Link copied!
Sign in / Sign up
21
Shares

2018 ರ ಟಾಪ್ 10 ಗಂಡು ಶಿಶು ಹೆಸರುಗಳು ಅವುಗಳ ಅರ್ಥದೊಂದಿಗೆ

ಭಾರತದಲ್ಲಿ ಮಗುವಿಗೆ ಹೆಸರು ಇಡುವುದು, ಅಂದರೆ, ನಾಮಕರಣ ಮಾಡುವುದು ಪ್ರತಿ ಪೋಷಕರಿಗೂ ಮಹತ್ವದ ವಿಷಯ, ಮತ್ತು ಇದನ್ನು ಅವರು ಅವರದೇ ಸಂಸ್ಕೃತಿಯಲ್ಲಿ ತುಂಬಾ ಖುಷಿಯಿಂದ ಆಚರಿಸುತ್ತಾರೆ. ಮಗುವು ಜನಿಸಿದ ತಕ್ಷಣವೇ ಕುಟುಂಬದವರು ಮಗುವಿಗೆ ತಮ್ಮ ತಮ್ಮ ನೆಚ್ಚಿನ ಹೆಸರನ್ನು ಇಡಲು ಸೂಚಿಸುವರು. ಆದರೆ ಪ್ರತಿ ಹೆಸರು ತನ್ನದೇ ಆದ ಅರ್ಥ ಮತ್ತು ಮಹತ್ವವನ್ನು ಹೊಂದಿರಬೇಕು ಎಂಬುದು ಪೋಷಕರ ಆಸೆ. ಆದ್ದರಿಂದ ಪೋಷಕರು ಮಗುವಿಗೆ ಅವನ/ಳ ವ್ಯಕ್ತಿತ್ವಕ್ಕೆ ಸರಿಹೊಂದುವ ಹೆಸರನ್ನು ಇಡಲು ಹಲವು ಕಡೆ ಹೆಸರನ್ನು ಹಡುಕುವರು. ನಿಮ್ಮ ಮಗುವಿಗೆ ಅರ್ಥಪೂರ್ಣ ಮಹತ್ವದ ಕೆಲವು ಹೆಸರುಗಳನ್ನು ನಾವು ನಿಮಗೆ ಸಲಹೆ ನೀಡುತ್ತಿದ್ದೇವೆ.

೧.ಶಂಭು

ಈಶ್ವರನ ಮತ್ತೊಂದು ಹೆಸರು, ಇದರ ಅರ್ಥ ಪರೋಪಕಾರಿ, ಸಂತೋಷದ ಮೂಲ, ಇದು ಮಹೇಶ್ವರನಿಗೆ ಇಷ್ಟವಾದ ಹೆಸರು, ಪುರಾಣಗಳಲ್ಲಿ ಶಿವನನ್ನು ಇದೆ ಹೆಸರಿನಿಂದ ಕರೆಯುವ ಉಲ್ಲೇಖಗಳಿವೆ.

೨.ಜತಿನ್

ಇದರ ಅರ್ಥ, ದೇವಪ್ರಿಯ, ಆಧ್ಯಾತ್ಮಿಕ ಒಲವನ್ನು ತೋರುವವ.

೩.ಆಗಾಧ್

ಯಾವಾಗಲು ವಿನೋದದಲ್ಲಿ ಇರುವವ, ಖುಷಿಯನ್ನು ಹರಡುವವ ಎಂಬ ಅರ್ಥವನ್ನು ಈ ಹೆಸರು ಇದು ನೀಡುತ್ತದೆ, ಶಿವನಿಗೆ ಇಷ್ಟವಾದ ಹೆಸರು ಕೂಡ ಇದಾಗಿದೆ.

೪.ಅನಘ/ಅನಘ್  

ತಪ್ಪು ಇಲ್ಲದವ, ದೋಷ ಮುಕ್ತ, ನ್ಯೂನತೆ ಇಲ್ಲದವ.

೫.ಧ್ಯುತಿಧರ

ಪ್ರಕಾಶಮಾನ, ಉಜ್ವಲ.

೬.ಲಲತಾಕ್ಷ್/ಲಲತಾಕ್ಷ

ಮೂರನೇ ಕಣ್ಣು ಹೊಂದಿರುವವ, ಹಣೆಯಲ್ಲಿ ಕಣ್ಣು ಇರಿಸಿಕೊಂಡಿರುವವ, ಶಿವನ ಮತ್ತೊಂದು ಹೆಸರು.

೭.ಧನದೀಪ್

ಸಂಪತ್ತಿನ ದೇವತೆ, ಐಶ್ವರ್ಯ ರಾಜ, ಸಮೃದ್ಧಿ ಪಡೆಯುವವ, ಸಿರಿವಂತ.

೮.ವಿಹಾನ್

ಮುಂಜಾನೆ, ಬೆಳಿಗ್ಗೆ ಅಥವಾ ಸೂರ್ಯನ ಮೊದಲ ಕಿರಣ ಎಂಬ ಅರ್ಥವನ್ನು ಇದು ನೀಡುತ್ತದೆ.

೯.ಹಿಮಾಕ್ಷ್

ಶಿವನ ಮತ್ತೊಂದು ಹೆಸರು, ಶಾಂತ ಮನೋಭಾವ.

೧೦.ಮಾನ್ವಿಕ್

ಈ ಹೆಸರಿನ ಅರ್ಥ, ಯಾವಾಗಲು ಜಾಗೃತನಾಗಿರುವವ, ಎಚ್ಚರಿಕೆ ಹೊಂದಿರುವವ, ಅರಿತಿರುವವ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon