Link copied!
Sign in / Sign up
0
Shares

ನಿಮ್ಮ ದೇಹದ 4 ವಾಸನೆಗಳು ಮತ್ತು ಅವು ನಿಮ್ಮ ಬಗ್ಗೆ ಏನು ಹೇಳುತ್ತವೆ

ನೀವು ಈಗ ತಾನೇ ಬಿಸಿಲಿನಲ್ಲಿ ಮೈ ಮುರಿಯುವಷ್ಟು ಕೆಲಸ ಮಾಡಿ ಬೆವರುತ್ತಾ ಬಂದಿರಬಹುದು ಅಥವಾ ಒಂದು ಪ್ಲೇಟ್ ತುಂಬಾ ಈರುಳ್ಳಿ ಪಕೋಡ ತಿಂದು ಬಂದಿರಬಹುದು, ಒಮ್ಮೆ ಆದರೂ ಎಲ್ಲರೂ ಗಬ್ಬು ವಾಸನೆ ಬೀರುತ್ತಾರೆ. ಬಹುತೇಕ ಸಮಯ ಇದು ಸ್ನಾನ ಮಾಡಿದರೋ, ಪೆರ್ಫ್ಯೂಮ್ ಸ್ಪ್ರೇ ಮಾಡಿದರೋ ಅಥವಾ ಹಸಿ ಬಟ್ಟೆಯಲ್ಲಿ ಒರೆಸಿಕೊಂಡರೋ ಶಮನ ಆಗುವಂತದ್ದು. ಆದರೆ ಇನ್ನುಳಿದ ಪ್ರಕರಣಗಳಲ್ಲಿ, ವಿಷಯ ಇನ್ನೂ ಗಂಭೀರವಾಗಿರುತ್ತದೆ.

ಏಕೆಂದರೆ ನಿಮ್ಮ ದೇಹವು ಸೂಸುವ ವಾಸನೆಯು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನ ತಿಳಿಸುತ್ತದೆ. ನಿಜ ಹೇಳಬೇಕೆಂದರೆ ಕೆಲವು ರೋಗಗಳು ವಿಭಿನ್ನವಾದ, ಇತರೆ ವಾಸನೆಗಳಿಗಿಂತ ಬೇರೆ ರೀತಿಯ ವಾಸನೆಯನ್ನು ಸೃಷ್ಟಿಸುತ್ತವೆ. ಹಾಗಿದ್ದರೆ ನೀವು ಗಮನ ವಹಿಸಬೇಕಾದ ವಾಸನೆಗಳು ಯಾವು? ಈ ಕೆಳಗಿನ ಪಟ್ಟಿಯನ್ನು ಓದಿ ತಿಳಿದುಕೊಳ್ಳಿ .

೧. ಹಣ್ಣಿನ ವಾಸನೆಯ ಉಸಿರು ಮಧುಮೇಹ (ಡಯಾಬಿಟಿಸ್) ಸೂಚಿಸುತ್ತದೆ

ಮಧುಮೇಹದ ಇನ್ನೊಂದು ತೊಡಕಾದ ಡಯಾಬಿಟಿಕ್ ಕೀಟೋಅಸಿಡೊಸಿಸ್ (DKA) ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿ, ಇನ್ಸುಲಿನ್ ಪ್ರಮಾಣ ಕಡಿಮೆ ಆದಾಗ ಕಾಣಿಸಿಕೊಳ್ಳುತ್ತದೆ. ಟೈಪ್ 1 ಡಯಾಬಿಟಿಸ್ ಇರುವ ಜನರು ಟೈಪ್ 2 ಡಯಾಬಿಟಿಸ್ ಇರುವ ಜನರಿಗಿಂತ ಹೆಚ್ಚು ಇದನ್ನು ಅನುಭವಿಸುತ್ತಾರೆ.

ಈ ಪ್ರಕರಣದಲ್ಲಿ ಮುಖ್ಯ ಆಮ್ಲವಾದ ಅಸಿಟೋನ್ ನಿಮ್ಮ ಬಾಯಿಂದ ಹಣ್ಣಿನ ವಾಸನೆ ಬರುವಂತೆ ಮಾಡುತ್ತದೆ. ಇದನ್ನು ನಿಮಗೆ ಇನ್ನೊಬ್ಬರು ಹೇಳುವವರೆಗೆ ನಿಮಗೆ ಗೊತ್ತಾಗುವುದಿಲ್ಲ. ಇದರೊಂದಿಗೆ DKA ನ ಮತ್ತಷ್ಟು ಲಕ್ಷಣಗಳು ಎಂದರೆ ಆಯಾಸ, ಬಾಯಿ ಒಣಗುವುದು, ಉಸಿರಾಟಕ್ಕೆ ತೊಂದರೆ, ಹೊಟ್ಟೆ ನೋವು. ಈ ಎಲ್ಲಾ ಲಕ್ಷಣಗಳು ನಮಗೆ ಸಾಮಾನ್ಯವಾಗಿ ಉಳಿದ ಸಮಯಗಳಲ್ಲೂ ಕಾಣಿಸಿಕೊಳ್ಳುವುದರಿಂದ ನಾವು ಇವುಗಳನ್ನ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಈ ಹಣ್ಣಿನ ವಾಸನೆಯ ಉಸಿರಿನಿನೊಂದಿಗೆ ನಿಮ್ಮಲ್ಲಿ ಈ ಮೇಲೆ ಹೇಳಿರುವ ಲಕ್ಷಣಗಳು ಒಟ್ಟಿಗೆ ಕಾಣಿಸಿಕೊಂಡರೆ, ನಿಮಗೆ DKA ಇರುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ನಿಮ್ಮ ವೈದ್ಯರನ್ನ ಭೇಟಿ ಮಾಡಿ.

೨. ದುರ್ಗಂಧ ಬೀರುವ ಪಾದಗಳು ಶಿಲೀಂಧ್ರ ಸೋಂಕು (ಫಂಗಲ್ ಇನ್ಫೆಕ್ಷನ್)

ಒಣಗಿದ, ಗೆರೆ ಗೆರೆಯಾದ ಚರ್ಮವು ನಿಮ್ಮ ಕಾಲು ಬೆರಳುಗಳ ಸುತ್ತ ಇದ್ದರೆ, ಪಾದದ ಮೇಲೆ ಬೊಬ್ಬೆಗಳಿದ್ದರೆ, ಚರ್ಮ ಸುಳಿದಿದ್ದರೆ ನೀವು ಅಥ್ಲೀಟ್ಸ್ ಫುಟ್ ಎಂಬ ಫಂಗಲ್ ಸೋಂಕಿನಿಂದ ಬಳಲುತ್ತಿರಬಹುದು.

ನಿಮ್ಮ ಕಾಲಿನ ಬೆರಳುಗಳ ಸಂಧಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಎರಡು ಕೂಡಿಕೊಂಡು ದುರ್ಗಂಧ ಬೀರಬಹುದು. ನೀವು ನಿಮ್ಮ ಕಾಲುಗಳನ್ನ ಕೆರೆದುಕೊಂಡು ದೇಹದ ಇತರೆ ಭಾಗಗಳನ್ನ ಮುಟ್ಟುಕೊಂಡರೆ ಆ ಭಾಗಗಳಿಗೂ ಸೋಂಕು ಹರಡುತ್ತದೆ. ಅಲ್ಲದೆ, ಈ ಸೋಂಕಿನ ಕಡೆ ನೀವು ಗಮನ ಕೊಡದೆ ಹಾಗೆ ಬಿಟ್ಟರೆ, ಆ ಭಾಗದ ಚರ್ಮವು ಸಂಪೂರ್ಣವಾಗಿ ಮೃದುವಾಗಿ, ಬ್ಯಾಕ್ಟೀರಿಯಾಗಳು ನಿಮ್ಮ ದೇಹ ಸೇರಲು ಸುಲಭವಾಗುತ್ತದೆ.

೩. ಮಲವು ತುಂಬಾನೇ ಗಾಢವಾದ ದುರ್ಗಂಧ ಬೀರಿದರೆ ನೀವು ಲ್ಯಾಕ್ಟೋಸ್ ಅಸಹಿಷ್ಣು ಎಂದರ್ಥ

ಹಾಲು ಮತ್ತು ಹಾಲಿನ ಉತ್ಪನ್ನಗಳಿರುವ ಲ್ಯಾಕ್ಟೋಸ್ ಎಂಬ ಅಂಶವನ್ನ ಅರಗಿಸಿಕೊಳ್ಳಲು ದೇಹಕ್ಕೆ ಲ್ಯಾಕ್ಟೇಸ್ ಎಂಬ ರಾಸಾಯನಿಕ ಬೇಕಾಗುತ್ತದೆ.  ಒಂದು ವೇಳೆ ನಿಮ್ಮ ದೇಹದಲ್ಲಿ ಸರಿಯಾದ ಲ್ಯಾಕ್ಟೇಸ್ ಇರಲಿಲ್ಲ ಎಂದರೆ ಹಾಲಿನಲ್ಲಿರುವ ಲ್ಯಾಕ್ಟೋಸ್ ನಿಮ್ಮ ರಕ್ತದಲ್ಲಿ ಸೇರುವ ಬದಲು ನಿಮ್ಮ ಕರುಳಿನೊಳಗೆ ಸೇರುತ್ತದೆ. ಇಲ್ಲಿ ನಿಮ್ಮ ಹೊಟ್ಟೆಯೊಳಗಿನ ಬ್ಯಾಕ್ಟೀರಿಯಾಗಳು ಅದನ್ನು ಕಿಣ್ವ ಮಾಡುತ್ತವೆ. ಇದು ತಿಳಿಯಾದ, ದುರ್ಗಂಧ ಬೀರುವ ಮಲ, ದುರ್ಗಂಧಿತ ಅನಿಲ, ತೇಗುವಿಕೆ ಉಂಟು ಮಾಡುತ್ತದೆ. ಜಗತ್ತಿನ ಸುಮಾರು 65% ಅಷ್ಟು ಜನರು ಲ್ಯಾಕ್ಟೋಸ್ ಅಸಿಷ್ಣುತೆ ಹೊಂದಿರುತ್ತಾರೆ ಮತ್ತು ಅದರ ಲಕ್ಷಣಗಳು ಒಬ್ಬರಿಂದೊಬ್ಬರಿಗೆ ಬೇರೆ ಬೇರೆ ಆಗಿರಬಹುದು. ವಾಕರಿಕೆ, ವಾಂತಿ, ಬೇಧಿ ಕೂಡ ಲಕ್ಷಣಗಳು ಆಗಿರಬಹುದು.

ಒಂದು ವೇಳೆ ನೀವು ಲ್ಯಾಕ್ಟೋಸ್ ಅಸಹಿಷ್ಣು ಆಗಿದ್ದರೆ, ನಿಮ್ಮ ವೈದ್ಯರೊಡನೆ ಮಾತನಾಡಿ ನೀವು ಎಷ್ಟು ಹಾಲಿನ ಉತ್ಪನ್ನಗಳನ್ನ ಸೇವಿಸಬಹುದು ಎಂದು ಕೇಳಿಕೊಳ್ಳಿ.

೪. ದುರ್ಗಂಧಭರಿತ ಮೂತ್ರ ಮೂತ್ರನಾಳದ ಸೋಂಕಿನ ಲಕ್ಷಣ

ಮೂತ್ರನಾಳದ ಸೋಂಕು ಗಾಢವಾದ, ಕೆಟ್ಟದಾದ, ರಾಸಾಯನಿಕ ಥರದ ವಾಸನೆಯ ಮೂತ್ರವನ್ನ ತಯಾರಿಸುತ್ತದೆ. ಇದು ಬ್ಯಾಕ್ಟೀರಿಯಾ, ಸಾಮಾನ್ಯವಾಗಿ ಈ.ಕೋಲಿ ಬ್ಯಾಕ್ಟೀರಿಯಾ ನಿಮ್ಮ ಮೂತ್ರನಾಳ ಅಥವಾ ಮೂತ್ರ ವಿಸರ್ಜನಾ ನಾಳ ಸೇರಿಕೊಂಡಾಗ ಇದು ಉಂಟಾಗಬಹುದು. ಇದು ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ನಿಮಗೆ ಬಹಳ ದಿನಗಳ ಕಾಲ ದುರ್ಗಂಧಭರಿತ ಮೂತ್ರ ಕಾಣಿಸಿಕೊಂಡರೆ, ವೈದ್ಯರನ್ನು ಭೇಟಿ ಮಾಡಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon