Link copied!
Sign in / Sign up
15
Shares

ಔಷಧಿ ಅಂಗಡಿಯಿಂದ ತರುವ ಈ ವಸ್ತುಗಳನ್ನು ಹಿಂಗೆಲ್ಲಾ ಬಳಸಬಹುದು ಎಂದು ನಿಮಗೆ ಪಕ್ಕ ಗೊತ್ತಿರಲ್ಲ!


ಮೆಡಿಕಲ್ ನಿಂದ ತರುವ ಎಲ್ಲ ಉತ್ಪನ್ನಗಳು ಕೇವಲ ನಿರ್ದಿಷ್ಟ ಉದ್ದೇಶಕ್ಕೆ ಸೀಮಿತವಾಗಿರುವುದಿಲ್ಲ,ಕೆಲ ಉತ್ಪನ್ನಗಳುಬಹುಪಯೋಗಿ ಗುಣಗಳಿಂದ ಕೂಡಿದ್ದು ,ಆ ವಸ್ತುಗಳ ಬಗ್ಗೆ ಹೆಚ್ಚು ತಿಳಿಯುವುದರಿಂದ ನಾನಾ ಪ್ರಯೋಜನ ಪಡೆಯಬಹುದು. ಉದಾಹರಣೆಗೆ: ವ್ಯಾಸೆಲಿನ್ ಅನ್ನು ಧೀರ್ಘಕಾಲ ಸುವಾಸನೆಗೆ, ಆಲೋ ವೆರಾ ಜೆಲ್ ನಿಂದ ಕೂದಲ ಹಾರೈಕೆ ಮುಂತಾದವು.

ಇಂತಹ ಬಹುಪಯೋಗಿ ಉತ್ಪನ್ನಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ :

ನಾಡಿ ಬಿಂದುಗಳ ಮೇಲೆ ವ್ಯಾಸೆಲಿನ್ ಬಳಕೆ 

ಪ್ರತಿ ಮನೆಯಲ್ಲಿಯೂ ಕಾಣುವ ವ್ಯಾಸೆಲಿನ್ ಗೃಹೋಪಯೋಗಿ ವಸ್ತುಗಳಲ್ಲಿ ಮುಖ್ಯವಾದುದು.ಸಾಮಾನ್ಯವಾಗಿ ವ್ಯಾಸೆಲಿನ್ ಅನ್ನು ನೀವೆಲ್ಲ ಮೃದು ತುಟಿ ಪಡೆಯಲು,ಒಡೆದ ಹಿಮ್ಮಡಿಯ ಹಾರೈಕೆಗೆ,

ಚರ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯುವುದಕ್ಕೆ ಬಳಸಿರಬಹುದು.ಇದೆಲ್ಲದರ ಜೊತೆಗೆ ವ್ಯಾಸೆಲಿನ್ ಅನ್ನು ನಿಮ್ಮ

ಪರ್ ಫ್ಯೂಮ್ ಸುವಾಸನೆಯನ್ನು ಧೀರ್ಘ ಕಾಲ ಹಿಡಿದಿಡಲು ಬಳಸಬಹುದು,ಕಾಲಕ್ರಮೇಣ ನೀವು ನಿಮ್ಮ ಪರ್ ಫ್ಯೂಮ್ ನ ಮೇಲೆ ವ್ಯಯಿಸುವ ಹಣವನ್ನು ಇದು ಉಳಿಸುತ್ತದೆ.ನಿಮ್ಮ ನಾಡಿ ಬಿಂದುಗಳ ಮೇಲೆ,ಕುತ್ತಿಗೆಯ ಮೇಲೆ ಸ್ವಲ್ಪ ವ್ಯಾಸೆಲಿನ್ ಹಚ್ಚಿ ನಂತರ ನಿಮ್ಮ ನೆಚ್ಚಿನ ಪರ್ ಫ್ಯೂಮ್ ಹಾಕಿಕೊಳ್ಳಿ.ಹೀಗೆ ಮಾಡುವುದರಿಂದ ನಿಮ್ಮ ಸುಗಂಧ ದ್ರವ್ಯದ ಸುವಾಸನೆ ಬಹುಕಾಲ ಉಳಿಯುತ್ತದೆ,ಮೊದಲಿಗಿಂತಲೂ ಈಗ ನಿಮ್ಮ ಪರ್ ಫ್ಯೂಮ್ ಅನ್ನು ಸ್ವಲ್ಪವೇ ಉಪಯೋಗಿಸಿದರೂ ಹೆಚ್ಚು ಸಮಯ ಸುವಾಸನೆ ನೀಡಬಲ್ಲದು.

ವಿಟಮಿನ್ 'C' ಪೌಡರ್ - ರೋಗ ನಿರೋಧಕ

ವಿಟಮಿನ್ C ಪೌಡರ್ ಅನ್ನು ಉತ್ತಮ ಆರೋಗ್ಯ ಹಾಗೂ ಸೌಂದರ್ಯವರ್ಧನೆಗೆ ಬಳಸುತ್ತಾರೆ. ಈ ಪೌಡರ್ ಅತಿ ಹೆಚ್ಚು ದುಬಾರಿ. ವಿಟಮಿನ್ ಸಿ ಬಳಸಿ ಸೀರಂ ನಂತಹ ರೋಗ ನಿರೋಧಕಗಳನ್ನುತಯಾರಿಸಬಹುದು.ವಿಟಮಿನ್ ಸಿ ಪೌಡರ್ ಗೆ ಶುಚಿಯಾದ ನೀರು ಮಿಶ್ರಿತ ಗ್ಲಿಸರಿನ್ ಸೇರಿಸಿದಾಗ ಸೀರಂ ದೊರೆಯುತ್ತದೆ

ಗುಲಾಬಿ ತೈಲ- ತೇವಕಾರಕ 

ಗುಲಾಬಿ ಎಣ್ಣೆಯನ್ನು ಚರ್ಮಕ್ಕೆ ಹಾಕಿದ ತಕ್ಷಣ ಬಹಳ ಬೇಗ ಹೀರಿಕೊಂಡು ಚರ್ಮವನ್ನು ಒಣವಾಗಿಸುತ್ತದೆ,ಆದ ಕಾರಣ ನಿಮಗೆ ಚರ್ಮದ ಮೇಲೆ ಜಿಡ್ಡಿನ ಭಾಸವಾಗುವುದಿಲ್ಲ. ಇದು ಚರ್ಮಕ್ಕೆ ಅಗತ್ಯವಿರುವ ವಿಟಮಿನ್,ಉತ್ಕರ್ಷಣ ನಿರೋಧಕಗಳನ್ನು ಪೂರೈಸಿ ಚರ್ಮದ ಕಾಂತಿ ಹೆಚ್ಚಿಸಿ,ವಯಸ್ಸಿನ ಗೆರೆಗಳನ್ನು ಮರೆಮಾಚಿ ಹದಿಹರೆಯದವರ ಚರ್ಮದಂತೆ ಕಂಗೊಳಿಸಲು ಸಹಾಯ ಮಾಡುತ್ತದೆ.

ಬೇಬಿ ಆಯಿಲ್ 

ಬೇಬಿ ಆಯಿಲ್ ಕೂಡ ಬಹುಪಯೋಗಿ.ಇದು ಮಿನರಲ್ ಆಯಿಲ್ ಮತ್ತು ಸುಗಂಧವನ್ನು ಒಳಗೊಂಡಿದ್ದು ಬೇರೆ ಎಣ್ಣೆಗಳಂತೆ ಹೆಚ್ಚು ದುಬಾರಿಯಲ್ಲ, ಬೇಬಿ ಆಯಿಲ್ ಅನ್ನು ಮಸಾಜ್ ಮಾಡಲು ಬಳಸುವುದರ ಜೊತೆಗೆ ನಿಮ್ಮ ಮೇಕಪ್ ಬ್ರಷ್ ನನ್ನು ಶುಚಿ ಮಾಡಲು ಉಪಯೋಗಿಸಬಹುದಾಗಿದೆ.

ಮಿನರಲ್ ಆಯಿಲ್ 

ಕರುಳು ಶುಚಿಗೊಳಿಸಲು ರಾಮಬಾಣ.ಕೇಳಲು ವಿಚಿತ್ರವೆನಿಸಿದರೂ ಇದು ಸತ್ಯ. ಮಿನರಲ್ ಆಯಿಲ್ ಕರುಳು ಶುಚಿ ಗೊಳಿಸುವಲ್ಲಿ ತುಂಬಾ ಉಪಯುಕ್ತ ವಾಸನೆ ರಹಿತ ತೈಲ. ಇದು ವಿಟಮಿನ್ E ಒಳಗೊಂಡಿದ್ದು ಬೇಬಿ ಆಯಿಲ್ ಗಿಂತ ಗಟ್ಟಿಯಾಗಿರುತ್ತದೆ ಮತ್ತು ಬೆಲೆ ಕೂಡ ಕಡಿಮೆಯೇ.

ಬೇಬಿ ಪೌಡರ್ - ಡ್ರೈ ಶಾಂಪೂ 

 ಬೇಬಿ ಉತ್ಪನ್ನಗಳು ನಿಜಕ್ಕೂ ಬಹುಪಯೋಗಿ . ಬೇಬಿ ಪೌಡರ್ ಅನ್ನು ಡ್ರೈ ಶಾಂಪೂವಿನಂತೆ ಬಳಸಬಹುದು,ಶೂ ಮೇಲೆ ಸ್ವಲ್ಪ ಶಾಂಪೂ ಸಿಂಪಡಿಸುವುದರಿಂದ ಅವುಗಳ ಕೆಟ್ಟ ವಾಸನೆ ದೂರಾಗುತ್ತದೆ.ಸ್ನಾನ ಮಾಡಿದ ನಂತರ ಚರ್ಮಕ್ಕೆ ಬೇಬಿ ಪೌಡರ್ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ.

ಅಳಿದುಳಿದ ಮೇಕಪ್ ತೆಗೆಯಲು ಟೇಪ್ 


ಸಾಮಾನ್ಯವಾಗಿ ಮೇಕಪ್ ಮುಗಿದ ನಂತರ ಕೆನ್ನೆ ಅಥವಾ ಕಣ್ಣಿನ ಕೆಳ ಭಾಗದಲ್ಲಿ ಕೆಲ ಮೇಕಪ್ ಕಲೆಗಳು ಉಳಿದುಬಿಡುತ್ತವೆ.ಅದನ್ನು ತೆಗೆಯಲು ಬಟ್ಟೆಗಳನ್ನು ಉಪಯೋಗಿಸುತ್ತಾರೆ ಆದರೆ ಅದಕ್ಕಿಲ್ಲಿ ಇನ್ನೊಂದು ಮಾರ್ಗವಿದೆ ನಿಮ್ಮ ಸುರಕ್ಷಿತ ಪೆಟ್ಟಿಗೆಯಲ್ಲಿರುವ ಬ್ಯಾಂಡೇಜ್ ಟೇಪ್ ಅನ್ನು ಮೇಕಪ್ ಕಲೆ ತೆಗೆಯಲು ಬಳಸಬಹುದು,ಉಳಿದೆಲ್ಲ ಟೇಪ್ ಗಳಿಗಿಂತ ಬ್ಯಾಂಡೇಜ್ ಟೇಪ್ ತುಂಬಾ ಮೃದು ಹಾಗೂ ಉಪಯುಕ್ತ.

ಆಲೋ ವೆರಾ ಜೆಲ್ 

ಆಲೋ ವೆರಾ ನಷ್ಟು ಬಹುಪಯೋಗಿ ಸಸ್ಯ ಇನ್ನೊಂದಿಲ್ಲ. ಆಲೋ ವೇರಜೆಲ್ ಅನ್ನು ಚರ್ಮದ ಕಾಂತಿಗೆ,ಮೊಡವೆ ತಡೆಗಟ್ಟಲು,ಕೂದಲ ಹಾರೈಕೆಗೆ, ಸನ್ ಬರ್ನ್ ನಿಂದಾದ ಗಾಯಗಳ ಚಿಕಿತ್ಸೆಗೆ ಬಳಸಬಹುದಾಗಿದ್ದು. ಇದು ತುಂಬಾ ಪ್ರಸಿದ್ದಿ ,ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲಿ ಆಲೋ ವೆರಾ ಜೆಲ್ ಕಾಣ ಸಿಗುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon