Link copied!
Sign in / Sign up
2
Shares

ಮಕ್ಕಳಿಗೆ ಟಾಯ್ಲೆಟ್ ತರಬೇತಿ ಯಾವಾಗಿನಿಂದ ಶುರು ಮಾಡಬೇಕು?

ಟಾಯ್ಲೆಟ್ ತರಬೇತಿಯು ಮಗುವಿನ ಬೆಳವಣಿಗೆ ಹಂತದ ಒಂದು ತುಂಬಾ ಮುಖ್ಯವಾದ ಭಾಗ. ಇದು ಕೇವಲ ಪೋಷಕರಿಗೆ ಪದೇ ಪದೇ ಡೈಪರ್ ಅನ್ನು ಬದಲಿಸುವ ತಲೆನೋವು ಕಡಿಮೆ ಮಾಡುವುದಷ್ಟೇ ಅಲ್ಲದೆ ನಿಮ್ಮ ಮಗುವು ಸರಿಯಾದ ಬೆಳವಣಿಗೆಯ ಹಾದಿಯಲ್ಲಿದೆ ಎಂಬುದನ್ನ ತೋರಿಸುತ್ತದೆ. ಟಾಯ್ಲೆಟ್ ತರಬೇತಿಗೆ ಎಲ್ಲಾ ಮಕ್ಕಳೂ ಒಂದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಕೆಲವು ಮಕ್ಕಳು ಕೆಲವೇ ದಿನಗಳಲ್ಲಿ ಕಲಿತುಕೊಂಡರೆ, ಇನ್ನೂ ಕೆಲವು ಮಕ್ಕಳು ತಿಂಗಳುಗಳ ಕಾಲ ತೆಗೆದುಕೊಳ್ಳಬಹುದು. ಪೋಷಕರಾಗಿ ನಿಮಗೆ ತರಬೇತಿಯ ಅಡಿಪಾಯಗಳು ಗೊತ್ತಿದ್ದರೆ, ನೀವು ಸಫಲರಾಗುವ ಸಾಧ್ಯತೆಗಳು ಹೆಚ್ಚು. ಅದೇನೆಂದು ನಾವಿಲ್ಲಿ ತಿಳಿಸಿದ್ದೇವೆ ಓದಿ.

ನಿಮ್ಮ ಮಗುವು ತರಬೇತಿಗೆ ಸಿದ್ಧವಾಗಿದೆಯೇ? ಬಹುತೇಕ ಪ್ರಕರಣಗಳಲ್ಲಿ, ಪೋಷಕರು ಮಗುವಿಗೆ ಇನ್ನೇನು 18 ತಿಂಗಳು ತುಂಬುತ್ತದೆ ಎನ್ನುವಷ್ಟರಲ್ಲಿ ಟಾಯ್ಲೆಟ್ ತರಬೇತಿ ಶುರು ಮಾಡಿಸುತ್ತಾರೆ. ಇನ್ನೂ ಕೆಲವು ಪೋಷಕರು ಮಗುವಿಗೆ 3 ವರ್ಷಗಳು ತುಂಬುವವರೆಗೆ ಕೂಡ ಕಾಯುತ್ತಾರೆ. ಅಂದರೆ, ನಿಮ್ಮ ಮಗುವು ತನ್ನ ಗುದನಾಳದ ಬೆಳವಣಿಗೆಯನ್ನ ಸಂಪೂರ್ಣವಾಗಿ ಹೊಂದಿದ ನಂತರವಷ್ಟೇ ಟಾಯ್ಲೆಟ್ ತರಬೇತಿಗೆ ಸಿದ್ಧವಾಗಿದೆ ಎಂದರ್ಥ. ಇದರೊಂದಿಗೆ ಮಗುವಿನ ತೆವಳುವ ಸಾಮರ್ಥ್ಯ, ನಿಲ್ಲುವ, ಕೂರುವ ಮತ್ತು ನಿಮ್ಮ ಮಾತುಗಳನ್ನ ಪಾಲಿಸುವ ಸಾಮರ್ಥ್ಯ ಹಾಗು ಇನ್ನೂ ಅನೇಕ ಈ ರೀತಿಯ ಸಂಗತಿಗಳು ನಿಮ್ಮ ಮಗುವು ತರಬೇತಿಗೆ ಸಿದ್ಧವಾಗಿದೆಯೇ ಎಂಬುದರ ಮೇಲೆ ಪರಿಣಾಮ ಬೀರುತ್ತವೆ. ಪೋಷಕರಾಗಿ ನೀವು ನಿಮ್ಮ ಮಗುವಿಗೆ ಟಾಯ್ಲೆಟ್ ತರಬೇತಿ ನೀಡಲು ಸಮಯವನ್ನ ಎತ್ತಿಡಲೇಬೇಕು. ಇಲ್ಲವಾದರೆ ಆಗದ ಕೆಲಸವಿದು.

 

ಒಂದು ವಾಡಿಕೆಯನ್ನು ಸೆಟ್ ಮಾಡಿ

ಒಂದು ನಿಗದಿತ ವಾಡಿಕೆಯು ಟಾಯ್ಲೆಟ್ ತರಬೇತಿಯಲ್ಲಿ ತುಂಬಾನೇ ಮುಖ್ಯ ಯಾಕೆಂದರೆ ಇದರಿಂದಲೇ ನಿಮ್ಮ ಮಗುವು ತಾನು ಮಾಡಬೇಕಿರುವ ಕೆಲಸವನ್ನ ಬೇಗ ಕಲಿಯಲು ಸಾಧ್ಯ. ಮೊದಲಿಗೆ ನೀವು ಒಂದು ಪೋರ್ಟಬಲ್ ಟಾಯ್ಲೆಟ್ ಕುರ್ಚಿಯನ್ನು ಖರೀದಿಸಿ, ನಿಮ್ಮ ಮಗುವು ಸಾಮಾನ್ಯವಾಗಿ ಮಲವಿಸರ್ಜನೆ ಮಾಡುವ ಸಮಯಗಳಲ್ಲಿ ಬಟ್ಟೆಯ ಸಮೇತವೇ ನಿಮ್ಮ ಮಗುವನ್ನು ಅದರ ಮೇಲೆ ಕೂರಿಸಿ. ಇದನ್ನು ಕೆಲವು ದಿನಗಳ ಕಾಲ ಪ್ರತಿದಿನ ಮಾಡಿದರೆ, ಮಲ ಬಂದರೆ ಇದರ ಮೇಲೆ ಕೂರಬೇಕು ಎಂಬುದು ನಿಮ್ಮ ಮಗುವಿಗೆ ಮನದಟ್ಟಾಗುತ್ತದೆ. ನಂತರದ ಗುರಿ, ನಿಮ್ಮ ಮಗುವು ಅದರ ಮೇಲೆ ತಳ ಬೆತ್ತಲಾಗಿ ಕೂರುವಂತೆ ಮಾಡುವುದು. ಒಂದು ವೇಳೆ ಬಟ್ಟೆ ಇಲ್ಲದೆ ಆ ಕುರ್ಚಿಯ ಮೇಲೆ ಕೂರಲು ನಿಮ್ಮ ಮಗುವು ಹಠ ಮಾಡಿದರೆ, ಒತ್ತಾಯ ಮಾಡುವುದು ಒಳ್ಳೆಯದಲ್ಲ. ನೀವು ಮಾಡಬೇಕಿರುವುದು ಏನೆಂದರೆ, ಮಗುವು ಆ ಕುರ್ಚಿಯನ್ನು ಬಳಸಲು ಆರಾಮ ಮಾಡಿಕೊಡಬೇಕಿರುವುದು. ಹೀಗಾಗಿ ಅವರೇ ಒಮ್ಮೆ ಅದರ ಮೇಲೆ ಕುಳಿತುಕೊಳ್ಳಲು ಕಲಿತ ನಂತರ, ಎಲ್ಲವೂ ತಾನಾಗಿಯೇ ಸರಿ ಹೋಗುತ್ತದೆ.

 

ಸರಿಯಾದ ಉಪಕರಣಗಳನ್ನ ತಂದಿಡಿ

ವಯಸ್ಕರರು ಬಳಸುವ ಟಾಯ್ಲೆಟ್ ಅಲ್ಲಿಯೇ ಮಗುವಿಗೆ ತರಬೇತಿ ನೀಡುವುದು ಒಳ್ಳೆಯ ಉಪಾಯವಲ್ಲ. ನೀವು ತರಬೇತಿಯನ್ನು ಶುರು ಮಾಡುವ ಮುನ್ನ ನಿಮ್ಮ ಮಗುವಿಗೆ ಸರಿ ಹೊಂದುವ ಗಾತ್ರದ ಉಪಕರಣಗಳು ಇವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಮಗುವಿಗೆ ಸರಿ ಹೊಂದುವ ಗಾತ್ರದ ಟಾಯ್ಲೆಟ್ ಇದ್ದರೆ, ಮಗುವಿಗೆ ಟಾಯ್ಲೆಟ್ ಅಲ್ಲಿ ಬೀಳುವ ಭಯ ಹೋಗುತ್ತದೆ. ಕೆಲವು ಮಕ್ಕಳು ಟಾಯ್ಲೆಟ್ ಅನ್ನು ಫ್ಲಶ್ ಮಾಡುವುದರಿಂದಲೂ ಭಯ ಬೀಳುತ್ತಾರೆ. ಮಗುವಿಗೆ ಸರಿ ಹೊಂದುವ ಟಾಯ್ಲೆಟ್ ಅನ್ನು ಖರೀದಿಸುವವರೆಗೂ ಪೋಷಕರ ಹುಡುಕಾಟ ಮುಗಿಯಬಾರದು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon