Link copied!
Sign in / Sign up
3
Shares

ಪ್ರೆಗ್ನನ್ಸಿಯ ಮೊದಲ 3 ತಿಂಗಳ ಬಗ್ಗೆ ನೀವು ತಿಳಿದುಕೊಂಡಿರಬೇಕಾದ ಎಲ್ಲಾ ಮಾಹಿತಿ

ನೀವು ಎರಡನೇ ಅಥವಾ ಮೂರನೇ ಬಾರಿಗೆ ಗರ್ಭ ಧರಿಸಿದ್ದರೆ, ನಿಮಗೆ ಹಲವು ವಿಷಯಗಳು ಗೊತ್ತಿದ್ದಿರಬಹುದು. ಆದರೆ ಮೊದಲ ಬಾರಿ ಗರ್ಭವತಿ ಆದವರಲ್ಲಿ ಹತ್ತು ಹಲವು ಗೊಂದಲಗಳು ಮನೆ ಮಾಡಿರುತ್ತವೆ. ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು, ಯಾವೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು...? ಯಾವ ಆಹಾರ ಕ್ರಮಗಳನ್ನು ಪಾಲಿಸಬೇಕು...? ಯಾವುದೆಲ್ಲಾ ಮಾಡಬಾರದು...ಎಂದು ತಜ್ಞರು ವಿವರವಾಗಿ ತಿಳಿ ಹೇಳಿದರೂ ,ಅದು ನಿಮ್ಮ ಕುತೂಹಲವನ್ನು ತಣಿಸಲಾರದು. ನಿಮಗೂ, ನಿಮ್ಮ ಉದರದಲ್ಲಿರುವ ಪುಟಾಣಿಗೂ ಗರ್ಭಾವಸ್ಥೆಯ ಮೊದಲ ಮೂರು ತಿಂಗಳುಗಳು ಅತ್ಯಂತ ಮಹತ್ತರವಾದ‍ದ್ದು.

ಭ್ರೂಣವು ಬೆಳೆಯುತ್ತಿರುವಂತೆಯೇ, ತಾಯಿಯ ಶರೀರದಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಗರ್ಭಕಾಲದ ಮೊದಲ ಮೂರು ತಿಂಗಳುಗಳ ಬದಲಾವಣೆಯನ್ನು ವಿವರವಾಗಿ ತಿಳಿಯೋಣ.

ಮೊದಲ ತಿಂಗಳು

ಭ್ರೂಣವನ್ನು ಎಲ್ಲಾ ರೀತಿಯ ಆಘಾತಗಳಿಂದ ರಕ್ಷಿಸಿ ಸುಸ್ಥಿತಿಯಲ್ಲಿಡುವ ಪದರವಾದ, ಆಮ್ನಿಯೋಟಿಕ್ ಫ್ಲೂಯಿಡ್ ಭ್ರೂಣದ ಸುತ್ತಲೂ ಆವರಿಸಿಬಿಡುತ್ತದೆ. ಈ ಆವರಣದಲ್ಲಿ ಅಡಕವಾಗಿರುವ ಆಮ್ನಿಯೋಟಿಕ್ ಪ್ಲ್ಯೂಡ್‍ಗಳು ಭ್ರೂಣದ ಬೆಳವಣಿಗೆಗೆ ಅಗತ್ಯವಾದ ವಾತಾವರಣವನ್ನು ನಿರ್ಮಿಸುತ್ತದೆ. ತಾಯಿಯ ಪೋಷಕಾಂಶಗಳನ್ನು ಮಗುವಿಗೆ ವರ್ಗಾಯಿಸುವಂತೆ, ಪ್ಲಾಸೆಂಟಾ ಕೂಡ ಬೆಳೆಯಲಾರಂಭಿಸುತ್ತದೆ. ಈ ಪ್ಲಾಸೆಂಟಾದ ಮೂಲಕವೇ ಮಗುವಿನ ಶರೀರದ ಅನಗತ್ಯ ಪದಾರ್ಥಗಳು ಹೊರ ತಳ್ಳಲ್ಪಡುತ್ತದೆ.

ಅಸ್ಪಷ್ಟ ಮುಖ ರಚನೆ, ಕಣ್ಣಿನ ಬೆಳವಣಿಗೆಗೆ ಅನುಕೂಲವಾಗುವಂತಹ ಕಣ್ಣಿನ ಗೋಲಗಳು, ಬಾಯಿ, ಕೆಳದವಡೆ ಮತ್ತು ಗಂಟಲುಗಳ ರಚನೆ ಕಾಣಿಸಿಕೊಳ್ಳ‍ಲ್ಪಡುತ್ತದೆ. ರಕ್ತ ಪ್ರವಾಹಕ್ಕೆ ಅನುವಾಗುವಂತೆ, ರಕ್ತಕಣಗಳು ಕೂಡ ಉತ್ಪಾದಿಸಲ್ಪಡುತ್ತದೆ. ಮೊದಲ ತಿಂಗಳು ಆಗುವಷ್ಟರಲ್ಲಿ ಅಕ್ಕಿ ಕಾಳಿನ ಗಾತ್ರದ ೬-೭ಮಿಮಿ ಅಥವಾ ಒಂದು ಇಂಚಿನ ¼ ಭಾಗದಷ್ಟಿರುವ ಗಾತ್ರಕ್ಕೆ ಮಗುವು ಬೆಳೆಯುವುದು.

ಎರಡನೇ ತಿಂಗಳುಗಳು

ಮುಖ ರಚನೆಗಳು ಬೆಳೆಯುವುದರೊಂದಿಗೆ, ಚಿಕ್ಕ ಚಿಕ್ಕ ಮೊಗ್ಗುಗಳಂತೆ ಕಾಣಲ್ಪಡುವ ಕೈ ಹಾಗೂ ಕಾಲುಗಳು ಕೂಡ ಮೊಳಕೆಯೊಡೆಯಲ್ಪಡುತ್ತದೆ. ಮುಖದಲ್ಲಿ,ಮುಂದೆ ಕಿವಿಯಾಗಿ ಮಾರ್ಪಾಡಾಗುವ ಮಾಡುವಿಕೆ ಕಾಣಿಸಿಕೊಳ್ಳಲ್ಪಡುವುದರೊಂದಿಗೆ, ಕೈಬೆರಳುಗಳು, ಕಾಲ್ಬೆರಳುಗಳು ಹಾಗೂ ಕಣ್ಣುಗಳ ಬೆಳವಣಿಗೆಯೂ ಅಭಿವೃದ್ಧಿಗೊಳ್ಳಲು ಆರಂಭಿಸುತ್ತದೆ.ಮೆದುಳು, ಬೆನ್ನೆಲುಬು ಮತ್ತು ಇತರ ನರಕೋಶಗಳನ್ನು ಒಳಗೊಂಡ ನರವ್ಯೂಹಗಳು ಬೆಳೆಯಲ್ಪಡುತ್ತದೆ.

ಜೀರ್ಣಾಂಗವ್ಯೂಹಗಳು ಮತ್ತು ಜ್ಞಾನೇಂದ್ರಿಯಗಳು ಅಭಿವೃದ್ಧಿಗೊಳ್ಳುತ್ತದೆ. ಕಾರ್ಟಿಲೇಜ್‍ಗಳು ಎಲುಬುಗಳಾಗಿ ಮಾರ್ಪಾಡಾಗುತ್ತದೆ. ಭ್ರೂಣವು ಚಲಿಸಲಾರಂಭಿಸಿದ್ದು ತಾಯಿಗೆ ಅದರ ಅನುಭವ‍ವಾಗದು.

ಎರಡನೇ ತಿಂಗಳುಗಳು ಮುಗಿಯುವಷ್ಟರಲ್ಲಿ ಒಂಬತ್ತರಿಂದ ಹತ್ತು ಗ್ರಾಂ ಭಾರವನ್ನೊಳಗೊಂಡು, ಭ್ರೂಣವೆಂದು ಕರೆಯಲ್ಪಡುವಂತಹ ರಚನೆ ಹೊಂದುವುದು. ಇದರಲ್ಲಿ 1/3 ಭಾರವು ಮಗುವಿನ ತಲೆಯದ್ದಾಗಿರಬಹುದು.

ಮೂರನೆಯ ಮಾಸ

ತೋಳು, ಕಾಲುಗಳು, ಕಾಲ್ಬೆರಳು, ಕೈಬೆರಳುಗಳನ್ನು ಹೊಂದಿಕೊಂಡಿರುವ ಮತ್ತು ಮುಷ್ಟಿಯನ್ನು ಮುಚ್ಚಿ ತೆರೆದುಕೊಳ್ಳುವಂತಹ ಪೂರ್ಣ ರೂಪದ ಮಗುವಾಗಿ ಮಾರ್ಪಾಡಾಗುತ್ತದೆ. ಕೈ ಉಗುರುಗಳು ಹಾಗೂ ಕಾಲಿನುಗುರುಗಳು ಬೆಳೆದಿರುತ್ತವೆ. ಹಲ್ಲುಗಳು ಕೂಡ ಕಾಣಿಸಲು ಆರಂಭಿಸುತ್ತದೆ. ಪ್ರತ್ಯುತ್ಪಾದನಾಂಗ‍ಗಳು ಕೂಡಾ ಬೆಳೆಯಲ್ಪಡುತ್ತದೆ. ಆದರೂ ವೈದ್ಯರಿಂದ ಲಿಂಗ ನಿರ್ಧಾರ ಮಾಡಲು ಸಾಧ್ಯವಾಗದು.

ಮಗುವಿನ ಮೂತ್ರ ಮತ್ತು ರಕ್ತ ಪರಿಚಲನೆಗಳು ಕಾರ್ಯಪ್ರವೃತ್ತವಾಗಿದ್ದು, ಲಿವರ್ ಗಳಲ್ಲಿ ಬೈಲ್‍ಗಳು(ಪಿತ್ತ ರಸಗಳು) ಉತ್ಪಾದಿಸಲ್ಪಟ್ಟಿರುತ್ತವೆ.೨೮ ಗ್ರಾಂ ಭಾರವನ್ನು ಹೊಂದಿರುವ ಮಗುವು ೧೦ಸೆ.ಮೀ(೪ ಇಂಚು) ಎತ್ತರಕ್ಕೆ ಬೆಳೆದಿರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon