Link copied!
Sign in / Sign up
1
Shares

ವೀಕ್ಷಿಸಿ : ಭೂಮಿಯಿಂದ ದೂರದಲ್ಲಿ ವಿಮಾನದಲ್ಲಿ ಈಕೆಗೆ ಹೆರಿಗೆ ನೋವು ಕಾಣಿಸಿತು! ಮುಂದೇನಾಯಿತು?

ಒಂದು ಮಗುವಿಗೆ  ಜನ್ಮ ನೀಡುವುದು ಎಷ್ಟೊಂದು ಕ್ಲಿಷ್ಟಕರವಾದ ವಿಷಯ ಎಂಬುದು ಈಗಾಗಲೇ ತಾಯಿ ಆದವರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಈಗಿನ ಕಾಲದ ವೈದ್ಯಕೀಯ ಅನ್ವೇಷಣೆಗಳು, ತಂತ್ರಜ್ಞಾನಗಳೆಲ್ಲದರ ಉಪಯೋಗ ಪಡೆದುಕೊಂಡರು, ಹೆರಿಗೆಯನ್ನುವುದು ಹೆಣ್ಣಿಗೆ ಸುಲಭವಾಗಿಲ್ಲ. ಅಂತದರಲ್ಲಿ, ವಿಮಾನ ಏರಿ ಕುಳಿತು, ಭೂಮಿಯಿಂದ ಎಷ್ಟೋ ಅಡಿ ದೂರದಲ್ಲಿ ಇದ್ದಾಗ ಹೆರಿಗೆ ನೋವು ಕಾಣಿಸಿಕೊಂಡರೆ?!

ಪೆಂಟಾನ್ ಎಂಬ ಹೆಂಗಸು 36 ವಾರಗಳ ಗರ್ಭಿಣಿ. ಈಕೆಗೆ ವಿಮಾನವನ್ನು ಏರುವಾಗ ತನ್ನ ಹೆರಿಗೆ ದಿನ ಅಂದೇ ಎಂಬುದರ ಅರಿವಿರಲಿಲ್ಲ. ಆದರೆ ಅಲ್ಲಿ ಆದದ್ದೇ ಅದರ ತದ್ವಿರುದ್ದವಾದದ್ದು.

ಅಲ್ಲಿ ಏನಾಯಿತು ಎಂಬುದು ಆಕೆಯ ಮಾತುಗಳಲ್ಲೇ ಕೇಳಿ - “ನನಗೆ ಇಷ್ಟು ಬೇಗ ಹೆರಿಗೆ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಹೀಗಾಗಿ ನನಗೆ ಮೊದಲು ನೋವು ಶುರು ಆದಾಗ ಸುಮ್ಮನಿದ್ದೆ. ಆದರೆ ಕೆಲವು ನಿಮಿಷಗಳ ನಂತರ ನನಗೆ ವೈದ್ಯಕೀಯ ನೆರವು ಬೇಕು ಎಂಬುದು ಅರಿವಾಯಿತು. ನಮ್ಮ ವಿಮಾನವು ಕೂಡ ಟೇಕ್ ಆಫ್ ಆಗಿ ಸ್ವಲ್ಪ ಹೊತ್ತೇ ಆಗಿತ್ತು. ವಿಮಾನದಲ್ಲಿನ ಗಗನಸಖಿಯರು ವಿಮಾನ ನಿಲ್ದಾಣದಲ್ಲಿದ್ದ ವೈದ್ಯರನ್ನು ಫೋನಿನ ಮೂಲಕ ಸಂಪರ್ಕಿಸಿ, ಏನು ಮಾಡಬೇಕೆಂದು ಕೇಳಿದರು. ಆಗ ಆ ವೈದ್ಯರು ಅವರಿಗೆ ವಿಮಾನದಲ್ಲಿಯೇ ಯಾರಾದರೂ ವೈದ್ಯಕೀಯ ಸಿಬ್ಬಂದಿಗಳು ಇದ್ದಾರಾ ಎಂದು ವಿಚಾರಿಸಿ ಎಂಬ ಸಲಹೆ ನೀಡಿದರು. ಅವರ ಸಲಹೆಯಂತೆ ಗಗನಸಖಿಯರು ವಿಚಾರಿಸಿದಾಗ, ವಿಮಾನದಲ್ಲಿ ಓರ್ವ ಮಕ್ಕಳತಜ್ಞ ಮತ್ತು ಓರ್ವ ನರ್ಸ್ ಇರುವುದು ತಿಳಿಯಿತು. ಆಗಲೇ ನನಗೆ ತಿಳಿದು ಹೋಯಿತು, ನನ್ನ ಹೆರಿಗೆ ಇಲ್ಲೇ, ಈ ಕ್ಷಣದಲ್ಲೇ ಆಗುತ್ತದೆ ಎಂದು. ಆಗ ನಾನು ಆತಂಕಕ್ಕೆ ಒಳಗಾದೆ. ನನ್ನ ಹೃದಯ ನನ್ನ ಬಾಯಲ್ಲಿತ್ತು!”.

ವಿಮಾನವು ಮುಂದಿನ ಹತ್ತಿರದ ನಿಲ್ದಾಣದಲ್ಲಿ ಇಳಿಯುವಷ್ಟರಲ್ಲಿ, ವಿಮಾನದಲ್ಲಿನ ವೈದ್ಯರು ಮತ್ತು ನರ್ಸ್ ಪೆಂಟಾನ್ ಹೆರಿಗೆ ಮಾಡಿಯೇ ಬಿಟ್ಟರು ! ಆಗ ಹುಟ್ಟಿದ ಮುದ್ದು ಗಂಡು ಮಗುವೇ ಕ್ರಿಸ್ಟೋಫ್. ಹುಟ್ಟಿದಾಗ ಕ್ರಿಸ್ಟೋಫ್ ತೂಕ 3.17ಕೆಜಿ ಆಗಿತ್ತು. ಮಗು ಮತ್ತು ತಾಯಿ, ಇಬ್ಬರೂ ಸುರಕ್ಷಿತವಾಗಿದ್ದರು. ವಿಮಾನದಲ್ಲಿ ಇದ್ದ ಎಲ್ಲರ ಮೊಗದಲ್ಲೂ ನಗು, ಖುಷಿ ಮನೆ ಮಾಡಿತ್ತು. ಅದರ ವಿಡಿಯೋ ಇಲ್ಲಿದೆ ನೋಡಿ :

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon