Link copied!
Sign in / Sign up
5
Shares

ಈ 6 ವಿಷಯಗಳನ್ನ ಅತ್ಯಂತ ಯಶಸ್ವೀ ತಾಯಿ ಆಗಿರುವವಳು ತಿಳಿದಿರುತ್ತಾಳೆ? ನೀವು?

“ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಹೀಗಾಗಿಯೇ ಅಮ್ಮನನ್ನು ಸೃಷ್ಟಿಸಿದ!” ಅಮ್ಮನಿಗೆ ಹಾರಲು ಬರದಿದ್ದರೂ, ಆಕೆಯು ಸೂಪರ್ ಮ್ಯಾನ್ ಗಿಂತ ಕಡಿಮೆ ಇಲ್ಲ. ಆಕೆಯು ತನ್ನವರನ್ನ ಯಾವಾಗಲೂ ಪೋಷಿಸುತ್ತಲೇ ಇರುತ್ತಾಳೆ, ರಕ್ಷಿಸುತ್ತಲೇ ಇರುತ್ತಾಳೆ. ತನ್ನ ಮಗುವಿಗೆ ಅತ್ಯುತ್ತಮವಾದದ್ದನ್ನೇ ನೀಡಲು ಆಕೆಯು ತನ್ನ ಸಾಮರ್ಥ್ಯಕ್ಕೆ ಮೀರಿ ಕಷ್ಟಪಡುತ್ತಾಳೆ ಮತ್ತು ಯಾವಾಗಲೂ ಅವಳಿಗಿಂತ ಮೊದಲು ಅವಳ ಕುಟುಂಬದ ಬಗ್ಗೆ ಯೋಚಿಸುತ್ತಾಳೆ. ಎಂದು ಬಸವಳಿಯದ, ದಣಿವಾಗದ ಮಾಂತ್ರಿಕ ಶಕ್ತಿ ಉಳ್ಳ ಈ ಅಮ್ಮನಿಗೆ ದಿನದಲ್ಲಿ 24 ಗಂಟೆಗಳೊಂದಿಗೆ ಇನ್ನೊಂದಷ್ಟು ಗಂಟೆಗಳು ಹೆಚ್ಚು ಸಿಕ್ಕರೆ, ಅದನ್ನೂ ಆಕೆ ತನ್ನ ಸುತ್ತಮುತ್ತಲಿನ ಒಳಿತಿಗೇ ಬಳಸುವಳು. ಆದರೆ ದಿನದಲ್ಲಿ ಕೇವಲ 24 ಗಂಟೆಗಳು ಇದ್ದು, ಅಮ್ಮನ ಹೆಗಲ ಮೇಲೆ ಸಹಸ್ರ ಜವಾಬ್ದಾರಿಗಳು ಇದ್ದು, ಆಕೆಯು ಪ್ರತಿದಿನವೂ ಅವುಗಳಲ್ಲೇ ಮುಳುಗಿ ಹೋಗಿರುತ್ತಾಳೆ ಮತ್ತು ದಿನ ಮಾಡಿದ್ದನ್ನೇ ಆಕೆ ಪುನಃ ಮಾಡುತ್ತಿರುತ್ತಾಳೆ.


ಹೀಗಿದ್ದರೂ, ಚತುರೆ ಮತ್ತು ಯಶಸ್ವೀ ತಾಯಿಯು ತನ್ನ ಎಲ್ಲಾ ಜವಾಬ್ದಾರಿಗಳನ್ನು ಈ ಸಮಯದಲ್ಲೇ ಸಮರ್ಥವಾಗಿ ನಿಭಾಯಿಸುತ್ತಾಳೆ. ಅದು ಅವಳ ಕೆಲವೊಂದು ಬುದ್ದಿವಂತ ಟ್ರಿಕ್ಸ್ ಮತ್ತು ಪರಿಣಾಮಕಾರಿ ಹವ್ಯಾಸಗಳಿಂದ. ಒಂದು ವೇಳೆ ನೀವೂ ನಿಮ್ಮ ಬದುಕನ್ನು ಸ್ವಲ್ಪ ಮಟ್ಟಿಗೆ ಸುಲಭ ಮತ್ತು ಇನ್ನಷ್ಟು ಹೆಚ್ಚು ಪರಿಣಾಮಕಾರಿ ಆಗಿಸಿಕೊಳ್ಳಬೇಕೆಂದರೆ, ಇಲ್ಲಿ ನಾವು ಹೇಳುವ ಯಶಸ್ವೀ ತಾಯಿಯ 6 ಗುಣಗಳನ್ನು ನೀವೂ ಅಳವಡಿಸಿಕೊಳ್ಳಿ.


೧. ನಿಯೋಜಿತ ವೇಳಾಪಟ್ಟಿ


ಎಲ್ಲಾ ಯಶಸ್ವೀ ತಾಯಿಯರಲ್ಲಿ ಒಂದು ವಿಷಯ ಸಾಮಾನ್ಯವಾಗಿರುತ್ತದೆ - ಅದು ನಿಯೋಜಿಸುವ ಕೌಶಲ್ಯತೆ. ಆಕೆಯು ತಾನು ಮಾಡಬೇಕಾದ ಕೆಲಸಗಳ to-do ಪಟ್ಟಿಯನ್ನು ಹೊಂದಿರಲಿಲ್ಲ ಎಂದರೂ, ಯಾವ ಕೆಲಸಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ತಿಳಿದಿಕೊಂಡಿರುತ್ತಾಳೆ. ಆಕೆಗೆ ಒಂದು ನಿಗದಿತ ಕೆಲಸ ಮಾಡಲು ಎಷ್ಟು ಸಮಯ ಬೇಕಾಗಬಹುದು ಎಂಬುದರ ಅರಿವಿರುತ್ತದೆ, ಈ ಅರಿವಿನ ಸಹಾಯದಿಂದ ಆಕೆಯು ತನ್ನ ಪ್ರತಿಯೊಂದು ಗಂಟೆಯನ್ನು ಪ್ಲಾನ್ ಮಾಡಿಕೊಳ್ಳುತ್ತಾಳೆ ಮತ್ತು ತನ್ನ ಅನುಕೂಲಕ್ಕೆ ತಕ್ಕ ಹಾಗೆ ಅದನ್ನು ಆಗಾಗ ಬದಲಿಸಿಕೊಳ್ಳುತ್ತಾ ಸುಲಭವಾಗಿಸಿಕೊಳ್ಳುತಾಳೆ. ಆಕೆಯ ವೇಳಾಪಟ್ಟಿಯಲ್ಲಿ ಕೇವಲ ಆಕೆಯ ದೈನಂದಿನ ಚಟುವಟಿಕೆಗಳು ಅಲ್ಲದೆ ತನ್ನ ಕುಟುಂಬಕ್ಕೆ ಕೊಡಬೇಕಾದ ಸಮಯವನ್ನು, ಅವರ ಜೊತೆ ಕೂತು ಮಾತನಾಡುವ ಸಮಯವನ್ನೂ ಪಟ್ಟಿ ಮಾಡಿರುತ್ತಾಳೆ.


೨. ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುವ ಕೌಶಲ್ಯತೆ


ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನ ಮಾಡುವುದು - ಅಥವಾ ಮಲ್ಟಿಟಾಸ್ಕಿಂಗ್ ಅನ್ನು ಯಶಸ್ವೀ ತಾಯಿ ಆಗಬೇಕೆಂದಿರುವ ಪ್ರತಿಯೊಂದು ತಾಯಿಯು ಮೈಗೂಡಿಸಿಕೊಳ್ಳಬೇಕು. ಬಹುತೇಕ ಜನರು ಮಲ್ಟಿಟಾಸ್ಕಿಂಗ್ ಮಾಡುವಾಗ ಪ್ರತಿಯೊಂದು ಕೆಲಸ ಮೇಲೆ ಕೇವಲ ಅರ್ಧ ಗಮನವಷ್ಟೇ ಕೊಡುತ್ತಾರೆ. ಆದರೆ ನೀವು ಬುದ್ದಿವಂತರಾಗಬೇಕು. ನೀವು ಒಂದು ತುಂಬಾ ಹೆಚ್ಚೇನು ಕಷ್ಟವಲ್ಲದ ಕೆಲಸ ಮಾಡುತ್ತಿರುವಾಗ, ಅದರೊಂದಿಗೆ ಮತ್ತೊಂದು ಸುಲಭವಾದ ಕೆಲಸವನ್ನು ಮಾಡಿ ಮುಗಿಸಿ, ನಿಮ್ಮ ಕುಟುಂಬದ ಜೊತೆ ಕಳೆಯಬೇಕಿದ್ದ ಸಮಯವನ್ನು ಹೆಚ್ಚಿಸಿಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ ನಾವು ಹೇಳುತ್ತಿರುವುದು ನೀವು ಸ್ನಾನ ಮಾಡಿಕೊಂಡು ಅಡುಗೆ ಮಾಡಿ ಎಂದಲ್ಲ, ಟಿವಿ ನೋಡುತ್ತಾ ಬಟ್ಟೆಗಳನ್ನ ಮಡಚಿಡಿ ಅಥವಾ ಮಕ್ಕಳಿಗೆ ಹೋಂವರ್ಕ್ ಮಾಡಲು ಸಹಾಯ ಮಾಡಿ. ಅದರಲ್ಲೂ ಈ ಯುಗದಲ್ಲಿ ಮಲ್ಟಿಟಾಸ್ಕಿಂಗ್ ಅನ್ನೋದು ತುಂಬಾನೇ ಮುಖ್ಯ. ಈ ನವಯುಗದಲ್ಲಿ ಅತ್ಯುತ್ತಮ ತಾಯಿ ಆಗಲು ಇನ್ನಷ್ಟು ಸಲಹೆಗಳನ್ನ ಇಲ್ಲಿ ಕ್ಲಿಕ್ ಮಾಡಿ ತಿಳಿಯಿರಿ. 


೩. ಸ್ವಚ್ಛತೆ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳದೆ ಇರುವುದು


ಇಲ್ಲ, ಆಕೆ ಎಲ್ಲವನ್ನೂ ಮಾಡುತ್ತಾಳೆ ಎಂದಮಾತ್ರಕ್ಕೆ ಆಕೆ ಎಲ್ಲವನ್ನೂ ಯಾವಾಗಲೂ ಅಚ್ಚುಕಟ್ಟಾಗಿ ಮಾಡಲೇ ಬೇಕು ಎಂಬ ನಿಯಮವೇನೂ ಇಲ್ಲ ಅಲ್ಲವಾ? ಎಲ್ಲವನ್ನೂ ಯಾವಾಗಲೂ ಅಚ್ಚುಕಟ್ಟಾಗಿ ಮಾಡಲು, ಆಕೆಗೆ ಈಗಾಗಲೇ ತನ್ನ ಹೆಗಲ ಮೇಲೆ ನೂರಾರು ಕೆಲಸಗಳು ಇವೆ. ಹೌದು, ಆಕೆ ತನ್ನ ಮನೆಯನ್ನು ಸ್ವಚ್ಛವಾಗಿ ಇಡುತ್ತಾಳೆ. ಹಾಗೆಂದ ಮಾತ್ರಕ್ಕೆ, ಮನೆಯೆಲ್ಲಾ ಹೊಸದರಂತೆ ಫಳಫಳನೆ ಹೊಳೆಯುತ್ತಿರುತ್ತದೆ ಎಂದಲ್ಲ. ಆಕೆ ಅಡುಗೆಯನ್ನು ಮಾಡುತ್ತಾಳೆ, ಆದರೆ ಆಕೆ ಜಗತ್ತಿನ ಎಲ್ಲಾ ತಿಂಡಿಗಳನ್ನ ಮಾಡಲು ತಿಳಿದಿರಬೇಕು ಎಂದಲ್ಲ ಅಥವಾ ಟಿವಿ ಅಲ್ಲಿ ನೀವು ನೋಡುವ ಸೂಪರ್ ಚೆಫ್ ಮಟ್ಟಿಗೆ ಮಾಡಲು ಆಗುವುದಿಲ್ಲ. ನಿಮ್ಮ ಸಮಯ ಮತ್ತು ಶ್ರಮ ಕಡಿಮೆ ಆಗಿಸುವ ಕೆಲವೊಂದು ಸೂಪರ್ ಕ್ಲೀನಿಂಗ್ ಟ್ರಿಕ್ಸ್ ಇಲ್ಲಿವೆ ಓದಿ!


೪. “ಹೆಲ್ಪ್ ಮಾಡಿ!”


ಯಶಸ್ವೀ ತಾಯಿಯು ಅಗತ್ಯವಿಲ್ಲದ, ಅರ್ಥಹೀನ ಕೆಲಸಗಳನ್ನೆಲ್ಲಾ ತನ್ನ ಹೆಗಲ ಮೇಲೆ ಹಾಕಿಕೊಳ್ಳುವುದಿಲ್ಲ ಅಥವಾ ಎಲ್ಲವನ್ನೂ ನಾನೇ ಮಾಡುತ್ತೇನೆ ಎಂಬ ಹುಂಬ ಧೋರಣೆ ಹೊಂದಿರುವುದಿಲ್ಲ. ಸಾಮಾಜಿಕ ಧೋರಣೆಯಿಂದ ತಾನು ಪರ್ಫೆಕ್ಟ್ ತಾಯಿ ಆಗಲು ಅಥವಾ ತನ್ನ ಅತಿಯಾದ ಕಾಳಜಿಯಿಂದ ಆಗಲಿ, ಅಮ್ಮಂದಿರು ಎಲ್ಲಾ ಕೆಲಸಗಳನ್ನ ತಮ್ಮ ಮೇಲೆಯೇ ಹೇರಿಕೊಂಡು, ತಮಗೆ ಸಾಧ್ಯವಾದಷ್ಟು ಮಾಡಿ ಮುಗಿಸಲು ಪ್ರಯತ್ನಿಸುತ್ತಾರೆ. ಆದರೆ ಬುದ್ಧಿವಂತ ತಾಯಿ ಒಂದು ವಿಷಯವನ್ನು ತಿಳಿಯಬೇಕು. ಅದು ಏನೆಂದರೆ, ಕೆಲಸಗಳನ್ನ ಮಾಡಿ ಮುಗಿಸಲು ನೀವು ಇತರರಿಂದ ಸಹಾಯ ತೆಗೆದುಕೊಡರೆ, ಅದು ಕೇವಲ ನಿಮ್ಮ ಮೇಲಿನ ಸ್ವಲ್ಪ ಭಾರವನ್ನು ಇಳಿಸುತ್ತದೆ, ಆದರೆ ಮುಖ್ಯವಾಗಿ ಅದರಿಂದ ನಿಮಗೆ ನಿಮ್ಮ ಕುಟುಂಬದ ಜೊತೆ ಇನ್ನಷ್ಟು ಹೆಚ್ಚಿನ ಸಮಯ ಕಳೆಯಲು ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ತಾಯಿಯು ತನ್ನ ಮಕ್ಕಳಿಗೆ ತುಂಬಾ ಮುಖ್ಯವಾದ, ತಿಳಿದಿರಲೇ ಬೇಕಾದ ಮನೆಗೆಲಸಗಳು ಮತ್ತು ಬದುಕಲು ಬೇಕಿರುವ ಕೌಶಲ್ಯಗಳನ್ನ ಧಾರೆ ಎರೆಯಬಹುದು. ಇದು ಮಕ್ಕಳಿಗೆ ಭವಿಷ್ಯದಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಮಕ್ಕಳು ಮತ್ತು ಪತಿಯೊಂದಿಗೆ ನೀವು ನಗುನಗುತ್ತಾ ಕೆಲಸ ಮಾಡಿ ಮುಗಿಸಿಬಿಡಬಹುದು.


೫. ಕೆಲಸಗಳನ್ನ ಮುಂದುಡೂವುದು ತಪ್ಪಲ್ಲ, ಆದರೆ ಕೆಲವೊಮ್ಮೆ ಮಾತ್ರ


ಹೌದು, ಒಂದು ಯಶಸ್ವೀ ತಾಯಿಯು ಆ ಸಮಯಕ್ಕೆ ಬೇಕಾದಂತೆ ತಾನು ರೂಪಿಸಿಕೊಂಡ ನಿಯೋಜಿತ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸುತ್ತಾಳೆ. ಆದರೆ ಕೆಲವೊಮ್ಮೆ ಆ ಶಿಸ್ತಿನ ವೇಳಾಪಟ್ಟಿಯನ್ನ ಸ್ವಲ್ಪ ಸಡಿಲವಾಗಿಸಿಕೊಳ್ಳಬೇಕು ಎಂಬುದು ಕೂಡ ಗೊತ್ತಿರುತ್ತದೆ. ಸಮಯ ಸಾಲುವುದೇ ಇಲ್ಲ ಎಂದಾಗ, ಆಕೆಯು ಅತ್ಯಂತ ಮುಖ್ಯವಾದ, ಅಂದು ಮಾಡಲೇಬೇಕಾದ ಕೆಲಸವನ್ನ ಮಾಡಿ, ಅಂದಿಗೆ ಮುಖ್ಯವಲ್ಲದ ಕೆಲಸವನ್ನು ಕೈಬಿಡುತ್ತಾಳೆ. ಎಲ್ಲದಕ್ಕಿಂತ ಹೆಚ್ಚಾಗಿ, ಆಕೆಗೆ ಹುಷಾರಿಲ್ಲದಾಗ ಅಥವಾ ಇಂದು ಏನು ಮಾಡಲು ಮನಸಿಲ್ಲ ಎಂಬ ಆಲಸಿತನ ಉಂಟಾದಾಗ, ಅಂದಿನ ಕೆಲಸಗಳನ್ನ ಮುಂದೂಡಲು ಆಕೆ ಹಿಂಜರಿಯುವುದಿಲ್ಲ. ಬದಲಿಗೆ ಆಕೆ ಅಂದು ತನ್ನ ಮಕ್ಕಳನ್ನ ಮುದ್ದಾಡುವುದರಲ್ಲಿ, ಅವರೊಡನೆ ಆಟವಾಡಲು ಸಮಯ ಕಳೆಯುತ್ತಾಳೆ. ನಿಮ್ಮ ಮಗುವಿಗೆ ನೀವು ಕೊಡಬಹುದಾದ ಅತ್ಯಂತ ಅಮೂಲ್ಯ ವಸ್ತು ಸಮಯ ಏಕೆ ಎಂಬುದು ಇಲ್ಲಿ ಓದಿ!


೬. “ನನ್ನ ಸಮಯ”


ಕೊನೆಯದಾಗಿ ಮತ್ತು ತುಂಬಾನೇ ಮುಖ್ಯವಾಗಿ, ಯಶಸ್ವೀ ತಾಯಿಗೆ ತನಗೆ ಬೇಕೇ ಬೇಕಿರುವ ಅಗತ್ಯವಾದ ಸಮಯವನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಅರಿವು ಇರುತ್ತದೆ. ಆಕೆಯು ತನ್ನ ದೈಹಿಕ ಅಥವಾ ಮಾನಸಿಕ ಆರೋಗ್ಯದ ಬಗ್ಗೆ ತಾತ್ಸಾರ ಮಾಡುವುದಿಲ್ಲ. ಏಕೆಂದರೆ ತಾನು ಗಟ್ಟಿಯಾಗಿದ್ದರೆ ಮಾತ್ರ ತನ್ನ ಕುಟುಂಬವನ್ನು ತಾನು ನೋಡಿಕೊಳ್ಳಬಹುದು ಎಂಬುದು ಆಕೆಗೆ ಗೊತ್ತಿರುತ್ತದೆ. ಅದು ಬೆಳಗ್ಗೆ ಹೊತ್ತು ಒಂದು ಗಂಟೆ ವಾಕಿಂಗ್ ಆಗಲಿ ಅಥವಾ ಯೋಗ ಮಾಡುವುದಕ್ಕೆ ಆಗಲಿ ಅಥವಾ ತನ್ನ ನೆಚ್ಚಿನ ಟಿವಿ ಕಾರ್ಯಕ್ರಮವನ್ನ ಅಥವಾ ನೆಚ್ಚಿನ ಪುಸ್ತಕವನ್ನ ಆನಂದಿಸಲು ಆಗಲಿ, ಆಕೆಯು ಅದಕ್ಕೆ ಸಮಯ ಮಾಡಿಕೊಂಡು ಪುನಃ ಎಂದಿನ ಕಾರ್ಯಗಳಿಗೆ ದೈಹಿಕ ಮತ್ತು ಮಾನಸಿಕವಾಗಿ ರಿಚಾರ್ಜ್ ಮಾಡಿಕೊಳ್ಳುತ್ತಾಳೆ ಮತ್ತು ತನ್ನ ಅಂತರಂಗ ಗಟ್ಟಿಯಾಗಿಸಿಕೊಳ್ಳುತ್ತಾಳೆ.

ಅಮ್ಮಂದಿರೆ! ನಿಮಗೆಲ್ಲಾ ಒಂದು ಸಿಹಿ ಸುದ್ದಿ ಇದೆ!

ನಾವು, ಅಂದರೆ ಟೈನಿಸ್ಟೆಪ್ ಸಂಪೂರ್ಣ ನೈಸರ್ಗಿಕ ಫ್ಲೋರ್ ಕ್ಲೀನರ್ ಅನ್ನು ಲಾಂಚ್ ಮಾಡಿದ್ದು, ಇದು ನಿಮಗೆ, ನಿಮ್ಮ ಮಗುವಿಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಕ್ಷಣವೇ ಕೀಟಾಣುಗಳಿಗೆ ಮತ್ತು ರಾಸಾಯನಿಕಗಳಿಗೆ ವಿದಾಯ ಹೇಳಿಬಿಡಿ!

ಒಮ್ಮೆ ನಮ್ಮ ಈ ಉತ್ಪನ್ನವನ್ನು ಪ್ರಯತ್ನಿಸಿ ಮತ್ತು ನಿಮಗೆ ಇಷ್ಟವಾಯಿತೇ ಎಂದು ತಿಳಿಸಿ. ಇದನ್ನು ಈಗಲೇ ಆರ್ಡರ್  ಮಾಡಲು ಇಲ್ಲಿ ಕ್ಲಿಕ್ ಮಾಡಿ!

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon