Link copied!
Sign in / Sign up
21
Shares

ವಿಡಿಯೋ : ನಿಮ್ಮ ಹೊಟ್ಟೆಯಲ್ಲಿ ಮಗು ಮಾಡುವ ಪ್ರತಿಯೊಂದು ಕೆಲಸವನ್ನು ನೀವೇ ನೋಡಿರಿ!

ನಿಮಗೆಲ್ಲಾ ತಿಳಿದಿದೆ, ಮಗುವು ತಾಯಿಯ ಗರ್ಭದೊಳಗೆ ೯ ತಿಂಗಳು ಬೆಳೆಯುತ್ತದೆ ಎಂದು, ಆದರೆ ಮಗುವು ತನ್ನ ತಾಯಿಯ ಗರ್ಭದೊಳಗೆ ಏನೆಲ್ಲಾ ಕೀಟಲೆ, ತರಲೆ, ಆಟಗಳನ್ನು ಆಡುತ್ತದೆ ಎಂಬುದು ನಿಮಗೆ ಗೊತ್ತೇ? ತಾಯಿಯಂದಿರಿಗೆ ಮಗುವು ಉದರದೊಳಗೆ ಆಡುವುದು ಅನುಭವಕ್ಕೆ ಬರುತ್ತದೆ, ಆದರೆ ನಿಜವಾಗಿಯೂ ಮಗು ಏನು ಮಾಡುತ್ತಿದೆ ಎಂಬುದು ಗೊಂದಲವಾಗಿರುತ್ತದೆ, ಅಥವಾ ತಾಯಿಯು ಮಗುವು ಈಗ ಹೀಗೆ ಮಾಡುತ್ತಿರಬಹುದೆಂದು ಊಹಿಸಿಕೊಳ್ಳಬಹುದು ಅಷ್ಟೇ, ಆದರೆ ನಿಮ್ಮ ಗೊಂದಲಗಳಿಗೆ ಸ್ಪಷ್ಟ ಚಿತ್ರಣ ನೀಡಲು ನಾವು ನಿಮಗಾಗಿ ಈ ಲೇಖನವನ್ನು ವಿಡಿಯೋ ಜೊತೆ ಬರೆದಿದ್ದೇವೆ.

ಮಗುವು ಏನೆಲ್ಲಾ ಮಾಡುವುದು!
೧.ಹೆದರಬಹುದು

ಹಠಾತ್ ನೇ ಬರುವ ಜೋರು ಶಬ್ದದಿಂದ ಮಗುವು ಗಾಬರಿಗೊಳ್ಳಬಹುದು. ಅದು ನಾಯಿ ಬೊಗಳುವುದು, ತಾಯಿಯ ಸೀನು, ಪಟಾಕಿ ಶಬ್ದ ಯಾವುದೇ ಆಗಿರಬಹುದು.

೨.ಬಿಕ್ಕಳಿಸುತ್ತದೆ

ಗರ್ಭದೊಳಗೆ ಇರುವಾಗಲು ಕೂಡ ಮಗುವು ಬಿಕ್ಕಳಿಸಬಹುದು. ಮತ್ತು ಮಗುವು ಬಿಕ್ಕಳಿಸಿದಾಗ ತಾಯಿಯ ಉದರ ಅಳ್ಳಾಡಿದಂತೆ ತಾಯಿಗೆ ಅನುಭವ ಆಗುತ್ತದೆ, ತಾಯಿಯು ಅದನ್ನು ಅನುಭವಿಸಬಹುದು.

೩.ವಿಸರ್ಜಿಸುತ್ತದೆ

ಇದು ಕೇಳಲು ಅಸಹ್ಯಕರವಾಗಿರಬಹುದು, ಆದರೆ ಶಿಶುವು ನಿಜವಾಗಲೂ ತಾಯಿಯ ಗರ್ಭದಲ್ಲಿ ಮೂತ್ರವಿಸರ್ಜನೆಯನ್ನು ಮಾಡುತ್ತದೆ.

೪.ಅಳುತ್ತದೆ

ಶಿಶುವು ಗರ್ಭದೊಳಗೆ ನಿಜವಾಗಿಯೂ ಕೆಲವು ಬಾರಿ ಅಳುತ್ತದೆ, ಆದರೆ ಅದನ್ನು ನೀವು ಕೇಳಿಸಿಕೊಳ್ಳಲು ಆಗುವುದಿಲ್ಲ ಅಷ್ಟೇ.

೫.ಆಲಿಸುತ್ತದೆ

ಶಿಶುವಿಗೆ ಸಂಪೂರ್ಣವಾಗಿ ಕಿವಿ ಬೆಳವಣಿಗೆಯಾಗದಿದ್ದರೂ, ಮಗುವು ಗರ್ಭದೊಳಗೆ ನೀವು ಮಾತನಾಡುವುದನ್ನು, ಹೊರಗಿನ ಶಬ್ದವನ್ನು ಆಲಿಸಲು ಶುರುಮಾಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon