Link copied!
Sign in / Sign up
515
Shares

ನಿಮ್ಮ ಮಗುವು ಗಣಪನಂತೆ ಆಗಲು ಈ ಅದ್ಭುತ ಮಿಶ್ರನಗಳನ್ನ ನೀಡಿ!

ಕೆಲವು ಮಕ್ಕಳು ಬೆಳೆಯುತ್ತಿದ್ದಂತೆ ತಮಗೆ ಬೇಕಾದ ತೂಕವನ್ನು ಪಡೆದುಕೊಳ್ಳುವುದರಲ್ಲಿ ವಿಫಲರಾಗುತ್ತಾರೆ. ಇದು ಪೋಷಕಾಂಶಗಳು ಅಥವಾ ಜೀವಸತ್ವಗಳ(ವಿಟಮಿನ್) ಅಸಮರ್ಪಕ ಪ್ರಮಾಣದ ಸೇವನೆ ಅಥವಾ ಕೊರತೆಯ ಪರಿಣಾಮವಾಗಿರಬಹುದು. ಕೆಲವು ಶಿಶುಗಳು ಹಸಿವಿಲ್ಲದಿರುವುದರಂತಹ ಸೌಮ್ಯ ಗುಣದೊಂದಿಗೆ ಹುಟ್ಟಿಕೊಂಡರೂ, ಮಗುವಿನ ಅಗತ್ಯಕ್ಕೆ ತಕ್ಕ ಪೌಷ್ಟಿಕಾಂಶವನ್ನು ನೀಡುವುದು ಪೋಷಕರ ಕರ್ತವ್ಯವಾಗಿರುತ್ತದೆ.ನಿಮ್ಮ ಮಗುವಿಗೆ ನೀಡುವ ಎಲ್ಲಾ ಪದಾರ್ಥಗಳು ನಿಮ್ಮ ಮಗುವಿನ ತೂಕ ಹೆಚ್ಚಿಸಲು ಸಹಾಯಕಾರಿಯಾಗುವುದಿಲ್ಲ. ಕೆಲವು ಪದಾರ್ಥಗಳ ರಚನೆ ಮತ್ತು ಗಾತ್ರ ಭಿನ್ನವಾಗಿರುವುದರಿಂದ ಅವುಗಳಲ್ಲಿರುವ ಪೌಷ್ಠಿಕ ಅಂಶಗಳು ಅವರಲ್ಲಿ ಸಂಪೂರ್ಣ ಉಪಯೋಗವಾಗದೆ ಇರಬಹುದು, ಅದಕ್ಕಾಗಿ ಅಂತಹ ಪದಾರ್ಥಗಳನ್ನು ಪುಡಿ ಮಾಡಿ ಕೊಡುವುದರಿಂದ ಆ ಪದಾರ್ಥದ ಸಂಪೂರ್ಣ ಪೌಷ್ಟಿಕಾಂಶವನ್ನು ಪಡೆಯಬಹುದು. ಜೊತೆಗೆ ನಿಮ್ಮ ಮಗು ಏನನ್ನು ಸೇವಿಸುತ್ತಿದೆ ಎಂದು ನೀವು ತಿಳಿದುಕೊಂಡಿರುವುದು ಉತ್ತಮ, ಏಕೆಂದರೆ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿರುವ ಆರೋಗ್ಯ ಮಿಶ್ರಣಗಳು ಮತ್ತು ಪುಡಿಗಳ ಬಗ್ಗೆ ತಾಯಂದಿರಿಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದಿಲ್ಲ.

ನೀವು ಪದಾರ್ಥಗಳನ್ನು ಅಥವಾ ದ್ರವ್ಯಗಳೊಂದಿಗೆ ಪುಡಿಯನ್ನು ಮಿಶ್ರಣ ಮಾಡುವ ಮೊದಲು ನಿಮ್ಮ ಮಗುವಿಗೆ ಇದರಿಂದ ಯಾವುದೇ ಅಲರ್ಜಿ ಅಥವಾ ಮೈನೂರತೆ ಆಗುವುದಿಲ್ಲವೆಂದು ಖಾತ್ರಿಪಡಿಸಿಕೊಳ್ಳಿ. ಕೆಳಗೆ ನೀಡಿರುವುದು ನಿಮ್ಮ ಮಗುವಿನ ಸ್ಥಿರ ಬೆಳವಣಿಗೆಯುಳ್ಳ ಉತ್ತಮ ಆರೋಗ್ಯಕ್ಕೆ ಸಹಾಯವಾಗುತ್ತದೆ.

ಪದಾರ್ಥಗಳು:

೧.ಬಾದಾಮಿ (೧೦೦ ಗ್ರಾಂ)

೨.ಗೋಡಂಬಿ (೧೦೦ ಗ್ರಾಂ)

೩. ವಾಲ್ ನಟ್ಸ್(ಆಕ್ರೋಡು) (೧೦೦ ಗ್ರಾಂ)

೪.ಪಿಸ್ತಾ (೧೦೦ ಗ್ರಾಂ)

೫.ಏಲಕ್ಕಿ (೧೦)

೬.ಕಪ್ಪು ಉದ್ದಿನ ಕಾಳು (೨೦೦ ಗ್ರಾಂ)

೭.ಹಸಿರು ಕಾಳು (೧೫೦ ಗ್ರಾಂ)

೮.ಓಟ್ಸ್/ತೋಕ್ಕೆಗೋಧಿ (೧೫೦ ಗ್ರಾಂ)

೯.ಬಾರ್ಲಿ/ಜವೆಗೋಧಿ (೧೫೦ ಗ್ರಾಂ)

೧೦.ಎಳ್ಳು (೧೫೦ ಗ್ರಾಂ)

೧೧.ರಾಗಿ ಹಿಟ್ಟು (೫೦೦ ಗ್ರಾಂ)

೧೨.ಸೋಯಾ ಪುಡಿ (೨೦೦ ಗ್ರಾಂ)

ವಿಧಾನ:

ಬಾಣಲೆಯಲ್ಲಿ ಕಪ್ಪು ಉದ್ದಿನ ಕಾಳು, ಹಸಿರು ಕಾಳು, ಬಾರ್ಲಿ ಮತ್ತು ಓಟ್ಸ್ ಅನ್ನು ಚೆನ್ನಾಗಿ ಉರಿದುಕೊಳ್ಳಿ, ಎಲ್ಲಾ ಕಾಳು/ಬೀಜಗಳನ್ನು ಕೆಂಪಾಗುವವರೆಗೆ ಉರಿದುಕೊಳ್ಳಿ, ಅದು ತಣ್ಣಗಾಗಲು ಪಕ್ಕದಲ್ಲಿರಿಸಿ, ಎಲ್ಲಾ ಪದಾರ್ಥಗಳನ್ನು ೩ ರಿಂದ ೪ ನಿಮಿಷಗಳ ತನಕ ಬಿಸಿ ಮಾಡಿಕೊಳ್ಳಿ.

ಕಪ್ಪು ಉದ್ದಿನ ಕಾಳು,, ಹಸಿರು ಕಾಳು, ಬಾರ್ಲಿ, ಓಟ್ಸ್, ಎಳ್ಳು, ಕಾಳು/ಬೀಜಗಳು, ರಾಗಿ ಹಿಟ್ಟು ಮತ್ತು  ಸೋಯಾ ಪುಡಿಯನ್ನು ರುಬ್ಬಿಕೊಳ್ಳಿ. ಅದು ಚೆನ್ನಾಗಿ ಪುಡಿಯಾಗುವತನಕ ರುಬ್ಬಿಕೊಳ್ಳಿ. ಎಲ್ಲಾ ಪುಡಿಗಳನ್ನು ಸರಿಯಾಗಿ ಮಿಶ್ರಣ ಮಾಡಿ. ೫-೬ ಸೆಕೆಂಡ್(ಕ್ಷಣ)ಆದರೂ ರುಬ್ಬಿರಿ. ಅದು ತರಿಯಾಗಿದ್ದಾರೆ, ಸಂಪೂರ್ಣ ಪುಡಿಯಾಗುವ ತನಕ ಚೆನ್ನಾಗಿ ರುಬ್ಬಿರಿ.

ಕಾಲಾನಂತರದಲ್ಲಿ ಬರಬಹುದಾದಂತಹ ದುರ್ವಾಸನೆಯನ್ನು ತಡೆಯಲು ಮಿಶ್ರಣವನ್ನು ಶೀತಕ(ರೆಫ್ರಿಜರೇಟರ್)ದಲ್ಲಿ ಇಡಿ.

ಮಿಶ್ರಣದ(ಪುಡಿಯ) ಪರಿಣಾಮವನ್ನು ಹೆಚ್ಚಿಸಲು, ಮಿಶ್ರಣವನ್ನು ಬೆಚ್ಚನೆಯ ಹಾಲು ಮತ್ತು ಸಕ್ಕರೆಯೊಂದಿಗೆ ಸೇರಿಸಿ. ತನ್ನ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಸುಲಭವಾಗಿ ನುಂಗಲು ಇದು ಸುಲಭವಾಗುತ್ತದೆ. ನಿಮ್ಮ ಮಗುವು ಇದನ್ನು ಕುಡಿಯಲು ರಂಪಾಟ/ ಗಲಾಟೆಮಾಡಿದರೆ ಅದಕ್ಕೆ ಸ್ವಲ್ಪ ಚಾಕೋಲೇಟ್/ಮಿಠಾಯಿಯನ್ನು ಸೇರಿಸಿ ಕುಡಿಸಿ. ನಿಮ್ಮ ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಭಯವಿದ್ದರೆ ಈ ಮಿಶ್ರಣ ಕುಡಿಸುವುದರಿಂದ ಮಗುವಿನ ಸ್ಥಿರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನಿಮ್ಮ ಮಗುವಿನ ತೂಕದಲ್ಲಿ ಬದಲಾವಣೆ ಕಾಣುವವರೆಗೂ ಇದನ್ನು ಪ್ರತಿದಿನ ನೀಡುತ್ತಾ ಬನ್ನಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
25%
Wow!
75%
Like
0%
Not bad
0%
What?
scroll up icon