Link copied!
Sign in / Sign up
21
Shares

ವೀಕ್ಷಿಸಿ : ಈ ವಿಡಿಯೋ ಕೊನೆಯಲ್ಲಿ ನಿಮಗೆ ಎಲ್ಲೋ ದೇವರು ಇದ್ದಾನೆ ಎಂದೆನಿಸುತ್ತದೆ !

ನಾವು ಕೆಲವೊಂದು ದೃಶ್ಯಗಳನ್ನ ನೋಡಿದಾಗ, ನಮಗೆ ಕೆಲವು ಅನುಭವಗಳಾದಾಗ, ನಿಜವಾಗಿಯೂ ಎಲ್ಲೋ ಒಂದು ಕಡೆ ದೇವರು ಇದ್ದಾನೆ ಎಂದೆನಿಸಿ ಬಿಡುತ್ತದೆ. ಅಂಥವುಗಳಲ್ಲಿ ನೀವು ಈಗ ನೋಡಲಿರುವ ದೃಶ್ಯವೂ ಒಂದು. ನಿಮಗೆ ಈಗಾಗಲೇ ಮಗು ಆಗಿರಬಹುದು ಮತ್ತು ಆ ಮಗು ಶಾಲೆಗೂ ಹೋಗುತ್ತಿರಬಹುದು. ಬೆಳಗ್ಗೆ ಎದ್ದು ನೀವು ಅಡುಗೆ ಮಾಡಿ, ನಿಮ್ಮ ಮಗುವಿಗೆ ತಿನ್ನಿಸಿ, ಆ ಮಗುವನ್ನ ಸಿದ್ಧಮಾಡಿ ಶಾಲೆಗೆ ಬಿಟ್ಟು ಬರುತ್ತೀರ. ಆದರೆ ಬೆಳಗ್ಗೆ ಶಾಲೆಗೆ ತೆರಳುವ ನಿಮ್ಮ ಮಗುವು ಮನೆಗೆ ಸುರಕ್ಷಿತವಾಗಿ ವಾಪಾಸ್ ಆಗುತ್ತದೆ ಎಂಬ ನಂಬಿಕೆ ನಿಮ್ಮಲ್ಲಿ ಇರುತ್ತದೆ. ಆದರೆ ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಇರುವ ಅಮ್ಮಂದಿರಿಗೆ ಈ ಭಾವನೆ ಇರುವುದಿಲ್ಲ. ಯುದ್ಧ, ಭಯೋದ್ಪಾದನೆ ಇಂದ ರಕ್ತಸಿಕ್ತವಾಗಿರುವ ದೇಶಗಳಲ್ಲಿ ಜನರು ಪ್ರತಿಯೊಂದು ಕ್ಷಣವನ್ನೂ ಭಯದಲ್ಲಿ ಕಳೆಯಬೇಕಾಗುತ್ತದೆ.


ಆದರೆ ಶಿಕ್ಷಣವೊಂದೇ ಮುಂದೊಂದು ದಿನ ತಮ್ಮ ನಾಡಿನಲ್ಲಿ ಶಾಂತಿ, ವಿಕಾಸ ತರಲು ಸಾಧ್ಯ ಎಂದು ಅರಿತಿರುವ ಪ್ರಜ್ಞಾವಂತ ಪ್ರಜೆಗಳು, ತಮ್ಮ ಮಕ್ಕಳನ್ನ ಇಂತಹ ದುಸ್ಥಿತಿಗಳಲ್ಲಿಯೂ ಶಾಲೆಗೆ ಸೇರಿಸುತ್ತಾರೆ. ಆದರೆ ಅವರು ಶಾಲೆಗೆ ಹೋದ ಸ್ಥಿತಿಯಲ್ಲೇ ವಾಪಾಸ್ ಆಗುವುದು ಅನುಮಾನವೇ. ಆ ಒಂದು ದುರಾದ್ರಷ್ಟಕರ ದಿನದಂದು ಆಗಿದ್ದೆ ಅದು. ಸಿರಿಯಾ ದೇಶವು ಈಗ ಅಕ್ಷರಸಹ ಯುದ್ಧದಲ್ಲಿ ಮುಳುಗಿದ್ದು, ಆ ದಿನವು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆ ದಿನ, ಎದುರಾಳಿ ಪಡೆಯವರು ನಡೆಸಿದ ಕ್ಷಿಪಣಿ ದಾಳಿಯಲ್ಲಿ, ಒಂದು ಕ್ಷಿಪಣಿಯು ಪುಟ್ಟ ಪುಟ್ಟ ಮಕ್ಕಳಿರುವ ಶಾಲೆಯ ಪಕ್ಕದಲ್ಲೇ ಬಂದು ಅಪ್ಪಳಿಸಿತು. ಆ ಕ್ಷಿಪಣಿ ಅಪ್ಪಳಿಸಿದ ರಭಸಕ್ಕೆ ಶಾಲೆಯ ಗೋಡೆಗಳು ಅಕ್ಷರಸಹ ತುಂಡಾಗಿ ಹೋದವು. ಎಲ್ಲವೂ ನೆಲಸಮವಾಯಿತು. ಆದರೆ ಅದರೊಳಗಿದ್ದ ಮಕ್ಕಳು? ಕೆಲವರನ್ನ ರಕ್ಷಿಸಲಾಯಿತು. ಆದರೆ ಅವಶೇಷಗಳಡಿ ಸಿಲುಕಿರುವ ಮಕ್ಕಳು?


ಈಗ ನೀವು ಈ ವಿಡಿಯೋದಲ್ಲಿ ನೋಡುವುದು ನಿಮಗೆ ನಿಜವಾಗಿಯೂ ಮೈನವಿರೇಳಿಸುತ್ತದೆ. ಕೆಲವು ಅಡಿಗಳಷ್ಟು ಕಲ್ಲು, ಮಣ್ಣಿನ ರಾಶಿಯನ್ನ ಸ್ಥಳೀಯರು ಅಗೆದಾಗ ಅಲ್ಲಿ ಸಿಕ್ಕಿದ್ದು ಕೇವಲ ಮಗುವಲ್ಲ. ದೇವರ ವರವೇ. ಏಕೆಂದರೆ ಅಂತಹ ಸ್ಥಿತಿಯಲ್ಲಿ, ಮಗು ಇರಲಿ, ವಯಸ್ಕರರಿಗೂ ತಮ್ಮ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ವಿಡಿಯೋ ನೋಡಿದರೆ, ಕೊನೆಯಲ್ಲಿ ನೀವೇ ನಿಟ್ಟುಸಿರು ಬಿಡುತ್ತೀರ ! ನೋಡಿ ಈ ವಿಡಿಯೋ !

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon