Link copied!
Sign in / Sign up
0
Shares

ಪಿರಿಯಡ್ಸ್ ಸಮಯದಲ್ಲಿ ಯೋನಿಯಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಏಕೆ?

ನೀವು ಕೆರೆದುಕೊಳ್ಳಲು ಆಗದಂತಹ ಭಾಗದಲ್ಲಿ, ಸಮಯದಲ್ಲಿ ನಿಮಗೆ ತುರಿಕೆ ಉಂಟಾಗುತ್ತಿದೆಯೇ? ಹೌದು, ನಾವು ಮಾತುದುತ್ತಿರುವುದು ಯೋನಿಯ ತುರಿಕೆಯ ಬಗ್ಗೆ. ಇದು ಪಿರಿಯಡ್ಸ್  ಸಮಯದಲ್ಲಂತೂ ಇನ್ನೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಈ ತುರಿಕೆ ಉಂಟಾಗಲಿಕ್ಕೆ ಕಾರಣ ಆದರೂ ಏನು? ಈ ಪ್ರಶ್ನೆಯನ್ನ ನಾವು ಪ್ರಸೂತಿ, ಸ್ತ್ರೀರೋಗಶಾಸ್ತ್ರ ಮತ್ತು ಸಂತಾನೋತ್ಪತ್ತಿ ವಿಜ್ಞಾನದ ಪ್ರಾಧ್ಯಾಪಕರಾದ ಸುಸೇನ್ ಅವರ ಮುಂದಿಟ್ಟೆವು.


ಅವರು ಹೇಳುವಂತೆ ಈ ತುರಿಕೆಗೆ ಬಹಳಷ್ಟು ಅಂಶಗಳು ಕಾರಣವಾಗುತ್ತವೆ. ಒಂದು ಕಾರಣ ಏನಾಗಿರಬಹುದು ಎಂದರೆ, ಹಳೆಯ ರಕ್ತ ಉಳಿದುಕೊಂಡಲ್ಲೇ ಉಳಿದರೆ, ಅದು ಇರಿಸುಮುರಿಸು ಉಂಟು ಮಾಡಬಹುದು. ಈ ಕಾರಣಕ್ಕೆ ನೀವು ನಿಮ್ಮ ಋತುಚಕ್ರದ ಎಷ್ಟನೇ ದಿನದಲ್ಲಿ ಇದ್ದೀರಾ ಎಂಬುದು ಮುಖ್ಯವಾಗುತ್ತದೆ.

ಇದಲ್ಲದೆ, ಇದಕ್ಕೆ ಇನ್ನೊಂದು ಕಾರಣ ಎಂದರೆ ಅದು ಉರಿಯೂತ. ನಿಮ್ಮ ಪಿರಿಯಡ್ಸ್ ಸಮಯದಲ್ಲಿ ದೇಹದ ಎಲ್ಲಾ ಭಾಗಗಳಲ್ಲೂ ಉರಿಯೂತ (ಉರಿಯುವಿಕೆ) ಹೆಚ್ಚಾಗುತ್ತದೆ. ಈ ಏರಿಕೆಯೇ ಪಿರಿಯಡ್ಸ್ ಸಮಯದಲ್ಲಿ ನಿಮ್ಮ ಆ ಭಾಗದಲ್ಲಿ ಎಂದಿಗಿಂತ ಹೆಚ್ಚು ತುರಿಕೆ ಕಾಣಿಸಿಕೊಳ್ಳುವಂತೆ ಮಾಡುವುದು. ಇದೊಂದು ಹಿಸ್ಟಮಿನ್ ಪ್ರತಿಕ್ರಿಯೆ ಎನ್ನುತ್ತಾರೆ ಸುಸೇನ್.

ಇದಲ್ಲದೆ, ನೀವು ಯೀಸ್ಟ್ ಸೋಂಕು ಅಥವಾ ಬ್ಯಾಕ್ಟೀರಿಯಾಲ್ ವಜಿನೋಸಿಸ್ (ಅಂದರೆ ಯೋನಿಯಲ್ಲಿ ಅತಿಯಾದ ಯೀಸ್ಟ್ ಅಥವಾ ಬ್ಯಾಕ್ಟೀರಿಯಾಗಳು ಮನೆ ಮಾಡುವುದು) ಕೂಡ ಅನುಭವಿಸುತ್ತಿರಬಹುದು. ಆದರೆ ಇವುಗಳಿನ ಪಿರಿಯಡ್ಸ್ ವೇಳೆ ಆಗುವಷ್ಟು ತುರಿಕೆಯು ಬೇರೆ ಸಮಯಗಳಲ್ಲಿ ಆಗುವುದಿಲ್ಲ. ಒಂದು ವೇಳೆ ನಿಮ್ಮ ಪ್ರಕರಣದಲ್ಲಿಯೂ ಈ ಯೀಸ್ಟ್ ಅಥವಾ ಬ್ಯಾಕ್ಟೀರಿಯಾಗಳು ಜಾಸ್ತಿ ಇದ್ದರೆ, ಲೈಂಗಿಕ ರೋಗ ತಜ್ಞರು ಅದನ್ನು ಪರಿಶೀಲಿಸಿ ನಿಮಗೆ ಕ್ರೀಮ್ ಅಥವಾ ಒಯಿಂಟ್ಮೆಂಟ್ ನೀಡುತ್ತಾರೆ.


ಪಿರಿಯಡ್ಸ್ ವೇಳೆ ಯೋನಿಯ ಎಲ್ಲಾ ಭಾಗಗಳಲ್ಲೂ ತುರಿಕೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಿಮ್ಮ ಯೋನಿಯ ಹೊರಮೈ ಮೇಲೆ ತುರಿಕೆ ಕಾಣಿಸಿಕೊಂಡರೆ, ನಿಮಗೆ ನೀವು ಧರಿಸುವ ಪ್ಯಾಡ್ ಇಂದ ಅಲರ್ಜಿ ಆಗಿರುವ ಸಾಧ್ಯತೆಗಳು ಇರುತ್ತವೆ. ಒಂದು ವೇಳೆ ನಿಮಗೂ ಹೀಗಾಗುತ್ತಿದ್ದರೆ, ಬೇರೆ ಬ್ರಾಂಡಿನ ಪ್ಯಾಡ್ ಧರಿಸಿ ನೋಡಿ. ಇದು ಮಾಡಿದ ಮೇಲೆಯೂ ಮೇಲ್ಮೈ ತುರಿಕೆ ಕಡಿಮೆ ಆಗಲಿಲ್ಲ ಎಂದರೆ ವೈದ್ಯರನ್ನ ಭೇಟಿ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon