೂಕ್ಹ್ಮವಾದ ಜಾಗ, ಮತ್ತು ಕೆಲವು ಸೋಪುಗಳು, ಅದರಲ್ಲೂ ವಿಶೇಷವಾಗಿ ಸೊಗಸಾದ ಸುವಾಸನೆಯನ್ನು ಹೊಂದಿರುವ ಸೋಪುಗಳು ನಿಮ್ಮ ಖಾಸಗಿ ಅಂಗವು ಕಿರಿಕಿರಿಗೆ ಒಳಗಾಗಿ ನವೆಯನ್ನು ಅನುಭವಿಸುವಂತೆ ಮಾಡುತ್ತವೆ. ನಿಮ್ಮ ಸೂಕ್ಹ್ಮಭಾಗಕ್ಕೆ ಹಾನಿ ಮಾಡದ ಸೋಪನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.

೨.ನಿಮ್ಮ ಪ್ಯಾಡ್ ಬಗ್ಗೆ ಗಮನ ನೀಡಿ

ಕೆಲವು ಮಹಿಳೆಯರು ತಮ್ಮ ಮುಟ್ಟಿನ ದಿನಗಳಲ್ಲಿ ಉಪಯೋಗಿಸುವ ಪ್ಯಾಡ್ ಗಳಿಂದ ಅಲರ್ಜಿಯನ್ನು ಅನುಭವಿಸುವರು, ಇದು ತುರಿಕೆಯ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಇದಕ್ಕೆ ಕಾರಣ ಕೆಲವು ಪ್ಯಾಡ್ ಗಳಿಗೆ ಸುಗಂಧ ದ್ರವ್ಯವನ್ನು ಹಾಕಿರುವುದು. ನಿಮಗೆ ಒಂದು ಬಾರಿ ಅಲರ್ಜಿ ಅಥವಾ ಕಿರಿಕಿರಿ ಉಂಟಾದರೆ ನಿಮ್ಮ ಪ್ಯಾಡ್ ಅನ್ನು ಬದಲಿಸಿ ಬೇರೆ ಬ್ರ್ಯಾಂಡ್ ಉಪಯೋಗಿಸುವುದು ಉತ್ತಮ.

೩.ಯೋನಿ ಕ್ರೀಮ್

ಯೋನಿಗೆ ಬಳಸಲೆಂದೇ ವಿಶೇಷವಾಗಿ ತಯಾರಿಸಿರುವ ಕ್ರೀಮ್ ಅನ್ನು ನವೆ ಅಥವಾ ತುರಿಕೆ ಕಂಡಾಗ ಉಪಯೋಗಿಸುವುದು ಒಳ್ಳೆಯದು. ಇದು ಯೋನಿಯ ಕಿರಿಕಿರಿ ಮತ್ತು ನವೆಯನ್ನು ತಪ್ಪಿಸುತ್ತದೆ. ನಿಮ್ಮ ಖಾಸಗಿ ಅಂಗಕ್ಕೆ ಹೆಚ್ಚು ರಾಸಾಯನಿಕ ಕ್ರೀಮ್ ಅಥವಾ ಪದಾರ್ಥಗಳನ್ನು ಬಳಸದೆ ಇರುವುದು ಉತ್ತಮ. ನೀವು ನಿಮ್ಮ ಯೋನಿಯನ್ನು ಆದಷ್ಟು ಶುಚಿ ಆಗಿರಿಸಿ, ಅದಕ್ಕೆ ಸರಿಹೊಂದುವ ಹತ್ತಿ ಬಟ್ಟೆಯ ಒಳಉಡುಪುಗಳನ್ನು ಧರಿಸುವುದು ಒಂದು ಜಾಣತನದ ಮಾರ್ಗವಾಗಿದೆ.

೪.ನೀರನ್ನು ಹಾಕಿ

ನಿಮಗೆ ನವೆ ಇದ್ದು, ಮೂತ್ರ ಮಾಡುವಾಗ ಉರಿ ಕಂಡು ಬಂದರೆ ಪ್ರತಿ ಬಾರಿ ಮೂತ್ರ ಮಾಡಿದ ನಂತರ ನೀರಿನಿಂದ ಯೋನಿಯನ್ನು ತೊಳೆದುಕೊಳ್ಳುವುದು ಒಳ್ಳೆಯದು. ನಿಮಗೆ ತುರಿಕೆ ಅಥವಾ ನವೆ ಇದ್ದಾಗ ಮಾತ್ರ ಇದನ್ನು ಮಾಡದೇ ಯಾವಾಗಲು ಈ ಅಭ್ಯಾಸವನ್ನು ಮಾಡಿಕೊಂಡರೆ ನಿಮ್ಮ ಯೋನಿಯನ್ನು ನೀವು ತುರಿಕೆ ಅಥವಾ ಅಲರ್ಜಿ ಮತ್ತು ಸೋಂಕಿನಿಂದ ರಕ್ಷಿಸಿಕೊಳ್ಳಬಹುದು.

೫.ಈಸ್ಟ್ ಸೋಂಕು

ಹಲವು ಮಹಿಳೆಯರು ತಮ್ಮ ಯೋನಿಯಲ್ಲಿ ತುರಿಕೆಯನ್ನು ಕಂಡಾಗ ಇದು ಈಸ್ಟ್ ಸೋಂಕಿನಿಂದ ಆಗಿರುವುದು ಎಂದು ಭಾವಿಸುವರು, ಆದರೆ ಅದು ಎಲ್ಲಾ ಸಮಯದಲ್ಲೂ ನಿಜವಲ್ಲ. ನಿಮ್ಮ ಯೋನಿಯನ್ನು ನೀವು ಪ್ರತಿದಿನ ಶುಚಿ ಮಾಡಿ, ಪ್ರತಿ ಬಾರಿ ಮೂತ್ರ ಮಾಡಿದ ನಂತರ ನೀರಿನಿಂದ ತೊಳೆದುಕೊಂಡರು ಎರಡು ದಿನ ಆದರೂ ಕಡಿಮೆ ಆಗಲಿಲ್ಲ ಎಂದರೆ ಇದು ಸೋಂಕು ಎಂದು ಊಹಿಸಬಹುದು, ಈ ಸಮಯದಲ್ಲಿ ನೀವು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon