Link copied!
Sign in / Sign up
2
Shares

ಲೈಂಗಿಕತೆ, ಈಸ್ಟ್ ಸೋಂಕು ಮತ್ತು ಯೋನಿ ಇವುಗಳ ಬಗೆಗಿನ ಈ ಸತ್ಯಗಳನ್ನು ನೀವು ತಿಳಿದಿರಲೇ ಬೇಕು

ಯೋನಿಯ ಈಸ್ಟ್ ಸೋಂಕು ನಿಮ್ಮ ಲೈಂಗಿಕ ಜೀವನವನ್ನು ನಾಶಮಾಡುವುದು. ಯೋನಿ ಈಸ್ಟ್ ಸೋಂಕಿನಿಂದ ಚೇತರಿಕೆಗೊಳ್ಳುವುದನ್ನು ನಿಮ್ಮ ಲೈಂಗಿಕತೆ ತಡೆಯುವುದು. ಲೈಂಗಿಕತೆ ಮತ್ತು ಈಸ್ಟ್ ಸೋಂಕು ಸಂಕೀರ್ಣ ಸಂಬಂಧವನ್ನು ಹೊಂದಿವೆ. ಈಸ್ಟ್ ಸೋಂಕು ಮತ್ತು ಲೈಂಗಿಕತೆ ನಿಮ್ಮ ಲೈಂಗಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅಥವಾ ಮಹಿಳೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

೧.ಯೋನಿಯ ಈಸ್ಟ್ ಸೋಂಕು ನಿಮ್ಮ ಸಂಭೋಗವನ್ನು ನೋವಿನಿಂದ ಕೂಡಿರುವಂತೆ ಮಾಡುತ್ತದೆ

ಕಿರಿಕಿರಿ ಆಗುವುದು, ತುರಿಕೆ, ಉರಿಯೂತ ಮುಂತಾದವುಗಳು ಯೋನಿಯ ಈಸ್ಟ್ ಸೋಂಕಿನ ಸಾಮಾನ್ಯ ಗುಣಲಕ್ಷಣಗಳಾಗಿವೆ. ಈ ಲಕ್ಷಣಗಳು ಯೋನಿಯ ಪರದೆಯನ್ನು ಸೂಕ್ಷ್ಮವಾಗಿಸುತ್ತದೆ. ಸಂಭೋಗದ ತಿಕ್ಕಾಟದಿಂದ ಸೂಕ್ಷ್ಮವಾಗಿರುವ ಯೋನಿಯ ಜಾಗವನ್ನು ಮತ್ತಷ್ಟು ಆಯಾಸವಾಗುವಂತೆ ಮಾಡುತ್ತದೆ. ಇದು ನಿಮ್ಮ ಸಂಭೋಗವನ್ನು ಮತ್ತಷ್ಟು ನೋವಿನಿಂದ ಕೂಡಿರುವಂತೆ ಮಾಡುತ್ತದೆ.

೨.ಕ್ಯಾಂಡಿಡಾ ಯೀಸ್ಟ್ ಸೋಂಕುಗಳು ನಿಮ್ಮ ಯೋನಿಯ ನಯಗೊಳಿಸುವಿಕೆಯನ್ನು ಹಾಳುಮಾಡುತ್ತವೆ

ಯೋನಿಯಲ್ಲಿ ಯೀಸ್ಟ್ ನ ಅತಿಯಾದ ಬೆಳವಣಿಗೆ ಯೋನಿಯ ಸಮತೋಲನದಲ್ಲಿ ಬದಲಾವಣೆಯನ್ನು ಮಾಡುವುದು. ಇದರಿಂದ ನೀವು ಅಸಹಜ ವಿಸರ್ಜನೆಯನ್ನು ಕಾಣಬಹುದು. ಇದು ನಿಮ್ಮ ಯೋನಿಯನ್ನು ಅಹಿತಕರವಾಗುವಂತೆ ಮಾಡುತ್ತದೆ.

೩.ಲೈಂಗಿಕತೆ ಯೀಸ್ಟ್ ಸೋಂಕನ್ನು ಮತ್ತಷ್ಟು ಹದಗೆಡಿಸುತ್ತದೆ

ನೀವು ನವೆ, ತುರಿಕೆ, ಕಿರಿಕಿರಿ, ಕೆಂಪಾದ ಯೋನಿಯ ಗೋಡೆಗಳು, ಮತ್ತು ಊದಿದ ನಿಮ್ಮ ಜನನಾಂಗದ ಭಾಗ ಮುಂತಾದವುಗಳನ್ನು ಅನುಭವಿಸಿದರೆ, ಈ ಸಮಯದಲ್ಲಿ ಸಂಭೋಗ ಈ ಲಕ್ಷಣಗಳನ್ನು ಮತ್ತಷ್ಟು ಕೆಟ್ಟದಾಗಿಸುತ್ತದೆ. ಇದರಿಂದ ನಿಮ್ಮ ಜನನಾಂಗ ಅತಿಯಾಗಿ ಊದಿಕೊಂಡಿರುವುದನ್ನು ನೀವು ಗಮನಿಸಬಹುದು.

೪.ಲೈಂಗಿಕತೆ ಇಂದ ಬರುವ ರೋಗಗಳು ಹರಡುವ ಅಪಾಯ ಹೆಚ್ಚಿರುತ್ತದೆ

ಸೋಂಕಿನಿಂದ ಆಗುವ ತುರಿಕೆ ಈ ವೇಳೆ ಯೋನಿಯಲ್ಲಿ ಬಿರುಕನ್ನು ಮಾಡುತ್ತದೆ, ಮತ್ತು ಜನನಾಂಗದ ಭಾಗದಲ್ಲಿ ಕಿರಿದಾಗಿ ಹರಿವನ್ನು ಕಾಣುತ್ತದೆ, ಇದರಿಂದ ಬ್ಯಾಕ್ಟೀರಿಯಾ ಮತ್ತು ಜೀವಿಗಳು ಒಳಗೆ ಪ್ರವೇಶ ಪಡೆಯಬಹುದು. ತಜ್ಞರ ಪ್ರಕಾರ ಇದರಿಂದ ಬೇರೆ ಸೋಂಕು ಅಥವಾ ರೋಗವನ್ನು ಪಡೆಯುವ ಸಾಧ್ಯತೆಗಳು ಹೆಚ್ಚು.

೫.ಸಂಭೋಗದಿಂದ ಯೀಸ್ಟ್ ಸೋಂಕನ್ನು ಮಹಿಳೆ ಪುರುಷನಿಗೆ ರವಾನಿಸುತ್ತಾಳೆ

ಯೀಸ್ಟ್ ಸೋಂಕು ಪುರುಷನ ಮೇಲು ಸಹ ಪ್ರಭಾವವನ್ನು ಬೀರುತ್ತದೆ. ಯೋನಿಯ ಯೀಸ್ಟ್ ಸೋಂಕು ಇರುವ ಮಹಿಳೆ ಪುರುಷನ ಜೊತೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದರೆ, ಪುರುಷನು ಕೂಡ ಸೋಂಕನ್ನು ಅನುಭವಿಸುವನು. ಒಂದು ಅಧ್ಯಯನದಿಂದ ಇದು ತಿಳಿದಿದೆ ಮತ್ತು ಅದರ ಪ್ರಕಾರ ಶೇಕಡಾ ೧೫ರಷ್ಟು ಪುರುಷರು ಈ ಸೋಂಕನ್ನು ಮಹಿಳೆಯರ ಜೊತೆ ಅಸುರಕ್ಷಿತ ಲೈಂಗಿಕತೆಯಿಂದ ಪಡೆದುಕೊಂಡಿದ್ದಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon