Link copied!
Sign in / Sign up
7
Shares

ತೂಕವನ್ನು ಕಳೆದುಕೊಳ್ಳಲು ತುಪ್ಪ ಸಹಾಯ ಮಾಡುತ್ತದೆ! - ಹೇಗೆ ಎಂದು ಇಲ್ಲಿ ನೋಡಿ

ನಾವು  ತುಪ್ಪವನ್ನು ನೋಡಿದಾಗ ,ಪ್ರಥಮ ನೋಟದಲ್ಲೇ ಅದನ್ನು ಕೊಬ್ಬಿಗೆ ಸಂಬಂಧ ಕಲ್ಪಿಸುತ್ತೇವೆ.ವಸ್ತುತಃ ನೀವು ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವಾಗ, ನಿಮ್ಮ ಆಹಾರದಲ್ಲಿ ತುಪ್ಪವನ್ನು ತಪ್ಪಿಸುವ ಮಾರ್ಗವನ್ನು ನೀವು ಅನುಸರಿಸಬಹುದು.ತುಪ್ಪ ಕೊಬ್ಬು ಆದರೂ, ಇದು ಉತ್ತಮ ಕೊಬ್ಬು ಆದ್ದರಿಂದ 'ತಪ್ಪಿಸುವ  ಆಹಾರಗಳು' ಪಟ್ಟಿಯಲ್ಲಿ ಇರಬಾರದು. ನಿಮ್ಮ ತೂಕದ ನಷ್ಟದ ಪ್ರಯಾಣದ ಬಗ್ಗೆ ಅದು ನಿಜವಾಗಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ತೋರಿಸುತ್ತೇವೆ.

ತುಪ್ಪವು ಪ್ರಸಿದ್ಧ ಹೈನು ಉತ್ಪನ್ನವಾಗಿದ್ದು, ವಿವಿಧ ಭಾರತೀಯ ಭಕ್ಷ್ಯಗಳಲ್ಲಿ ವಿಶೇಷವಾಗಿ ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ,  ಕೇವಲ ಒಂದು ಮುದ್ದೆ ತುಪ್ಪವು ಅನೇಕ ಬಾರಿ ಆಹಾರದ  ಶ್ರೀಮಂತಿಕೆ ಮತ್ತು ಪರಿಮಳವನ್ನು ಹೆಚ್ಚಿಸಬಹುದು. ಆದ್ದರಿಂದ ತುಪ್ಪ ನಿಖರವಾಗಿ ಯಾವುದರಿಂದ ಮಾಡಲ್ಪಟ್ಟಿದೆ?

ಇದು ಸಂಯೋಜಿತ ಲಿನೊಲೆನಿಕ್ ಆಮ್ಲ, ಅಮೈನೋ ಆಮ್ಲಗಳು ಮತ್ತು ಒಮೆಗಾ -೩ ಕೊಬ್ಬಿನಾಮ್ಲಗಳನ್ನು ಒಳಗೊಂಡಿರುತ್ತದೆ, ಇದು ತೂಕ ನಷ್ಟದಲ್ಲಿ ಮಾತ್ರ ನೆರವಾಗುವುದಿಲ್ಲ ಆದರೆ ಸಂಧಿವಾತ, ಹೃದಯಾಘಾತ ಮತ್ತು ಕ್ಯಾನ್ಸರ್ ನ  ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಈ ಆಮ್ಲಗಳು ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ  ಮತ್ತು ಏಕಕಾಲದಲ್ಲಿ ನಿಮ್ಮ ಸ್ನಾಯುಗಳನ್ನು ತೆಳುಗೊಳಿಸುತ್ತದೆ. ನಿಮಗೆ ಈಗಾಗಲೇ ತಿಳಿದಿಲ್ಲದಿದ್ದರೆ, ನೀವು ಪ್ರತಿದಿನ ತಿನ್ನುವ ಆಹಾರಗಳು ನಿಮ್ಮ ದೇಹದಲ್ಲಿ ಕೊಬ್ಬಿನ ಕೋಶಗಳಾಗಿ ವಿಭಜನೆಯಾಗಿ ಸಂಗ್ರಹವಾಗುತ್ತದೆ ಮತ್ತು ಈ ಕೊಬ್ಬಿನ ಕೋಶಗಳು ನಿರ್ಮಿಸಲ್ಪಡುತ್ತಾ ಹೋದಲ್ಲಿ , ಅದು ಅಧಿಕ ತೂಕ ಮತ್ತು ಬೊಜ್ಜು ಸಮಸ್ಯೆಗಳಿಗೆ ಕಾರಣವಾಗುತ್ತದೆ.

 ಪ್ರತಿದಿನ ಅನ್ನದ  ಮೇಲೆ ಒಂದು ಚಮಚ ತುಪ್ಪವನ್ನು ಹಾಕಿ ಸೇವಿಸುವ  ಪುರಾತನ ಸಂಪ್ರದಾಯವು ನಿಮಗೆ ಅನೇಕ ರೀತಿ ಒಳ್ಳೆಯದು ಎಂದು ನೀವು ನೋಡುತ್ತೀರಿ ಆದರೆ ಆಧುನಿಕ ವಿಧಾನಗಳು ಮತ್ತು ಕ್ಯಾಲೋರಿಯನ್ನು -ಎಣಿಸುವ  ಜನರಿಂದ ಇದು ದೂರವಿಡಲ್ಪಟ್ಟಿದೆ.  ವಿಟಮಿನ್ ಎ, ಡಿ, ಕೆ ಮತ್ತು ಇ ನಂತಹ ಕೊಬ್ಬು ಕರಗಬಲ್ಲ ಜೀವಸತ್ವಗಳು ನಿಮ್ಮ ಸ್ಮೃತಿ, ಮೂಳೆ ಆರೋಗ್ಯ ಮತ್ತು ಒಟ್ಟಾರೆ ಪ್ರತಿರಕ್ಷಣಾ ವ್ಯವಸ್ಥೆಗೆ ಅದ್ಭುತವಾದವು. ಆಹಾರವನ್ನು ವೇಗವಾಗಿ ಮುರಿಯಲು ಸಹಾಯ ಮಾಡುವ ಮೂಲಕ ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಆದರೆ ಉಸಿರು ಬಿಗಿಹಿಡಿದುಕೊಂಡು ನಿಮ್ಮ ಬಾಯಿಯನ್ನು ಸಿಹಿಯು ಹೇರಳವಾಗಿರುವ ಸಿಹಿತಿಂಡಿ ಮತ್ತು ಭಕ್ಷ್ಯಗಳೊಂದಿಗೆ ತುಂಬಿಸುವ ಮೊದಲು ಹಿಡಿದಿಟ್ಟುಕೊಳ್ಳಿ.ಏಕೆಂದರೆ ಇವುಗಳಲ್ಲಿ ತುಪ್ಪವನ್ನು ಹೊರತುಪಡಿಸಿ ಮ್ಮ ದೇಹಕ್ಕೆ ಉತ್ತಮವಾದ ಏನನ್ನಾದರೂ ಮಾಡದಿರುವ ಸಕ್ಕರೆ ಕೂಡಾ ಇದೆ.

ನಿಮಗೆ ಬೇಕಾಗಿರುವುದು ನಿಮ್ಮ ಊಟದಲ್ಲಿ ದಿನಕ್ಕೆ ಕೇವಲ ಒಂದು ಟೀಚಮಚದಷ್ಟು ತುಪ್ಪವನ್ನು ಸೇರಿಸಿಕೊಳ್ಳುವ ಸರಿಯಾದ ಪ್ರಮಾಣ.ಇದು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೋರಿಗಳಿಲ್ಲದೆ ನಿಮಗೆ ಎಲ್ಲಾ ಪ್ರಯೋಜನಗಳನ್ನು ನೀಡುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon