Link copied!
Sign in / Sign up
15
Shares

ಯೋನಿಯನ್ನು ಮೊದಲ ರೀತಿ ಟೈಟ್ ಇರಿಸಲು 4 ನೈಸರ್ಗಿಕ ದಾರಿಗಳು?

ಮಗುವಿನ ಹೆರಿಗೆಯ ನಂತರ ತಾಯಂದಿರಲ್ಲಿ ಸಾಮಾನ್ಯವಾಗಿ ಕಾಡುವ ತೊಡಕು ಎಂದರೆ ಅದು - ಸಡಿಲಗೊಂಡ ಯೋನಿ. ಈ ರೀತಿಯ ಸಡಿಲಗೊಂಡ ಯೋನಿಯಿಂದ ಆಗುವ ತೊಂದರೆ ಎಂದರೆ ಅದು ಲೈಂಗಿಕ ಕ್ರಿಯೆಯಲ್ಲಿ ಸಿಗಬೇಕಾದ ಸುಖ ಸಿಗದೇ ಇರುವುದು ಮತ್ತು ಪರಾಕಾಷ್ಠೆ ಹೊಂದುವುದರಲ್ಲಿ ತಡ ಆಗುವುದು. ನಿಮಗೆ ಈ ಸಡಿಲಗೊಂಡ ಯೋನಿಯಿಂದ ಬೇಸರ ಆಗಿದ್ದರೆ, ಬಿಗಿಯಾದ ಗರ್ಭಕಂಠವು ನಿಮ್ಮನ್ನು ಬೇರೇ ಉತ್ತುಂಗಗಳಿಗೆ ಕರೆದೊಯ್ದು ನಿಮ್ಮ ಲೈಂಗಿಕ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮ ಯೋನಿಯನ್ನ ಬಿಗಿಯಾಗಿ ಇಡಲಿಕ್ಕೆ ಇಲ್ಲಿ ಕೆಲವು ನೈಸರ್ಗಿಕ ದಾರಿಗಳನ್ನ ನಾವು ಪ್ರಸ್ತಾಪಿಸಿದ್ದೇವೆ, ಓದಿ.

೧. ಆಹಾರ ಪದ್ಧತಿ

ನಿಮ್ಮ ಶ್ರೋಣಿಯ(ಪೆಲ್ವಿಕ್ ) ಸಡಿಲಗೊಂಡ ಸ್ನಾಯುಗಳನ್ನ ಮರುಸ್ಥಾಪಿಸಲು ನಿಮಗೆ ಕೇವಲ ವ್ಯಾಯಾಮಗಳು ಮಾತ್ರ ಸಹಾಯ ಮಾಡುವುದಿಲ್ಲ. ನೀವು ನಿಮ್ಮ ಸ್ನಾಯುಗಳ ರಿಪೇರಿ  ಹೊಂದು, ಮರುಬೆಳವಣಿಗೆ  ಹೊಂದಬೇಕು ಎಂದರೆ, ನೀವು ಅವುಗಳಿಗೆ ಸರಿಯಾದ ಆಹಾರ ಒದಗಿಸಬೇಕು. ನೈಸರ್ಗಿಕ ಮದಜನಕ (ಈಸ್ಟ್ರೋಜೆನ್ ) ಹೊಂದಿರುವಂತ ಎಳ್ಳು, ಕ್ಯಾರಟ್, ಮೆಂತ್ಯೆ  ಕಾಳುಗಳು, ದಾಳಿಂಬರೆ ಕಾಳುಗಳು , ಗೋಧಿ ಬೆರಿಗಳು, ಮತ್ತು ಸೇಬು ಹಣ್ಣುಗಳನ್ನ ಹೆಚ್ಚಾಗಿ ಸೇವಿಸಬೇಕು. ಅಷ್ಟೇ ಅಲ್ಲ ನೀವು ಸಾಕಷ್ಟು ಸಾವಯುವ ಹಣ್ಣುಗಳು ಮತ್ತು ತರಕಾರಿಗಳನ್ನ ಸೇವಿಸಬೇಕು.

೨. ಆಲೋ ವೆರಾ

ಯೋನಿಯನ್ನ ನೈಸರ್ಗಿಕವಾಗಿ ಬಿಗಿಯಾಗಿಸುವುದು ಮತ್ತು ಸರಿತವನ್ನ ನಿವಾರಿಸುವುದರಲ್ಲಿ ಆಲೋ ವೆರಾ ತನ್ನ ಸಂಕೋಚಕ ಗುಣಗಳ ಕಾರಣದಿಂದ ಬಹಳಷ್ಟು ಉಪಕಾರಿ. ಈ ಗಿಡವು ವಿಟಮಿನ್ ಎ, ವಿಟಮಿನ್ ಸಿ , ಫೋಲಿಕ್ ಆಮ್ಲ, ಕೋಲೀನ್ ಅಂತಹ ವಿಟಮಿನ್ಗಳನ್ನ ಒಳಗೊಂಡಿರುತ್ತದೆ ಹಾಗು ಜಿಂಕ್, ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ಸೋಡಿಯಂ ಅಂತಹ ಮಿನರಲ್ಗಳನ್ನ ಕೂಡ ಹೊಂದಿರುತ್ತದೆ. ನೀವು ಇದನ್ನ ಹಿಂಡಿ, ಅದರ ಅಂಟನ್ನು ಸ್ವಲ್ಪವೇ ನಿಮ್ಮ ಬೆರಳಿನಿಂದ ನಿಮ್ಮ ಯೋನಿಯ ಒಳಗೋಡೆಗಳಿಗೆ ಹಚ್ಚಿಕೊಂಡರೆ ಸಾಕು. ನೀವು ಇದನ್ನ ದಿನಕ್ಕೆ 5-6 ಬಾರಿ ಮಾಡಿದರೂ ಸಾಕು.

೩. ಕೆಗೆಲ್ ವ್ಯಾಯಾಮಗಳನ್ನ ಮಾಡುವುದು

ಕೆಗೆಲ್ ವ್ಯಾಯಾಮಗಳ ವಿಶೇಷತೆ ಏನು ಅಂದರೆ ನೀವು ಇವುಗಳನ್ನ ಯಾವುದೇ ಉಪಕರಣಗಳು ಇಲ್ಲದೆಯೇ ಮನೆಯಲ್ಲೇ ಮಾಡಬಹುದು. ಹಲವಾರು ರೀತಿಯ ಕೆಗೆಲ್ ವ್ಯಾಯಾಮಗಳು ಇದ್ದರೂ, ನೀವು ಈ ಚಿತ್ರದಲ್ಲಿ ತೋರಿಸಿರುವ ವ್ಯಾಯಾಮದೊಂದಿಗೆ ಶುರು ಮಾಡಬಹುದು. ಈ ವ್ಯಾಯಾಮಗಳು ಹೇಗೆ ಮಾಡುವುದೆಂದು ಒಮ್ಮೆ ತಿಳಿದರೆ ನೀವು ನಂತರ ಸುಲಭವಾಗಿ ಮಾಡಬಹುದು. ಮೊದಲು ನೀವು ನಿಮ್ಮ ಬೆನ್ನಿನ ಮೇಲೆ ಮಲಗಿಕೊಂಡು, ನಿಮ್ಮ ಮೂತ್ರವನ್ನ ತಡೆ ಹಿಡಿಯಲಿಕ್ಕೆ ನೀವು ಯಾವ ಸ್ನಾಯುಗಳನ್ನ ಬಳಸುತ್ತೀರಾ ಎಂಬುದನ್ನ ಕಂಡು ಹಿಡಿದುಕೊಳ್ಳಿ.. ನೀವು ಅವುಗಳನ್ನ ಕಂಡುಕೊಂಡೊಡನೆ, ಒಂದು ಸೆಕೆಂಡ್ ಅವನ್ನು ಕಿವುಚಿರಿ, ನಂತರ ಒಂದು ಸೆಕೆಂಡ್ ಅದನ್ನ ವಿಶ್ರಮಿಸಿ. ಈ ರೀತಿ ನೀವು ಒಂದು ಸೆಟ್ಟಿಗೆ 25 ಬಾರಿ ಮಾಡಬೇಕು ಹಾಗು ದಿನಕ್ಕೆ 5-6 ಸೆಟ್ ಗಳನ್ನ ಮಾಡಬೇಕು. ಹೀಗೆ ನೀವು ನಿಮ್ಮ ಸ್ನಾಯುಗಳನ್ನ ತಯಾರು ಮಾಡಿದರೆ, ನೀವು ದಿನದಿಂದ ದಿನಕ್ಕೆ ಆ ಭಾಗದಲ್ಲಿ ಬದಲಾವಣೆ ಕಾಣುತ್ತೀರಾ.

೪. ಸ್ಕ್ವಾಟ್ಸ್  ಮಾಡುವುದು

ಸ್ಕ್ವಾಟ್ಸ್ ಅಥವಾ ಸುಲಭವಾಗಿ ಹೇಳಬೇಕೆಂದರೆ ಉಟ್ - ಬೈಸ್. ಇದನ್ನ ವ್ಯಾಯಾಮಗಳ ರಾಜ ಎಂದೇ ಕರೆಯುತ್ತಾರೆ ಏಕೆಂದರೆ ಇದು ಒಂದೇ ಸಮಯಕ್ಕೆ ಸೊಂಟ, ಹಾಮ್ಸ್ಟ್ರಿಂಗ್ (ಮಂಡಿರಜ್ಜು) ಮತ್ತು ಶ್ರೋಣಿಯ ಗೋಡೆಗಳ ಸ್ನಾಯುಗಳನ್ನ ಗಟ್ಟಿ ಮಾಡುತ್ತದೆ. ನೀವು ಇದನ್ನ ಸರಿಯಾದ ವಿಧಾನದಲ್ಲಿ ಮಾಡಿದರೆ ನಿಮ್ಮ ಯೋನಿಯ ಸ್ನಾಯುಗಳು ಗಟ್ಟಿಯಾಗುತ್ತವೆ ಮತ್ತು ನಿಮ್ಮ ಗುಪ್ತ ಅಂಗಗಳನ್ನ ಸಡಿಲವಾಗುವ ಮುಂಚೆ ಇದ್ದ ಸ್ಥಿತಿಗೆ ಮತ್ತೆ ಕೊಂಡೊಯ್ಯುತ್ತವೆ. ನೀವು ಸರಿಯಾಗಿ ಸ್ಕ್ವಾಟ್ ಮಾಡಬೇಕೆಂದರೆ, ನಿಮ್ಮ ಕಾಲುಗಳನ್ನ ಹಗಳಿಸಿ ನಿಲ್ಲಿ ಹಾಗು ನಿಮ್ಮ ಸೊಂಟವು ಇದ್ದ ಜಾಗದಲ್ಲೇ ಇರುವಂತೆ ನೋಡಿಕೊಂಡು, ಕುರ್ಚಿಯ ಮೇಲೆ ಕೂರುವ ರೀತಿ ಬಗ್ಗಿರಿ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon