Link copied!
Sign in / Sign up
21
Shares

ಗಂಡಸನ್ನು ಮಂಚದ ಮೇಲೆ ತೃಪ್ತಿಪಡಿಸಬೇಕು ಎಂದರೆ ಈ 5 ವಿಷಯಗಳನ್ನ ಮಾಡಲೇಬೇಕು

ಒಬ್ಬ ಗಂಡಸಿಗೆ ತೃಪ್ತಿ ಪಡಿಸುವುದು ಹೇಗೆ? ಆಶ್ಚರ್ಯಕರ ವಿಷಯವೆಂದರೆ ಎಲ್ಲಾ ಗಂಡಸರೂ ಸಿನಿಮಾದಲ್ಲಿ ಅಥವಾ ಇನ್ನ್ಯಾವುದರಲ್ಲಾದರೂ ತೋರಿಸುವಂತಹ ಹೆಣ್ಣಿನ ರಂಜನೀಯ ಪ್ರದರ್ಶನ ಆಗಲಿ ಅಥವಾ ಸಿನಿಮೀಯ ರೀತಿಯ ಮಾದಕ ಪ್ರದರ್ಶನವಾಗಲಿ ಬೇಕು ಅನ್ನುವುದಿಲ್ಲ. ನಿಜ ಹೇಳಬೇಕೆಂದರೆ, ಕೆಲವು ಗಂಡಸರು ತಮ್ಮ ಪತ್ನಿಯು ತಮ್ಮೊಂದಿಗೆ ಹಾಸಿಗೆ ಹಂಚಿಕೊಂಡರೂ ಸಾಕು ಎಂದು ಹೇಳುವರು. ಇದರ ಅರ್ಥ ಅವರನ್ನ ತೃಪ್ತಿಗೊಳಿಸುವುದು ಕಷ್ಟವೇನಲ್ಲ. ಆದರೆ ಅವರಿಗೆ ನೀವು ವಿಶೇಷವಾದ ಅನುಭವ ನೀಡಬೇಕು ಎಂದುಕೊಂಡರೆ, ಅದಕ್ಕೆ ನಾವು ನಿಮಗೆ ಕೆಲವು ಸಲಹೆಗಳನ್ನ ನೀಡುತ್ತೇವೆ ಓದಿ :

೧. ನಿಮ್ಮ ಆಸೆಗಳ ಬಗ್ಗೆ ನೀವೇ ಸಂಕೋಚ ಪಟ್ಟುಕೊಳ್ಳಬೇಡಿ

ನಿಮ್ಮ ಆಸೆಗಳು ಏನು, ನಿಮ್ಮ ಬಯಕೆಗಳು ಏನು ಎಂಬುದರ ಬಗ್ಗೆ ನೀವು ಮುಕ್ತವಾಗಿ ಬಾಯ್ಬಿಟ್ಟು ಮಾತಾಡುವುದು ಮಂಚದ ಮೇಲೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಬಾಂಧವ್ಯ ಹೆಚ್ಚಿಸಲು ಇರುವ ಅತ್ಯುತ್ತಮ ದಾರಿ. ಎಲ್ಲಿ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಏನಾದರೂ ಅಂದುಕೊಳ್ಳುವರೋ ಎಂಬ ಭಾವನೆ ಖಂಡಿತವಾಗಿ ಇಟ್ಟುಕೊಳ್ಳಬೇಡಿ. ಬಹಳಷ್ಟು ಹೆಂಗಸರು ತಮ್ಮ ಬಗ್ಗೆ ಅಭಿಪ್ರಾಯ ಬದಲಾಗಬಾರದು ಎಂದು ಬಾಯಿಗೆ ಬೀಗ ಹಾಕಿಕೊಳ್ಳುತ್ತಾರೆ. ಆದರೆ ಗಂಡಸರಿಗೆ ನಿಮ್ಮ ಎಲ್ಲಾ ಮುಖಗಳನ್ನೂ ನೋಡುವ ಆಸೆ ಇರುತ್ತದೆ ಮತ್ತು ಅವರು ಕೂಡ ನೀವು ಏನು ಅಂದುಕೊಳ್ಳುವಿರಿ ಎಂದು ನಿಮಗೆ ಈ ವಿಷಯ ಹೇಳುವುದಿಲ್ಲ.


೨. ಸೆಕ್ಸ್ ಅನ್ನು ಆಕರ್ಷಕ ಮಾಡಿ

ಸೆಕ್ಸ್ ಅನ್ನು ಬೋರಿಂಗ್ ಆಗಿ ಮಾಡಿಕೊಳ್ಳುವುದು ಬಹಳಾನೇ ಸುಲಭ. ಹೀಗಾಗಿ ನೀವು ಅದಕ್ಕೆ ಸಂಬಂಧ ಪಟ್ಟ ವಿಷಯಗಳನ್ನ ತಾಜಾವಾಗಿ ಮತ್ತು ಆಕರ್ಷಕವಾಗಿ ಇಡಬೇಕು. ನೀವು ನಿಮ್ಮ ಸಂಗಾತಿ ಆಶ್ಚರ್ಯ ಪಡುವಂತದ್ದು ಏನಾದರು ಮಾಡಬಹುದು, ಹೊಸ ಸಂಭೋಗ ಭಂಗಿಗಳನ್ನ ಪ್ರಯತ್ನಿಸಬಹುದು, ಹೀಗೆ ಏನಾದರು ಹೊಸತನ್ನು ಅಳವಡಿಸಿಕೊಳ್ಳುತ್ತಿರಬೇಕು. ಹೀಗಾಗಿ ನೀವು ಬೇರೆ ಬೇರೆ ರೀತಿಗಳನ್ನು, ವಿಷಯಗಳನ್ನ ಸ್ವೀಕರಿಸಲು, ಪ್ರಯೋಗಿಸಲು ನೀವು ಹಿಂದೇಟು ಹಾಕಬಾರದು. ನೀವು ಸೆಕ್ಸ್ ಅಲ್ಲಿ ಬಳಸುವ ಸ್ಪರ್ಶ, ಒತ್ತಡ, ವೇಗ, ಭಂಗಿ ಇವುಗಳನ್ನ ಬದಲಿಸುತ್ತಲೇ ಇರಬೇಕು. ಹೀಗೆ ಮಾಡಿದಾಗ ನಿಮ್ಮ ಪತಿಗೆ ನೀವು ಮುಂದೇನು ಮಾಡುತ್ತೀರಿ ಎಂಬುದನ್ನು ಊಹಿಸಲು ಆಗುವುದಿಲ್ಲ, ಆಗ ಅವರು ಹೆಚ್ಚಿನ ಲೈಂಗಿಕ ಪ್ರಚೋದನೆ ಹೊಂದಿರುತ್ತಾರೆ.


೩. ಏನಾದರು ಸ್ವಲ್ಪ ಮಾದಕ ಅನಿಸುವ ತರಲೆ ಮಾಡಿ

ಸಂಶೋಧನೆಗಳ ಪ್ರಕಾರ ಬೌತೇಕ ಬಾರಿ ಸೆಕ್ಸ್ ಅನ್ನುವುದು ಒತ್ತಡ ಕಡಿಮೆ ಮಾಡಿಕೊಳ್ಳಲು ಒಂದು ದಾರಿ ಆಗಿರುತ್ತದೆ. ಬಹುತೇಕ ಗಂಡಸರಿಗೆ, ತಾವು ಹೆಚ್ಚು ಒತ್ತಡದಲ್ಲಿ ಇದ್ದಷ್ಟು, ಸೆಕ್ಸ್ ಅಲ್ಲಿ ಹೆಚ್ಚು ಮಾದಕ ತುಂಟತನವನ್ನ ಬಯಸುತ್ತಾರೆ. ಮೊದಲಿಗೆ ನೀವು ಮತ್ತು ನಿಮ್ಮ ಪತಿ ಇಬ್ಬರೂ ಸುರಕ್ಷಿತ ಸೆಕ್ಸ್ ಮತ್ತು ಮಿತಿಗಳನ್ನ ಚರ್ಚಿಸಬೇಕು. ತಜ್ಞರು ನೀವು ನಿಮ್ಮ ಪತಿಗೆ ಮಾದಕ ಅನಿಸುವುದು ಯಾವುದು, ಅಸಹ್ಯ್ಯ ಎನಿಸುವುದು ಯಾವುದು ಎಂಬುದನ್ನ ಕೇಳಬೇಕೆಂಬ ಸಲಹೆ ನೀಡುತ್ತಾರೆ. ನೀವು ನಿಮ್ಮ ಲೈಂಗಿಕ ಇಚ್ಛೆಗಳನ್ನ ಮತ್ತು ಬಯಕೆಗಳನ್ನ ಮುಕ್ತವಾಗಿ ಮಾತಾಡಲು ಇಚ್ಛಿಸುತ್ತೀರಾ ಎಂಬುದನ್ನ ತೋರಿಸಿಕೊಡಬೇಕು ಎಂಬುದನ್ನ ನೆನಪಿಡಬೇಕು.

 
೫. ಮುಂಕೇಳಿ (ಫೋರ್ಪ್ಲೇ) ಇಂದ ಅವರನ್ನ ಸಂಭೋಗಕ್ಕೆ  ಸಿದ್ಧಮಾಡಿ

ಗಂಡಸನ್ನು ತೃಪ್ತಿಪಡಿಸಲು ಇರುವ ಒಳ್ಳೆಯ ವಿಧಾನ ಎಂದರೆ ಅವನನ್ನು ಮೌಖಿಕ ಲೈಂಗಿಕತೆಯ ಮುಂಕೇಳಿಯೊಂದಿಗೆ ಸಂಭೋಗಕ್ಕೆ ಸಿದ್ದಪಡಿಸುವುದು. ಕೆಲವು ಗಂಡಸರು ಸೀದಾ ಸಂಭೋಗದಿಂದಲೇ ಶುರು ಮಾಡಲು ಇಚ್ಛಿಸುತ್ತಾರೆ, ಆದರೆ ನೀವು ಅವರನ್ನು ಮುಂಕೇಳಿಯೊಂದಿಗೆ ಸಿದ್ಧಪಡಿಸಿದರೆ ನೀವು ಅವರು ಹೆಚ್ಚು ಹೊತ್ತು ಸಂಭೋಗ ನಡೆಸಲು ಮತ್ತು ಸರಿಯಾದ ಲೈಂಗಿಕ ಪರಾಕಾಷ್ಠೆ ಹೊಂದಲು ಸಹಾಯ ಮಾಡಿದಂತೆ ಆಗುತ್ತದೆ.

 

೪. ಅವರ ಸೂಕ್ಷ್ಮವಾದ ಭಾಗಗಳ ಮೇಲೆ ಗಮನ ಹರಿಸಿ


ಸೆಕ್ಸ್ ಅಲ್ಲಿ ಗಂಡಸರ ವಿಷಯ ಬಂದೊಡನೆ ಬಹುತೇಕ ಹೆಂಗಸರು ಕೇವಲ ಶಿಶ್ನ ಮಾತ್ರವೇ ಗಂಡಸಿನ ಕಾಮಪ್ರಚೋದಕ ಭಾಗ ಎಂದು ಭಾವಿಸುವರು. ಆದರೆ ಗಂಡಸಿನ ದೇಹದ ಹಲವಾರು ಭಾಗಗಳು ಲೈಂಗಿಕ ಪ್ರಚೋದನೆಗೆ ಸ್ಪಂದಿಸುತ್ತವೆ ಎಂಬುದನ್ನ ಅವರು ತಿಳಿದಿರುವುದಿಲ್ಲ. ನೀವು ಅವರ ದೇಹದ ಎಲ್ಲಾ ಸೂಕ್ಷ್ಮವಾದ ಭಾಗಗಳ ಮೇಲೆಯೂ ಗಮನ ಹರಿಸಬೇಕು. ಒಂದು ವೇಳೆ ನಿಮಗೆ ಗಂಡಸರ ಕಾಮಪ್ರಚೋದಕ ಭಾಗಗಳು ಯಾವುದು ಮತ್ತು ಅವುಗಳೊಂದಿಗೆ ಏನು ಮಾಡಬೇಕು ಎಂಬುದು ತಿಳಿದಿರದಿದ್ದರೆ, ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿರಿ.

ಶಿಶ್ನ ಮತ್ತು ವೃಷಣಗಳ ಹೊರತಾಗಿ ಗಂಡಸನ್ನು ಕೆರಳಿಸುವ 6 ಕಾಮಪ್ರಚೋದಕ ವಲಯಗಳು!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon