Link copied!
Sign in / Sign up
158
Shares

ಮದುವೆಯ ಸಂಬಂಧ ಗಟ್ಟಿಯಾಗಿಯೇ ಇರಬೇಕೆಂದರೆ ಈ ರಾಶಿಯವರನ್ನ ಮದುವೆಯಾಗಿ !

ಕೆಲವು ಜನರಿಗೆ ತಮ್ಮ ಜ್ಯೋತಿಷ್ಯವಾಣಿ ಹೇಳುವ ಭವಿಷ್ಯವು ವೈಜ್ಞಾನಿಕ ಪುರಾವೆ ಉಳ್ಳ ಕಾಲಜ್ಞಾನದಷ್ಟೇ ಸತ್ಯವಾಗಿರುತ್ತದೆ. ಇನ್ನೂ ಕೆಲವರಿಗೆ ಈ ಅಂಗೈ ಭವಿಷ್ಯವಾಗಲಿ ಅಥವಾ ತಮ್ಮ ಗ್ರಹಗಳ ಸ್ಥಾನಗಳು ಒಂದು ಕುತೂಹಲಕಾರಿ ವಿಷಯ ಆಗಿರುತ್ತದೆ ಹೊರತು, ನಿಖರ ಮಾಹಿತಿ ಆಗಿರುವುದಿಲ್ಲ. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಈಗಲೂ ಮದುವೆ ಮುಂಚೆ ಎಲ್ಲಾ ಗ್ರಹಗಳು, ರಾಶಿಗಳು, ಕಾಲಗಳು ಕೂಡಿ ಬಂದರೆ ಮಾತ್ರ ಮದುವೆಗೆ ಸಮ್ಮತಿ ಸಿಗುತ್ತದೆ. ಆದರೆ, ಯಾವ ರಾಶಿಯವರು ಯಾವ ರಾಶಿಯೊಂದಿಗೆ ಮದುವೆ ಆದರೆ ಕೊನೆಯವರೆಗೂ ಬಂಧ ಬಿಡಿಸಿಕೊಳ್ಳುವುದಿಲ್ಲ ಎಂಬುದು ನಾವು ಹೇಳುತ್ತೇವೆ ಕೇಳಿ

ಮೇಷ

ಅಗ್ನಿಯ ಸಂಕೇತ ಹೊಂದಿರುವ ರಾಶಿಗಳು ವಾಯುವಿನ ಸಂಕೇತವಾಗಿರುವ ರಾಶಿಗಳೊಂದಿಗೆ ಚೆನ್ನಾಗಿ ಹೊಂದುತ್ತಾರೆ. ಮೇಷ ರಾಶಿಯವರ ಧೈರ್ಯದ ವ್ಯಕ್ತಿತ್ವ ಮತ್ತು ಖಚಿತತೆ ವಾಯುವಿನ ಸಂಕೇತವಾದ ತುಲಾರಾಶಿ ಅವರ ಮನಗೆಲ್ಲುತ್ತದೆ. ನಿಜ ಜೀವನದಂತೆ ಇಲ್ಲಿಯು, ಬೇಕಿ ಉರಿಯಲು ಗಾಳಿ ಬೇಕೇ ಬೇಕು.

ವೃಷಭ

ಸಹಜವಾಗಿ ವೃಷಭ ರಾಶಿ ಮತ್ತು ವೃಶ್ಚಿಕ ರಾಶಿಯವರ ಮಧ್ಯೆ ಗಾಢ ಅನ್ಯೋನ್ಯತೆ ಮತ್ತು ಆಕರ್ಷಣೆ ಇರುತ್ತದೆ. ಇವೆರೆಡು ಒಂದಕ್ಕೊಂದು ವಿರುದ್ಧವಾದ ರಾಶಿಗಳು, ಹೀಗಾಗಿ ಒಬ್ಬರು ನಿಲ್ಲಿಸಿದರೆ ಇನ್ನೊಬ್ಬರು ಈ ಸಂಸಾರದ ಬಂಡಿಯನ್ನು ಎಳೆಯುತ್ತಾರೆ. ಒಬ್ಬರು ಮುಂಗೋಪಿ ಇದ್ದರೆ, ಇನ್ನೊಬ್ಬರು ಸಹನಶೀಲ ಆಗಿರುತ್ತಾರೆ.

ಮಿಥುನ

ಮಿಥುನ ರಾಶಿಯವರು ಚಿಕ್ಕ ಚಿಕ್ಕ ವಿಷಯಗಳಲ್ಲೂ ಬಹಳ ಚಾಕಚಕ್ಯತೆ ಬಯಸವವರಾಗಿದ್ದು ಮತ್ತು ಕೇವಲ ದೊಡ್ಡ ಚಿತ್ರಣವನ್ನ ಮಾತ್ರ ಗಮನದಲ್ಲಿ ಇರಿಸಿಕೊಳ್ಳುವ ಧನುರಾಶಿಯವರು ಒಬ್ಬರಿಗೊಬ್ಬರು ಒಳ್ಳೆಯ ಜೋಡಿಯಲ್ಲ ಎಂದು ಜನ ಭಾವಿಸುವರು. ಆದರೆ ವಾಸ್ತವತೆ ಅಲ್ಲಿ ಈ ಜೋಡಿ ಜಗತ್ತನೇ ಆಳಬಹುದು. ಕೆಲವೊಮ್ಮೆ ಒಳ್ಳೆಯ ಜೋಡಿ ಎಂದರೆ ಒಬ್ಬರ ನ್ಯೂನ್ಯತೆಗಳನ್ನ ಇನ್ನೊಬ್ಬರು ನಿಭಾಯಿಸುವುದು ಎಂದು.

ಕಟಕ

ಕಟಕ ಮತ್ತು ಮೀನಾ ರಾಶಿಯವರು ಒಬ್ಬರ ಮನಸ್ಸಿನ ಆಳಕ್ಕೆ ಇನ್ನೊಬ್ಬರು ಇಳಿದು ಅವರ ಭಾವನೆಗಳ ಸಾಗರವನ್ನ ಶೋಧಿಸುತ್ತಾರೆ. ಈ ಎರಡು ನೀರಿನ ಸಂಕೇತದ ರಾಶಿಗಳು ಶಕ್ತಿಯನ್ನು ವೃದ್ಧಿಸುತ್ತವೆ. ನಿಮ್ಮ ಮನಸಿನ ಮಾತನ್ನ ನಿಮ್ಮ ಸಂಗತಿಯು ಅರ್ಥೈಸಿಕೊಳ್ಳುವರು ಎಂಬುದು ತಿಳಿದರೆ, ಅಂತಹ ಸಂಬಂಧ ಎಷ್ಟೇ ವರ್ಷಗಳು ಕಳೆದರು ಗಟ್ಟಿಯಾಗಿಯೇ ಉಳಿದಿರುತ್ತವೆ.

ಸಿಂಹ

ಸಿಂಹ ರಾಶಿಯ ಜನರಿಗೆ ಆ ರಾಶಿಗೆ ಸಂಬಂಧ ಪಟ್ಟ ಯಾವುದೇ ರಾಶಿಯವರೊಂದಿಗೆ ಆದರೂ ಸರಿ ಹೊಂದಿಕೊಳ್ಳುವರು. ಹೀಗಾಗಿ ಸಿಂಹ ರಾಶಿಯು ವಾಯು ಸಂಕೇತವಾದ ಕುಂಭ ರಾಶಿಯವರಿಗೆ ತುಂಬಾ ಒಳ್ಳೆಯ ಜೋಡಿ ಆಗುತ್ತಾರೆ. ಬೆಂಕಿಗೆ ಗಾಳಿ ಬೇಕೇ ಬೇಕು. ಹೀಗಾಗಿ ಇವರಿಬ್ಬರೂ ಒಳ್ಳೆಯ ಜೋಡಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಕನ್ಯಾ

ಭೂಮಿಯ ಸಂಕೇತವಾದ ಕನ್ಯಾ ರಾಶಿಯು ನೀರಿನ ಸಂಕೇತವಾದ ಕಟಕ, ವೃಶ್ಚಿಕ ಮತ್ತು ಮೀನಾ ರಾಶಿಯೊಂದಿಗೆ ಒಳ್ಳೆಯ ಸಂಬಂಧ ಹೊಂದುತ್ತದೆ. ಈ ಮೊದಲೇ ಹೇಳಿದಂತೆ, ಈ ಅಂಶಗಳು(ಇಲ್ಲಿ ಭೂಮಿ ಮತ್ತು ನೀರು ಎಂದು) ಒಂದಕ್ಕೆ ಒಂದು ಪೂರಕವಾಗಿ ಇದ್ದರೆ, ಅವರ ಪ್ರೀತಿಯು ಕೂಡ ಗಟ್ಟಿಯಾಗಿರುತ್ತದೆ.

ತುಲಾ

ಅನ್ಯೋನ್ಯತೆಯನ್ನೇ ಸದಾಕಾಲ ಬಯಸುವ ತುಲಾರಾಶಿಗೆ ಸರಿಯಾದ ಜೋಡಿ ಎಂದರೆ ಅದು ಮುಂಗೋಪಿ ವ್ಯಕ್ತಿತ್ವದ ಮೇಷ ರಾಶಿ. ಇವೆರಡುಗಳು ಒಂದಕ್ಕೊಂದು ಕನ್ನಡಿ ಹಿಡಿದಂತೆ ವಿರುದ್ಧವಾದ ವ್ಯಕ್ತಿತ್ವವುಳ್ಳ ರಾಶಿಗಳಾಗಿದ್ದು, ಇವೆರೆಡು ಒಂದಕ್ಕೊಂದು ಅತ್ಯುತ್ತಮ ಸಾಥ್ ನೀಡುತ್ತವೆ. ಇವೆರೆಡು ರಾಶಿಗಳು ಸಂಸಾರದ ತಕ್ಕಡಿಯನ್ನ ಸರಿಯಾದಿ ತೂಗಿಸುತ್ತಾರೆ.

ವೃಷ್ಚಿಕ

ವೃಶ್ಚಿಕ ಮತ್ತು ವೃಷಭ ರಾಶಿ ಇಬ್ಬರೂ ಕೂಡ ಆರ್ಥಿಕ ಮತ್ತು ಮಾನಸಿಕ ಸ್ಥಿರತೆ ಕಂಡುಕೊಳ್ಳುವುದರ ಮೇಲೆಯೇ ಗಮನ ಇರಿಸಿರುತ್ತಾರೆ. ಹೀಗಾಗಿ ಇವರಿಬ್ಬರೂ ಒಂದು ಆಳವಾದ ಮತ್ತು ಗಟ್ಟಿಯಾದ ಭಾವನೆಗಳಿಂದ ಕೂಡಿದ ಸಂಬಂಧವನ್ನ ಬೆಳೆಸಿಕೊಳ್ಳುವರು. ಒಂದು ಒಳ್ಳೆಯ ಸಂಬಂಧವನ್ನು ಕಟ್ಟಲು ಒಂದು ದೃಢವಾದ ಅಡಿಪಾಯ ತುಂಬಾನೇ ಮುಖ್ಯ.

ಧನು

ಧನು ರಾಶಿ ಮತ್ತು ಮಿಥುನ ರಾಶಿ ಒಂದಕ್ಕೊಂದು ತದ್ವಿರುದ್ಧ ವ್ಯಕ್ತಿತ್ವದ್ದಾಗಿರುತ್ತವೆ. ಆದರೆ ಒಂದು ಸಂಬಂಧಕ್ಕೆ ಬೇಕಿರುವುದೇ ಅದು. ಧನು ರಾಶಿಯವರು ಗುರು ಗ್ರಹದ ಸಕಾರಾತ್ಮಕತೆಯಿಂದ ಕೂಡಿರುತ್ತಾರೆ ಮತ್ತು ಮಿಥುನ ರಾಶಿಯವರು ಬುಧ ಗ್ರಹದ ಕುತೂಹಲತೆ ಮತ್ತು ವಾಕ್ಚಾತುರ್ಯ ಹೊಂದಿರುತ್ತಾರೆ. ಇಬ್ಬರು ಸಾಹಸಿ ಮನೋಭಾವ ಹೊಂದಿರುವುದರಿಂದ, ಜೀವನದಲ್ಲಿನ ಏರುಪೇರುಗಳಿಗೆ ಧೃತಿಗೆಡುವುದಿಲ್ಲ.

ಮಕರ

ಭೂಮಿಯ ಸಂಕೇತವಾದ ಮಕರ ಮತ್ತು ತುಲಾ ರಾಶಿಗಳು ಎರಡರ ಅಂಶವು ಒಂದೇ ಆಗಿದ್ದರಿಂದ, ಈ ರಾಶಿಯವರ ನಡುವೆ ಬಹಳಷ್ಟು ಸಾಮ್ಯತೆಗಳು ಇರುತ್ತವೆ. ನೀವು ಕಾಳಜಿ ಮಾಡುವ ವಿಷಯಗಳಿಗೆ ನಿಮ್ಮ ಸಂಗಾತಿ ಕೂಡ ಕಾಳಜಿ ಮಾಡಿದರೆ, ಆ ಬಂಧವು ದೃಢವಾಗಿ ಇರುತ್ತದೆ.

ಕುಂಭ

ಕುಂಭ ರಾಶಿಯವರು ಮತ್ತು ಸಿಂಹ ರಾಶಿಯವರು ತಾವು ಜೀವನದಲ್ಲಿ ಸೆಟ್ಟಲ್ ಆಗಿ ಮಕ್ಕಳನ್ನು ಹೊಂದಬೇಕು ಎಂದಾಗ ಮಾತ್ರ ಮದುವೆ ಕಡೆ ಮುಖ ಮಾಡುವವರು. ಇವೆರೆಡು ರಾಶಿಗಳು ಒಂದಕ್ಕೊಂದು ವಿರುದ್ಧವಾದವು, ಆದರೆ ಈ ಅಂಶವೇ ಅವೆರೆಡು ರಾಶಿಯವರನ್ನ ಒಳ್ಳೆಯ ಜೋಡಿಯಾಗಿ ಮಾಡುವುದು.

ಮೀನಾ

ಮೀನಾ ರಾಶಿ ಮತ್ತು ಕಟಕ ರಾಶಿ ಒಂದೇ ಅಂಶದಿಂದ(ನೀರು) ಬಂದಿದ್ದು, ಎಲ್ಲಾ ರಾಶಿಗಳಲ್ಲೂ ಅತ್ಯಂತ ಭಾವನಾತ್ಮಕ ರಾಶಿಗಳು ಎಂದರೆ ಇವೆರೆಡೇ. ಇವರು ತುಂಬಾ ಸೂಕ್ಷ್ಮ ಮತ್ತು ಪರಾನುಭೂತಿ ವ್ಯಕ್ತಿತ್ವ ಹೊಂದಿರುವವರಾಗಿರುತ್ತಾರೆ. ಹೀಗಾಗಿ ಇವೆರೆಡು ರಾಶಿಯವರು ಒಬ್ಬರಿಗೊಬ್ಬರು ಒಳ್ಳೆಯ ಜೋಡಿಯಾಗುತ್ತಾರೆ. ಇವೆರೆಡು ರಾಶಿಗೆ ಮೂಲ ನೀರಾಗಿದ್ದು, ಈ ರಾಶಿಯವರು ಜೀವನ ಎಂಬ ಸಾಗರದಲ್ಲಿ ಮೀನುಗಳಂತೆ ಸರಾಗವಾಗಿ ಈಜುತ್ತಾ ಸಾಗಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon