Link copied!
Sign in / Sign up
0
Shares

ವರದಕ್ಷಿಣೆ ಆಸೆಗೆ ತಾನು ಗಂಡಸೆಂದು ಎರಡು ಹುಡುಗಿಯರನ್ನ ಮದುವೆಯಾದ ಹೆಂಗಸು..!

ಉತ್ತರಾಖಂಡದ ಪೊಲೀಸರು ರಾಜ್ಯದ ರಾಜಧಾನಿ ನೈನಿತಾಲ್ ಅಲ್ಲಿ ಓರ್ವ ಹೆಂಗಸನ್ನು ಬಂಧಿಸಿದ್ದಾರೆ. ಇದರಲ್ಲಿ ಏನಿದೆ ವಿಶೇಷ ಎಂದು ಕೇಳುತ್ತೀರಾ? ಈಕೆ ಏಕೆ ಬಂಧನಕ್ಕೆ ಒಳಗಾದಳು ಎಂಬುದೇ ಒಂದು ವಿಶಿಷ್ಟ, ವಿಚಿತ್ರ ವಿಷಯ. ಅಂದಹಾಗೆ ಈಕೆಯನ್ನ ಬಂಧಿಸಿರುವುದು, ವರದಕ್ಷಿಣೆ ಆಸೆಗೆ ತಾನು ಹುಡುಗನೆಂದು ಹೇಳಿಕೊಂಡು ಎರಡು ಹುಡುಗಿಯರನ್ನ ಮದುವೆಯಾಗಿ, ಅದರಲ್ಲಿ ಒಬ್ಬಳಿಗೆ ಇನ್ನಷ್ಟು ವರದಕ್ಷಿಣೆ ತರುವಂತೆ ದೈಹಿಕ ಹಿಂಸೆ ಕೊಟ್ಟಿರುವುದಕ್ಕಾಗಿ!

ಈ ಮಹಾನ್ ಹೆಂಗಸಿನ ಹೆಸರು ಸ್ವೀಟಿ ಸೇನ್ ಅಲಿಯಾಸ್ “ಕೃಷ್ಣ ಸೇನ್”. ಈಕೆಯನ್ನ ಪೊಲೀಸರು ಬುಧವಾರ ಬಂಧಿಸಿದ್ದಾರೆ. ನೈನಿತಾಲ್ ಹಿರಿಯ ಪೊಲೀಸ್ ಆಯುಕ್ತರಾದ ಜನ್ಮಜೆಯ್ ಖಂಡೂರಿ ಪ್ರಕಾರ ಈಕೆ ಗಂಡಸಿನಂತೆ ತೋರಿಸಿಕೊಳ್ಳುತ್ತಿದ್ದಳು ಮತ್ತು ಫೇಸ್ಬುಕ್ ಅಲ್ಲಿ ಹುಡುಗಿಯರ ಜೊತೆ ಚಾಟ್ ಮಾಡಿ ಅವರನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು!


ಈ ಸ್ವೀಟಿ ಸೇನ್ 2013 ರಲ್ಲಿ ಕೃಷ್ಣ ಸೇನ್ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು, ಗಂಡಸಿನ ರೀತಿ ಕಾಣುವಂತೆ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದಳು ಎಂದು ತಿಳಿಸುತ್ತಾರೆ ಪೊಲೀಸರು. ಅನಂತರ ಆಕೆಯು ಹಲವಾರು ಹುಡುಗಿಯರೊಂದಿಗೆ ಚಾಟ್ ಮಾಡಿ, ಅವರನ್ನೆಲ್ಲಾ ಮರಳು ಮಾಡಿದ್ದಾಳೆ.

ಈಕೆಯು 2014ರಲ್ಲಿ ಹಲ್ಡ್ವಾನಿ ನಗರದಲ್ಲಿ ತನಗೆ ಫೇಸ್ಬುಕ್ ಅಲ್ಲಿ ಪರಿಚಯವಾಗಿದ್ದ ಹುಡುಗಿಯನ್ನು ಭೇಟಿ ಮಾಡಿ, ತಾನು ಒಂದು ದೊಡ್ಡ CFL ಬಲ್ಬ್ ಫ್ಯಾಕ್ಟರಿ ಇರೋ ಉದ್ಯಮಿಯ ಮಗ ಎಂದು ಹೇಳಿಕೊಂಡಿದ್ದಳು. ನಂತರ ಇವರಿಬ್ಬರು ಮದುವೆಯಾಗಿದ್ದಾರೆ. ನಂತರ ಈಕೆಯು ತನ್ನ ಡಬಲ್ ಡಿಗ್ರಿ ಓದಿರುವ “ಹೆಂಡತಿಗೆ” ಹೊಡಿಯಲು ಶುರು ಮಾಡಿದ್ದಾಳೆ. ಅನಂತರ ಆ ಹೆಂಡತಿಯ ಮನೆಯಿಂದ 8.5 ಲಕ್ಷ ತೆಗೆದುಕೊಂಡು ಫ್ಯಾಕ್ಟರಿ ಒಂದನ್ನು ತೆರೆದಿದ್ದಾಳೆ. ಆದರೆ ಈಕೆಯ ಆಟ ಅಷ್ಟಕ್ಕೇ ಮುಗಿಯಲಿಲ್ಲ!

ಈಕೆಯ ಮೊದಲ ಮದುವೆಗೆ ಬಂದಿದ್ದ ಇನ್ನೊಂದು ಹುಡುಗಿಗೂ ಈಕೆ ಬಲೇ ಬೀಸಿ, ಆಕೆಯನ್ನು ಮರಳು ಮಾಡಿದ್ದಾಳೆ! ಅನಂತರ ಆಕೆಯನ್ನೂ ಇವಳು 2016ರಲ್ಲಿ ಮದುವೆಯಾಗಿದ್ದಾಳೆ. ಆಮೇಲೆ ಈ ಸೇನ್ ತನ್ನ ಇಬ್ಬರು ಹೆಂಡತಿಯರನ್ನೂ ಹಲ್ಡ್ವಾನಿ ಅಲ್ಲಿ ಒಂದು ರೂಮ್ ಬಾಡಿಗೆಗೆ ತೆಗೆದುಕೊಂಡು ಇಟ್ಟಿದ್ದಾಳೆ.

ಎರಡನೇ ಹೆಂಡತಿಗೆ ಈಕೆ ಅವಳಲ್ಲ ಅವನು ಎಂಬುದು ಗೊತ್ತಾಗಿದೆ. ಆಗ ಈ ಸ್ವೀಟಿ ಸೇನ್ ಅಲಿಯಾಸ್ ಕೃಷ್ಣ ಸೇನ್ ಆಕೆಗೆ ದುಡ್ಡಿನ ಆಮಿಷ ಒಡ್ಡಿ, ಆಕೆಯ ಬಾಯನ್ನು ಮುಚ್ಚಿಸಿದ್ದಾಳೆ. ನಂತರ ಮೊದಲನೇ ಹೆಂಡತಿಯು ವರದಕ್ಷಿಣೆಗೆ ಈಕೆ ಕೊಡುತ್ತಿದ್ದ ಕಾಟದಿಂದ ಬೇಸತ್ತು ಪೊಲೀಸ್ ದೂರು ನೀಡಿದ್ದಾಳೆ. ಆಗಲೇ ಪೊಲೀಸರು ಬಂದು ಈ ಸೇನ್ ಅನ್ನು ಬಂಧಿಸಿರುವುದು.

ನಂತರ ಪೊಲೀಸರು ಈಕೆಯನ್ನು ವಿಚಾರಿಸಿದಾಗ, ಈಕೆಯು ತಾನು ಇಲ್ಲಿಯವರೆಗೆ ತನ್ನ ಹೆಂಡತಿಯರಿಗೆ ತನ್ನ ದೇಹವನ್ನು ಮುಟ್ಟುವುದಕ್ಕೆ ಬಿಟ್ಟಿಲ್ಲ ಎಂದು ಮತ್ತು ಕೇವಲ ಸೆಕ್ಸ್ ಆಟಿಕೆಗಳ ಮೂಲಕ ಅವರಿಗೆ ಸುಖ ನೀಡುತ್ತಿರುವುದಾಗಿ ಹೇಳಿದ್ದಾಳೆ. ನಂತರ ಪೊಲೀಸರು ಈಕೆಯ ಮೇಲೆ ವೈದ್ಯಕೀಯ ಪರೀಕ್ಷೆ ನಡೆಸಿ ಈಕೆ ಹೆಂಗಸು ಎಂಬುದನ್ನ ದೃಢಪಡಿಸಿದ್ದಾರೆ.

ಆದರೆ, ಈ ಕೃತ್ಯಗಳಲ್ಲಿ ಸೇನ್ ಒಬ್ಬಂಟಿಯಲ್ಲ. ಈಕೆಯ ಕುಟುಂಬದವರು ಕೂಡ ಹೆಣ್ಣನ್ನು ನೋಡಲು, ಮಾಡುವೆ ಮಾಡಿಸಲು ಹುಡುಗಿಯರ ಮನೆಗೆ ಬಂದಿದ್ದರು. ಆದರೆ ಅವರೆಲ್ಲರೂ ಈಗ ತಲೆ ಮರೆಸಿಕೊಂಡಿರುವ ಕಾರಣ,ಈಗ ಪೊಲೀಸರು ಈ ಕುಟುಂಬದ ಬೆನ್ನು ಹತ್ತಿದ್ದಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon