Link copied!
Sign in / Sign up
5
Shares

ಯೋನಿಯ ತುರಿಕೆ ಅಥವಾ ನವೆಗೆ ಕಾರಣ ಮತ್ತು ಪರಿಣಮಕಾರಿ ಮನೆ ಮದ್ದುಗಳು

ಯೋನಿಯಲ್ಲಿ ತುರಿಕೆ ಅಥವಾ ನವೆ ಕಾಣಿಸಿಕೊಳ್ಳುವುದು ಮಹಿಳೆಯ ಜೀವನದಲ್ಲಿ ಅತ್ಯಂತ ಮುಜುಗರದ ಕ್ಷಣ ಮತ್ತು ಸ್ಥಿತಿಯಾಗಿದೆ. ಇದು ವಿಸರ್ಜನೆ ಮತ್ತು ಉರಿ ಸಂವೇದನೆಯನ್ನು ಯೋನಿಯ ಸುತ್ತ ಮಾಡುತ್ತದೆ. ಎಲ್ಲಾ ವಯಸ್ಸಿನ ಮಹಿಳೆಯರಲ್ಲಿ ಈ ಅಹಿತಕರ ಮುಜುಗರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಖುಷಿಯ ವಿಷಯವೆಂದರೆ ನೀವು ಇದರ ಪರಿಹಾರಕ್ಕಾಗಿ ಹಣವ್ಯಯ ಮಾಡಬೇಕಿಲ್ಲ, ನಿಮ್ಮ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.

ನವೆ ಮತ್ತು ತುರಿಕೆ ಜೊತೆಗೆ ಮಹಿಳೆಯರು, ಯೋನಿ ಒಣಗುವಿಕೆ, ಊದಿಕೊಳ್ಳುವುದು, ಕೆಟ್ಟ ವಾಸನೆ, ಮೊಡವೆ, ಗುಳ್ಳೆಯಂತಹ ಸಮಸ್ಯೆಯನ್ನು ಅನುಭವಿಸುವರು. ಮಹಿಳೆಯರ ಖಾಸಗಿ ಅಂಗಕ್ಕೆ ಹೆಚ್ಚು ನೈರ್ಮಲ್ಯತೆಯ ಅವಶ್ಯಕತೆ ಇದೆ.

ಯೋನಿಯಲ್ಲಿ ತುರಿಕೆಗೆ ಕಾರಣಗಳು

ಮಹಿಳೆಯರ ಖಾಸಗಿ ಅಂಗದಲ್ಲಿ ತುರಿಕೆ ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ, ಇದು ಸೋಂಕು ಆಗಿರಬಹುದು, ಅಥವಾ ನೈರ್ಮಲ್ಯತೆಯ ಕೊರತೆ ಇರಬಹುದು. ಯೋನಿಯಲ್ಲಿ ನವೆ ಕಾಣಿಸಿಕೊಳ್ಳಲು ಕೆಲವು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

೧.ಲೈಂಗಿಕತೆ ನಂತರದ ತೊಂದರೆ : ಸಾಮಾನ್ಯವಾಗಿ ಮಹಿಳೆಯರು ಯೋನಿಯ ತೆರೆಯುವಿಕೆಯಲ್ಲಿ ಲೈಂಗಿಕತೆ ನಂತರ ಆಯಾಸ ಮತ್ತು ಸ್ವಲ್ಪ ಹರಿದುರುವುದಕ್ಕೆ ನವೆಯನ್ನು ಅನುಭವಿಸುವರು. ಹೆಚ್ಚಿನ ಸಮಯದಲ್ಲಿ ಇದು ಕಂದು ಬಣ್ಣದ ವಿಸರ್ಜನೆಯಿಂದ ಕೂಡಿದ್ದು, ಕೆಟ್ಟ ವಾಸನೆ ಇಂದ ಕೂಡಿರುತ್ತದೆ.

೨.ಗರ್ಭಾವಸ್ಥೆ : ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ತೀವ್ರ ಬದಲಾವಣೆ ಆಗುವ ಕಾರಣ ಯೋನಿಯ ಸುತ್ತ ರಕ್ತ ಹರಿಯುವಿಕೆ ಹೆಚ್ಚಾಗಿ ತುರಿಕೆಗೆ ಕಾರಣವಾಗುತ್ತದೆ.

೩.ಬ್ಯಾಕ್ಟೀರಿಯಾ ಅಥವಾ ಈಸ್ಟ್ ಸೋಂಕು

೪.STD

೫.ಅತಿಯಾದ ಆಯಾಸ

೬.ನೈರ್ಮಲ್ಯತೆಯ ಕೊರತೆ

ಯೋನಿಯಲ್ಲಿ ತುರಿಕೆಗೆ ಮನೆ ಔಷಧಿಗಳು
೧.ಮೊಸರು

ಈಸ್ಟ್ ಸೋಂಕಿನಿಂದ ನವೆ ಅನುಭವಿಸಿತ್ತಿರುವವರು ಸಾಮಾನ್ಯಕ್ಕಿಂತ ಹೆಚ್ಚಿನ ಹಿತವಲ್ಲದ ತುರಿಕೆಯನ್ನು ಅನುಭವಿಸುವರು. ಮೊಸರಲ್ಲಿ ಲ್ಯಾಕ್ಟೋಬಾಸಿಲಸ್ ಎಂಬ ಬ್ಯಾಕ್ಟೀರಿಯಾ ಇದ್ದು, ವಿಸರ್ಜನೆಯನ್ನು ಸರಾಗವಾಗಿಸುತ್ತದೆ ಮತ್ತು, ಯೋನಿಯ ತುರಿಕೆಯನ್ನು ಕಡಿಮೆಮಾಡುವಲ್ಲಿ ಸಹಾಯ ಮಾಡುತ್ತದೆ ಇದರ ಜೊತೆಗೆ ಉರಿಯನ್ನು ಶಾಂತಗೊಳಿಸುತ್ತದೆ.

ಉಪಯೋಗಿಸುವುದು ಹೇಗೆ?

೧.ಸಿಹಿಯಾಗಿರದ ಸಾಮಾನ್ಯ ಮೊಸರನ್ನು ತೆಗೆದುಕೊಳ್ಳಿ.

೨.ಯೋನಿಯ ಹೊರಗಿನ ಭಾಗಕ್ಕೆ ಮೊಸರನ್ನು ಹಚ್ಚಿರಿ.

೩.tampon ಅನ್ನು ಮೊಸರಿನಲ್ಲಿ ಮುಳುಗಿಸಿ, ನಂತರ ಅದನ್ನು ಯೋನಿಯ ಯೊಳಗೆ ಹಾಕಿರಿ.

೪.೧೦ ನಿಮಿಷಗಳ ನಂತರ ಇದನ್ನು ತೆಗೆಯಿರಿ.

೫.ಉಗುರು ಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆಯಿರಿ.

೬.ಚೆನ್ನಾಗಿ ತೊಳೆದು ಶುದ್ಧ ಮೃದು ಬಟ್ಟೆಯಿಂದ ಒರೆಸಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಿ.

೨.ಬೆಳ್ಳುಳ್ಳಿ

೧.ಒಂದು ಬಟ್ಟಲು ನೀರನ್ನು ಕುದಿಯಲು ಇಡಿ.

೨.ಸ್ವಲ್ಪ ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಕುದಿಯುತ್ತಿರುವ ನೀರಿನಲ್ಲಿ ಹಾಕಿ.

೩.೧೦ ನಿಮಿಷಗಳ ನಂತರ ನೀರನ್ನು ಪಾತ್ರೆಗೆ ಹಾಕಿಕೊಳ್ಳಿ ಬೆಳ್ಳುಳ್ಳಿಯನ್ನು ಬೇರೆ ತಟ್ಟೆಯಲ್ಲಿ ಇಡಿ.

೪.ಆ ನೀರು ಬೆಚ್ಚಗಾದ ಮೇಲೆ ಅದರಿಂದ ಯೋನಿಯನ್ನು ತೊಳೆದುಕೊಳ್ಳಿ.

೫.ಬೆಳ್ಳುಳ್ಳಿಯನ್ನು ಪೇಸ್ಟ್ ತರಹ ಅಥವಾ ಕ್ರೀಮ್ ತರಹ ಚೆನ್ನಾಗಿ ರುಬ್ಬಿಕೊಳ್ಳಿ.

೬.ಯೋನಿಯ ತೆರೆಯುಕೆ ಹತ್ತಿರ ಮತ್ತು ಸುತ್ತಲು ಇದನ್ನು ಹಚ್ಚಿರಿ.

೭.೨೦-೩೦ ನಿಮಿಷದ ನಂತರ ಇದನ್ನು ಚೆನ್ನಾಗಿ ತೊಳೆದುಕೊಳ್ಳಿ.

೮.ಬೇಗನೆ ಫಲಿತಾಂಶ ಕಾಣಲು ಇದನ್ನು ಪ್ರತಿದಿನ ಮಾಡಿರಿ.

೩.ಕೊಬ್ಬರಿ ಎಣ್ಣೆ

೧.ಹತ್ತಿಯ ಒಂದು ಸಣ್ಣ ಭಾಗವನ್ನು ಕೊಬ್ಬರಿ ಎಣ್ಣೆಯಲ್ಲಿ ಹಜ್ಜಿ.

೨.ಇದನ್ನು ತುರಿಕೆ ಇರುವ ಜಾಗದ ಸುತ್ತ ಹಚ್ಚಿರಿ, ಮತ್ತು ೩೦ ನಿಮಿಷಗಳ ಕಾಲ ಹಾಗೆಯೆ ಬಿಡಿ.

೩.೧ ಚಮಚ ಕೊಬ್ಬರಿ ಎಣ್ಣೆಯನ್ನು ೧ ಲೋಟ ಬೆಚ್ಚನೆಯ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಿ, ಇದನ್ನು ಯೋನಿಗೆ ಹಚ್ಚಿರಿ.

೪.ನಂತರ ಯೋನಿಯನ್ನು ಉಗುರು ಬೆಚ್ಚನೆಯ ತಿಳಿನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

೫.ಪ್ರತಿದಿನ ಇದನ್ನು ಮಾಡುವುದರಿಂದ ತ್ವರಿತ ಫಲಿತಾಂಶವನ್ನು ಕಾಣಬಹುದು.

೪.ಉಪ್ಪಿನ ನೀರಿನ ಸ್ನಾನ

ಉಪ್ಪು ಕಿರಿಕಿರಿ ವಿರೋಧಿಯಾಗಿ ಕೆಲಸ ಮಾಡುತ್ತದೆ. ಉಪ್ಪಿನ ನೀರಿನಲ್ಲಿ ನಿಮ್ಮ ದೇಹವನ್ನು ನೆನೆಸುವುದರಿಂದ ತುರಿಕೆ ಇಂದ ಇದನ್ನು ಸರಿ ಪಡಿಸಿಕೊಳ್ಳಬಹುದು.\

೧.ತ್ವರಿತ ಫಲಿತಾಂಶಕ್ಕಾಗಿ, ೧ ಚಮಚ ಉಪ್ಪನ್ನು ೧ ಲೋಟ ಬೆಚ್ಚನೆಯ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ.

೨.ಇದನ್ನು ನಿಮ್ಮ ಯೋನಿಯನ್ನು ತೊಳೆಯಲು ಉಪಯೋಗಿಸಿ.

೩.ನೀವು ಸ್ನಾನ ಮಾಡುವ ನೀರಿಗೆ ಉಪ್ಪನ್ನು ಬೆರಸಿ ಆ ನೀರಿನಿಂದ ಸ್ನಾನ ಮಾಡಿ ನಂತರ ಸ್ವಚ್ಛ ನೀರಿನಿಂದ ತೊಳೆದುಕೊಳ್ಳುವುದು ಆರಾಮದಾಯಕವನ್ನು ನೀಡುತ್ತದೆ. ತಲೆಗೆ ಇದನ್ನು ಬಳಸಬೇಡಿ.

೪.ಪ್ರತಿ ದಿನ ಇದನ್ನು ಮಾಡಿ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon