Link copied!
Sign in / Sign up
8
Shares

ಸೆಕ್ಸ್ ಇಂದ ಯೋನಿಯು ಲೂಸ್ ಆಗುತ್ತದೆಯೇ?

ನೀವು ಈಗ ಅನುಭವಸ್ತರಾಗಿದ್ದು, ನಿಮಗೆ ನಿಮ್ಮ ಯೋನಿಯು ಟಾಂಪಾನ್, ಶಿಶ್ನ ಅಥವಾ ಮಗುವಿನ ದೇಹವನ್ನು ಕೂಡ ಒಳಗಿಟ್ಟುಕೊಳ್ಳುವಷ್ಟು ಚೇತರಿಸಿಕೊಳ್ಳುವ ಶಕ್ತಿ ಮತ್ತು ಸಂಪೂರ್ಣ ಸ್ಥಿತಿಸ್ಥಾಪಕತ್ವ (ಫ್ಲೆಕ್ಸಿಬಿಲಿಟಿ) ಹೊಂದಿದೆ ಎಂದು ನಿಮಗೆ ಗೊತ್ತಿದೆ. ಆದರೆ ನಿಮ್ಮ ಗುಪ್ತಾಂಗದ ಬಗ್ಗೆ ನೀವು ಎಷ್ಟೇ ತಿಳಿದಿದ್ದರೂ, ನೀವು ಆ ಭಾಗದಲ್ಲಿ ಕಾಲದಿಂದ ಕಾಲಕ್ಕೆ ಏನೆಲ್ಲಾ ಬದಲಾವಣೆಗಳು ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳು ಕೂಡ ಇರುತ್ತವೆ. ಮುಖ್ಯವಾಗಿ ನಿಮ್ಮ ಯೋನಿಯು ಲೈಂಗಿಕ ಕ್ರಿಯೆಯಲ್ಲಿ ಹೇಗೆ ಸ್ಪಂದಿಸುತ್ತದೆ ಎಂಬುದು. ಅಂತಹ ಗೊಂದಲಗಳು, ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಎಂದರೆ - ಸೆಕ್ಸ್ ಇಂದ ಯೋನಿಯು ಸಡಿಲವಾಗುತ್ತದೆಯೇ?

ನ್ಯೂಯಾರ್ಕಿನ ಹೆರಿಗೆ ಮತ್ತು ಲೈಂಗಿಕ ತಜ್ಞರಾಗಿರುವ ಡಾ ।। ಮಿಚೆಲ್ ಅವರ ಪ್ರಕಾರ ಇದಕ್ಕೆ ಚಿಕ್ಕದಾದ ಉತ್ತರ ಎಂದರೆ ಅದು “ಇಲ್ಲ”. ಯೋನಿಯು ಕೇವಲ ಸ್ನಾಯುಗಳ ಒಂದು ಬ್ಯಾಂಡ್ ಆಗಿದ್ದು, ಇದು ಸೆಕ್ಸ್ ಸಮಯದಲ್ಲಿ ಹಿಗ್ಗುತ್ತದೆ ಮತ್ತು ಅದರ ನಂತರ ತನ್ನ ಹಳೆಯ ಸ್ಥಿತಿಗೆ ವಾಪಾಸ್ ಆಗುತ್ತದೆ ಎಂದು ಅವರು ಹೇಳುತ್ತಾರೆ.

ಆದರೆ ಮೊದಲ ಬಾರಿಗೆ ಸೆಕ್ಸ್ ಅಲ್ಲಿ ತೊಡಗಿಕೊಂಡ ನಂತರ ಯೋನಿಯಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಸಾಮಾನ್ಯವಾಗಿ ಅಂಗಾಂಶಗಳ ಒಂದು ಬ್ಯಾಂಡ್ ಆದ ಹೈಮೆನ್ ಹರಿದು ಹೋಗಬಹುದು ಮತ್ತು ಹೀಗೆ ಹರಿದು ಹೋಗುವುದರಿಂದ ಸ್ವಲ್ಪ ರಕ್ತಸ್ರಾವವು ಉಂಟಾಗಬಹುದು. ಅಲ್ಲದೆ ತಜ್ಞರು ಈ ಮೊದಲ ಅನುಭವದ ನಂತರ ಯೋನಿಯ ಬಾಗಿಲು ಕೂಡ ಸ್ವಲ್ಪ ಹೆಚ್ಚು ತೆರೆದುಕೊಳ್ಳುತ್ತದೆ ಎಂದು ಹೇಳುತ್ತಾರೆ.

ತಜ್ಞರ ಪ್ರಕಾರ ಕೇವಲ ಸೆಕ್ಸ್ ಒಂದರಿಂದಲೇ ಯೋನಿಯು ಸಡಿಲಗೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಿದ್ದರೂ, ಕೆಲವೊಮ್ಮೆ ನಿಮ್ಮ ಯೋನಿಯು ಹಿಗ್ಗದೇ ಇದ್ದರು ಯೋನಿಯ ಒಳಭಾಗದಲ್ಲಿ ಕೆಂಪಗೆ ಆಗಿರುವುದು ಅಥವಾ ಚಿಕ್ಕ ಚಿಕ್ಕ ಕತ್ತರಿಸಿದ ರೀತಿಯ ಗುರುತುಗಳು ಆಗಬಹುದು. ಇದು ನಿಮ್ಮ ಯೋನಿಯು ತ್ವಚೆಯು ಜಾಸ್ತಿಯೇ ಹಿಗ್ಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಇದು ತಲೆಕೆಡಿಸಿಕೊಳ್ಳುವಂತಹ ತೊಂದರೆ ಅಲ್ಲದಿದ್ದರೂ, ನಿಮಗೆ ಪ್ರತಿಬಾರಿ ಸೆಕ್ಸ್ ಅಲ್ಲಿ ತೊಡಗಿದಾಗಲೂ ನೋವು ಮತ್ತು ಸಂಕಟ ಉಂಟಾದರೆ, ವೈದ್ಯರ ಬಳಿ ಭೇಟಿ ಕೊಡಿ.

ಆದರೆ ಕೆಲವೊಮ್ಮೆ ಏನು ವೈದ್ಯಕೀಯ ತೊಂದರೆಗಳು ಇಲ್ಲದಿದ್ದರೂ ನಿಮಗೆ ಸೆಕ್ಸ್ ಅಲ್ಲಿ ತೊಡಗಿಸಿಕೊಂಡ ನಂತರ ನೋವು ಉಂಟಾಗಬಹುದು. ತಜ್ಞರು ನೀವು ಸೆಕ್ಸ್ ಅಲ್ಲಿ ಹೆಚ್ಚು ಬಾರಿ ಮತ್ತು ಹೆಚ್ಚು ಹೊತ್ತು ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ನಿಮ್ಮ ಯೋನಿಯ ಸ್ಥಿತಿಸ್ಥಾಪಕತ್ವ ಮತ್ತು ಎಲಾಸ್ಟಿಸಿಟಿ ಅನ್ನು ಕಾಪಾಡಿಕೊಳ್ಳಬಹುದು ಎಂದು ಹೇಳುತ್ತಾರೆ.

ಆದರೆ ಮೊದಲು ಕೇಳಿದ ಪ್ರಶ್ನೆಗೆ ಒಂದು ಉತ್ತರ ಎಂದರೆ : ಇಲ್ಲ. ಕೇವಲ ಸೆಕ್ಸ್ ಒಂದರಿಂದಲೇ ನಿಮ್ಮ ಯೋನಿಯು ಲೂಸ್ ಆಗಲು ಸಾಧ್ಯವಿಲ್ಲ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon