Link copied!
Sign in / Sign up
1
Shares

6 ಜನರಿಂದ 11-ವರ್ಷದ ಹುಡುಗಿಯ ರೇಪ್!

6 ಜನ ರಾಕ್ಷಸರ ಕೈಯಿಂದ ಅತ್ಯಾಚಾರಕ್ಕೆ ಒಳಗಾಗಿ ಅಕ್ಷರಸಹ ನರಕಯಾತನೆ ಅನುಭವಿಸಿದ್ದ 11-ವರ್ಷದ ಹುಡುಗಿಯೊಬ್ಬಳು, ರಾಜಕೋಟ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ.


“ಈಗ ಆ ಬಾಲಕಿಯ ಅರೋಗ್ಯ ಸ್ಥಿರವಾಗಿದೆ. ಆದರೆ, ನವಜಾತ ಶಿಶುವಿನ ಆರೋಗ್ಯದಲ್ಲಿ ಸ್ವಲ್ಪ ತೊಂದರೆಗಳು ಉಂಟಾಗಿದ್ದು, ಈಗ ಅದನ್ನು ಸರ್ಕಾರಿ ಮಕ್ಕಳ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಓರ್ವ ಪೊಲೀಸ್ ಅಧಿಕಾರಿ ತಿಳಿಸುತ್ತಾರೆ. ಜನ್ಮ ನೀಡಿದಾಗ ಈ ಬಾಲಕಿ 8 ತಿಂಗಳ ಗರ್ಭಿಣಿ ಆಗಿದ್ದಳು. ಹಿಂದೂಸ್ತಾನ್ ಟೈಮ್ಸ್ ಅಲ್ಲಿ ವರದಿಯಾದಂತೆ ಈಕೆಯ ಅತ್ಯಾಚಾರಕ್ಕೆ ಕಾರಣವಾದ 6 ಜನರಲ್ಲಿ 4 ಜನರನ್ನ ಪೊಲೀಸರು ಶುಕ್ರವಾರವೇ ಬಂಧಿಸಿದ್ದು, ಇನ್ನುಳಿದ ಇಬ್ಬರನ್ನು ಶನಿವಾರದಂದು ಬಂಧಿಸಿದ್ದಾರೆ.


ಈಕೆ ರೇಪ್ ಆಗಿದ್ದನ್ನು ಹೆದರಿಕೊಂಡು ಯಾರ ಬಳಿಯೂ ಬಾಯ್ಬಿಟ್ಟಿಲ್ಲ. ಈಕೆ ಗರ್ಭಿಣಿ ಆಗಿದ್ದಾಳೆಂದು ತಿಳಿದಿರುವುದು ಕೊನೆ ಕ್ಷಣದಲ್ಲಿ. ಪೋಷಕರು ಇದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ನಂತರ ಹೆಚ್ಚಿನ ತನಿಖೆಯನ್ನು ಕೈಗೊಂಡಾಗ, ಪೊಲೀಸರು ಈಕೆಯನ್ನು 6 ಮಂದಿ ಬೇರೆ ಬೇರೆ ಸಂದರ್ಭಗಳಲ್ಲಿ ರೇಪ್ ಮಾಡಿದ್ದಾರೆಂದು ಅರಿತರು. ಬಂಧನಕ್ಕೆ ಒಳಗಾದ ವ್ಯಕ್ತಿಗಳನ್ನು ನಂಜಿ ಜವಿಯ, ಅರವಿಂದ್ ಕುಭಾವಾತ್, ವಿಜಾನಂದ್ ಅಹಿರ್ (ಈತ ಮೂಕ ಮತ್ತು ಕಿವುಡ), ವಿಪುಲ್ ಚಾವಡಾ, ಗೋವಿಂದ್ ಸಕಾರಿಯಾ ಎಂದು ಗುರುತಿಸಲಾಗಿದೆ. ಇವರದ್ದೆಲ್ಲರದ್ದೂ ವಯಸ್ಸು 60 ದಾಟಿದೆ! ಇವರೊಂದಿಗೆ ಇನ್ನೊಬ್ಬ 17-ವರ್ಷದ ಅಪ್ರಾಪ್ತ ಹುಡುಗನನ್ನು ಕೂಡ ಬಂಧಿಸಲಾಗಿದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon