Link copied!
Sign in / Sign up
13
Shares

ಹೆಣ್ಣಿನ ದೇಹದೊಳಗೆ ವೀರ್ಯವು ಎಷ್ಟು ಸಮಯ ಬದುಕಿರುತ್ತದೆ?ಪೂರ್ಣ ಉಪಯೋಗ ಪಡೆಯುವುದು ಹೇಗೆ?

ನೀವು ಮಗುವನ್ನು ಪಡೆಯಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೀರಾ ಎಂದಾದಲ್ಲಿ ನೀವು ಇಷ್ಟೊತ್ತಿಗಾಗಲೇ ಎಲ್ಲದರ ಲೆಕ್ಕವನ್ನ ಸರಿಯಾಗಿ ಇಟ್ಟಿರುತ್ತೀರಾ. ಅದು ನಿಮ್ಮ ಋತುಚಕ್ರ, ಅಂಡೋತ್ಪತ್ತಿ ದಿನ ಮತ್ತು ನಿಮ್ಮ ದೇಹಕ್ಕೆ ಸಂಬಂಧಿಸಿದ ಇನ್ನೂ ಹಲವು ವಿಷಯಗಳ ಬಗ್ಗೆ ಇರಬಹುದು. ಆದರೆ ನಿಮ್ಮ ಪತಿಯ ದೇಹಕ್ಕೆ ಸಂಬಂಧಿಸಿದ್ದು? ನಿಮ್ಮ ಅಂಡಾಣು ರೀತಿಯಲ್ಲೇ, ಅವರ ವೀರ್ಯವು ಕೂಡ ಫಲೀಕರಣ ಹೊಂದಲು ಸರಿಯಾದ ಸಮಯ ಎಂದು ಒಂದಿದೆಯೇ? ಎಷ್ಟು ಸಮಯದವರೆಗೆ ವೀರ್ಯವು ಬದುಕಿರುತ್ತದೆ? ಒಂದು ಒಳ್ಳೆಯ ಅವಕಾಶದ ಕಾಲವನ್ನ ನಾವು ತಪ್ಪಿಸುವಂತಿಲ್ಲ ಎಂದು ತಜ್ಞರು ಹೇಳುತ್ತಾರೆ.

ಈಗಾಗಲೇ ನಿಮಗೆ ಅಂಡೋತ್ಪತ್ತಿಯ ದಿನದ ಬಗ್ಗೆ ತಿಳಿದಿರಬೇಕು. ಇಲ್ಲವೆಂದರೆ ಕೇಳಿಸಿಕೊಳ್ಳಿ, ಅಂಡೋತ್ಪತ್ತಿಯ ದಿನ (ಸಹಜವಾಗಿ ಪಿರಿಯಡ್ಸ್ ಆಗುವ 10-14 ದಿನಗಳ ಮುಂಚೆ) ದಂದು ನಿಮ್ಮ ದೇಹವು ಅಂಡಾಣು ಉತ್ಪತ್ತಿ ಮಾಡುವುದರಿಂದ, ನಿಮ್ಮ ದೇಹವು ತಿಂಗಳಲ್ಲಿ ಅತ್ಯಂತ ಫಲವತ್ತಾಗಿರುವ ಸಮಯ ಎಂದರೆ ಇದೆ.

ನೀವು ಅಂಡೋತ್ಪತ್ತಿಯ ದಿನದ 2-3 ದಿನಗಳ ಮುಂಚೆ ಸಂಭೋಗ ನಡೆಸಿದ್ದು, ವೀರ್ಯವು ನಿಮ್ಮ ದೇಹದ ಒಳಗೆ ವಿಸರ್ಜನೆ ಆಗಿದ್ದರೆ, ಅಂಡೋತ್ಪತ್ತಿಯ ದಿನದಂದು ಆ ವೀರ್ಯವು ಅಂಡಾಣು ಜೊತೆ ಫಲೀಕರಣ ಹೊಂದಬಹುದು. ಡಾ।। ಅಲಿಸನ್ ಝಿಮೊನ್ ಹೇಳುವ ಪ್ರಕಾರ, ಹೆಣ್ಣಿನ ದೇಹದೊಳಗೆ ವೀರ್ಯವು ವಿಸರ್ಜನೆ ಹೊಂದಿದ ಮೇಲೆ, ವೀರ್ಯಾಣುಗಳು ಸರಾಸರಿ 2-3 ದಿನಗಳವರೆಗೂ ಚಲನೆ ಹೊಂದಿರುತ್ತವೆ ಹಾಗು ಕೆಲವೊಮ್ಮೆ 5 ದಿನಗಳವರೆಗೂ ಚಲನೆಯಲ್ಲಿ ಇರುತ್ತವೆ.

ಅಷ್ಟೇ ಅಲ್ಲದೆ, ಝಿಮೊನ್ ಅವರು ಹೆಣ್ಣಿನ ಅಂಡಾಣು ಕೇವಲ 12-24 ಗಂಟೆಗಳ ಕಾಲ ಮಾತ್ರ ಚಲನೆಯಲ್ಲಿ ಇರುತ್ತವೆ ಎನ್ನುತ್ತಾರೆ. ಹೀಗಾಗಿ ವೀರ್ಯಾಣುವಿನ ಜೀವಾವಧಿ ಅಂಡಾಣುವಿನ ಜೀವಾವಧಿಗಿಂತ ಹೆಚ್ಚಿರುವುದರಿಂದ, ನೀವು ಅಂಡೋತ್ಪತ್ತಿಯ ಒಂದೆರೆಡು ದಿನಗಳ ಮುನ್ನ ಸಂಭೋಗದಲ್ಲಿ ತೊಡಗಿಕೊಂಡರೆ, ಹೊಸದಾಗಿ ಹುಟ್ಟಿಕೊಳ್ಳುವ ಅಂಡಾಣುಗಳ ಜೊತೆ ಫಲೀಕರಣ ಹೊಂದಲು ವೀರ್ಯಾಣುಗಳು ಸಿದ್ಧವಿರುತ್ತವೆ.

ಮೊದಲೇ ಹೇಳಿದಂತೆ ಅಂಡಾಣು ಕೇವಲ 12-24 ಗಂಟೆಗಳವರೆಗೆ ಚಲನೆಯಲ್ಲಿ ಇರುವುದರಿಂದ, ನೀವು ಈ ಸಮಯದ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕು. ಹೀಗಾಗಿ ನೀವು ನಿಮ್ಮ ಅಂಡೋತ್ಪತ್ತಿ ದಿನದ 4 ದಿನಗಳ ಮುಂಚಿನಿಂದಲೇ ಸಂಭೋಗದಲ್ಲಿ ತೊಡಗಿಸಿಕೊಳ್ಳುತ್ತಾ ಬಂದರೆ ಒಳ್ಳೆಯದು. ಹೀಗಾಗಿ ನಿಮ್ಮ ಅಂಡೋತ್ಪತ್ತಿಯ ದಿನ ನೀವು ಅಂದುಕೊಂಡಿದ್ದಕ್ಕಿಂತ ಒಂದೆರಡು ದಿನ ಹಿಂದೆ ಮುಂದೆ ಆದರೂ, ವೀರ್ಯದ ಜೀವಾವಧಿಯಾದ 72-96 ಗಂಟೆಗಳ ಸುವರ್ಣ ಅವಕಾಶದ ಕಾಲಾವಧಿ ಹಾಗೆಯೇ ಇರುತ್ತದೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ, ವೀರ್ಯವು ನಿಮ್ಮ ಹೊಸ ಅಂಡಾಣುವಿಗಾಗಿ ಕಾದು ಕುಳಿತಿರುತ್ತದೆ, ಫಲೀಕರಣ ಹೊಂದಿದರೆ ಇನ್ನೂ ಒಂಬತ್ತು ತಿಂಗಳಲ್ಲಿ ಹೊಸದೊಂದು ಪುಟ್ಟ ಜೀವ ನಿಮ್ಮ ಮಡಿಲಲ್ಲಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon