Link copied!
Sign in / Sign up
1
Shares

ವೀಕ್ಷಿಸಿ : 80 ವರ್ಷದ ವೃದ್ಧನ ಮೈ-ಮುಖ ಹೊಂದಿರುವ ನವಜಾತ "ಪವಾಡ" ಶಿಶು!

ಒಂದು ಗಂಡು ಮಗುವು ಒಂದು ತೀರಾ ವಿರಳವಾದ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇದು ನೋಡಲಿಕ್ಕೆ 80 ವರ್ಷದ ವೃದ್ಧನಂತೆ ಕಾಣುತ್ತದೆ. ಈ ಮಗುವು ಬಾಂಗ್ಲಾದೇಶದ ಮಗುರ ನಗರದಲ್ಲಿ ಜನಿಸಿದ್ದು, ಈ ಮಗು ಅಕ್ಷರಶಃ ಆ ಜಿಲ್ಲಾಸ್ಪತ್ರೆಯ ವೈದ್ಯರನ್ನ ಬೆಚ್ಚಿ ಬೀಳಿಸಿದೆ. ವೈದ್ಯರ ಪ್ರಕಾರ ಈ ಮಗುವು ಒಂದು ತುಂಬಾ ವಿರಳವಾದ ಅಸ್ವಸ್ಥತೆಯಾದ ಪ್ರೋಗೇರಿಯಾ ಇಂದ ಬಳಲುತ್ತಿದೆ.


ಮಗುವಿನ ಮುಖವು ಸುಕ್ಕುಗಳಿಂದ ಕೂಡಿದೆ. ಮೈ ಎಲ್ಲಾ ನೆರಿಗೆಗಳಿಂದ ಕೂಡಿದೆ ಮತ್ತು ಕಣ್ಣುಗಳು ಒಳಗೆ ಹೋಗಿವೆ. ಈ ಮಗುವು ಒಂದು ನವಜಾತ ಶಿಶುವಿನಂತೆ ಕಾಣುವುದೇ ಇಲ್ಲ. ಅದೇನೇ ಇದ್ದರೂ, ಪೋಷಕರು ಇದೊಂದು “ಪವಾಡ ಮಗು” ಜನಿಸಿದೆ ಎಂದು ಸಂಭ್ರಮಿಸುತ್ತಿದ್ದಾರೆ. ಬಿಸ್ವಾಜಿತ್ ಪತ್ರೊ ಎಂಬ ರೈತನಿಗೆ ಜನಿಸಿರುವ ಈ ಮಗು, ತಂದೆಗೆ ಬಹಳಷ್ಟು ಖುಷಿಯನ್ನು ತಂದುಕೊಟ್ಟಿದೆ.

“ನಾವು ದೇವರಿಗೆ ತುಂಬಾ ಕೃತಜ್ಞರಾಗಿದ್ದೇವೆ. ನಮ್ಮ ಮಗು ನೋಡಲು ಹೇಗಿದ್ದರೂ ಪರವಾಗಿಲ್ಲ, ನಾವು ನಮ್ಮ ಮಗುವು ಯಾವ ರೂಪದಲ್ಲಿ ಇದ್ದರೂ ಸ್ವೀಕರಿಸುತ್ತೇವೆ. ನಮ್ಮ ಮನೆಯಲ್ಲಿ ಗಂಡು ಮಗು ಜನಿಸಿರುವುದೇ ನಮಗೆಲ್ಲಾ ಒಂದು ಖುಷಿ” ಎಂದು ಹೇಳುತ್ತಾರೆ ಬಿಸ್ವಾಜಿತ್.


ಮಗುವಿನ ಬಗ್ಗೆ ತಾಯಿ ಪಾರುಲ್ ಪತ್ರೊಗೆ ಕೇಳಿದಾಗ, ಆಕೆ “ಈಗಾಗಲೇ ನಮಗೆ ಒಂದು ಹೆಣ್ಣು ಮಗುವಿದ್ದು, ಈಗ ಗಂಡು ಮಗು ಆಗುತ್ತಿರುವುದಕ್ಕೆ ತುಂಬಾ ಖುಷಿಯಿದೆ. ಮಗುವನ್ನ ಆಶ್ಚರ್ಯಚಕಿತರಾಗಿ ನೋಡಲು ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರು ಆಸ್ಪತ್ರೆಗೆ ಬರುತ್ತಿದ್ದಾರೆ. ಎಷ್ಟೊಂದು ಅಕ್ಕ-ಪಕ್ಕದ ಹಳ್ಳಿಯ ಜನರು ಕೂಡ ಈ ಮಗುವನ್ನ ನೋಡಲೆಂದು ನಮ್ಮೂರಿಗೆ ಬರುತ್ತಿದ್ದಾರೆ. ನಮಗೆಲ್ಲಾ ಇದೊಂದು ಖುಷಿಯ ವಿಷಯ” ಎನ್ನುತ್ತಾಳೆ.

ವೈದ್ಯರು ಈಗ ಮಗುವಿಗೆ ಯಾವುದೇ ರೀತಿಯ ತೊಂದರೆ ಇಲ್ಲವೆಂದು ಮತ್ತು ಸಹಜವಾಗಿಯೇ ಬದುಕು ನಡೆಸಬಹುದು ಎಂದು ಹೇಳಿದ್ದಾರೆ. ಆದರೆ ಮಗುವಿಗೆ ಮುಂದೆ ಏನಾದರು ಚಿಕಿತ್ಸೆ ಬೇಕಾಗಬಹುದೇ ಎಂಬುದರ ಬಗ್ಗೆ ಯಾರಲ್ಲೂ ಸೂಕ್ತ ಉತ್ತರ ಲಭ್ಯವಾಗಿಲ್ಲ. ನೀವು ಈ ಪವಾಡ ಮಗುವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon