Link copied!
Sign in / Sign up
154
Shares

ವೇಗವಾಗಿ ಗರ್ಭಿಣಿಯಾಗುವುದು ಹೇಗೆ? ಕೋಟಿ ರುಪಾಯಿ ಪ್ರಶ್ನೆಗೆ ೮ ಅಂಶಗಳ ಉತ್ತರ!

ಇದು ಮದುವೆ ಆಗಿ ಮಗು ಮಾಡಿಕೊಳ್ಳಲು ಬಯಸುತ್ತಿರುವ ಪ್ರತಿಯೊಂದು ದಂಪತಿಯ ತಲೆಗಳಲ್ಲಿ ಮೂಡುವ ಪ್ರಶ್ನೆ. ನೀವು ಎಷ್ಟೇ ಪ್ರಯತ್ನ ಮಾಡಿದರೂ ನೀವು ಗರ್ಭ ಧರಿಸುತ್ತಿಲ್ಲ ಎಂಬ ಯೋಚನೆ ನಿಮಗೆ ಕಾಡುತ್ತಿದ್ದರೆ, ಅದಕ್ಕೆ ಕಾರಣಗಳು ಹಲವಾರು ಇರಬಹುದು. ನೀವು ವೇಗವಾಗಿ ಗರ್ಭಧರಿಸಿ ನಿಮ್ಮ ಮಗುವನ್ನು ಬರ ಮಾಡಿಕೊಳ್ಳಲು ಪಾಲಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ :

೧. ಆರೋಗ್ಯಕರವಾದದ್ದನ್ನು ತಿನ್ನಿ

ಫಲವತ್ತತೆಯು ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ದಂಪತಿಗಳು ಇಬ್ಬರು ಆರೋಗ್ಯಕರ, ಸಮತೋಲಿತ ಆಹಾರಪದ್ದತಿ ಪಾಲಿಸಿದರೆ, ನೀವು ನಿಮ್ಮ ಫಲವತ್ತತೆ ಹೆಚ್ಚಿಸಿಕೊಳ್ಳಬಹುದು.

೨. ವಿಶ್ರಮಿಸಿ

ಒತ್ತಡವು ನೀವು ಗರ್ಭ ಧರಸಿಲು ಅಡ್ಡಗಾಲು ಹಾಕಬಹುದು. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಂಡು ಇಬ್ಬರು ವಿಶ್ರಮಿಸಿ.

೩. ಒಟ್ಟಿಗೆ ವ್ಯಾಯಾಮವನ್ನು ಆನಂದಿಸಿ

ಶಾರೀರಿಕವಾಗಿ ಧೃಡವಾಗುವುದು ನಿಮ್ಮ ಫಲವತ್ತತೆ ಹೆಚ್ಚಿಸುತ್ತದೆ. ನೀವು ತುಂಬಾ ಕಷ್ಟಪಟ್ಟು ವ್ಯಾಯಾಮ ಮಾಡುವುದೇನು ಬೇಡ. ಹಾಗೆ ಸುಮ್ಮನೆ ಸ್ವಲ್ಪ ದೂರದವರೆಗೆ ಸೈಕಲ್ ತುಳಿದರೆ ಅಥವಾ ಓಡಿದರೆ, ನಡೆದರೂ ಆಯಿತು. ಒಂದೇ ಕಡೆ ಕುಳಿತು ಕೆಲಸ ಮಾಡಿದರೆ, ಅದು ಗಂಡಸಿನ ಫಲವತ್ತತೆ ಕಮ್ಮಿ ಆಗುವಂತೆ ಮಾಡುತ್ತದೆ. ಸೈಕ್ಲಿಂಗ್ ಮಾಡುವುದರಿಂದ ತುಂಬಾನೇ ಉಪಯೋಗಗಳು ಆಗುತ್ತವೆ.

೪. ಕುಡಿತ ಮತ್ತು ಧೂಮಪಾನ ನಿಲ್ಲಿಸಿ

ಯಾವಾಗಲೋ ಒಮ್ಮೆ ಕುಡಿದರೆ ತೊಂದರೆ ಏನಿಲ್ಲ, ಆದರೆ ನೀವಾಗಲಿ ಅಥವಾ ನಿಮ್ಮ ಪತಿ ಆಗಲಿ ಪ್ರತಿದಿನ ಮದ್ಯಸಾರ ಅಥವಾ ಸಿಗರೇಟ್ ಸೇವನೆ ಮಾಡಿದರೆ, ಅದು ನಿಮ್ಮ ಫಲವತ್ತತೆಗೆ ಕುತ್ತು ತರಬಹುದು.

೫. ಅವುಗಳನ್ನು ತಣ್ಣಗೆ ಇಡಿ !

ಬಹಳ ಸಮಯದವರೆಗೆ ಒಂದೇ ಜಾಗದಲ್ಲಿ ಕೂತು ಕೆಲಸ ಮಾಡುವುದು, ಲ್ಯಾಪ್ಟಾಪ್ ಅನ್ನು ತೊಡೆ ಮೇಲೆ ಇಟ್ಟುಕೊಂಡು ಬಳಸುವುದು, ತೀವ್ರ ಉಷ್ಣಾಂಶವಿರುವ ಜಾಗದಲ್ಲಿ ಕೆಲಸ ಮಾಡುವುದು ಅಥವಾ ತುಂಬಾ ಟೈಟ್ ಆಗಿರುವ ಒಳಉಡುಪು ಧರಿಸುವುದು ಗಂಡಸರಲ್ಲಿ ವೀರ್ಯಗಳ ಉತ್ಪತ್ತಿಯ ಮೇಲೆ ದುಷ್ಪರಿಣಾಮ ಬೀರುತ್ತವೆ. ನೀವು ತಂದೆ ಆಗಬೇಕೆಂದಿದ್ದರೆ, ನಿಮ್ಮ ಲ್ಯಾಪ್ಟಾಪ್ ಅನ್ನು ಟೇಬಲ್ ನ ಮೇಲೆ ಇಟ್ಟುಕೊಂಡು ಬಳಸಿ ಹಾಗು ಟೈಟ್ ಒಳಉಡುಪು ಧರಿಸುವುದನ್ನು ನಿಲ್ಲಿಸಿ.

೬. ಒಟ್ಟಿಗೆ ಒಂದು ಬ್ರೇಕ್ ತಗೊಳ್ಳಿ

ಇದನ್ನು ಪ್ರತಿಯೊಂದು ದಂಪತಿಯೂ ಮಾಡಲೇಬೇಕು. ನೀವು ಗರ್ಭಿಣಿ ಆಗಲು ಪ್ರಯತ್ನಿಸುತ್ತಿದ್ದರೆ, ನೀವು ಹಾಗು ನಿಮ್ಮ ಪತಿ ಇಬ್ಬರು ನಿಮ್ಮ ದೈನಂದಿನ ಜಂಜಾಟಗಳನ್ನ ಮರೆತು ಸ್ವಲ್ಪ ದಿನಗಳ ಕಾಲ ಏಕಾಂತದಲ್ಲಿ ಕಾಲ ಕಳೆಯಿರಿ. ಈ ಸಮಯ ನಿಮಗೆ ನಿಮ್ಮಿಬ್ಬರ ಬಗ್ಗೆ ಪರಸ್ಪರ ತಿಳಿಯಲು ಒಳ್ಳೆ ಸಮಯ. ಅಲ್ಲದೇ, ಈ ಸಮಯದಲ್ಲಿ ನೀವು ಹೊಸ ಹೊಸ “ಪ್ರಯೋಗಗಳನ್ನು” ಕೂಡ ಮಾಡಬಹುದು !

೭. ಪ್ರಣಯ ವಾಪಸ್ ತನ್ನಿ!

ನೀವು ರಜೆ ತಗೊಂಡು ಪ್ರಯಾಣ ಮಾಡಲಿಕ್ಕೆ ಆಗುವುದಿಲ್ಲ ಎಂದರೆ, ನಿಮ್ಮ ಜೀವನದಲ್ಲಿ ಪ್ರಣಯ ತರಲಿಕ್ಕೆ ಬೇರೇ ದಾರಿಗಳಿವೆ. ಕೆಲವೊಂದು ದಂಪತಿಗಳಿಗೆ ತಾವು ಮಕ್ಕಳು ಮಾಡಿಕೊಳ್ಳುವುದಕ್ಕೆ ಸಂಭೋಗ ನಡೆಸುತ್ತಿದ್ದೇವೆ ಎಂಬ ಭಾವನೆ ಬಂದು ಬಿಟ್ಟಿರುತ್ತದೆ. ನಿಮ್ಮ ಪ್ರಕರಣದಲ್ಲೂ ಇದು ನಿಜವಾಗಿದ್ದರೆ, ಗರ್ಭಿಣಿ ಆಗುವುದಕ್ಕಾಗಿಯೇ ಎಂದು ಕಾಲ, ಸಮಯ ನೋಡಿ ಅದನ್ನೇ ತಲೆಯಲ್ಲಿ ಇಟ್ಟುಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಬದಲು, ಪ್ರಣಯಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮಿಬ್ಬಿರ ನಡುವಿನ ಪ್ರೀತಿ, ಉಲ್ಲಾಸ, ಪ್ರಣಯ ಇವುಗಳು ಸದಾ ನಿಮ್ಮ ಮೊದಲ ಆದ್ಯತೆ ಆಗಿರಲಿ.

೮. ನಿಯಮಿತ ಸಂಭೋಗ ಇರಲಿ, ಯೋಜಿತ ಸಂಭೋಗ ಅಲ್ಲ

 

ನಮಗೆಲ್ಲರಿಗೂ ಗೊತ್ತಿರುವ ಹಾಗೆ, ಒಬ್ಬರನ್ನು ಒಬ್ಬರು ಸವಿಯುವುದೇ ತುಂಬಾ ಮುಖ್ಯವಾದ ಕೆಲಸ ! ಆದರೆ ನೀವು ತಿಂಗಳಿನ ಯಾವ ದಿನ ಹೆಚ್ಚು ಫಲವತ್ತಾಗಿ ಇರುವಿರಿ ಎಂಬುದರ ಬಗೆಗಿನ ಅರಿವು ತುಂಬಾನೇ ಉಪಕಾರಿ. ಕೇವಲ ಎರಡು ಅಥವಾ ಮೂರು ದಿನಕ್ಕೊಮ್ಮೆ ಸಂಭೋಗ ನಡೆಸಿದರೂ, ನೀವು ಗರ್ಭಧರಿಸುವ ಸಾಧ್ಯತೆ ಇದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon