Link copied!
Sign in / Sign up
6
Shares

ತ್ವಚೆಯ ಕಪ್ಪು ಕಲೆಗಳನ್ನು ನಿವಾರಿಸುವುದು ಹೇಗೆ?

ಸಾಮಾನ್ಯವಾಗಿ ತ್ವಚೆಯು ಯಾವುದೇ ಕಲೆಗಳಿಲ್ಲದೆ, ಹೊಳಪಿನಿಂದ ಕೂಡಿದ್ದು ಸೌಂದರ್ಯವತಿ ಆಗಿರಬೇಕು ಎಂಬುದು ಪ್ರತಿ ಹುಡುಗಿಯರ ಬಯಕೆ. ಆದರೆ ಇತ್ತೀಚಿನ ಆಧುನಿಕ ಜೀವನ ಶೈಲಿ, ಮಾಲಿನ್ಯ ವಾತಾವರಣ ನಿಮ್ಮ ಸುಂದರ ತ್ವಚೆಯನ್ನು ಹಾಳು ಮಾಡಿರಬಹುದು. ಅದರಲ್ಲೂ ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಯ ಕೆಲವು ಭಾಗದಲ್ಲಿ ಕಪ್ಪು ಸುತ್ತಿಕೊಂಡು ನಿಮ್ಮ ಸೌಂದರ್ಯವನ್ನು ಕುಗ್ಗುವಂತೆ ಮಾಡಿರಬಹುದು. ಅದರಲ್ಲೂ ಕುತ್ತಿಗೆಯ ಭಾಗ ಕಪ್ಪಾಗುವುದು ಸಾಮಾನ್ಯವಾಗಿದ್ದು, ತ್ವಚೆಯ ಕೆಲವು ಭಾಗ ಕಪ್ಪು ಸುಟ್ಟುಕೊಂಡಿರುವುದು ನಿಮ್ಮನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಬಹುದು. ಚಿಂತಿಸದಿರಿ ಇಲ್ಲಿ ನೀಡಿರುವ ಕೆಲವು ನೈಸರ್ಗಿಕ ವಿಧಾನಗಳು ನಿಮಗೆ ಖಂಡಿತ ಸಹಾಯ ಮಾಡುತ್ತದೆ.

೧.ಶ್ರೀಗಂಧ

ಶ್ರೀಗಂಧದ ಪುಡಿಯನ್ನು ಗುಲಾಬಿ ರಸದ ಜೊತೆ ಸೇರಿಸಿ ನಿಮ್ಮ ತ್ವಚೆಯಲ್ಲಿ ಕಪ್ಪು ಸುತ್ತುಕೊಂಡಿರುವ ಜಾಗಕ್ಕೆ ಹಚ್ಚಿ ೧೫ ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.

೨.ತೆಂಗಿನ ಹಾಲು

ನಿಮ್ಮ ತ್ವಚೆಯಲ್ಲಿ ಕಪ್ಪಾಗಿರುವ ಜಾಗವನ್ನು ಸ್ವಚ್ಛಗೊಳಿಸಿ, ಒಂದು ಬಟ್ಟಲಲ್ಲಿ ತೆಂಗಿನ ಹಾಲನ್ನು ಹಾಕಿ, ಹತ್ತಿ ಉಂಡೆಯನ್ನು ತೆಂಗಿನ ಹಾಲೊಳಗೆ ಹಜ್ಜಿ ಅದನ್ನು ತ್ವಚೆಯ ಮೇಲೆ ನಿಧಾನವಾಗಿ ಸವರಿ ಅರ್ಧ ಗಂಟೆಗಳ ಕಾಲ ಹಾಗೆಯೆ ಬಿಡಿ, ನಂತರ ಶುಚಿ ಮಾಡಿಕೊಳ್ಳಿ.

೩.ಅಕ್ಕಿಹಿಟ್ಟು

ಅಕ್ಕಿಹಿಟ್ಟಿಗೆ ತ್ವಚೆಯನ್ನು ಬೆಳ್ಳಗಾಗಿಸುವ ಗುಣ ಇದ್ದು, ಕಪ್ಪು ಕಲೆಗಳನ್ನು ತೆಗೆಯಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಕ್ಕಿಹಿಟ್ಟನ್ನು ನೀರಿನ ಜೊತೆ ಕಲಸಿ, ತ್ವಚೆಗೆ ಹಚ್ಚಿ ೨೦ ನಿಮಿಷಗಳ ನಂತರ ತ್ವಚೆಯನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

೪.ನಿಂಬೆರಸ

ನಿಂಬೆರಸದಲ್ಲಿ ತ್ವಚೆಯನ್ನು ಬಿಳಿಯಾಗಿಸುವ ಅಂಶವು ಹೆಚ್ಚಾಗಿದ್ದು, ತ್ವಚೆಯ ಹೊಳಪನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ನಿಂಬೆರಸವನ್ನು ಗುಲಾಬಿ ರಸದ ಜೊತೆ ಸೇರಿಸಿ ಹತ್ತಿಯ ಸಹಾಯದಿಂದ ಇದನ್ನು ತ್ವಚೆಗೆ ಹಚ್ಚಿ, ಇಡೀ ರಾತ್ರಿ ನಿಮ್ಮ ತ್ವಚೆಯ ಮೇಲೆ ಇರಲು ಬಿಡಿ. ಒಂದು ತಿಂಗಳು ಸತತ ಇದನ್ನು ಮಾಡುವುದರಿಂದ ನಿಮ್ಮ ತ್ವಚೆಯಲ್ಲಿನ ಕಪ್ಪು ಕಲೆಗಳು ನಿವಾರಣೆಯಾಗುವುದರ ಜೊತೆಗೆ ತ್ವಚೆಯು ಬೆಳ್ಳಗಾಗುವುದು.

೫.ಟಮೋಟ

ಟಮೊಟೊವನ್ನು ನೇರವಾಗಿ ನಿಮ್ಮ ತ್ವಚೆಗೆ ಬಳಸಬಹುದು, ಟಮೋಟದ ರಸವನ್ನು ನಿಮ್ಮ ತ್ವಚೆಗೆ ಹಚ್ಚಿ ೧೦ ನಿಮಿಷಗಳ ಬಳಿಕ ತ್ವಚೆಯನ್ನು ತೊಳೆಯಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon