ನಿಮ್ಮ ಒಂದು ವರ್ಷದ ಪುಟ್ಟ ಮಗುವಿಗೆ ಏನು ತಿನ್ನಿಸಬೇಕೆಂದು ತಿಳಿಯದೆ ಸಂಕಷ್ಟದಲ್ಲಿ ಸಿಲುಕಿದ್ದೀರಾ ?ಇಲ್ಲಿ ನಿಮಗೋಸ್ಕರ ಕೆಲವು ವಿಷಯಗಳಿವೆ .
ನಿಮ್ಮ ಒಂದು ವರ್ಷದ ಮಗು ಈಗ ಚೆನ್ನಾಗಿ ಬೇಯಿಸಿದ ಬೇಕಾದಷ್ಟು ವೈವಿಧ್ಯವುಳ್ಳ ಆಹಾರಗಳನ್ನು ಸೇವಿಸಬಹುದು .ದಪ್ಪನಾದ ,ಗಟ್ಟಿಯಾದ ಆಹಾರವನ್ನು ಹೊರತು ಪಡಿಸಿ ,ನಿಮ್ಮ ಮಗುವಿಗೆ ಕೆಲವು ವಿಧದ ಆಹಾರಗಳಿಗೆ ಅಲರ್ಜಿಗಳು ಇದ್ದಲ್ಲಿ (ಲ್ಯಾಕ್ಟೋಸ್ ಮೇಲಿನ ಅಸಹಿಷ್ಣುತೆ ಮುಂತಾದವು).ಅವುಗಳನ್ನು ಬಿಟ್ಟು ಬೇರೆಲ್ಲ ಆಹಾರಗಳು ಸ್ವೀಕಾರಾರ್ಹವಾಗಿರುತ್ತವೆ.
ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಮಗುವಿನ ಆಹಾರದಿಂದ ತಿರುಳುಗಳ ಸೇವನೆಯನ್ನು ಮಾತ್ರ ತೆಗೆದು ಹಾಕಲು ಇದೀಗ ಒಳ್ಳೆಯ ಸಮಯ, ಬಹುಪಾಲು ವಯಸ್ಕರ ಆಹಾರವನ್ನು ಮಗು ಸುರಕ್ಷಿತವಾಗಿ ಅಗಿಯಬಹುದು ಮತ್ತು ಜೀರ್ಣಿಸಿಕೊಳ್ಳಬಹುದು.
ನಿಮ್ಮ ಮಗು ಇನ್ನೂ ಕಠಿಣವಾದ,ಅಗಿದು ತಿನ್ನುವಂತಹ ಆಹಾರವನ್ನು ಇಷ್ಟಪಡದಿದ್ದಲ್ಲಿ, ಅವಳನ್ನು /ಅವನನ್ನು ಒತ್ತಾಯಿಸಬೇಡಿ.ಅವನ /ಅವಳ ರುಚಿಗೆ ಹೊಂದಿಕೊಂಡಿರುವ ಆಹಾರಗಳೊಂದಿಗೆ ಕ್ರಮೇಣವಾಗಿ ಪ್ರಾರಂಭಿಸಿ.ಅಂತಿಮವಾಗಿ, ಅವಳು/ಅವನು ದ್ರವ ಆಹಾರಗಳ ಮೇಲಿನ ಆದ್ಯತೆಯನ್ನು ಮೀರಿ ಈ ಆಹಾರಗಳನ್ನು ಅಭ್ಯಾಸ ಮಾಡಲು ಆರಂಭಿಸುತ್ತಾರೆ .
ಇಲ್ಲಿ ವಾರಕ್ಕೆ ಅಗತ್ಯವಿರುವ ಪೌಷ್ಠಿಕಾಂಶವುಳ್ಳ ಸಮತೋಲಿತ ಆಹಾರದ ವೇಳಾಪಟ್ಟಿ ಇಲ್ಲಿದೆ, ಹಾಗಾಗಿ ನೀವು ಏನನ್ನು ಅಡುಗೆ ಮಾಡಬೇಕೆಂದು ನಿರ್ಧರಿಸುವ ಬಗ್ಗೆ ಒತ್ತಡಕ್ಕೆ ಒಳಗಾಗಬೇಕಾಗಿಲ್ಲ.
ಸೋಮವಾರ
ಆರಂಭಿಕ ಬೆಳಗಿನ ಜಾವ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ )
ಬೆಳಗಿನ ಉಪಹಾರ: ಅವಲಕ್ಕಿ
ಮಧ್ಯ ಬೆಳಿಗ್ಗೆ: ಚಿಕ್ಕು ಚೂರುಗಳು
ಊಟ: ಅನ್ನ,ಬೇಳೆ ಸಾರು
ರಾತ್ರಿಯ ಊಟ: ಚಪಾತಿ ಮತ್ತು ಬೆಂಡೆಕಾಯಿ
ತಡ ರಾತ್ರಿ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ )
ಮಂಗಳವಾರ
ಆರಂಭಿಕ ಬೆಳಗಿನ ಜಾವ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಬೆಳಗಿನ ಉಪಹಾರ: ಉಪ್ಪಿಟ್ಟು
ಮಧ್ಯ ಬೆಳಿಗ್ಗೆ: ಬಾಳೆ ಚೂರುಗಳು
ಊಟ: ಮೀನಿನ ಸಾರು ಮತ್ತು ಅನ್ನ
ರಾತ್ರಿಯ ಊಟ: ಪನೀರ್ ಪರಾಥಾ
ತಡ ರಾತ್ರಿ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಬುಧವಾರ
ಆರಂಭಿಕ ಬೆಳಗಿನ ಜಾವ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಬೆಳಗಿನ ಉಪಹಾರ: ರಾಗಿ ದೋಸೆ
ಮಧ್ಯ ಬೆಳಿಗ್ಗೆ: ದ್ರಾಕ್ಷಿ ಹಣ್ಣಿನ ಹೋಳುಗಳು
ಊಟ: ಮಜ್ಜಿಗೆ ಹುಳಿ ಮತ್ತು ಅನ್ನ
ರಾತ್ರಿಯ ಊಟ: ಆಲೂಗಡ್ಡೆ ಮಸಾಲಾದೊಂದಿಗೆ ದೋಸೆ
ತಡ ರಾತ್ರಿ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಗುರುವಾರ
ಆರಂಭಿಕ ಬೆಳಗಿನ ಜಾವ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಬೆಳಗಿನ ಉಪಹಾರ: ಸಾಬಕ್ಕಿಯ ಕಿಚಡಿ
ಮಧ್ಯ ಬೆಳಿಗ್ಗೆ: ಕಲ್ಲಂಗಡಿ ತುಣುಕುಗಳು
ಊಟ: ಮೊಸರನ್ನ
ರಾತ್ರಿಯ ಊಟ: ಮೊಟ್ಟೆಯ ಸಾರಿನೊಂದಿಗೆ ಅನ್ನ
ತಡ ರಾತ್ರಿ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಶುಕ್ರವಾರ
ಆರಂಭಿಕ ಬೆಳಗಿನ ಜಾವ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಬೆಳಗಿನ ಉಪಹಾರ: ಫ್ರೆಂಚ್ ಟೋಸ್ಟ್
ಮಧ್ಯ ಬೆಳಗ್ಗೆ: ಹುರಿದ ಆಲೂಗಡ್ಡೆ
ಊಟ; ಅನ್ನ ಮತ್ತು ಚೋಲೆ
ರಾತ್ರಿಯ ಊಟ: ಚಪಾತಿ ಮತ್ತು ಹೂಕೋಸು
ತಡ ರಾತ್ರಿ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಶನಿವಾರ
ಆರಂಭಿಕ ಬೆಳಗಿನ ಜಾವ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಬೆಳಗಿನ ಉಪಹಾರ: ಕಡ್ಲೆ ಹಿಟ್ಟಿನ ಪ್ಯಾನ್ ಕೇಕ್ಸ್
ಮಧ್ಯ ಬೆಳಿಗ್ಗೆ: ಸೌತೆಕಾಯಿ ಚೂರುಗಳು
ಊಟ: ಚಪಾತಿ ಮತ್ತು ಆಲೂಗಡ್ಡೆ
ರಾತ್ರಿಯ ಊಟ: ಬೆಳೆ ಮತ್ತು ಅನ್ನ
ತಡ ರಾತ್ರಿ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಭಾನುವಾರ
ಆರಂಭಿಕ ಬೆಳಗಿನ ಜಾವ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
ಬೆಳಗಿನ ಉಪಹಾರ: ಹಾಲಿನೊಂದಿಗೆ ಕಾರ್ನ್ ಫ್ಲೇಕ್ಸ್ ಗಳು
ಮಧ್ಯ ಬೆಳಿಗ್ಗೆ : ಕ್ಯಾರೆಟ್ ತುಣುಕುಗಳು
ಊಟ : ಇಡ್ಲಿ ಸಾಂಬಾರ್
ರಾತ್ರಿಯ ಊಟ : ಪನೀರ್ ಮತ್ತು ಪರಾಥ
ತಡ ರಾತ್ರಿ: ಸ್ತನ ಹಾಲು /ಮಿಶ್ರಣ (ಫಾರ್ಮುಲಾ)
