Link copied!
Sign in / Sign up
3
Shares

ಜಗತ್ತಿನ ಟಾಪ್ 5 ವಿಚಿತ್ರ ಸೆಕ್ಸ್ ಅಸಹಜತೆಗಳು !

ಮಾನವನ ದೇಹವು ಎಂದಿಗೂ ಒಂದು ವಿಸ್ಮಯವೇ ಸರಿ. ಒಂದು ಮಾನವನ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾವಿರಾರು ಅಂಶಗಳು ಅವನ ದೇಹದೊಳಗೆ ಮತ್ತು ದೇಹದ ಹೊರಗಡೆ ಜೊತೆಗೂಡಿ, ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಇಂತಹ ಹಲವಾರು ಅಂಶಗಳಲ್ಲಿ ಯಾವುದಾದರೂ ಒಂದು ಅಥವಾ ಕೆಲವು ಅಂಶಗಳಲ್ಲಿ ಅಸಹಜತೆ ಕಾಣಿಸಿಕೊಳ್ಳುವುದು ಸಹಜ. ಇಂತಹ ಅಸಹಜತೆಗಳು ಜೊತೆಗೂಡಿ ಮಾನವನಲ್ಲಿ ದೈಹಿಕ ಅಥವಾ ಮಾನಸಿಕ ಅಸಹಜತೆಗಳನ್ನ ಹುಟ್ಟು ಹಾಕಬಹುದು. ಲೈಂಗಿಕ ಅಸಹಜತೆಗಳು ಕೂಡ ಹೀಗೆ ಉಂಟಾಗುವುದು. ಇಂತಹ ಹಲವು ಲೈಂಗಿಕ ಅಸಹಜತೆಗಳಲ್ಲಿ ಅತ್ಯಂತ ವಿಚಿತ್ರವಾದ ಲೈಂಗಿಕ ಅಸಹಜತೆಗಳು ಯಾವುದೆಂದು ತಿಳಿಸುತ್ತೇವೆ ಓದಿ.


೧. ದೀರ್ಘಕಾಲದ ನಿಮಿರುವಿಕೆ (PGAD- ಪೆರ್ಸಿಸ್ಟೆಂಟ್ ಜೆನಿಟಲ್ ಅರೌಸಲ್ ಡಿಸಾರ್ಡರ್)

ಈ ತೊಂದರೆ ಹೊಂದಿರುವ ಜನರು ಸದಾಕಾಲ ಲೈಂಗಿಕ ಪ್ರಚೋದನೆ ಹೊಂದಿರುವ ಸ್ಥಿತಿಯಲ್ಲೇ ಇರುತ್ತಾರೆ. ಇದರ ಲಕ್ಷಣಗಳು ಬೇರೆಯಾಗಬಹುದು. ಹೆಂಗಸರು ತಾವು ಸೆಕ್ಸ್ ಬಗ್ಗೆ ಯೋಚಿಸದೆ ಇದ್ದರು ತಮ್ಮ ಸ್ತನಗಳು ಹಿಗ್ಗುವುದನ್ನು, ಯೋನಿ ತೊಳೆಸಿದಂತೆ ಆಗುವುದನ್ನ ಅನುಭವಿಸಬಹುದು. ಇಷ್ಟೇ ಅಲ್ಲದೆ ಇವರಿಗೆ ದಿಢೀರನೆ ಇದ್ದಕ್ಕಿದ್ದ ಹಾಗೆ ಲೈಂಗಿಕ ಪರಾಕಾಷ್ಠೆ ಉಂಟಾಗಬಹುದು, ಇದು ದಿನದಲ್ಲಿ ಹಲವು ಬಾರಿ ಆಗಬಹುದು. ಕೆಲವೊಮ್ಮೆ ಇಂತಹ ಪರಾಕಾಷ್ಠೆಗಳು ಗಂಟೆಗಟ್ಟಲೆ, ದಿನಗಟ್ಟಲೆ, ತಿಂಗಳುಗಳ ಕಾಲವೂ ಉಳಿಯಬಹುದು.


೨. ಸೆಕ್ಸೋಮ್ನಿಯಾ

ಸೆಕ್ಸೋಮ್ನಿಯಾ ಹೊಂದಿರುವ ಜನರು ತಮ್ಮ ನಿದ್ದೆಯಲ್ಲಿಯೇ ಸೆಕ್ಸ್ ಅಲ್ಲಿ ತೊಡಗಿಕೊಳ್ಳುತ್ತಾರೆ. ಸಾಮಾನ್ಯವಾಗಿ, ಅವರು ಹೀಗೆ ಮಾಡುವುದು ಅವರಿಗೆ ಯಾರಾದರೂ ಹೇಳುವವರೆಗೂ ಗೊತ್ತಾಗುವುದಿಲ್ಲ. ಇವರು ನಿದ್ದೆಯಲ್ಲಿ ಹಸ್ತಮೈಥುನದಲ್ಲೂ ತೊಡಗಿಕೊಳ್ಳಬಹುದು. ಈ ಕಾಯಿಲೆಯಿಂದ ಬಳಲುತ್ತಿರುವ ಎಷ್ಟೊಂದು ಜನರ ಪ್ರಕರಣಗಳಲ್ಲಿ, ಇವರು ನಿದ್ದೆಯಲ್ಲೇ ಎದ್ದು ನಡೆದುಕೊಂಡು ಹೋಗಿ ಗೊತ್ತಿಲ್ಲದವರ ಜೊತೆ ಸೆಕ್ಸ್ ಅಲ್ಲಿ ತೊಡಗಲು ಪ್ರಯತ್ನಿಸಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಇವರು ನಿದ್ದೆಯಲ್ಲೇ ಲೈಂಗಿಕ ಶೋಷಣೆ ಮತ್ತು ಅತ್ಯಾಚಾರ ಮಾಡಿರುವ ಉದಾಹರಣೆಗಳು ಕೂಡ ಇವೆ.


೩. ಪ್ಯಾರಾಫಿಲಿಯಾ

ವಿಚಿತ್ರವಾದ ಲೈಂಗಿಕ ಅಸಹಜತೆ ಯಾವುದೆಂದು ಕೇಳಿದರೆ, ಬಹಳಷ್ಟು ಜನರ ತಲೆಯಲ್ಲಿ ಮೊದಲು ಬರುವುದೇ ಈ ಪ್ಯಾರಾಫಿಲಿಯಾ. ಇದು ಒಂದು ಮಾನಸಿಕ ಅಸಹಜತೆ. ಪ್ಯಾರಾಫಿಲಿಯಾ ಎಂದರೆ ಜೀವವಿಲ್ಲದ ವಸ್ತುಗಳಿಂದ, ಅಥವಾ ನೋವು ಮತ್ತು ಅವಮಾನ ಮಾಡುವುದರಿಂದ, ಬಲಾತ್ಕಾರದ ಸೆಕ್ಸ್ ಇಂದ ಲೈಂಗಿಕ ಪ್ರಚೋದನೆ ಹೊಂದುವುದು, ಅದರ ಬಗ್ಗೆ ವಿಚಿತ್ರ ಬಯಕೆಗಳನ್ನ ಮೂಡಿಸಿಕೊಳ್ಳುವುದು ಎಂದರ್ಥ.


೪. ಇಂಟರ್ ಸೆಕ್ಸ್

ಹೆಣ್ಣು ಮತ್ತು ಗಂಡು ಎರಡರ ಲೈಂಗಿಕ ಗುಣಗಳು ಮತ್ತು ಜನನಾಂಗಗಳನ್ನ ಹೊಂದಿದ್ದವರನ್ನ ನಾವು ಸಾಮಾನ್ಯವಾಗಿ “ಹೆರ್ಮೋಫ್ರೊಡೈಟ್” ಎಂದು ಕರೆಯುತ್ತಿದ್ದೆವು. ಆದರೆ ಅದೊಂದು ತಪ್ಪು ಗ್ರಹಿಕೆ. ಪ್ರಚಲಿತ ಕಾಲದಲ್ಲಿ ನಾವು ಬಳಸುವ ಪದ “ಇಂಟರ್ಸೆಕ್ಸ್”. ಈ ಇಂಟರ್ಸೆಕ್ಸ್ ಜನರು ಗಂಡಸು ಮತ್ತು ಹೆಂಗಸು ಇಬ್ಬರ ಜನನಾಂಗಗಳನ್ನು ಹೊಂದಿರುವುದಿಲ್ಲ, ಬದಲಿಗೆ ಅವೆರಡರ ಕೆಲವೊಂದು ಗುಣಗಳನ್ನ ಹೊಂದಿರುತ್ತಾರೆ. ಈ ಇಂಟರ್ಸೆಕ್ಸ್ ಜನರಲ್ಲೇ ಹಲವಾರು ರೀತಿಯ ವೈವಿಧ್ಯತೆಗಳಿವೆ.


೫. ಸೂಪೇರ್ನ್ಯೂಮೆರಿ ಜನನಾಂಗಗಳು

ಕೆಲವು ಜನರಿಗೆ ಸಹಜವಲ್ಲದ ಜನನಾಂಗ ಅಥವಾ ಜನನಾಂಗವೇ ಇಲ್ಲದಂತೆ ಇರುವುದನ್ನ ನೀವು ಕೇಳಿರುತ್ತೀರಾ. ಆದರೆ ಇಲ್ಲಿ ಕೆಲವು ಜನರಿಗೆ ಇರಬೇಕಿರುವುದಕ್ಕಿಂತ ಹೆಚ್ಚು ಇದೆ, ಅಂದರೆ ಅವರಿಗೆ ಹೆಚ್ಚುವರಿ, ಎಕ್ಸ್ಟ್ರಾ ಜನನಾಂಗಗಳು ಇರುತ್ತವೆ. ಡಯಾಫಿಲಿಯಾ ಎಂಬ ಅಸಹಜತೆ ಇರುವ ಗಂಡಸರಲ್ಲಿ ಎರಡು ಶಿಶ್ನಗಳು ಇರುತ್ತವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon