Link copied!
Sign in / Sign up
6
Shares

ತ್ವಚೆ ಕಳೆಗುಂದುತ್ತಿರುವ ೪ ಚಿಹ್ನೆಗಳು ಮತ್ತು ಅದನ್ನು ತಡೆಯಲು ಸಲಹೆಗಳು

ನೀವು ದೊಡ್ದವರಾಗುತ್ತಿದ್ದಂತೆ, ನಿಮ್ಮ ತ್ವಚೆಯು ನಿಮ್ಮ ವಯಸ್ಸಿನಂತೆ ಹಳೆಯದಾಗುತ್ತ ಕಳೆಗುಂದಲು ಪ್ರಾರಂಭಿಸುತ್ತದೆ. ನಿಮಗೆ ವಯಸ್ಸಾದಂತೆ, ನಿಮ್ಮ ತ್ವಚೆಯು ಮೃದುತ್ವ, ಕೋಮಲತೆ, ಕಾಂತೀಯತೆ ಮತ್ತು ಹೊಳಪನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ನಿಮ್ಮ ತ್ವಚೆಯು ಕಾಂತಿ ಕಳೆದುಕೊಳ್ಳುವುದು, ಒಣಗಲು ಪ್ರಾರಂಭಿಸುವುದು ಮತ್ತು ಕಪ್ಪು ಮಚ್ಚೆಗಳು ಕಾಣಲು ಶುರುವಾಗುವುದನ್ನು ನೀವು ಗಮನಿಸಬಹುದು. ಮಹಿಳೆಯರೇ, ಇದು ಚರ್ಮಕ್ಕೆ ವಯಸ್ಸಾಗುತ್ತಿರುವುದರ ಚಿಹ್ನೆ, ಇದನ್ನು ನೀವು ಕಡೆಗಣಿಸುವಂತಿಲ್ಲ. ನಿಮ್ಮ ತ್ವಚೆ ಮೊದಲಿನ ಹೊಳಪನ್ನು ಪಡೆಯಲು ಈ ಕ್ಷಣದಿಂದಲೇ ತಯಾರಿ ಮಾಡಿಕೊಳ್ಳಿ.

ಮೂಲಭೂತವಾಗಿ ನಿಮ್ಮ ಚರ್ಮವು ಕಾಲಜನ್ ಮತ್ತು ಎಲಾಸ್ಟಿನ್ ನ ಫೈಬರ್ ಮೆಶ್ವರ್ಕ್(ಜಾಲರಿ) ಆಗಿದೆ. ಇವುಗಳು ನಿಮ್ಮ ಚರ್ಮದ ಸ್ಥಿತಿಯನ್ನು ಉಳಿಸಿಕೊಳ್ಳುವ ಪ್ರೋಟೀನ್ ಗಳು, ಮತ್ತು ನಿಮ್ಮ ಚರ್ಮ ವಿಸ್ತರಿಸಿದಾಗ, ಈ ಪ್ರೊಟೀನ್ ವ್ಯೂಹ(ಮ್ಯಾಟ್ರಿಕ್ಸ್) ಅದನ್ನು ಮತ್ತೆ ಸರಿಯಾದ ಸ್ಥಳಕ್ಕೆ ಬಂಧಿಸುತ್ತದೆ. ನಿಮಗೆ ವಯಸ್ಸಾದಂತೆ, ಈ ಫೈಬರ್ ವ್ಯೂಹ ದುರ್ಬಲಗೊಳ್ಳುತ್ತದೆ, ಮತ್ತು ತ್ವಚೆಯು ಅದರ ಸ್ಥಿತಿಯನ್ನು ಹಿಡಿದಿಟ್ಟುಕೊಳ್ಳುವ ರಚನೆಯು ಶಕ್ತಿಗುಂದುವುದರಿಂದ ಚರ್ಮವು ಸೊರಗಲು(ಜೋಲುಬಿಳಲು/ ಬಾಗಲು) ಆರಂಭಿಸುತ್ತದೆ. ಇದರಿಂದ ತ್ವಚೆಯು ತೆಳುವಾಗುತ್ತದೆ, ತನ್ನ ಪುಷ್ಟಿಯನ್ನು ಕಳೆದುಕೊಳ್ಳುತ್ತದೆ, ಇದರಿಂದ ನಿಮ್ಮ ತ್ವಚೆಯ ಕೋಮಲತೆಯನ್ನು ಕಳೆದುಕೊಳ್ಳುವಿರಿ.

ಇನ್ನಷ್ಟು ಚಿಹ್ನೆಗಳನ್ನು ತಿಳಿಯಲು ಮತ್ತು ಅದನ್ನು ತಡೆಯಲು ಮುಂದೆ ಓದಿ.,

೧. ಮಂಕಾದ ತ್ವಚೆ

ನಿಮ್ಮ ತ್ವಚೆಯು ಮಂಕಾದರೆ, ಒಣಗುತ್ತದೆ, ಅಥವಾ ಚರ್ಮ ಒಣಗಿದರೆ, ತ್ವಚೆಯು ಮಂಕಾದ ಹಾಗೆ ಕಾಣುತ್ತದೆ. ನಿಮ್ಮ ಚರ್ಮವು ಒಣ ಚರ್ಮವಾದಗ(ಡ್ರೈ ಸ್ಕಿನ್), ತ್ವಚೆಯು ಮಂಕಾಗಿ, ತನ್ನ ಕಾಂತಿಯುತ ಹೊಳಪನ್ನು ಕಳೆದುಕೊಳ್ಳುತ್ತದೆ. ನಿಮ್ಮ ತ್ವಚೆಯು ಸುಕ್ಕು ಬೀಳುವುದನ್ನು, ಬಿರುಕು ಬಿಟ್ಟ ಹಾಗೆ ಕಾಣಿಸುವುದನ್ನು ನೀವು ಗಮನಿಸಬಹುದು. ನಿಮಗೆ ವಯಸ್ಸಾದಂತೆ, ಜೀವಕೋಶಗಳ ಕ್ರಯವಿಕ್ರಯ ಕಡಿಮೆಯಾಗಿ ನಿಮ್ಮ ಮೇಲ್ಮೈ(ಹೊರ) ಪದರ ಮಂಕಾಗುತ್ತದೆ. ಈಗ ಇದನ್ನು ಸರಿಪಡಿಸುವುದು ಹೇಗೆ? ಶುಷ್ಕ, ತೆಳುವಾದ ಮತ್ತು ಮಂಕಾದ ಚರ್ಮದ ಪದರವನ್ನು ಸರಳವಾಗಿ ತೆಗೆದುಹಾಕಿರಿ. ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದರೆ, ನಿಮ್ಮ ಚರ್ಮವೈದ್ಯರನ್ನು ಬೇಟಿ ಮಾಡಿ. ನಿಮ್ಮ ತ್ವಚೆಯನ್ನು ತೇವಾಂಶದಿಂದ ಇರಿಸಿ. ಕುರುಕಲು ತಿಂಡಿ, ಸಕ್ಕರೆಯ ಸೇವನೆಯನ್ನು ಬಿಡುವುದು, ಮತ್ತು ಹೆಚ್ಚು ಹಸಿರು ತರಕಾರಿ, ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ನಿಮ್ಮ ಚರ್ಮಕ್ಕೆ ಹೊಂದುವ ಸೌಂದರ್ಯ ಉತ್ಪನ್ನಗಳನ್ನು ವೈದ್ಯರಿಂದ ಪಡೆದುಕೊಳ್ಳಿ.

೨. ಕಪ್ಪು ಕಲೆಗಳು/ಮಚ್ಚೆಗಳು

ನಿಮ್ಮ ಮುಖದ ಮೇಲೆ ಬರುವ ಕಪ್ಪು ಕಲೆಗಳಿಗೆ/ಗುರುತುಗಳಿಗೆ ಕಾರಣ ಸೂರ್ಯನ ಯು.ವಿ. ಕಿರಣಗಳಿಂದ ಹಾನಿಗೊಳಗಾದ ಚರ್ಮದ ಜೀವಕೋಶಗಳು. ಈ ಯು.ವಿ. ಕಿರಣಗಳು ನಿಮ್ಮ ತ್ವಚೆಯನ್ನು ಸ್ಪರ್ಶಿಸಿದಾಗ, ನಿಮ್ಮ ಮೇಲ್ಮೈ ಚರ್ಮದಲ್ಲಿ, ಒರಟುತನ, ತ್ವಚೆ ಒಣಗುವುದು, ಕಪ್ಪು ಕಲೆಗಳು ಬರುವುದು. ಕಪ್ಪು ಕಲೆಗಳಿಗೆ ಕಾರಣ, ಸೂರ್ಯನ ಕಿರಣ, ಊರಿಯುತ, ಮೊಡವೆ, ಚರ್ಮ ಗಾಯಗಳು. ಅದ್ದರಿಂದ ಮಹಿಳೆಯರೇ, ಸುರ್ಯತಾಪಕ್ರೀಂ(ಸನ್ ಕ್ರೀಂ) ಅನ್ನು ನಿಮ್ಮ ಉಪಯೋಗಕ್ಕೆ ಬರುವಂತೆ ಅದರ ಮಾಯಗುಣವನ್ನು ಬಳಸಿಕೊಳ್ಳಿ. ನಿಮ್ಮ ತ್ವಚೆಗೆ ಹೊಂದುವ, UVA ಮತ್ತು UVB ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಿ. ಮತ್ತೆ ನಿಮ್ಮ ತ್ವಚೆಯನ್ನು ತೇವಾಂಶದಿಂದ ಇರಿಸುವುದನ್ನು ಮರೆಯದಿರಿ.

೩. ತೆಳು ಗೆರೆಗಳು ಮತ್ತು ಸುಕ್ಕುಗಟ್ಟಿದ ತ್ವಚೆ

ನಾವು ಎಲ್ಲರೂ ಕೇಳಿರುವ, ತಿಳಿದಿರುವ ವಿಷಯ, ಮತ್ತು ವಯಸ್ಸಾದಂತೆ, ಎಲ್ಲರಲ್ಲೂ ಕಾಣುವ ಸರ್ವೇ ಸಾಮಾನ್ಯ ಲಕ್ಷಣ ಮತ್ತು ಎಲ್ಲರಿಗೂ ಕಾಣುವಂತಹ ಚಿಹ್ನೆಗಳು ಇವಾಗಿವೆ. ಕಾಲಜನ್ ಎಂಬ ಅಂಶವು ನಿಮ್ಮ ತ್ವಚೆಯಲ್ಲಿ ಕಡಿಮೆಯಾಗುವುದು ಇದಕ್ಕೆ ಕಾರಣ, ಇದರಿಂದಾಗಿ ಸ್ಥಿತಿಸ್ಥಾಪಕತ್ವ ಮತ್ತು ಚರ್ಮದ ಪರಿಮಾಣವನ್ನು ಕಡಿಮೆ ಮಾಡುತ್ತದೆ, ಇದರಿಂದ ತೆಳು ರೇಖೆಗಳು ಮತ್ತು ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾದವರಲ್ಲಿ ಇದು ಕಾಣಿಸಿಕೊಳ್ಳುವುದು ಸಹಜ, ಆದರೆ ಸೂರ್ಯನ ಯು.ವಿ. ಅಂತಹ ಕಿರಣಗಳಿಗೆ ತುತ್ತಾದವರು, ಮತ್ತು ಧೂಮಪಾನ ಮಾಡುವವರು ಕೂಡ ಚಿಕ್ಕ ವಯಸ್ಸಿನಲ್ಲಿ ಈ ಸಮಸ್ಯೆಗೆ ಗುರಿಯಾಗುತ್ತಾರೆ. ಇದನ್ನು ತಡೆಯಲು, ನೀವು ತ್ವಚೆಗೆ ಬಳಸುವ ಉತ್ಪನ್ನಗಳನ್ನು ಬದಲಿಸಿ, ಮತ್ತು ಮುಖಕ್ಕೆ ಹಾಕುವ ಪೌಡರ್ ಅನ್ನು ಸಂಪೂರ್ಣವಾಗಿ ಬಳಸುವುದನ್ನು ನಿಲ್ಲಿಸಿ, ಏಕೆಂದರೆ, ಪೌಡರ್ ನಿಮ್ಮ ತ್ವಚೆಯ ತೇವಾಂಶವನ್ನು ಹೀರಿಕೊಳ್ಳುತ್ತದೆ. ಕ್ರೀಂ ಬಳಸಲು ಶುರುಮಾಡಿ. ಹೆಚ್ಚು ನಿದ್ರೆಮಾಡುವುದು, ಧೂಮಪಾನ ಬಿಡುವುದು, ಸನ್ ಕ್ರೀಂ ಅನ್ನು ಬಳಸುವುದು, ಎಣ್ಣೆ ಅಂಶಯುಳ್ಳ ಮೀನನ್ನು ಸೇವಿಸುವುದು ಮತ್ತು ತ್ವಚೆಯ ತೇವಾಂಶವನ್ನು ಕಾಪಾಡಿಕೊಳ್ಳುವುದರಿಂದ ಇದನ್ನು ತಡೆಯಬಹುದು. ನೆನಪಿರಲಿ, ನೀವು ತಿನ್ನುವ ಆಹಾರವು ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯಕರ ಆಹಾರವನ್ನು ಸೇವೆಸಿ, ಆರೋಗ್ಯಕರ ತ್ವಚೆಯನ್ನು ಪಡೆಯಿರಿ.

೪. ಜೋತು ಬೀಳುವುದು/ಸೋರಗುವುದು

ನಿಮಗೆ ವಯಸ್ಸಾದಂತೆ, ತ್ವಚೆಯ ದೃಢತೆ ಕಡಿಮೆಯಾಗಿ, ಚರ್ಮವು ಜೋಲು ಬಿಳಲು ಪ್ರಾರಂಭಿಸುವುದು, ಮತ್ತು ತ್ವಚೆಯು ಕಾಂತಿಯನ್ನು ಕಳೆದುಕೊಳ್ಳುವುದು. ನಿಮ್ಮ ತ್ವಚೆಗೆ ದೃಢತೆಯನ್ನು ಒದಗಿಸುವುದು ಕಾಲಜನ್ ಮತ್ತು ಎಲಾಸ್ಟಿನ್ ಅಂಶಗಳು, ಅದು ನಿಮ್ಮ ತ್ವಚೆಯನ್ನು ಒಳ್ಳೆ ಸ್ಥಿತಿಯಲ್ಲಿರಿಸಿ, ಕಾಂತಿಯನ್ನು ನೀಡುತ್ತದೆ. ಆದರೆ ವಯಸ್ಸಾದಂತೆ ಅದು ಕಡಿಮೆಯಾಗುವುದರಿಂದ ನಿಮ್ಮ ಚರ್ಮ ಜೋತು ಬೀಳುತ್ತದೆ. ಇವುಗಳನ್ನು ಮರಳಿ ಪಡೆಯಲು ಪೆಪ್ಟೈಡ್ಗಳು ಮತ್ತು ನಿಯಾಸಿನಾಮೈಡ್ ಗಳಂತಹ ಪೌಷ್ಟಿಕಾಂಶಗಳನ್ನು ಬಳಸಿ. ಉತ್ಕರ್ಷಣ ನಿರೋಧಕ ಉತ್ಪನ್ನಗಳನ್ನು ಬಳಸುವದರಿಂದ ನಿಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಹೆಚ್ಚು ಹಸಿರು ತರಕಾರಿ, ಹಣ್ಣು ಸೇವನೆ ಒಳ್ಳೆಯದು, ನಿಮ್ಮ ಚರ್ಮದ ವಿಧ ತಿಳಿದು ವೈದ್ಯರ ಸಲಹೆ ಪಡೆಯಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon