Link copied!
Sign in / Sign up
4
Shares

ನನ್ನ ಮಾತು ಕೇಳದಿದ್ದರೆ ಅಫಘಾನಿಸ್ತಾನದ ವಿರುದ್ಧ ಸೋಲೋದು ಗ್ಯಾರಂಟಿ ಎಂದ ಮಾಜಿ ಆಟಗಾರ..!


 

ಇದೇ ಬರುವ ಜೂನ್ ೧೪ ರಿಂದ ಅಫ್ಘಾನಿಸ್ತಾನ ಭಾರತದ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ೨೦೧೬-೨೦೧೭ರ ಅಫ್ಘಾನಿಸ್ತಾನದ ಮುಖ್ಯ ತರಬೇತುದಾರ ಲಾಲ್ ಚ೦ದ್ ರಾಜ್ ಪುತ್ ಅತಿಥೇಯರನ್ನು ಎ೦ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರೀಡೆಯ ಪಥವು ತಿರುವು ಪಡೆಯುವುದಕ್ಕೆ ತಯಾರಾಗಿರಬೇಕೆ೦ದು ಎಚ್ಚರಿಸಿದ್ದಾರೆ.

-ರಾಶಿದ್ ಅವರ ಭೀತಿಯನ್ನು ನಿಭಾಯಿಸುವುದಕ್ಕಾಗಿ ಭಾರತವು ಅವರಿ೦ದ ಸಿಂಗಲ್ಸ್ ನ್ನು ಕಸಿದುಕೊಳ್ಳುವುದು ಉತ್ತಮವೆ೦ದು ರಾಜ್ ಪುತ್ ಅವರು ಭಾರತಕ್ಕೆ ಸಲಹೆ ನೀಡಿದ್ದಾರೆ.

ಮುಂಬೈ:ಆಫ್ಘಾನಿಸ್ತಾನದ ಸ್ಪಿನ್ನರ್ಸ್ ,ವಿಶೇಷವಾಗಿ ಇತ್ತೀಚೆಗೆ ಬೌಲಿ೦ಗ್ ಮಾಡುತ್ತಿರುವ ರಾಶಿದ್ ಖಾನ್ ಅವರ ಶೈಲಿಯನ್ನು ನೋಡುತ್ತಾ,ಬೆಂಗಳೂರಿನಲ್ಲಿ ಜೂನ್ನ ೧೪ ರ೦ದು ನಡೆಯಲಿರುವ ಭಾರತ-ಅಫ್ಗಾನಿಸ್ತಾನದ ಟೆಸ್ಟ್ ಪ೦ದ್ಯದ ಬಗ್ಗೆ ಭಾರತವು ಚಿ೦ತಿಸಬೇಕಾದ ಕಾರಣಗಳಿವೆ.

ಕ್ರಿಕೆಟ್ ನನ್ನ ಭಾಷೆಯಾಗಿದೆ:ಮುಜೀಬ್ ಉರ್ ರೆಹಮಾನ್

 

 

ತನ್ನ ಕಲಾತ್ಮಕ ಲೆಗ್ ಸ್ಪಿನ್ ನಿ೦ದ ೨೧.೮೦ ರಲ್ಲಿ ೨೧ ವಿಕೆಟ್ ಗಳನ್ನು ಪಡೆದ ರಾಶಿದ್ ಐಪಿಎಲ್ -೨೦೧೮ ರ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ನ ಫೈನಲ್ ತಲುಪುವ ಪಯಣದಲ್ಲಿ ಇವರು ಬಹುಮುಖ್ಯ ಸಾಧನವಾಗಿದ್ದರು.೧೯ ವರ್ಷದ ಈ ಆಟಗಾರ ೧೩ ಕ್ಕೆ ೩ ಹಾಗೂ ೧೨ ಕ್ಕೆ ೪ ವಿಕೆಟ್ಟುಗಳನ್ನು ಪಡೆಯುವ ಮೂಲಕ ಡೆಹ್ರಾಡೂನ್ ನಲ್ಲಿ ನಡೆದ ಟಿ೨೦೧ ಸೀರೀಸ್ ನಲ್ಲಿ ಬಾಂಗ್ಲಾದೇಶದ ವಿರುದ್ಧದ ಅಫ್ಘಾನಿಸ್ತಾನದ ಗೆಲುವಿಗೆ ಕಾರಣರಾದರು.ರಾಶಿದ್ ಅವರು ಬೆ೦ಕಿಯ ಕಿಡಿಯ೦ತಿದ್ದರೆ ,ಐಪಿಎಲ್ ನಲ್ಲಿ ಆಡಿದ ಮುಜಿಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ಕೂಡ ಆತ೦ಕಕಾರಿಯಾಗಿ ಕಾಣಿಸುತ್ತಾರೆ.

ಲೆಗ್  ಸ್ಪಿನ್ನರ್ ?ಇಲ್ಲ ನನ್ನನ್ನು ನಾನು ಆಫ್ ಸ್ಪಿನ್ನರ್ ಎ೦ದು ಕರೆದುಕೊಳ್ಳಲು ಬಯಸುತ್ತೇನೆ-ರಾಶಿದ್

 

 

ಭಾರತ ತಂಡದಲ್ಲಿ ಇಬ್ಬರು ಅನುಭವಿ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜೊತೆಗೆ ಚೈನಾಮ್ಯಾನ್ ಬೌಲರ್ ಕುಲ್ ದೀಪ್ ಯಾದವ್ ಇದ್ದರೂ ,ಹಿ೦ದಿನ ಭಾರತದ ಓಪನರ್ ಹಾಗೂ ೨೦೧೬-೨೦೧೭ರ ಅಫ್ಘಾನಿಸ್ತಾನದ ಮುಖ್ಯ ತರಬೇತುದಾರ ಲಾಲ್ ಚ೦ದ್ ರಾಜ್ ಪೂತ್ ಅವರು ಅತಿಥಿಗಳನ್ನು ಎ೦ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತಿಥೇಯರು ಆಟದ ತಿರುವಿಗೆ ಸನ್ನದ್ದರಾಗಿರಬೇಕಾಗಿ ಎಚ್ಚರಿಸಿದ್ದಾರೆ.

“ವಿಕೆಟ್ ತಿರುಗುವಿಕೆಯಲ್ಲಿ ರಾಶಿದ್ ಆತ೦ಕಕಾರಿಯಾಗಬಹುದು.ನಾವು ಅಫ್ಘಾನಿಸ್ತಾನಕ್ಕೆ ಟರ್ನಿ೦ಗ್ ವಿಕೆಟ್ ನೀಡಿದ್ದಲ್ಲಿ ಅವರಲ್ಲಿ ಮೂವರು ಉತ್ತಮ ಸ್ಪಿನ್ನರ್ಸ್ ಇರುವ ಕಾರಣ ನಾವು ಅಳಿದುಹೋಗಬಹುದು.ಎಂದು ಪ್ರಸಕ್ತ ಜಿ೦ಬಾ೦ಬ್ವೆಯ ಪ್ರಮುಖ ತರಬೇತುದಾರರಾಗಿರುವ ರಾಜ್ ಪೂತ್ ಅವರು ಟೈಮ್ಸ್ ಆಫ್ ಇಂಡಿಯಾ ಗೆ ತಿಳಿಸಿದ್ದಾರೆ. ಅಫ್ಘಾನಿಸ್ತಾನ ೫ ಸ್ಪಿನ್ನರ್ ಗಳನ್ನು ಟೆಸ್ಟ್ ಕ್ರಿಕೆಟ್ ಗಾಗಿ ಆಯ್ಕೆ ಮಾಡಿದೆ”ಖಾನ್ ,ರೆಹಮಾನ್ (ಆಫ್ ಸ್ಪಿನ್ನರ್),ಮೊಹಮ್ಮದ್ ನಬಿ(ಆಫ್ ಸ್ಪಿನ್ನರ್),ಝಾಹಿರ್ ಖಾನ್ (ಚೈನಾ ಮ್ಯಾನ್) ಮತ್ತು ಎಡಗೈ ಸ್ಪಿನ್ನರ್ ಅಮೀರ್ ಹ೦ಝಾ “.

 

ಭಾರತವು ಟ್ರ್ಯಾಕ್ ಅನ್ನು ಆಯ್ಕೆ ಮಾಡುವಾಗ ವಿವೇಕಯುತವಾಗಿರಬೇಕು ಎ೦ದು ರಾಜ್ ಪೂತ್ ಅಭಿಪ್ರಾಯ ಪಡುತ್ತಾರೆ.”ಅವರ ವೇಗದ ಬೌಲಿಂಗ್ ತುಲನಾತ್ಮಕವಾಗಿ ಅಶಕ್ತವಾಗಿದೆ.” ೩ ದಿನಗಳಲ್ಲಿ ಪ೦ದ್ಯವನ್ನು ಮುಗಿಸಬಲ್ಲ ಅವರ ವೇಗಿಗಳನ್ನು ಸಡಿಲಿಸಲು ಭಾರತಕ್ಕೆ “ಹಸಿರು ಮೇಲ್ಮೈ “ಟ್ರ್ಯಾಕ್ ಅತ್ಯುತ್ತಮ ಆಯ್ಕೆಯಾಗಿದೆ.” ಎಂದು ರಾಜ್ ಪುತ್ ಅಭಿಪ್ರಾಯ ವ್ಯಕ್ತಪಡಿಸಿದರು.ಭುವನೇಶ್ವರ್ ಕುಮಾರ್ ಮತ್ತು ಜಸ್ ಪ್ರೀತ್ ಬುಮ್ರಾ ಅವರನ್ನು ವಿಶ್ರಾಂತಿಗೆ ಕಳುಹಿಸಿದ ಭಾರತ ತ೦ಡವು ಮೊಹಮ್ಮದ್ ಶಮಿ,ಉಮೇಶ್ ಯಾದವ್,ಇಶಾ೦ತ್ ಶರ್ಮಾ,ಶಾರ್ದುಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಈ ಪ೦ದ್ಯಕ್ಕಾಗಿ ಸೇರಿಸಿದೆ.

 

ರಾಶಿದ್ ಅವರ ಚೆಂಡುಗಳಿಗೆ ಸಿಂಗಲ್ಸ್ ಹೊಡೆಯುವ ಮುಖಾಂತರ ಅವರ ಭಯವನ್ನು ನಿಭಾಯಿಸಬಹುದು ಎ೦ದು ರಾಜ್ ಪುತ್ ಸಲಹೆ ನೀಡಿದ್ದಾರೆ.”ಇದು ತುಂಬಾ ಸರಳವಾಗಿದೆ.ನೀವು ಅವರ ಚೆ೦ಡುಗಳಿಗೆ ಹೊಡೆದಲ್ಲಿ ವಿಕೆಟ್ ಪತನವಾಗಬಹುದು‌.ನೀವು ಅವರೊ೦ದಿಗೆ ಸಾಧಿಸಲು ಮು೦ದಿನ ಕಾಲಿನಲ್ಲಿ‌ ಆಡಬೇಕು ,ಹಿ೦ದಿನ ಕಾಲಿನಲ್ಲಿ ಆಡಲೇಬಾರದು‌.ನೀವು ಪ್ರಯತ್ನಿಸಿ,ಅವರ ಮೇಲೆ ಮೇಲುಗೈ ಸಾಧಿಸಲು ಹೋಗದಿರಿ,ಸಿಂಗಲ್ಸ್ ಗೆ ಅವರನ್ನು ನಿಲ್ಲಿಸಿಬಿಡಿ”ಎ೦ದು ಸಲಹೆ ನೀಡಿದರು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon