Link copied!
Sign in / Sign up
4
Shares

ವೀಕ್ಷಿಸಿ : ಉದರದೊಳಗಿನ ಮಗು ಹೊರಗಿರುವ ಅವರ ಅಪ್ಪನ ಜೊತೆ ಹೇಗೆ ಆಟವಾಡುತ್ತದೆ !

ನಿಮಗೆ ಕೇಳಲು ಆಶ್ಚರ್ಯವಾಗಬಹುದು, ಉದರದೊಳಗಿನ ಮಗುವು ಅವರ ಅಪ್ಪನ ಜೊತೆ ಆಟವಾಡಲು ಹೇಗೆ ಸಾಧ್ಯ ? ನಿಮ್ಮಲ್ಲಿ ಈ ಪ್ರಶ್ನೆ ಬರುವುದು ಸಹಜ ಬರಿ ಲೇಖನ ಬರೆದರೆ ನೀವು ಇದನ್ನು ನಂಬದೇ ಇರಬಹುದು ಅದಕ್ಕೆ ನಾವು ಈ ಲೇಖನವನ್ನು ವಿಡಿಯೋ ಜೊತೆ ಬರೆದಿರುವುದು. ಮಗುವು ಅವರ ಅಪ್ಪನ ಜೊತೆ ಹೇಗೆ ಆಟವಾಡುತ್ತದೆ ಎಂಬುದನ್ನು ನೀವು ನಿಮ್ಮ ಕಣ್ಣಾರೆ ನೋಡಿ ನಿಮ್ಮ ಅನುಭವವನ್ನು ತಿಳಿಸಿ.

ಮಗುವು ಉದರದೊಳಗೆ ತನ್ನ ತಾಯಿಯ ಜೊತೆ ನೇರ ಸಂಪರ್ಕವನ್ನು ಹೊಂದಿದ್ದು, ನೀವು ಹೊರಗಡೆ ಮಾಡುವ ಕೆಲಸ, ಹಾಡು ಕೇಳುವುದು, ಟಿವಿ ನೋಡುವುದು ಮುಂತಾದ ನೀವು ಮಾಡುವ ಎಲ್ಲಾ ಕೆಲಸಗಳನ್ನು ಗಮನಿಸುತ್ತದೆ. ಮಗುವು ತಾಯಿಯ ಕ್ರಿಯೆಗೆ ಪ್ರತಿಕ್ರಿಯೆ ನೀಡುತ್ತದೆ.

ಈ ವಿಡಿಯೋದಲ್ಲಿ ತಂದೆಯು ತಾಯಿಯ ಉದರವನ್ನು ಮುಟ್ಟಿದಾಗ ಮಗುವು ಅದಕ್ಕೆ ತಾಯಿಯ ಉದರವನ್ನು ಒದೆಯುವ ಮೂಲಕ ಪ್ರತಿಕ್ರಿಯೆ ನೀಡುತ್ತದೆ.

ತಾಯಿಯು ತನ್ನ ಉದರವನ್ನು ಮುಟ್ಟಿದಾಗ, ಮಗುವು ಕೂಡ ತಾಯಿಯ ಉದರವನ್ನು ಒದೆಯುವ ಮೂಲಕ ಪ್ರತಿಕ್ರಿಯೆ ನೀಡುತ್ತದೆ. ೧೧ ವಾರಗಳು ಕಳೆಯುತ್ತಿದ್ದಂತೆ ಆಮ್ನಿಯೋಟಿಕ್ ದ್ರವದ ಚೀಲದಲ್ಲಿ ನಡೆದಾಡಲು ಪ್ರಾರಂಭಿಸುವುದು. ತಾಯಿಯು ಖುಷಿಯಾಗಿದ್ದಾಗ ಮಗುವು ತನ್ನ ಉದರದೊಳಗೆ ಖುಷಿಯಿಂದ ಕುಣಿಯುವುದು. ಮಗುವು ಭಾಷೆ ಮತ್ತು ಸಂಗೀತದ ಸ್ಮರಣ ಶಕ್ತಿಯನ್ನು ವೃದ್ಧಿಪಡಿಸಿಕೊಳ್ಳುವುದು. ೨೫ನೇ ವಾರದಲ್ಲಿ ಮಗುವು ಕಣ್ಣಿನ ರೆಪ್ಪೆಯನ್ನು ಮಿಟುಕಿಸುತ್ತದೆ ಮತ್ತು ಬೆಳಕಿಗೆ ಪ್ರತಿಕ್ರಿಯಿಸುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon