Link copied!
Sign in / Sign up
17
Shares

ನೀವು ವಾರದ ಯಾವ ದಿನ ಹುಟ್ಟಿದ್ದು? ಅದು ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ಬಿಚ್ಚಿಡುತ್ತದೆ !

ಇತ್ತಿಚಿಗೆ ಮಗುವಿನ ಜನ್ಮ ದಿನವನ್ನು ಪ್ರತಿ ವರ್ಷವು ಆಚರಿಸಿಕೊಳ್ಳುವರು, ನೀವು ಹುಟ್ಟಿದ ದಿನಾಂಕ ನಿಮಗೆ ನೆನಪಿರುತ್ತದೆ, ಆದರೆ ನೀವು ಯಾವ ವಾರ ಜನಿಸಿರುವಿರಿ ಎಂದು ನಿಮಗೆ ನೆನಪಿದೆಯೇ? ನೀವು ಜನಿಸಿದ ದಿನ, ಸಮಯ, ಮಾತ್ರವಲ್ಲದೆ ನೀವು ಜನಿಸಿದ ವಾರ ಕೂಡ ನಿಮ್ಮ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ.

ಜ್ಯೋತಿಷ್ಯದ ಪ್ರಕಾರ, ಒಬ್ಬ ಮನುಷ್ಯನ ಭವಿಷ್ಯವನ್ನು ನಿರ್ಧರಿಸಲು ಅವರು ಜನಿಸಿದ ದಿನಾಂಕ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ನೀವು ಜನಿಸಿದ ವಾರ ನಿಮ್ಮ ಜೀವನದ ಮೇಲೆ ನಿಗೂಢವಾಗಿ ಹಿಡಿತವನ್ನು ಸಾಧಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಾರದ ದಿನ

ನಮಗೆ ತಿಳಿದಿರುವಂತೆ, ವಾರದ ಪ್ರತಿ ದಿನವೂ, ತನ್ನದೇ ಆದ ವಿಶಿಷ್ಟ ಪರಿಸ್ಥಿತಿಯನ್ನು ಹೊಂದಿದೆ. ಹಾಗೆಯೆ ಜ್ಯೋತಿಷ್ಯ ಶಾಸ್ತ್ರವು ವಾರದ ಒಂದು ನಿರ್ದಿಷ್ಟ ದಿನಕ್ಕೆ ಒಂದು ಗ್ರಹವನ್ನು ನಿಯೋಜಿಸಿದೆ. ಇದರ ಬಗ್ಗೆ ತ್ವರಿತವಾಗಿ ತಿಳಿಯೋಣ ಬನ್ನಿ, ಸೂರ್ಯನು ಭಾನುವಾರವನ್ನು ಆಳುತ್ತಾನೆ, ಚಂದ್ರನು ಸೋಮವಾರ, ಮಂಗಳ ಗ್ರಹ ಮಂಗಳವಾರವನ್ನು, ಬುಧ ಗ್ರಹ ಬುಧವಾರವನ್ನು, ಗುರು ಗ್ರಹ ಗುರುವಾರವನ್ನು, ಶುಕ್ರ ಶುಕ್ರವಾರವನ್ನು, ಮತ್ತು ಶನಿ ಶನಿವಾರವನ್ನು ಆಳುತ್ತಾನೆ.

ಜ್ಯೋತಿಷ್ಯಶಾಸ್ತ್ರ ಮತ್ತು ವ್ಯಕ್ತಿತ್ವ ಸಂಪರ್ಕ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನೀವು ಜನಿಸಿದ ವಾರ, ನಿಮ್ಮ ವ್ಯಕ್ತಿತ್ವ ಮತ್ತು ನೀವು ಬೇರೆಯವರಿಗಿಂತ ಹೇಗೆ ಬಿನ್ನವಾಗಿರುವಿರಿ ಎಂಬುದನ್ನು ತಿಳಿಸುತ್ತದೆ. ಇದು ನೀವು ಯಾರು ಮತ್ತು ನೀವು ಮುಂದೆ ಏನಾಗಬೇಕೆಂದು ಬಯಸುವಿರಿ ಎಂಬುದನ್ನು ತಿಳಿಯಲು ಪ್ರಮುಖ ಅಂಶವಾಗಿದೆ. ನೀವು ಜನಿಸಿದ ವಾರ ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

ಸೋಮವಾರ

ಇವರು ಸ್ವಯಂ-ಪ್ರೇರೇಪಿತರಾಗುವ ವ್ಯಕ್ತಿಗಳು, ಮತ್ತು ಇವರು ತಮ್ಮ ಹಂಬಲ ಮತ್ತು ಒಳ್ಳೆಯ ಗುಣಗಳಿಗೆ ಹೆಸರುವಾಸಿ. ಇವರು ತಮ್ಮ ಸಂತೋಷ ಮತ್ತು ದುಃಖ ಎರಡನ್ನು ಒಂದೇ ಮನೋಭಾವದಲ್ಲಿ ಅನುಭವಿಸುವರು. ಇವರು ತಮ್ಮ ಪ್ರಾರಂಭದ ದಿನಗಳಲ್ಲಿ, ಶೈಕ್ಷಣಿಕವನ್ನು(ವಿಧ್ಯಾಭ್ಯಾಸವನ್ನು) ದ್ವೇಷಿಸುವರು ಆದರೆ ನಂತರ ಜ್ಞಾನದ ಮಹತ್ವವನ್ನು ತಿಳಿದು ಬುದ್ದಿವಂತರಾಗುವರು.

ಮಂಗಳವಾರ

ಇವರು ಸ್ವಲ್ಪ ಮುಂಗೋಪಿ ಆಗಿರುವರು, ಮತ್ತು ಈ ಕಾರಣದಿಂದ ಇವರು ಸ್ನೇಹಿತರ ಜೊತೆ ಅಥವಾ ಸಂಬಂಧಗಳಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇವರು ಸ್ವಾರ್ಥಿ ಕೂಡ ಆಗಿರುವರು.

ಬುಧವಾರ

ಇವರು ಧಾರ್ಮಿಕ ಮತ್ತು ಅಧ್ಯಾತ್ಮದ ಬಗ್ಗೆ ಹೆಚ್ಚು ತಮ್ಮ ಒಲವನ್ನು ತೋರಿಸುವರು. ಅವರು ದೇವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ಭಯ ಅವರಲ್ಲಿ ಕೆಟ್ಟ ಆಲೋಚನೆಗಳು ಮತ್ತು ಕೆಟ್ಟ ಮನೋಭಾವದಿಂದ ದೂರವಿರಿಸುತ್ತದೆ. ಇವರು ತಮ್ಮ ಬುದ್ಧಿಶಕ್ತಿಯನ್ನು ನಂಬುವರು.

ಗುರುವಾರ

ಇವರು ಬುದ್ಧಿಶಕ್ತಿ ಮತ್ತು ಸಾಹಸಮಯ ವ್ಯಕ್ತಿತ್ವವನ್ನು ಹೊಂದಿರುವರು, ಮತ್ತು ಇವರ ಕಷ್ಟದ ಸಮಯದಲ್ಲಿ ತಮ್ಮ ಬುದ್ದಿವಂತಿಕೆಯನ್ನು ಉಪಯೋಗಿಸಿ ಹೊರಬರುವುದಕ್ಕೆ ಹೆಸರುವಾಸಿ ಆಗಿರುವರು. ಇವರು ತಮ್ಮ ಸ್ನೇಹಿತರಿಂದ ಮತ್ತು ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಂದ ಪ್ರೀತಿಯನ್ನು ಸಂಗ್ರಹಿಸುತ್ತಾರೆ.

ಶುಕ್ರವಾರ

ಗುಂಪುಗಳಲ್ಲಿ ಇವರ ಹರ್ಷಚಿತ್ತ ಮತ್ತು ಆನಂದಿಸುವ ವರ್ತನೆಯಿಂದ ಇವರನ್ನು ಬೇಗನೆ ಕಂಡುಹಿಡಿಯಬಹುದು. ಅವರ ಸುತ್ತಲಿನ ವ್ಯಕ್ತಿಗಳಿಂದ ಇವರು ಅಪಾರ ಪ್ರಭಾವವನ್ನು ಹೊಂದಿರುವರು, ಅದು ಅವರ ಮಾತಿನ ಚಾಣಾಕ್ಷತನದಿಂದ. ಇವರ ಕಷ್ಟದ ದಿನಗಳಲ್ಲಿಯೂ ಕೂಡ ಇವರು ಆರಾಮವಾಗಿ ಅದನ್ನು ನಿಭಾಯಿಸುವರು, ಇದು ಅವರಿಗೆ ನೈಸರ್ಗಿಕವಾಗಿ ಬಂದಿರುತ್ತದೆ.

ಶನಿವಾರ

ಕೃಷಿ, ಬೇಸಾಯ ಅಥವಾ ವ್ಯವಸಾಯ ಕ್ಷೇತ್ರದಲ್ಲಿ ಆಳವಾಗಿ ಅಧ್ಯಯನ ಮಾಡಲು ಇವರು ಇಚ್ಛಿಸುತ್ತಾರೆ. ಇವರ ಯವ್ವನದಲ್ಲಿ ಇವರು ಹಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಅವರು ಬೆಳೆಯುತ್ತಿದ್ದಂತೆ, ಅವರ ಸುತ್ತಲಿನ ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವರು. ಇವರು ಅವರ ಸೋದರ ಸೋದರಿ ಮತ್ತು ಪೋಷಕರ ಜೊತೆ ಒತ್ತಾಯದ ಜೀವನವನ್ನು ಅನುಭವಿಸುತ್ತಾರೆ.

ಭಾನುವಾರ

ಭಾನುವಾರ ಜನಿಸಿರುವವರಿಗೆ ಜನ್ಮಸಹಿತ ಪೂರ್ವಜನ್ಮದ ನಂಟು ಇರುತ್ತದೆ ಮತ್ತು ಇವರು ಆರಾಮದಾಯಕ ಜೀವನ ಶೈಲಿಯನ್ನು ಅನುಭವಿಸುವರು. ಇವರು ಜೀವನದಲ್ಲಿ ನಿಧಾನವಾಗಿ ಏಳಿಗೆಯನ್ನು ಕಾಣುವರು ಮತ್ತು ಇವರಿಗೆ ಅಪಾರ ಅದೃಷ್ಟ ಇರುವುದು. ಇವರು ವಿದ್ಯಾಭ್ಯಾಸ ಮತ್ತು ಕಲೆಯ ವಿಭಾಗದಲ್ಲಿ ಘನತೆ ಮತ್ತು ಗೌರವವನ್ನು ಪಡೆಯುವರು. ಇವರು ತಮ್ಮ ಕುಟುಂಬವನ್ನು ಸಂತೋಷವಾಗಿರಿಸಲು ಶ್ರಮ ಪಡುವರು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon