Link copied!
Sign in / Sign up
8
Shares

ಖರ್ಜೂರ ನಿಮ್ಮ ಮಕ್ಕಳಿಗೆ ಏಕೆ ಒಳ್ಳೆಯದು? (Why Dates Are Good For Your Growing Children? In Kannada)

ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ನೀವು ಚಿಂತಿಸುತ್ತೀರಾ? ನಿಮ್ಮ ಮಗು ಸಾಕಷ್ಟು ಪೌಷ್ಟಿಕಾಂಶ ಪಡೆಯುತ್ತಿದೆಯೇ? ನೈಸರ್ಗಿಕವಾಗಿ ನಿಮ್ಮ ಮಗುವಿನ ಆರೋಗ್ಯಕ್ಕೆ ಪೂರಕವಾಗಿ, ನಿಮ್ಮ ಮಗುವಿಗೆ ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶಕಗಳನ್ನು ಕೊಡುವ ಒಂದು ಹಣ್ಣು - ಖರ್ಜೂರ. ಖರ್ಜೂರ ನಿಮ್ಮ ನಗುವಿಗೆ ಏಕೆ ಒಳ್ಳೆಯದು? ಖರ್ಜೂರದಿಂದ ನಿಮ್ಮ ಮಗುವಿಗೆ ಆಗಬಹುದಾದ ಆರೋಗ್ಯ ಪ್ರಯೋಜನಗಳನ್ನು ಈ ಲೇಖನದಲ್ಲಿ ಚರ್ಚಿಸೋಣ.

ಖರ್ಜೂರ ತತ್ತಕ್ಷಣದ ಶಕ್ತಿಯನ್ನು ಕೊಡುವುದಷ್ಟೇ ಅಲ್ಲದೇ, ಅದು ನಿಮ್ಮ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ರೀತಿಯ ಪೌಷ್ಟಿಕಾಂಶಕಗಳನ್ನು, ವಿಟಮಿನ್ ಮತ್ತು ಖನಿಜಗಳನ್ನು ನೀಡುತ್ತದೆ. ನೀವು ದಿನ ನಿತ್ಯ ನಿಮ್ಮ ಮಗುವಿಗೆ ಕೊಡುವ ಮೂರು ಹೊತ್ತಿನ ಆಹಾರ ಮತ್ತು ಹಾಲು ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶಕಗಳನ್ನು ನೀಡುವುದಿಲ್ಲ. ಆದರೆ ದಿನನಿತ್ಯದ ಆಹಾರದೊಂದಿಗೆ ಖರ್ಜೂರ ಸೇವಿಸಿದರೆ, ತ್ವರಿತ ಶಕ್ತಿಯೊಂದಿಗೆ ಅಗತ್ಯವಿರುವ ಎಲ್ಲ ಪೌಷ್ಟಿಕಾಂಶಕಗಳು ದೊರಕುತ್ತವೆ.

ಪರಿವಿಡಿ

೧. ಖರ್ಜೂರದ ಪೌಷ್ಟಿಕಾಂಶದ ಮೌಲ್ಯ
೨. ಮಕ್ಕಳಿಗೆ ಖರ್ಜೂರದಿಂದಾಗುವ ಪ್ರಯೋಜನಗಳು
೩. ಮಕ್ಕಳು ಖರ್ಜೂರ ಸೇವಿಸುವ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
೪. ಹಿನ್ನುಡಿ

೧. ಖರ್ಜೂರದ ಪೌಷ್ಟಿಕಾಂಶದ ಮೌಲ್ಯ:

ಖರ್ಜೂರ ಅತ್ತ್ಯುನ್ನತ ಶಕ್ತಿಯನ್ನು ನೀಡುವ ಹಣ್ಣಾಗಿದೆ. ೨೮೨ ಕ್ಯಾಲೋರಿಗಳೊಂದಿಗೆ, ಪ್ರತಿ ನೂರು ಗ್ರಾಂ ಖರ್ಜೂರ ಕೆಳ್ಗಿನವುಗಳನ್ನು ಒಳಗೊಂಡಿದೆ:

೨. ಮಕ್ಕಳಿಗೆ ಖರ್ಜೂರದಿಂದಾಗುವ ಪ್ರಯೋಜನಗಳು:

ಐರನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಬಿ೬, ಮುಂತಾದ ಪ್ರಮುಖ ಪೌಷ್ಟಿಕಾಂಶಕಗಳನ್ನು ಹೊಂದಿರುವ ಖರ್ಜೂರ ನಿಮ್ಮ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಪೂರಕವಾಗಿದೆ. ರುಚಿಯಾದ ಹಣ್ಣು, ಖರ್ಜೂರದ ಪ್ರಮುಖ ೧೦ ಪ್ರಯೋಜನಗಳು ಇಂತಿವೆ:

೧. ಕರುಳಿಗೆ ಸಂಬಂಧಿತ ರೋಗಗಳನ್ನು ಚಿಕಿತ್ಸಿಸುತ್ತದೆ: ಖರ್ಜೂರ ಕರುಳಿಗೆ ಸಂಬಂಧಿತ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರಲ್ಲಿ ಸಹಾಯಕ. ಪರಾಶ್ರಿತ ಸೂಕ್ಶ್ಮಾಣು ಜೀವಿಗಳ ವಿರುದ್ಧ ಹೋರಾಡಿ, ಆರೋಗ್ಯಕ್ಕೆ ಪೂರಕವಾಗುವ ಬಸಿಟೇರಿಯಾಗಳಿಗೆ ಅನುಕೂಲವಾಗುವಂತಹ ಪರಿಸರವುಂಟು ಮಾಡುವಲ್ಲಿ ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಫೈಬರ್ ಗಳು ನೈಸರ್ಗಿಕ ನೀರನ್ನು ಹೀರುವ ಗುಣವನ್ನು ಹೊಂದಿದ್ದು, ಅದರಿಂದ ಜೀರ್ಣ ಕ್ರಿಯೆ ಸರಾಗವಾಗುತ್ತದೆ. ಇದರಿಂದ ನಿಮ್ಮ ಮಗುವಿನಲ್ಲಿ ಮಲಬದ್ಧತೆಯನ್ನು ನಿವಾರಿಸಬಹುದು.

೨. ಯಕೃತ್ತುವಿನ ಬಲವರ್ಧಕ: ಯಕೃತ್ತು ಸುಲಭವಾಗಿ ಬ್ಯಾಕ್ಟೀರಿಯಾ ಹಾಗೂ ವೈರಲ್ ಸೋಂಕುಗಳಿಗೆ ತುತ್ತಾಗಬಹುದು. ಅದೇ ಕಾರಣದಿಂದ ಮಕ್ಕಳಲ್ಲಿ ಯಕೃತ್ತಿಗೆ ಸಂಬಂಧಿತ ರೋಗಗಳು (ಉದಾಹರಣೆಗೆ ಜಾಂಡೀಸ್, ಹೆಪಾಟೈಟಿಸ್, ಟೈಫಾಯ್ಡ್) ಬರುವುದು ಸಾಮಾನ್ಯ. ಅಧ್ಯಯನದ ಪ್ರಕಾರ ಖರ್ಜೂರ ಯಕೃತ್ತನ್ನು ಬಲವಾಗಿಸಲು ಸಹಾಯ ಮಾಡುತ್ತದೆ. ಹಾಗಾಗಿ, ನಿಮ್ಮ ಮಗುವಿನ ದಿನನಿತ್ಯದ ತಿಂಡಿಯ ಜೊತೆ ಖರ್ಜೂರವನ್ನು ನೀಡುವುದು ಆರೋಗ್ಯಕಾರಿ.

೩. ಹಲ್ಲನ್ನು ಬಲವಾಗಿಸಿ, ಹೊಳೆಯುವಂತೆ ಮಾಡುತ್ತದೆ: ಸಂಪೂರ್ಣವಾಗಿ ಕಳಿತ ಖರ್ಜೂರವನ್ನು ನಿಮ್ಮ ಮಗುವಿಗೆ ನೀಡುವುದರಿಂದ ನಿಮ್ಮ ಮಗುವಿನ ಹಲ್ಲುಗಳು ಬಲಿಷ್ಠಗೊಳ್ಳುತ್ತವೆ. ಖರ್ಜೂರವನ್ನು ಅಗೆಯುವುದರಿಂದ, ಹಲ್ಲುಗಳಿಗೆ ವ್ಯಾಯಾಮವಾಗಿ, ಹಲ್ಲುಗಳು ಮತ್ತು ವಸಡುಗಳು ಬಲವಾಗುತ್ತವೆ.

೪. ಜ್ವರ ಮತ್ತು ಸಿಡುಬು ರೋಗದ ಸಮಯದಲ್ಲಿ ಆರೈಕೆ: ಹಾಲಿನಲ್ಲಿ ನೆನೆಯಿಟ್ಟಿರುವ ಖರ್ಜೂರ ಮಕ್ಕಳಿಗೆ ತುಂಬಾ ಆರೋಗ್ಯಕಾರಿ. ಇದನ್ನು ಜ್ವರ ಮತ್ತು ಸಿಡುಬು ರೋಗಗಳಿಂದ ಗುಣವಾಗುತ್ತಿರುವ ಮಕ್ಕಳಿಗೆ ಕೊಟ್ಟರೆ, ಅವರ ಅರೋಗ್ಯ ಮೊದಲಿನಂತಾಗಲು ಪೂರಕವಾಗುತ್ತದೆ.

೫. ಆಮಶಂಕೆಗೆ ಚಿಕಿತ್ಸೆ: ದೊಡ್ಡ ಕರುಳಿನಲ್ಲಿ ಬ್ಯಾಕ್ಟೀರಿಯಾ ಸೋಂಕಾಗಿದ್ದರೆ, ಆಮಶಂಕೆಯುಂಟಾಗುತ್ತದೆ. ಸಿಹಿಯಾಗುವ ಖರ್ಜೂರ ಅಪಾಯಕಾರಿ ಬಸಿಟೇರಿಯಾಗಳ ಬೆಳವಣಿಗೆಯನ್ನು ತಡೆಹಿಡಿದು, ನಿಮ್ಮ ಮಗುವನ್ನು ಸಂರಕ್ಷಿಸುತ್ತದೆ.

೬. ಜ್ವರದಲ್ಲಿ ಸಂತೈಸುತ್ತದೆ: ಮಕ್ಕಳಲ್ಲಿ ವಿವಿಧ ಬಗೆಯ ಜ್ವರಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಖರ್ಜೂರದಲ್ಲಿರುವ ಪೌಷ್ಟಿಕಾಂಶಕಗಳು ಜ್ವರದಿಂದ ಉಂಟಾಗುವ ಆಯಾಸವನ್ನು ತೊರೆದು ಹಾಕುತ್ತದೆ. ಖರ್ಜೂರವನ್ನು ಅರೆದು, ಹಾಲಿನಲ್ಲಿ ಸೇರಿಸಿ, ಜ್ವರದ ಸಮಯದಲ್ಲಿ ನಿಮ್ಮ ಮಗುವಿಗೆ ಕುಡಿಸಬಹುದು. ಇದು ಮಗುವಿನ ಆರೋಗ್ಯ ಸುಧಾರಿಸುವಲ್ಲಿಯೂ ಸಹಾಯ ಮಾಡುತ್ತದೆ.

೭. ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ: ಖರ್ಜೂರದಲ್ಲಿರುವ ಆಂಟಿ-ಆಕ್ಸಿಡೆಂಟ್ಸ್ ಮತ್ತು ಸ್ವತಂತ್ರ ರಾಡಿಕಲ್ಗಳು ಹಲವಾರು ಸೋಂಕುಗಳ ವಿರೋಧ ಹೋರಾಡುವಲ್ಲಿ ಸಹಾಯ ಮಾಡಿ, ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಖರ್ಜೂರ ನಿಮ್ಮ ಮಗುವಿನ ದೇಹದ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ಅನಿಮಿಯಾ ತಡೆಗಟ್ಟಿ, ಒಳ್ಳೆಯ ಆರೋಗ್ಯ ಬೆಳವಣಿಗೆಗೆ ಸಹಾಯ ಮಾಡುತ್ತದೆ.

೮. ಮಗುವಿನ ತೂಕ ಮತ್ತು ಶಕ್ತಿಯನ್ನು ವರ್ಧಿಸುತ್ತದೆ: ಹಲವಾರು ಮಕ್ಕಳು ಸರಿಯಾಗಿ ಆಹಾರ ಸೇವಿಸದೇ, ಕಡಿಮೆ ತೂಕವನ್ನು ಹೊಂದಿರುತ್ತಾರೆ. ನಿಮ್ಮ ಮಗು ತೆಳ್ಳಗೆ ಇದ್ದರೆ, ದಿನ ನಿತ್ಯದ ಆಹಾರದೊಂದಿಗೆ ಖರ್ಜೂರ ಮತ್ತು ಹಾಲನ್ನು ನೀಡಲು ಶುರು ಮಾಡಿ. ಕೆಲವೇ ದಿನಗಳಲ್ಲಿ ನೀವು ಅದರ ಫಲಿತಾಂಶಗಳನ್ನು ಕಾಣುತ್ತೀರಿ. ಖರ್ಜೂರದಲ್ಲಿರುವ ಕ್ಯಾಲೊರಿಗಳು ಕೇವಲ ತೂಕ ಹೆಚ್ಚಿಸುವುದಷ್ಟೇ ಅಲ್ಲದೆ, ದೇಹದಲ್ಲಿರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸಿ ದೇಹಕ್ಕೆ ಮತ್ತು ಮೆದುಳಿಗೆ ಶಕ್ತಿ ನೀಡುತ್ತದೆ.

೯. ದೇಹದ ಬೆಳವಣಿಗೆಗೆ ಪೂರಕ: ಮೂಳೆಯ ಬೆಳವಣಿಗೆಗೆ ಅಗತ್ಯವಿರುವ ಸೆಲೆನಿಯಮ್, ಮ್ಯಾಂಗನೀಸ್, ಕಾಪರ್, ಮೆಗ್ನೀಷಿಯಂ ಖರ್ಜೂರದಲ್ಲಿದೆ. ಹಾಗಾಗಿ ಇದು ಮೂಳೆಯನ್ನು ಗಾಂಪವಾಗಿ ಬಲಿಷ್ಠವಾಗಿಸುತ್ತದೆ. ಖರ್ಜೂರದಲ್ಲಿರುವ ಪ್ರೋಟೀನ್ ಜೀವಕೋಶದ ನಿರ್ಮಾಣದಲ್ಲಿ ಸಹಾಯ ಮಾಡುತ್ತದೆ.

೧೦. ತ್ವಚೆಯನ್ನು ಸುಂದರಗೊಳಿಸುತ್ತದೆ: ಖರ್ಜೂರದಲ್ಲಿರುವ ವಿಟಮಿನ್ ಸಿ, ವಿಟಮಿನ್ ಡಿ, ನಿಮ್ಮ ಮಗುವಿನ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಿ, ಚರ್ಮವನ್ನು ಸೌಮ್ಯವಾಗಿ, ಸುಂದರವಾಗಿರಿಸುತ್ತದೆ. ನಿಮ್ಮ ಮಗು ಯಾವುದಾದರೂ ಚರ್ಮದ ತೊಂದರೆಯಿಂದ ಬಳಲುತ್ತಿದ್ದರೆ, ಖರ್ಜೂರ ತುಂಬಾ ಸಹಾಯಕಾರಿ. ಅದು ಮುಪ್ಪಡರಾದ ಚರ್ಮವನ್ನೂ ಒದಗಿಸುತ್ತದೆ.

೩. ಮಕ್ಕಳು ಖರ್ಜೂರ ಸೇವಿಸುವ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು:

೧. ಮಾಗಿರುವ ಹಣ್ಣನ್ನು ಖರೀದಿಸಬೇಕು. ಏಕೆಂದರೆ ಮಾಗದ ಹಣ್ಣು ಮಗುವಿನ ಆರೋಗ್ಯಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚು.

೨. ನಿಮ್ಮ ಮಗುವಿನ ಬೆಳಗಿನ ತಿಂಡಿಯ ಜೊತೆ ಖರ್ಜುರವನ್ನು ನೀಡುವುಡ್ ಒಳಿತು. ಈ ಅಭ್ಯಾಸವನ್ನು ನಿಮ್ಮ ಮಗುವಿಗೆ ಗಟ್ಟಿಯಾದ ಊಟ ನೀಡಲು ಶುರು ಮಾಡಿದಾಗಿನಿಂದ ರೋಢಿಸಬಹುದು.

೩.ಮಗುವಿಗೆ ಖರ್ಜೂರ ಕೊಡಲು ಶುರು ಮಾಡುವಾಗ, ಮೊದಲು ಒಂದು ಪೂರ್ತಿ ಖರ್ಜೂರವನ್ನು, ಹಬೆಯಾಡಿಸಿ ನೀಡುವುದು ಒಳ್ಳೆಯದು - ಖರ್ಜೂರವನ್ನು ಕುದಿಸಬಾರದು, ಕೇವಲ ಹಬೆಯಾಡಿಸಿ ನೀಡಬೇಕು.

೪. ನಿಮ್ಮ ಮಗುವಿಗೆ ಖರ್ಜೂರ ತಿನ್ನುವ ಅಭ್ಯಾಸವನ್ನು ಪ್ರಾರಂಭಿಸುವಾಗ ಬೀಜವಿಲ್ಲದ ಖರ್ಜೂರವನ್ನು ನೀಡುವುದು ಒಳಿತು ಅಥವಾ ನಿಮ್ಮ ಮಗುವಿಗೆ ಖರ್ಜೂರವನ್ನು ನೀಡುವ ಮುನ್ನ ಬೀಜವನ್ನು ತೆಗೆದು ತಿನ್ನಲು ಕೊಡಿ.

೫.ಖರ್ಜೂರ ಮಗುವಿಗೆ ಆರೋಗ್ಯಕರ ತಿಂಡಿಯಾಗಿದ್ದರೂ, ಮಗುವಿಗೆ ಇದರಿಂದ ಉಂಟಾಗಬಹುದಾದ ಅಲರ್ಜಿ ಗಳ ಬಗ್ಗೆ ಎಚ್ಚರವಿರಲಿ.

೬. ಮೊದಲಿಗೆ ನಿಮ್ಮ ಮಗುವಿಗೆ ಹಬೆಯಾಡಿಸಿದ ಮತ್ತು ಕಿವುಚಿದ ಖರ್ಜೂರ ನೀಡುವುದು ಒಳ್ಳೆಯದು. ನಿಮ್ಮ ಮಗು ಸಂಪೂರ್ಣವಾಗಿ ಅಗೆಯಲು ಕಲಿತ ಮೇಲೆ, ಕಚ್ಚಾ ಖರ್ಜೂರ ನೀಡಬಹುದು.

೭. ಒಸತಾದ ಯಾವುದಾದರೂ ಆಹಾರ ನಿಮ್ಮ ಮಗುವಿನ ಆಹಾರ ಕ್ರಮದಲ್ಲಿ ಸೇರಿಸುವ ಮುನ್ನ ನಿಮ್ಮ ಮಗುವಿನ ವೈದ್ಯರಲ್ಲಿ ಚರ್ಚಿಸುವುದು ಒಳಿತು.

ಹಿನ್ನುಡಿ:

ಖರ್ಜೂರ ಖಂಡಿತವಾಗಿಯೂ ನಿಮ್ಮ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೌಷ್ಟಿಕಾಂಶಕಗಳನ್ನು ಹೊಂದಿದೆ. ಜ್ವರದಿಂದ ಬಳಲುತ್ತಿರುವಾಗ ಆಯಾಸವನ್ನು ಕಡಿಮೆಗೊಳಿಸುತ್ತದೆ. ನಿಮ್ಮ ಮಗುವಿಗೆ ಖರ್ಜೂರವನ್ನು ಹಣ್ಣಿನ ರೂಪದಲ್ಲಿ ಜ್ಯೂಸ್ ರೂಪದಲ್ಲಿ, ಅಥವಾ ಮಿಲ್ಕ್-ಶೇಕ್ ರೂಪದಲ್ಲಿ ನೀಡಬಹುದು. ಖರ್ಜೂರದ ಹಣ್ಣು ಅಂಟುವ ಗುಣವನ್ನು ಹೊಂದಿದ್ದು, ನಿಮ್ಮ ಮಗುವಿನ ಹಲ್ಲುಗಳಿಗೆ ಅಂಟಿಕ್ಪೋಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾಗಳು ನಿಮ್ಮ ಮಗುವಿನ ಹಲ್ಲನ್ನು ಆವರಿಸಿ, ಹಲ್ಲು ಕೊಳೆಯುವಂತೆ ಮಾಡಬಹುದು. ಆ ಅಪಾಯವನ್ನು ತಡೆಯಲು ಹಣ್ಣನ್ನು ತಿಂದ ನಂತರ ನಿಮ್ಮ ಮಗುವಿನ ಹಲ್ಲುಗಳನ್ನು ಸ್ವಚ್ಛಗೊಳಿಸಿ ಅಥವಾ ಕುಡಿಯಲು ನೀರನ್ನು ನೀಡಿರಿ. ನಿಮಗೆ ಈ ಹಣ್ಣಿನ ಬಗ್ಗೆ ಅಥವಾ ಈ ಹಣ್ಣನ್ನು ನಿಮ್ಮ ಮಗುವಿಗೆ ನೀಡುವ ಬಗ್ಗೆ ಯಾವುದೇ ಅನುಮಾನವಿದ್ದಲ್ಲಿ ನಿಮ್ಮ ಮಗುವಿನ ವೈದ್ಯರನ್ನು ಸಂಪರ್ಕಿಸಿ, ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಿರಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon