Link copied!
Sign in / Sign up
4
Shares

ಯೋನಿಯೇ ಇಲ್ಲದೆ ಜನಿಸಿದ ಈಕೆ, ಈಗ ತಾಯಿಯೂ ಆಗಲಿದ್ದಾಳೆ

ಯೋನಿಯೇ ಇಲ್ಲದೆ ಜನಿಸಿದೆ ಈ ಹುಡುಗಿಗೆ ಜೀವನವನ್ನೇ ಬದಲಿಸುವಂತ ಸರ್ಜರಿ ದೊರೆತಿದ್ದು, ಈಗ ಆಕೆಯು ಲೈಂಗಿಕ ಕ್ರಿಯೆಯಲ್ಲೂ ತೊಡಗಬಹುದು ಮತ್ತು ಹೊಸ ಸಂಸಾರ ಹೊಂದುವ ಆಶೆಯನ್ನೂ ಇಟ್ಟುಕೊಳ್ಳಬಹುದು.

ಜಾರ್ಜಿಯಾದ ದೆವನ್ ಮರೆಕ್ ಎಂಬ 23 ವರ್ಷದ ಹುಡುಗಿಯು ತಾನು 12 ವರ್ಷದವಳಿದ್ದಾಗ ತನಗೆ ಯೋನಿಯ ನಾಳ ಇಲ್ಲ, ಸರಿಯಾದ ಗರ್ಭಕೋಶ ಇಲ್ಲ ಮತ್ತು ಗರ್ಭಕಂಠವೇ ಇಲ್ಲ ಎಂದು ತಿಳಿದು ಆಘಾತಕ್ಕೆ ಒಳಗಾದಳು. ವರ್ಷಗಳ ಕಾಲ ಈಕೆಯೂ ತನ್ನ ಶಾಲಾ ಕಾಲೇಜುಗಳಲ್ಲಿ ಇತರರಿಂದ “ಗಂಡಸು”, “ವಿಚಿತ್ರ” ಎಂಬ ಮನನೋಯಿಸುವ ಮಾತುಗಳಿಗೆ ಗುರಿಯಾಗಿದ್ದು, ಹೇಗೆ ಈಕೆ ತನ್ನ ಸಹಪಾಠಿಗಳಿಂದ ಕಿರುಕುಳಕ್ಕೆ ಒಳಗಾದಳು ಎಂಬುದು ಮನಕಲುಕುವಂತದ್ದು.

ಆದರೆ ವೈದ್ಯರು ಇವಳ ಮೇಲೆ ನಡೆಸಿದ ಸರ್ಜರಿಯಿಂದ ಈಗ ಈಕೆಯೂ ಸಂಭೋಗದಲ್ಲಿ ಪಾಲ್ಗೊಳ್ಳಬಹುದು ಹಾಗು ಈಗ ಈಕೆ ಮತ್ತು ಈಕೆಯ ಪತಿ ಟ್ರೆಂಟ್ ಹೋಪ್ IVF ತಂತ್ರಜ್ಞಾನದ ಮೂಲಕ ಒಂದು ಮಗುವನ್ನ ಪಡೆಯುವ ಯೋಚನೆ ಕೂಡ ಮಾಡುತ್ತಿದ್ದಾರೆ.

ದೆವನ್ ಮೊದಲ ಬಾರಿ ತೊಂದರೆ ಅನುಭವಿಸಲು ಶುರು ಮಾಡಿದ್ದು ಆಕೆ 12 ವರ್ಷದವಳಿದ್ದಾಗ. ಪ್ರತಿ ತಿಂಗಳೂ ಈಕೆ ಹೇಳಲಾಗದಂತ ನೋವನ್ನು ಅನುಭವಿಸುತ್ತಿದ್ದಳು. ಆದರೆ ವೈದ್ಯರು ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ, ಇದು ಪಿರಿಯಡ್ಸ್ ಇಂದ ಆಗುತ್ತಿದೆ ಎಂದು ಕೈ ತೊಳೆದುಕೊಳ್ಳುತ್ತಿದ್ದರು.

ನಂತರ ದೆವನ್ ತಾಯಿ ಒಂದು ವಿಶೇಷ ತಜ್ಞರನ್ನ ಭೇಟಿ ಮಾಡಿದಾಗ ತಿಳಿದಿದ್ದು ಈ ಸಮಸ್ಯೆ 5000 ಹೆಂಗಸರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ ಎಂದು. ದೆವನ್ ಗೆ 13 ವರ್ಷ ವಯಸ್ಸಾಗಿದ್ದಾಗ, ಆಕೆಯ ಸರಿಯಾಗಿ ಬೆಳವಣಿಗೆ ಹೊಂದದ ಗರ್ಭಕೋಶ ತೆಗಿಸಲಿಕ್ಕೆ ಸರ್ಜರಿ ಮಾಡಲಾಯಿತು. ಮೂರು ವರ್ಷಗಳ ನಂತರ, ಅಂದರೆ ಈಕೆಗೆ 16 ವರ್ಷ ವಯಸ್ಸು ಆದಾಗ, ಯೋನಿಯ ನಾಳ ಸೃಷ್ಟಿಸುವುದಕ್ಕೆ ಸರ್ಜರಿ ನಡೆಯಿತು.

ಯೋನಿಯ ತುದಿಯಲ್ಲಿ ಈಕೆಗೆ ದಪ್ಪ ಚರ್ಮದ ಒಂದು ಪದರವಿತ್ತು, ವೈದ್ಯರು ಅದನ್ನ ಕತ್ತರಿಸಿ ನಂತರ ಈಕೆಯ ಪೃಷ್ಠದ ಚರ್ಮವನ್ನ ತೆಗೆದು ಅಲ್ಲಿಗೆ ಜೋಡಿಸಲಾಯಿತು. ಹೊಸ ಚರ್ಮವನ್ನ ಸುರುಳಿ ಸುತ್ತಿ ಈಕೆಯ ಯೋನಿಯ ಒಳಗೆ ಇಟ್ಟು, ಯೋನಿಯ ನಾಳವನ್ನ ಸೃಷ್ಟಿಸಲಾಯಿತು. ಸರ್ಜರಿ ನಂತರ ನಾಳ ಸೃಷ್ಟಿಸಲು ಉಪಯೋಗಿಸಿದ ಚರ್ಮದ ಎರಡು ಗೋಡೆಗಳು ಮತ್ತೆ ಕೂಡಿಕೊಳ್ಳಬಾರದು ಎಂದು ಬಹಳಷ್ಟು ತಿಂಗಳುಗಳವರೆಗೆ ದೆವನ್ ಬುರುಗು ವಸ್ತ್ರವನ್ನ ಯೋನಿಯೊಳಗೆ ಇಟ್ಟುಕೊಳ್ಳ ಬೇಕಾಯಿತು.  

ಈ ದಂಪತಿಗಳು ಈಗಷ್ಟೇ ದೆವನ್ ನ ಎರಡು ಅಂಡಾಷಯಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿದುಕೊಂಡಿದ್ದು, ಈಗ ಇವರು ಸರೋಗೇಟ್ ತಾಯಿಯ ಮೂಲಕ ತಮ್ಮದೇ ಮಗುವನ್ನ ಪಡೆಯಬಹುದು ಎಂಬುದನ್ನ ತಿಳಿದುಕೊಂಡಿದ್ದಾರೆ.

“ನಾನು ತಾಯಿ ಆಗಬೇಕು ಎಂಬುದೇ ನನ್ನ ಹೆಬ್ಬಯಕೆ ಆಗಿತ್ತು. ಅದರಲ್ಲೂ ಇಷ್ಟೆಲ್ಲಾ ಆದಮೇಲೆ ನಾನು ಕೊನೆಗೂ ಒಂದು ಸಂಸಾರ ಕಟ್ಟಿ, ಮಗುವನ್ನೂ ಪಡೆಯುತ್ತೇನೆ ಎಂಬ ಆಶಯವು ನನ್ನ ಜೀವನದಲ್ಲಿ ಹೊಸ ಚೈತನ್ಯ ತುಂಬಿತು. ನನ್ನ ಜೀವನ ಪಾವನ ಎನಿಸಿತು”.

ಪ್ರತಿಯೊಂದು ಹೆಣ್ಣಿನ ಬಯಕೆ ತಾನು ಇನ್ನೊಂದು ಜೀವಕ್ಕೆ ಜನ್ಮ ನೀಡಿ ತಾಯ್ತನವನ್ನ ಸಂಭ್ರಮಿಸಬೇಕು ಎಂಬುದು. ಈಕೆಯ ಪ್ರಕರಣದಲ್ಲಿ, ತೊಂದರೆಗಳು ಎದುರಾದರು, ಕೊನೆಗೂ ಈಕೆ ತಾಯಿ ಆಗುತ್ತಿರುವುದು ತುಂಬಾನೇ ಖುಷಿಯ ವಿಷಯ.

ಈಕೆಗೆ ಶುಭವಾಗಲಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon