Link copied!
Sign in / Sign up
9
Shares

ಈ ವಿಷಯಗಳು ವೈಜ್ಞಾನಿಕವಾಗಿ ಸಾಬೀತಾಗಿದ್ದರೂ ನೀವು ನಂಬುವುದಿಲ್ಲ

ಹಳೆಯ ಕೆಲವು ಪದ್ದತಿಗಳು ಆಧುನಿಕ ಜನರಿಗೆ ಇಷ್ಟವಾಗುತ್ತಿಲ್ಲ,  ಮತ್ತು ಎಲ್ಲಾ ಹಳೆಯ ಪದ್ದತಿಗಳನ್ನು ಮೂಢನಂಬಿಕೆ ಎಂದು ಭಾವಿಸಿರುವವರೇ ಹೆಚ್ಚು, ಆದರೆ ಕೆಲವು ಇಂತಹ ಪದ್ದತಿಗಳನ್ನು ಮಾಡುವುದನ್ನು ವಿಜ್ಞಾನವು ಸರಿ ಎಂದು ಒಪ್ಪಿಕೊಂಡಿದೆ, ಅಂತಹ ಕೆಲವು ವಿಷಯಗಳು.

ಮಕ್ಕಳಿಗೆ ಹೊಸ ಬಟ್ಟೆಯನ್ನು ಧರಿಸದಿರಲು ಕಾರಣ

ನವಜಾತ ಶಿಶುಗಳಿಗೆ ಅಥವಾ ಹೊಸದಾಗಿ ನಿಮ್ಮ ಕುಟುಂಬ ಸೇರಿದ ಮುದ್ದು ಕಂದಮ್ಮನಿಗೆ ಹೊಸ ಉಡುಪುಗಳನ್ನು ಧರಿಸಬೇಡಿ ಎಂದು ನಿಮ್ಮ ಹಿರಿಯರು, ತಂದೆ ತಾಯಿಯರು ಅಥವಾ ನೆರೆಹೊರೆಯವರು ಹೇಳಿರುವುದನ್ನು ನೀವು ಕೇಳಿ ಅದು ಏಕೆ ಎಂಬ ಪ್ರಶ್ನೆ ಕಾಡುತ್ತಿರಬಹುದು.

ಅದಕ್ಕೆ ಕಾರಣ ಈಗ ತಾನೇ ಪ್ರಪಂಚಕ್ಕೆ ಕಾಲಿಟ್ಟಿರುವ ಮಗುವಿನ ತ್ವಚೆಯು ತುಂಬಾ ಸೂಕ್ಷ್ಮವಾಗಿದ್ದು, ಹೊಸ ಬಟ್ಟೆಯಲ್ಲಿ ಹಲವು ರಾಸಾಯನಿಕಗಳು ಇರುವ ಕಾರಣ ಅದು ಮಗುವಿನ ಚರ್ಮಕ್ಕೆ ಹಾನಿಮಾಡಬಹುದು.

ಮಗುವನ್ನು ಕೆಲ ವಾರಗಳ ಕಾಲ ಮನೆಯಿಂದ ಹೊರಗೆ ಕರೆತರಬೇಡಿ

ಮಗುವು ತುಂಬಾ ಸೂಕ್ಷ್ಮವಾಗಿದ್ದು ಹೊರಗಿನ ವಾತಾವರಣಕ್ಕೆ ಅಷ್ಟು ಬೇಗನೆ ಹೊಂದಿಕೊಳ್ಳುವುದಿಲ್ಲ. ಹೊರಗಿನ ವಾತಾವರಣದಿಂದ ಅನಾರೋಗ್ಯಕ್ಕೆ ಗುರಿಯಗಬಾರದೆಂದು.

ತಾಯಿಯು ಮನೆಯ ಹೊರಗೆ ಹೋಗುವಂತಿಲ್ಲ

ಕಾರಣ, ಹೆರಿಗೆಯ ನಂತರ ತಾಯಿಯ ದೇಹದಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ, ಮತ್ತು ಹಾರ್ಮೊನುಗಳಲ್ಲಿ ಏರುಪೆರಾಗಿರುತ್ತದೆ. ಜೊತೆಗೆ ತಾಯಿಯ ದೇಹ ದಣಿದಿದ್ದು ಪ್ರತಿರಕ್ಷಣ ವ್ಯವಸ್ಥೆಯು ಕಡಿಮೆಯಾಗಿರುತ್ತದೆ. ಇದರಿಂದ ತಾಯಿಯು ಕೂಡ ಹೊರಗಿನ ಕಲುಷಿತ ವಾತಾವರಣದಿಂದ ಅರೋಗ್ಯ ಸಮಸ್ಯೆ ಎದುರಿಸಬಾರದೆಂದು.

ನೀರು ಮುಟ್ಟುವಂತಿಲ್ಲ

ಸಾಮಾನ್ಯವಾಗಿ ಈ ಸಮಯದಲ್ಲಿ ತಾಯಿ ಆರೋಗ್ಯಕ್ಕೆ ಸಮಸ್ಯೆಯಾದರೆ ಅದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ನೀರು ಮುಟ್ಟಿ ಕೆಲಸ ಮಾಡುವುದರಿಂದ ತಾಯಿಗೆ ಶೀತವಾಗಬಹುದು, ಇದು ತಾಯಿಯಿಂದ ಮಗುವಿಗೂ ಶೀತವಾಗಬಹುದೆಂದು.

ಕೆಲವು ನಿರ್ದಿಷ್ಟ ಆಹಾರಗಳನ್ನು ನೀಡುವುದಿಲ್ಲ

ಏಕೆಂದರೆ, ತಾಯಿಗೆ ಈಗ ಪೌಷ್ಟಿಕ ಆಹಾರದ ಅಗತ್ಯವಿದೆ, ತಾನು ತಿನ್ನುವ ಆಹಾರಗಳಿಂದ ಮಗುವಿಗೂ ಪರಿಣಾಮ ಬೀರಬಹುದು ಎಂದು. ಉದಾಹರಣೆಗೆ, ಬೆಂಡೆಕಾಯಿ ತಿಂದರೆ ಶೀತವಾಗುವುದು ಎಂದು ಅದನ್ನು ನೀಡುವುದಿಲ್ಲ. ಈ ಸಮಯದಲ್ಲಿ ರುಚಿಕರ ಆಹಾರಕ್ಕಿಂತ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ.

ಬಾಣಂತಿಗೆ ಸಾಂಬ್ರಾಣಿ ಹೊಗೆ ನೀಡುವುದು

ತಾಯಿಯು ಸ್ನಾನ ಮಾಡಿದ ಬಳಿಕ, ಅವರಿಗೆ ಸಾಮಾನ್ಯವಾಗಿ ಸಾಂಬ್ರಾಣಿ ಹೊಗೆಯನ್ನು ನೀಡುತ್ತಾರೆ, ಏಕೆಂದರೆ, ಸ್ನಾನ ಮಾಡಿದ ಬಳಿಕ ಚೌಕದಿಂದ ತಲೆ ಹೊರೆಸಿಕೊಂಡರು ಕೂದಲಿನಲ್ಲಿ ನೀರು ಇದ್ದು ಅದು ತಲೆ ನೋವು ಅಥವಾ ಶೀತಕ್ಕೆ ಕಾರಣವಾಗುತ್ತದೆ ಎಂದು. ಸಾಂಬ್ರಾಣಿ ಹೊಗೆಯಿಂದ ಶ್ವಾಸಕೋಶದಲ್ಲಿ ಕಟ್ಟಿರುವ ಕಫಾ ಕೂಡ ಹೊರಬರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon