Link copied!
Sign in / Sign up
1
Shares

ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ಸರಳ ಮತ್ತು ಅಗ್ಗವಾದ ವಿಧಾನಗಳು

ನೀವು ದಿನಕ್ಕೆ ಎರಡು ಬಾರಿ ತ್ವಚೆಯನ್ನು ಶುಚಿಮಾಡುವಿರಿ, ಮತ್ತು ಮೊಡವೆಗಳನ್ನು ಎಂದಿಗೂ ಕೈಯಿಂದ ತೆಗೆಯಲು ಪ್ರಯತ್ನಿಸಬೇಡಿ. ಇದನ್ನು ಮಾಡಿದರೆ ವಯಸ್ಕ ಸುಂದರ ತ್ವಚೆ ಪಡೆಯುವುದು ಕಷ್ಟವಾದೀತು. ಹೊಳಪಿನ ತ್ವಚೆ ಪಡೆಯಲು ನಿಮ್ಮ ಕೆಲವು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ.

೧.ನಿಮ್ಮ ಹಾಸಿಗೆ ಜೊತೆ ಗುಣಮಟ್ಟದ ಸಮಯವನ್ನು ಕಳೆಯಿರಿ

ನಿದ್ರೆ ಮಾಡುವ ಸಮಯದಲ್ಲಿ ಹಳೆಯ ಕಣ್ಣಿಗೆ ಕ್ರೀಮ್ ಹಚ್ಚುವ ಅಭ್ಯಾಸವನ್ನು ಬಿಟ್ಟು ಬಿಡಿ. ಕಡಿಮೆ ನಿದ್ರೆ ಮಾಡುವ ವ್ಯಕ್ತಿಗಳಿಗೆ ಕಣ್ಣಿನ ಕೆಳಗೆ ಗೆರೆ ಮೂಡುವುದು ಸಹಜ, ವರ್ಣದ್ರವ್ಯ ಕಡಿಮೆ ಆಗುವುದು ಮತ್ತು ಚರ್ಮ ಜೋತು ಬೀಳುವುದು ಸಾಮಾನ್ಯವಾಗುತ್ತದೆ. ಚೆನ್ನಾಗಿ ನಿದ್ರೆ ಮಾಡುವುದು ನಿಮ್ಮ ತ್ವಚೆ ಸೂರ್ಯನ ಕಿರಣಗಳಿಂದ ಅನುಭವಿಸಿದ ಒತ್ತಡವನ್ನು ಮತ್ತು ಬೇರೆ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಿ ಚರ್ಮ ಹೊಳಪನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯ ಆಗುತ್ತದೆ. ರಾತ್ರಿ ೭ ರಿಂದ ೯ತಾಸು ನೆಮ್ಮದಿಯ ನಿದ್ರೆ ಮಾಡುವುದರಿಂದ ತ್ವಚೆಯು ತಾಜಾತನವನ್ನು ಪಡೆಯುದರ ಜೊತೆಗೆ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆ.

೨.ತ್ವಚೆ ಸ್ನೇಹಿ ಆಹಾರವನ್ನು ಆಯ್ಕೆಮಾಡಿಕೊಳ್ಳಿ

ಒಮೇಗಾ ೩ ಇರುವ ಆಹಾರ ಪದಾರ್ಥಗಳು ತ್ವಚೆಯ ಉರಿಯೂತವನ್ನು ಕಡಿಮೆ ಮಾಡಿ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತವೆ. ಮತ್ತು ತ್ವಚೆಯಲ್ಲಿ ತೇವಾಂಶವನ್ನು ಕಾಪಾಡುತ್ತವೆ. ಇದರ ಜೊತೆಗೆ ನೀವು ಹೆಚ್ಚು ನೀರು ಕುಡಿಯುವುದು ಚರ್ಮ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಇದು ಮುಖದ ಮೇಲೆ ಬರುವ ರಿಂಕಲ್ಸ್, ಗೆರೆಗಳು ಇತ್ಯಾದಿಗಳನ್ನು ತಡೆಯುತ್ತದೆ.

೩.ನಿಮ್ಮ ಫೋನ್ ಅನ್ನು ಶುಚಿ ಮಾಡಿ

ನೀವು ಪ್ರತಿ ದಿನ ಮಾತನಾಡಲು ಬಳಸುವ ಫೋನ್ ಅನ್ನು ಒಂದು ಶುದ್ಧ ಬಟ್ಟೆಯಿಂದ ಒರೆಸಿ. ಏಕೆಂದರೆ ಇದು ನಿಮ್ಮ ತ್ವಚೆಯ ಮೇಲೆ ಬ್ಯಾಕ್ಟೀರಿಯಾ ಅಥವಾ ನಿಮ್ಮ ಬೆವರು ಮತ್ತೆ ನಿಮ್ಮ ಮುಖದ ಮೇಲೆ ಕೂತು ತ್ವಚೆಯ ಆರೋಗ್ಯ ಹಾಳಾಗುವಂತೆ ಮಾಡಬಹುದು. ಒಂದು ವೇಳೆ ನೀವು ದೀರ್ಘ ಕಾಲ ಮಾತನಾಡಲು ಬಯಸಿದರೆ ಹೆಡ್ ಫೋನ್ಸ್ ಅನ್ನು ಬಳಸುವುದು ಉತ್ತಮ.

೪.ತ್ವಚೆಯ ರಕ್ಷಣೆ

ಆಧುನಿಕ ಜೀವನ ಶೈಲಿ ಮತ್ತು ಮಾಲಿನ್ಯ ನಿಮ್ಮ ತ್ವಚೆಯ ಆರೋಗ್ಯವನ್ನು ಹಾಳು ಮಾಡಬಹುದು. ಜೊತೆಗೆ ೯ ಗಂಟೆಯ ನಂತರ ಸೂರ್ಯನ ಕಿರಣ ನಿಮ್ಮ ಚರ್ಮ ಕಪ್ಪು ಸುತ್ತುಕೊಳ್ಳುವಂತೆ ಮಾಡುತ್ತದೆ. ಅದಕ್ಕಾಗಿ ನೀವು ನಿಮ್ಮ ತ್ವಚೆಯ ರಕ್ಷಣೆ ಮಾಡುವುದು ಅಗತ್ಯ. ರಾಸಾಯನಿಕ ಕ್ರೀಮ್ ಗಳನ್ನು ಬಳಸದೆ ಲೋಗಸರ, ನಿಂಬೆಹಣ್ಣಿನಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸುವುದು ಒಳ್ಳೆಯದು. ಎಳನೀರನ್ನು ಕುಡಿಯುವುದು ತ್ವಚೆಯ ಹೊಳಪನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ನೀವು ಹೊರಗೆ ಹೋಗುವ ಮುನ್ನ, ಮತ್ತು ಮನೆಗೆ ಬಂದ ತಕ್ಷಣ ತ್ವಚೆಯನ್ನು ತೊಳೆಯುವುದು ಉತ್ತಮ. ದಿನಕ್ಕೆ ಕನಿಷ್ಠ ಎರಡು ಬಾರಿ ತ್ವಚೆಯನ್ನು ನೀರಿನಿಂದ ತೊಳೆಯಿರಿ. ಆದಷ್ಟು ನೀರನ್ನು ಸೇವಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon