Link copied!
Sign in / Sign up
64
Shares

ಯಾವ ರಾಶಿಗೆ ಯಾವ ಬಣ್ಣ ಅದೃಷ್ಟವನ್ನು ತರುತ್ತದೆ.. ?

ಡಿಸೆಂಬರ್ ಮುಗಿಯಲು ಹತ್ತಿರವಾಗುತ್ತಿದೆ, ಹೊಸವರ್ಷ ಬೇಗನೆ ಬರುತ್ತಿದೆ, ಈ ಹೊಸವರ್ಷದಲ್ಲಿ ನಿಮ್ಮ ರಾಶಿಯ ಪ್ರಕಾರ ನಿಮಗೆ ಅದೃಷ್ಟವನ್ನು ತರುವ ಬಣ್ಣ ಯಾವುದು ಎಂಬುದನ್ನು ತಿಳಿದುಕೊಳ್ಳಿ.

ನಾವು ಪ್ರತಿ ಹೊಸ ವರ್ಷವನ್ನು ಆಶಾವಾದಿ ಮತ್ತು ಕುತೂಹಲದಿಂದ ಸ್ವಾಗತಿಸುತ್ತೇವೆ, ನಮ್ಮ ಮುಂದಿನ ಜೀವನದ ಹಲವು ವಿಷಯಗಳನ್ನು ಈ ಸಮಯದಲ್ಲಿ ತಿಳಿದುಕೊಳ್ಳುವುದನ್ನು ನಾವು ಬಯಸುವೆವು ಮತ್ತು ಇದರಿಂದ ಯಾವುದೇ ಅಪಾಯ ಇಲ್ಲ. ಆದರೆ ಅದನ್ನು ತಿಳಿದುಕೊಳ್ಳುವುದು ಅಷ್ಟು ಸುಲಭವಲ್ಲ. ನಮ್ಮ ಜೀವನದಲ್ಲಿ ಈ ವರ್ಷ ಏನಾಗಬಹುದು ಎಂದು ನಮ್ಮಲ್ಲಿ ಕುತೂಹಲ ಇರುವುದು ಸಹಜ, ನಮ್ಮ ಆರೋಗ್ಯ, ಕುಟುಂಬ, ಪ್ರೀತಿ, ವೃತ್ತಿಜೀವನ, ಹಣಕಾಸು ಮುಂತಾದವುಗಳ ಬಗ್ಗೆ ತಿಳಿಯಲು ಕುತೂಹಲವಾಗಿರುವುದು ಸಹಜ.

ಬಣ್ಣಗಳು ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ?

ನೀವು ಎಲ್ಲೇ ಇರಿ, ಒಂದು ವೇಳೆ ನೀವು ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಬಣ್ಣಗಳನ್ನು ಕಂಡು ಅನನುಭವಿಸಿದರೆ, ನೀವು ನಿಜವಾಗಿಯೂ ದೇವರ ಆಶೀರ್ವಾದವನ್ನು ಪಡೆಯುತ್ತಿರುವಿರಿ ಎಂದರ್ಥ. ನಿಮಗೆ ಇದು ಅಷ್ಟು ಸ್ಪಷ್ಟವಾಗಿ ಅರ್ಥ ಆಗದೆ ಇರಬಹುದು, ಆದರೆ, ಬೆಳಕು ನಿಮ್ಮ ಕಣ್ಣು ಮತ್ತು ಆತ್ಮಕ್ಕೆ ಮಹತ್ವವಾಗಿ ಅವಶ್ಯವಿರುವುದು, ಮತ್ತು ಸೂರ್ಯನ ಕಿರಣಗಳಿಂದ ಹೊರಹೊಮ್ಮುವ ಬಣ್ಣಗಳು ನಮ್ಮ ಜೀವನದ ಮೇಲೆ ಸ್ವಾದವನ್ನು ಅನುಭವಿಸುವಂತೆ ಮಾಡುತ್ತವೆ.

೧.ಮೇಷ ರಾಶಿ

ಗುರು ಗ್ರಹ ನಿಮ್ಮನ್ನು ಆಳುವುದು, ಆದರೆ ಭೂಮಿಯ ಅಂಶ ಕೂಡ ಹೆಚ್ಚಿರುವುದರಿಂದ ನೀವು ಮಂಗಳಕರ ಅಥವಾ ಶುಭ ಸಂದರ್ಭಗಳಲ್ಲಿ ಕೆಂಪು ಬಣ್ಣದಿಂದ ದೂರ ಇರುವುದು ಒಳ್ಳೆಯದು. ನೀವು ಬಿಳಿ, ಗಾಢ ಹಸಿರು ಬಣ್ಣಗಳ ಬಳಿ ಇರುವುದರಿಂದ ನಿಮಗೆ ಅದೃಷ್ಟ ಒಲಿದು ಬರುತ್ತದೆ.

೨.ವೃಷಭ ರಾಶಿ

ನಿಮಗೆ ಸೇಬು ಹಸಿರು, ಸಿಂಧೂರ ಕೆಂಪು ಬಣ್ಣ ನಿಮ್ಮ ಜೀವನದಲ್ಲಿ ಬೇಕಿರುವ ಪಾವಿತ್ರ್ಯತೆಯನ್ನು ತಂದು ಕೊಡುತ್ತದೆ. ಇದು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತದೆ.

೩.ಮಿಥುನ

ಮಿಥುನ ರಾಶಿಯವರಿಗೆ, ಬಿಳಿ, ತಿಳಿ ಕಂದು(ಗ್ರೇ) ಬಣ್ಣಗಳು ಭರವಸೆಯನ್ನು ನೀಡುತ್ತದೆ. ಪ್ರತಿ ಬುಧುವಾರ ಹಸಿರು ಬಣ್ಣದ ಬಟ್ಟೆ ಧರಿಸುವುದು ಫಲಪ್ರದವಾಗಿರುತ್ತದೆ.

೪.ಕಟಕ

ನೀವು ಚಂದ್ರನಿಂದ ಪ್ರಭಾವಿತರಾಗಿರುವಿರಿ, ಈ ರಾಶಿಯವರು ಈ ಬಣ್ಣಗಳಿಗೆ ಹೆಚ್ಚು ಪ್ರಭಾವಿತರಾಗುವರು, ತಿಳಿ ನೀಲಿ, ಕಡುಗೆಂಪು ಬಣ್ಣ, ನೀವು ಈ ಬಣ್ಣಗಳನ್ನು ಕಣ್ಣ್ಮುಚ್ಚಿಕೊಂಡು ಬಳಸಬಹುದು, ಅವುಗಳೆಂದರೆ, ಬಿಳಿ, ತಿಳಿ ಹಸಿರು, ತಿಳಿ ನೀಲಿ.

೫.ಸಿಂಹ

ನಿಮ್ಮ ವ್ಯಕ್ತಿತ್ವವು ಸೂರ್ಯ ದೇವನಿಂದ ಆಳಲ್ಪಡುತ್ತದೆ, ಬಿಳಿ ಮತ್ತು ಚಿನ್ನದಂತಹ ತೀವ್ರ ಬಣ್ಣಗಳು ಈ ವರ್ಷ ನಿಮಗೆ ಉತ್ತಮ ಫಲಿತಾಂಶವನ್ನು ತರುತ್ತದೆ. ಆದಾಗ್ಯೂ, ತಾಮ್ರ, ಲೈಟ್ ಗ್ರೀನ್(ತಿಳಿ ಹಸಿರು), ಬಿಳಿ ಬಣ್ಣ ಕೂಡ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ.

೬.ಕನ್ಯಾ ರಾಶಿ

ನೀವು ಆಳವಾಗಿ ಬುಧ ಗ್ರಹದಿಂದ ಆಳಲ್ಪಡುವಿರಿ, ಹಸಿರು, ನೀಲಿ ಬಣ್ಣ ನಿಮಗೆ ಈ ವರ್ಷ ಅದೃಷ್ಟ ತರುತ್ತದೆ. ನೀವು ಬಯಸಿದ ಆಗೇ ಫಲಿತಾಂಶವನ್ನು ಕಾಣಲು ನೀವು ಪ್ರತಿ ಬುಧವಾರ ಹಸಿರು ಬಣ್ಣದ ಉಡುಪುಗಳನ್ನು ಧರಿಸಿ.

೭.ತುಲಾ

ಶುಕ್ರ ಗ್ರಹ ಇವರ ಬಗ್ಗೆ ಕಾಳಜಿ ತೋರಿಸುತ್ತದೆ, ಬಿಳಿ, ಹಸಿರು ಮತ್ತು ನೀಲಿ ಬಣ್ಣಗಳು ಅವರ ಇಚ್ಚೆಯಂತೆ ಕಾರ್ಯ ಸಾಧ್ಯವಾಗಲು ಸಹಾಯ ಮಾಡುತ್ತವೆ.

೮.ವೃಶ್ಚಿಕ

ಬೇಗನೆ ಕೋಪಗೊಳ್ಳುವ ಇವರಿಗೆ, ಕಪ್ಪು ಅಥವಾ ಬಿಳಿ ಬಣ್ಣ ಸೂಕ್ತ.  ಇದರ ಜೊತೆಗೆ ನೀಲಿ ಬಣ್ಣವನ್ನು ಉಪಯೋಗಿಸುವುದು ಉತ್ತಮ.

೯.ಧನಸ್ಸು

ಈ ವರ್ಷ ನಿಮಗೆ ಖಾಕಿ ಹಸಿರು, ಹಳದಿ-ಕೆಂಪು ಉತ್ತಮ ಅದೃಷ್ಟವನ್ನು ತರುತ್ತದೆ. ಪ್ರತಿ ಮಂಗಳವಾರ ಹಳದಿ ಉಡುಪು ಧರಿಸುವುದು ಧನಾತ್ಮಕ ಫಲಿತಾಂಶವನ್ನು ಕಾಣಲು ಸಹಾಯವಾಗುತ್ತದೆ.

೧೦.ಮಕರ

ಶನಿ ನಿಮ್ಮನ್ನು ಆಳುತ್ತಾನೆ, ನಿಮ್ಮ ಅದೃಷ್ಟ ಈ ವರ್ಷ ನೀಲಿ, ಕಂದು ಮರದ ಬಣ್ಣ, ಮತ್ತು ಹಸಿರು ಬಣ್ಣಗಳಲ್ಲಿ ಅವಿತುಕೊಂಡಿದೆ. ಪ್ರತಿ ಶನಿವಾರ ಕಪ್ಪು ಬಣ್ಣ ಅಥವಾ ಅದರ ಛಾಯೆಯ ಬಣ್ಣವನ್ನು ಧರಿಸುವುದು ಧನಾತ್ಮಕ ಫಲಿತಾಂಶವನ್ನು ಕಾಣಬಹುದು.

೧೧.ಕುಂಭ

ಕೆಂಪು, ಸೇಬಿನಲ್ಲಿರುವ ಹಸಿರು ಬಣ್ಣ, ಆಕಾಶ ನೀಲಿ ಬಣ್ಣಗಳು ಈ ವರುಷ ನಿಮಗೆ ಅದೃಷ್ಟವನ್ನು ತರುತ್ತವೆ. ವಯಲೆಟ್ ಅಥವಾ ಕಡು ನೀಲಿ ಬಣ್ಣವನ್ನು ಶನಿವಾರ ಧರಿಸುವುದು ಹೆಚ್ಚುವರಿ ಲಾಭವನ್ನು ಪಡೆಯಬಹುದು.

೧೨.ಮೀನ

ಈ ವರುಷ ಪೂರ್ತಿ ನೀವು ಶುಭ ಸುದ್ದಿಯನ್ನು ಕೇಳಲು ಬಯಸಿದರೆ, ಹಸಿರು ಬಣ್ಣವನ್ನು ಸಾಧ್ಯವಾದಷ್ಟು ನಿಮ್ಮ ಹತ್ತಿರದಲ್ಲಿ ಇರಿಸಿಕೊಳ್ಳಿ. ಇನ್ನು ಉತ್ತಮ ಎಂದರೆ ಹಸಿರು ಬಣ್ಣದ ಉಡುಪನ್ನು ಧರಿಸುವುದು. ಪ್ರತಿ ಗುರುವಾರ ತಿಳಿ ಹಳದಿ ಬಣ್ಣವನ್ನು ನೀವು ಧರಿಸುವುದು ಫಲಪ್ರದವಾಗುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon