Link copied!
Sign in / Sign up
12
Shares

ಪುರುಷರ ವೀರ್ಯಾಣು ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚಿಸಲು 7 ಸಲಹೆಗಳು

ಮಗುವನ್ನು ಒಂಬತ್ತು ತಿಂಗಳುಗಳ ಕಾಲ ಹೊತ್ತು, ಹೇರುವವರು ಹೆಂಗಸರೇ ಇರಬಹುದು, ಹೀಗಾಗಿ ನೀವು ಅವುಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು. ಆದರೆ, ತಂದೆ ಆಗಬೇಕೆಂದಿರುವವರದ್ದು ಕೂಡ ಮಗುವನ್ನು ಪಡೆಯಲು ಅಷ್ಟೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂದರೆ ಅವರ ವೀರ್ಯದ ಗುಣಮಟ್ಟವನ್ನು ಅವರು ಕಾಪಾಡಿಕೊಂಡರೆ ಮಾತ್ರ ಸಂತಾನ ಭಾಗ್ಯ ಪ್ರಾಪ್ತಿ ಆಗುವುದು. ಹಾಗಿದ್ದರೆ ಅವರ ವೀರ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಏನೆಲ್ಲಾ ಬದಲಾವಣೆಗಳು ಮಾಡಿಕೊಳ್ಳಬೇಕು? ಅದಕ್ಕೆ ಇಲ್ಲಿದೆ ನೋಡಿ ಉತ್ತರ :

೧. ತೂಕವನ್ನು ನಿಯಂತ್ರಣದಲ್ಲಿ ಇಡಬೇಕು

ಅತಿ ಕಡಿಮೆ ಅಥವಾ ಅತಿ ಹೆಚ್ಚು ತೂಕ ಹೊಂದುವುದು ವೀರ್ಯದ ಗುಣಮಟ್ಟದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ. ಅಷ್ಟೇ ಅಲ್ಲದೆ ಇದು ಗಂಡಸಿನ ಲೈಂಗಿಕಾಸಕ್ತಿಯನ್ನು ಮತ್ತು ಸಾಮರ್ಥ್ಯವನ್ನು ಕ್ಷೀಣಿಸಿ ದಂಪತಿಯ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ಸರಿಯಾದ ಆಹಾರಪದ್ಧತಿ ಪಾಲಿಸಬೇಕು ಮತ್ತು ದೈಹಿಕ ವ್ಯಾಯಾಮಗಳನ್ನು ಮಾಡಬೇಕು.


೨. ಹೆಚ್ಚು ಫೋಲೇಟ್ ಅನ್ನು ಪಡೆಯಬೇಕು

ಫೋಲಿಕ್ ಆಮ್ಲವು ಕೇವಲ ತಾಯಿ ಆಗಬೇಕೆಂದು ಇರುವವರಿಗೆ ಮಾತ್ರ ಮುಖ್ಯವಲ್ಲ. ಯಾವ ಗಂಡಸರ ಆಹಾರದಲ್ಲಿ ಫೋಲಿಕ್ ಆಮ್ಲವು ಕಡಿಮೆ ಪ್ರಮಾಣದಲ್ಲಿ ಇತ್ತೋ, ಅವರ ವೀರ್ಯದಲ್ಲೇ ಹೆಚ್ಚಾಗಿ ಕ್ರೋಮೋಸೋಮ್ ಅಸಹಜತೆ ಕಂಡು ಬಂದಿದ್ದು ಎಂದು ತಿಳಿಸುತ್ತದೆ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಅಲ್ಲಿ ನಡೆದ ಅಧ್ಯಯನ. ಹೀಗಾಗಿ ಫೋಲೇಟ್ ಹೆಚ್ಚಿರುವಂತಹ ಆಹಾರಗಳಾದ ಬೀನ್ಸ್, ಎಲೆ ತರಕಾರಿಗಳು, ಧಾನ್ಯಗಳು, ಸಿಟ್ರಸ್ ಹಣ್ಣುಗಳನ್ನ ಸೇವಿಸಬೇಕು.


೩. ಧೂಮಪಾನ ನಿಲ್ಲಿಸಬೇಕು

ಧೂಮಪಾನ ಮಾಡುವುದು ವೀರ್ಯದ ಕೊರತೆಯನ್ನು ಮತ್ತು ಮಂದಗತಿಯಲ್ಲಿ ಚಲಿಸುವ ವೀರ್ಯಕ್ಕೆ ಕಾರಣವಾಗುತ್ತದೆ. ನೀವು ಮಗುವಿಗೆ ಪ್ರಯತ್ನ ಮಾಡುವ ಕನಿಷ್ಠ ಮೂರು ತಿಂಗಳ ಮುಂಚೆ ಆದರೂ ನಿಮ್ಮ ಪತಿಯು ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.


೪. ಮದ್ಯಪಾನ ನಿಲ್ಲಿಸಬೇಕು

ಗಂಡಸರು ಇದನ್ನು ಸಂಪೂರ್ಣವಾಗಿ ತ್ಯಜಿಸಲು ಆಗುವುದೇ ಇಲ್ಲ ಎಂದರೆ, ಕನಿಷ್ಠಪಕ್ಷ ಸೇವನೆಯ ಪ್ರಮಾಣವಾದರೂ ಕಡಿಮೆ ಮಾಡಲೇ ಬೇಕು. ಮದ್ಯಪಾನವು ಕೂಡ ವೀರ್ಯದ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ವೀರ್ಯದಲ್ಲಿ ಅಸಹಜತೆಗಳನ್ನು ಉಂಟುಮಾಡುತ್ತದೆ ಎಂಬುದು ತಿಳಿದು ಬಂದಿದೆ.


೫. ಕಾಫಿ ಸೇವನೆ ಕಡಿಮೆ ಮಾಡಬೇಕು

ತುಂಬಾ ಹೆಚ್ಚು ಸೋಡಾ ಅಥವಾ ಕಾಫಿ ಸೇವನೆ ಮಾಡುವ ಗಂಡಸರಲ್ಲಿ ವೀರ್ಯದ ಸಾಂದ್ರತೆ ಮತ್ತು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಡೆನ್ಮಾರ್ಕ್ ಅಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ದಿನಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಕಾಫಿ ಅನ್ನು ಸೇವಿಸಬಾರದು.


೬. ಒತ್ತಡ ಕಡಿಮೆ ಮಾಡಬೇಕು

ದೈಹಿಕ ಹಾಗು ಮಾನಸಿಕ ಒತ್ತಡವು ಅಸಹಜ ಮತ್ತು ಕಡಿಮೆ ಸಾಂದ್ರತೆಯ ವೀರ್ಯಕ್ಕೆ ಕಾರಣವಾಗುತ್ತದೆ. ಚೆನ್ನಾಗಿ ತಿನ್ನುವುದು, ಮಲಗುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಕುಟುಂಬ, ಸ್ನೇಹಿತರ ಜೊತೆ ತಿಳಿಸಮಯ ಕಳೆಯುವುದರ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.


೭. ತಣ್ಣಗೆ ಇರಿಸಿಕೊಳ್ಳಿ

ವೀರ್ಯದ ಉತ್ಪತ್ತಿಯು ಒಂದು ನಿರ್ಧಿಷ್ಟ ತಾಪಮಾನದಲ್ಲಿ ಆಗಬೇಕಿದ್ದು, ನಮ್ಮ ದೇಹದ ಆಂತರಿಕ ತಾಪಮಾನವು ಕೂಡ ಅದಕ್ಕೆ ತುಂಬಾ ಹೆಚ್ಚು ಆಗುತ್ತದೆ. ಹೀಗಾಗಿಯೇ ವೃಷಣಗಳು (ಟೆಸ್ಟಿಕಲ್ಸ್) ಕಡಿಮೆ ತಾಪಮಾನದಲ್ಲಿ ಇರಲೆಂದು ದೇಹದ ಹೊರಗಡೆ ಇರುವುದು. ಹೀಗಾಗಿ ವೃಷಣಗಳ ತಾಪಮಾನ ಹೆಚ್ಚಿಸುವಂತ ಯಾವುದೇ ಕೆಲಸಗಳನ್ನು ನಿಮ್ಮ ಪತಿ ಮಾಡಬಾರದು. ಉಧಾರಣೆಗೆ, ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು, ಸ್ಟೀಮ್/ಸೌನಾ ಅಲ್ಲಿ ಹೆಚ್ಚು ಹೊತ್ತು ಕಳೆಯುವುದು ಮಾಡಬಾರದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon