Link copied!
Sign in / Sign up
3
Shares

ನಿಮ್ಮ ಮಗು ನೀರು ಕುಡಿಯಲು ಹಠ ಮಾಡಿದರೆ ಹೆಚ್ಚು ನೀರು ಕುಡಿಯುವಂತೆ ಮಾಡುವುದು ಹೇಗೆ?

ನೀರು ನಮಗೆ ಜೀವ ನೀಡುವ ಅಮೃತ ಮತ್ತು ಮಗುವಿನ ಜೀವಕ್ಕೆ ತುಂಬಾನೇ ಮಹತ್ವವಾದದ್ದು. ಹೆಚ್ಚು ನೀರು ಕುಡಿದಂತೆಲ್ಲಾ, ನೀವು ಹೆಚ್ಚು ಜಲೀಕರಣ ಹೊಂದುತ್ತೀರಿ ಮತ್ತು ಆರೋಗ್ಯಕರವಾಗಿರುತ್ತೀರಿ. ಇದು ದೇಹದ ತಾಪಮಾನವನ್ನ ನಿಭಾಯಿಸುತ್ತದೆ, ಹೊಟ್ಟೆ ಕಟ್ಟುವುದನ್ನು ನಿಲ್ಲಿಸುತ್ತದೆ ಮತ್ತು ಇತರೆ ಅರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನ ದೂರವಿಡುತ್ತದೆ. ಇದರೊಂದಿಗೆ ಬೋನಸ್ ಆಗಿ, ನೀವು ನೀರನ್ನು ಸೇವಿಸಿ ಈ ಎಲ್ಲಾ ಉಪಯೋಗಗಳನ್ನ ಯಾವುದೇ ರೀತಿಯ ಸಕ್ಕರೆ ಅಥವಾ ಕ್ಯಾಲೋರಿಗಳನ್ನ ನಿಮ್ಮ ದೇಹಕ್ಕೆ ಸೇರದಂತೆ ಪಡೆದುಕೊಳ್ಳಬಹುದು. ಹೀಗಿದ್ದರೂ, ಬಹಳಷ್ಟು ಮಕ್ಕಳು ನೀರಿನ ರುಚಿಯನ್ನು ಇಷ್ಟಪಡುವುದಿಲ್ಲ. ಇಂತಹ ಸಮಸ್ಯೆ ಎದುರಿಸುತ್ತಿರುವ ಪೋಷಕರಲ್ಲಿ ನೀವೂ ಒಬ್ಬರಾಗಿದ್ದಾರೆ, ನಿಮ್ಮ ಮಗು ಹೆಚ್ಚು ನೀರು ಕುಡಿಯುವಂತೆ ಮಾಡಲು ಕೆಲವೊಂದು ಟ್ರಿಕ್ಸ್ ಅನ್ನು ನಾವು ತಿಳಿಸುತ್ತೇವೆ, ಓದಿ.

 

೧. ಅವರು ತುಂಬಾ ಬಾಯಾರಿಕೆ ಆದಾಗ ಅವರನ್ನ ಹಿಡಿದುಕೊಳ್ಳಿ

ನಿಮ್ಮ ಮಗುವಿಗೆ ಬಾಯಾರಿಕೆ ಬಗ್ಗೆ ಇನ್ನೂ ತಿಳಿದಿರುವುದಿಲ್ಲ. ಆದರೆ ಅವರು ತುಂಬಾನೇ ಬಾಯಾರಿಸಿಕೊಂಡಾಗ, ಅವರಿಗೆ ನೀರನ್ನು ನೀಡಿ, ಈ ಅಭ್ಯಾಸದಿಂದ ಅವರಿಗೆ ಬಾಯಾರಿಕೆ ಉಂಟಾದಾಗ ನೀರನ್ನು ಸೇವಿಸಬೇಕು ಎಂಬುದು ಅವರಿಗೆ ಮನವರಿಕೆ ಆಗುತ್ತದೆ. ನೀರಿನಿಂದಲೇ ಅವರ ದಾಹ ತೀರುವುದು ಎಂಬುದು ಅವರಿಗೆ ಗೊತ್ತಾಗುತ್ತದೆ. ಅಲ್ಲದೆ ಸುಸ್ತಾದಾಗಲೆಲ್ಲಾ ನೀರು ಹೇಗೆ ದಣಿವಾರಿಸುತ್ತದೆ ಎಂಬುದರ ಬಗ್ಗೆ ಅವರ ಮುಂದೆ ಮಾತನಾಡಿ ಅಥವಾ ನಟಿಸಿ ತೋರಿಸಿ.

 

೨. ಮಜವಾದ ಲೋಟಗಳು

ನಿಮ್ಮ ಮಗುವು ಜಗತ್ತನ್ನು ನೋಡಲು ಶುರು ಮಾಡಿದರಂತೆ, ಅವರಿಗೆ ಇಷ್ಟಗಳು ಮತ್ತು ಇಷ್ಟವಾಗುವುದಿಲ್ಲಗಳನ್ನು ಬೆಳೆಸಿಕೊಳ್ಳುತ್ತಾರೆ. ಅವರು ನೀರು ಕುಡಿಯುವಂತೆ ಮಾಡಲು, ಅವರು ಇಷ್ಟಪಡುವ ಕಪ್ ಅಲ್ಲೇ ಅವರಿಗೆ ನೀರು ಕೊಡಿ. ಇದರಿಂದ ನೀರು ಕುಡಿಯುವ ಕಪ್ ಒಂದು ವಿಶೇಷ ಕಪ್ ಎಂದು ಮಗುವಿನ ತಲೆಯಲ್ಲಿ ದಾಖಲಾಗುತ್ತದೆ. ಅಲ್ಲದೆ ಅದರಿಂದ ಹೆಚ್ಚು ನೀರು ಕುಡಿಯುವಂತೆ ನಿಮ್ಮ ಮಗುವಿಗೆ ಪ್ರಚೋದನೆ ಸಿಗುತ್ತದೆ. ಆ ಕಪ್ ಮೇಲೆ ಮಗುವು ಇಷ್ಟಪಡುವಂತಹ ಗೊಂಬೆಯ ಚಿತ್ರಗಳು ಇದ್ದರೆ, ನಿಮ್ಮ ಮಗುವು ಆ ಕಪ್ ಅನ್ನು ಇನ್ನಷ್ಟು ಆರಾಧಿಸುತ್ತದೆ. ನಿಮ್ಮ ಮಗುವಿನ ಕೈಗೆ ಸಿಗುವಂತೆ ಆ ಕಪ್ ಅನ್ನು ಇಡಿ ಮತ್ತು ನಿಮ್ಮ ಮಗುವಿಗೆ ಬಾಯಾರಿಕೆ ಆದಾಗಲೆಲ್ಲಾ ಅದನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡೇ ಇರಿ.

 

೩. ಆಕರ್ಷಕ ಸ್ಟ್ರಾ ಬೇಕಾದರೂ ಬಳಸಿ

ನಾವು ಸಾಮಾನ್ಯವಾಗಿ ಹಣ್ಣಿನ ಜ್ಯೂಸು ಅಥವಾ ಮಿಲ್ಕ್ ಶೇಕ್ಸ್ ಕುಡಿಯುವಾಗ ಸ್ಟ್ರಾ ಬಳಸುತ್ತೇವೆ. ಆದರೆ ಅದನ್ನು ಬಳಸಿ ನೀರು ಕುಡಿಯಬಾರದು ಎಂಬ ನಿಯಮವೇನೂ ಇಲ್ಲ ಅಲ್ಲವಾ. ಇದು ನೋಡಲಿಕ್ಕೂ ಚಂದವಿರುತ್ತದೆ ಮತ್ತು ಮಕ್ಕಳಿಗೂ ಇದರಿಂದ ಪಾನೀಯ ಹೀರಲು ಉತ್ಸಾಹ ಬರುತ್ತದೆ. ನೋಡಲಿಕ್ಕೆ ಆಕರ್ಷಕವಾದ ಸ್ಟ್ರಾಗಳನ್ನ ತನ್ನಿರಿ. ಇದು ಮಗುವು ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ನೀರು ಕುಡಿಯುವಂತೆ ಮಾಡುತ್ತದೆ.

 

೪. ನೀರು ಕುಡಿಯುವದನ್ನು ಒಂದು ಆಟ ಮಾಡಿ

ಅವರಿಗೆ ಸ್ಪರ್ಧೆ ನೀಡಿ. ಒಂದು ಲೋಟದಲ್ಲಿ ನೀರು ತುಂಬಿಸಿ, ಇಷ್ಟರವರೆಗೆ ಕುಡಿಯಬೇಕು ಎಂದು ಅವರಿಗೆ ಸವಾಲು ಹಾಕಿ ಅಥವಾ ಅವರಿಗೆ ಹೆಚ್ಚು ನೀರು ಕುಡಿಯುವ ಸ್ಪರ್ಧೆಯಲ್ಲಿ ನಿಮ್ಮನ್ನು ಸೋಲಿಸಬೇಕು ಎಂದು ಸವಾಲು ಹಾಕಿ. ಆಟದಲ್ಲಿ ಮಜವಷ್ಟೇ ಇರದೇ, ಅವರು ಜಲೀಕರಣ ಹೊಂದಿರುತ್ತಾರೆ ಮತ್ತು ಅದರಿಂದ ಆರೋಗ್ಯಕರವಾಗಿ ಇರುತ್ತಾರೆ. ನಿಮ್ಮ ಮಗುವು ತನಗೆ ಬಾಯಾರಿಕೆ ಆಗುತ್ತಿಲ್ಲವೆಂದರೂ, ಅವರ ಕೈಗೆ ಬಾಟಲಿಯನ್ನು ನೀಡಿ 5 ಗುಟುಕುಗಳನ್ನು ನೀಡಿ. ಬಹಳಷ್ಟು ಬಾರಿ, ನಿಮ್ಮ ಮಗುವು ಅದಕ್ಕಿಂತ ಹೆಚ್ಚೇ ಸೇವಿಸುತ್ತದೆ.

 

೫. ನೀರಿನಲ್ಲಿ ಒಂದು ಸಣ್ಣ ಹಣ್ಣಿನ ತುಂಡು

ಬಹುತೇಕ ಬಾರಿ, ಮಕ್ಕಳು ತುಂಬಾನೇ ಬೇಡಿಕೆಗಳನ್ನ ಇಡುತ್ತಾರೆ. ಅವರಿಗೆ ಯಾವುದು ಖುಷಿ ನೀಡುತ್ತದೆ ಎಂದು ಹೇಳುವುದೇ ಕಷ್ಟವಾಗುತ್ತದೆ. ಹೀಗಾಗಿ ನೀವು ಇದನ್ನೂ ಒಮ್ಮೆ ಪ್ರಯತ್ನಿಸಿ ನೋಡಬಹುದು. ಇದು ನೀವು ಬಳಸಿದಂತಹ ಅತ್ಯಂತ ಪರಿಣಾಮಕಾರಿ ಉಪಾಯ ಕೂಡ ಆಗಬಹುದು. ಒಂದು ತುಂಡು ನಿಂಬೆ ಹಣ್ಣೋ, ಸೌತೆಕಾಯಿಯೋ ಅಥವಾ ದ್ರಾಕ್ಷಿ ಹಣ್ಣೋ ನೀರಿನೊಳಗೆ ಹಾಕಿ ನೀಡಿ. ಒಂದು ವೇಳೆ ನಿಮ್ಮ ಮಗುವು ನಿಂಬೆಯ ಎಸೆಳುಗಳ ಕಾರಣದಿಂದ ಕುಡಿಯಲು ಹಿಂದೆ ಮುಂದೆ ಮಾಡಿದರೆ, ನೀರನ್ನು ಸೋಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon