Link copied!
Sign in / Sign up
0
Shares

ಯಾರಿಗೆ ಹೇಗಿದೆ ಇಂದಿನ ರಾಶಿ ಭವಿಷ್ಯ...


ಮೇಷ:- ಪ್ರಾಮಾಣಿಕತೆಯಿಂದ ಹೆಜ್ಜೆ ಇರಿಸಿದ ಪರಿಣಾಮವಾಗಿ ಎಲ್ಲೆಡೆ ಯಶಸ್ಸು ನಿಮ್ಮದಾಗುವುದು. ಕೆಲ ಗ್ರಹಗಳ ಶುಭ ಸಂಚಾರದಿಂದ ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವುದು. ಅದೃಷ್ಟವು ನಿಮ್ಮ ಬೆನ್ನಿಗಿದೆ. ಮಕ್ಕಳ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಸಂಗಾತಿಯ ಬೇಕು ಬೇಡಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿ ಒಳಿತಾಗುವುದು.

ವೃಷಭ

ವೃಷಭ:- ಬಾಕಿ ಇರುವ ಕೆಲಸ ಕಾರ್ಯಗಳನ್ನು ಬೇಗನೆ ಮುಗಿಸುವುದು ಒಳ್ಳೆಯದು ಮತ್ತು ಕಚೇರಿಗೆ ಸಂಬಂಧಪಟ್ಟ ದಾಖಲೆಗಳನ್ನು ಒಪ್ಪವಾಗಿ ಜೋಡಿಸುವುದು ಒಳ್ಳೆಯದು. ಇದರಿಂದ ಅನವಶ್ಯಕ ಟೀಕೆಗಳಿಂದ ಮುಕ್ತರಾಗುವಿರಿ.ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡದೇ ನಿಮಗೂ ಮಾನಸಿಕ ಒತ್ತಡ ನೀಡುತ್ತದೆ.

ಮಿಥುನ

ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಲು ಬಿಡಬೇಡಿ. ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿ ಉಳಿಯಲು ಪ್ರಯತ್ನಿಸಿ ಹಾಗೂ ಅದು ನಿಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಅದರೆ ಹಾಗೆ ಮಾಡಿದಲ್ಲಿ ನೀವು ವಿಷಾದಿಸುತ್ತೀರಿ. ಕುಟುಂಬದಲ್ಲಿ ಕೆಲವು ಸ್ತ್ರೀ ಸದಸ್ಯರ ಆರೋಗ್ಯ ಚಿಂತೆಗೆ ಕಾರಣವಾಗಬಹುದು.

ಕರ್ಕ

ಮಕ್ಕಳ ವಿದ್ಯಾಭ್ಯಾಸದ ವಿಚಾರದ ಬಗೆಗೆ ವ್ಯಾಕುಲತೆ ತಲೆದೋರುವ ಸಾಧ್ಯತೆ ಇರುವುದು. ನೀವು ಯೋಚಿಸಿದ ರೀತಿಯಲ್ಲಿ ಮಕ್ಕಳು ಅಂಕಗಳನ್ನು ಪಡೆಯುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಆಂಜನೇಯ ಸ್ತೋತ್ರ ಪಠಿಸಿ ಒಳಿತಾಗುವುದು. ಕೈಗೊಂಡ ಹೊಸ ಕಾರ್ಯಯೋಜನೆಗಳು ನಿಮ್ಮ ನಿರೀಕ್ಷೆಗಳನ್ನು ತಲುಪುವುದಿಲ್ಲ. ಇಂದು ನೀವು ಸಾಕಷ್ಟು ಆಸಕ್ತಿದಾಯಕ ಆಮಂತ್ರಣಗಳನ್ನು ಪಡೆಯುತ್ತೀರಿ - ಮತ್ತು ಒಂದು ಅಚ್ಚರಿಯ ಕೊಡುಗೆಯೂ ನಿಮಗೆ ಸಿಗಬಹುದು.

ಸಿಂಹ

ದೂರದ ಊರಿನಿಂದ ಬರುವ ಅತಿಥಿಯೊಬ್ಬರು ನಿಮ್ಮ ವ್ಯಾಪಾರ, ವಹಿವಾಟಿನ ವಿಷಯದಲ್ಲಿ ಉತ್ತಮ ಸಲಹೆ ನೀಡುವರು. ಇದರಿಂದ ನಿಮಗೆ ಹೆಚ್ಚಿನ ಲಾಭವಾಗುವುದು. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು. ಒಬ್ಬ ಸಂತನ ಆಶೀರ್ವಾದದಿಂದ ಮನಶ್ಶಾಂತಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ - ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ.

ಕನ್ಯಾ

ಇಂದು ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ನಿಮ್ಮ ಸಾಮಾಜಿಕ ಜೀವನವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಿಡುವಿರದ ಕೆಲಸದಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ ಹಾಗೂ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ. ಮನಸ್ಸಿಗೆ ನೆಮ್ಮದಿ ಸಿಗುವುದು.

ತುಲಾ

ಯಾರೋ ಅಂದ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ನಿಮಗೆ ಇಂದು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವಿರಿ, ಮಕ್ಕಳ ಓದಿನ ಕಡೆ ಗಮನಹರಿಸಿ. ಮನೆ ಸೈಟು ವಿಚಾರಗಳಲ್ಲಿ ಮಾತುಕತೆ ನಡೆಯಬಹುದು.

ವೃಶ್ಚಿಕ:- ಯಾವುದೇ ರೀತಿಯ ಹಸ್ತಕ್ಷೇಪಗಳನ್ನು ಸಹಿಸದಿರಿ. ಆದರೂ ಬಂಧುಮಿತ್ರರ ಪ್ರಾಮಾಣಿಕ ಬೆಂಬಲದಿಂದ ಒಳಿತಾಗುವುದು. ಭಗವಂತನನ್ನು ಸ್ಮರಿಸಿ ಕಾರ್ಯೋನ್ಮುಖರಾಗಿ. ಒಳಿತಿಗೆ ದಾರಿ ದೊರೆಯುವುದು. ನಿಮ್ಮ ಮೊಬೈಲ್ ಫೋನ್ ಕೆಟ್ಟುಹೋಗುವುದು

ಧನಸ್ಸು

ಒತ್ತಡ ಸಣ್ಣ ಅನಾರೋಗ್ಯಕ್ಕೆ ಕಾರಣವಾಗಬಹುದು. ಗೃಹ ಸೌಕರ್ಯಗಳ ಮೇಲೆ ಅಧಿಕವಾಗಿ ಖರ್ಚು ಮಾಡಬೇಡಿ. ಕೌಟುಂಬಿಕ ಒತ್ತಡ ನಿಮ್ಮ ಗಮನ ಬೇರೆಡೆಗೆ ಸೆಳೆಯದಿರಲಿ. ಕೆಟ್ಟ ಸಮಯಗಳು ನಮಗೆ ಇನ್ನೂ ಹೆಚ್ಚನ್ನು ನೀಡುತ್ತವೆ. ಸ್ವಾನುಕಂಪದಲ್ಲಿ ಸಮಯ ವ್ಯರ್ಥ ಮಾಡದೇ ಜೀವನದ ಪಾಠ ಕಲಿಯಲು ಪ್ರಯತ್ನಿಸಿ. ನಿಮ್ಮ ಪ್ರೀತಿಪಾತ್ರರು ಸ್ವಲ್ಪ ಕಿರಿಕಿರಿಗೊಂಡಂತೆ ತೋರುತ್ತದೆ – ಇದು ನಿಮ್ಮ ಮನಸ್ಸಿನ ಮೇಲೆ ಒತ್ತಡವನ್ನು ಹಚ್ಚಿಸುತ್ತದೆ.

ಮಕರ

ನಿಮ್ಮ ಕುಟುಂಬದ ಸದಸ್ಯರ ಅಗತ್ಯಗಳ ಮೇಲೆ ಗಮನ ಹರಿಸುವುದು ಇಂದು ನಿಮ್ಮ ಆದ್ಯತೆಯಾಗಿರಬೇಕು. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ನೀವು ತಪ್ಪು ದಾರಿಗೆಳೆಯಲು ಅಥವಾ ನಿಮಗೆ ಹಾನಿ ಮಾಡುವ ಮಾಹಿತಿ ನೀಡಲು ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿದಿಂದಿರಿ. ಕೆಲವರು ವೈವಾಹಿಕ ಜೀವನ ಕೇವಲ ಜಗಳ ಮತ್ತು ಲೈಂಗಿಕತೆಯ ಬಗೆಗಿದೆಯೆಂದುಕೊಳ್ಳುತ್ತಾರೆ, ಆದರೆ ಇಂದು ಎಲ್ಲವೂ ಪ್ರಶಾಂತವಾಗಿರುತ್ತದೆ.

ಕುಂಭ

ಹಣ ದ್ವಿಗುಣಗೊಳಿಸುವ ಮೋಸದ ಜಾಲ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಹೆಚ್ಚಾಗಿದೆ. ಆದಷ್ಟು ವ್ಯವಧಾನ ಇರಲಿ. ಯಾರಿಗೂ ಹಣಕಾಸಿನ ವಿಷಯವನ್ನು ತಿಳಿಸದಿರಿ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಿರಿ. ಹೊಸ ಫೋನ್ ಖರೀದಿಯಲ್ಲಿ ಆಸಕ್ತಿ ವಹಿಸುವಿರಿ.

ಮೀನಾ

 ನಿಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ತೊಂದರೆ ಹೊಂದಿರುತ್ತೀರಿ - ಆದರೆ ನಿಮ್ಮ ಸುತ್ತಲಿರುವವರನ್ನು ಟೀಕಿಸಬೇಡಿ ಇಲ್ಲದಿದ್ದಲ್ಲಿ ನೀವು ಏಕಾಂಗಿಯಾಗುತ್ತೀರಿ.ನಿಮ್ಮ ಮನಸ್ಸೆ ನಿಮಗೆ ವಿರೋಧವನ್ನುಂಟು ಮಾಡುವುದು. ಹಾಗಾಗಿ ಒಲ್ಲದ ಮನಸ್ಸಿನಿಂದ ಕಾರ್ಯಗಳನ್ನು ಮಾಡಲು ಹೋಗಿ ಸಿಕ್ಕಿಹಾಕಿಕೊಳ್ಳುವಿರಿ. ಆದಷ್ಟು ಕುಲದೇವತೆಯನ್ನು ಪ್ರಾರ್ಥಿಸಿ. ಎಲ್ಲವೂ ಒಳಿತಾಗುವುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon