Link copied!
Sign in / Sign up
4
Shares

ಟಾಯ್ಲೆಟ್ ಬಳಕೆ ಬಗ್ಗೆ ಮಕ್ಕಳಿಗೆ ತರಬೇತಿ!

ಮಕ್ಕಳು ಮಾಡುವ ಯಾವುದೇ ಚಿಕ್ಕ ಪುಟ್ಟ ವಿಷಯಗಳು ಪಾಲಕರನ್ನು ಆನಂದ ತುದಿಗೇರಿಸುತ್ತದೆ. ಮಕ್ಕಳು ತಮ್ಮ ಗುರಿಯನ್ನು ದಾಟಿದಾಗಲಂತೂ, ಪಾಲಕರ ಸಂಭ್ರಮಕ್ಕೆ ಸೀಮೆಯೇ ಇರದು.ಮಕ್ಕಳು ತಮ್ಮ ಪೋಟಿಯ ಬಳಕೆಯನ್ನು ಯಾವಾಗ ಪರಿಪೂರ್ಣವಾಗಿ ಪರಿಣಿತರಾಗುವರೆಂದು ಎಲ್ಲಾ ಪಾಲಕರೂ ಕಾಯುತ್ತಿರುತ್ತಾರೆ. ಪೋಟಿಯ ಬಳಕೆಯ ಪರಿಶೀಲನೆ ನಿಗದಿತ ವೇಳೆಗಿಂತ ಮುಂಚಿತವಾದರೆ, ಅದು ಪಾಲಕರಿಗೆ ಮಾತ್ರವಲ್ಲದೆ ಮಕ್ಕಳಿಗೂ ಗೋಜಲೆನಿಸುವುದು. ಪೋಟಿಯ ಬಳಕೆಯಲ್ಲಿ ಮಕ್ಕಳು ನಿಪುಣರಾಗುವಂತೆ ಹೇಗೆ ತರಬೇತಿ ನೀಡುವುದೆಂದು ತಿಳಿಯೋಣ ಬನ್ನಿ.

೧.ಮಗುವು ತಯಾರಾಗಿದ್ದಾನೆಯೇ ?

ಸಾಧಾರಣವಾಗಿ ಎರಡು ಅಥವಾ ಎರಡೂವರೆ ವಯಸ್ಸಿನ ಮಗುವಿಗೆ ಪೋಟಿ ಬಳಕೆಯ ಪರಿಶೀಲನೆಯನ್ನು ನೀಡುವುದು ಒಳ್ಳೆಯದು. ಆದರೆ ಎಲ್ಲ ಮಕ್ಕಳಿಗೂ ಈ ಪ್ರಾಯವು ಅನ್ವಯಿಸುವುದಿಲ್ಲ. ಕೆಲವು ಮಕ್ಕಳು ಹದಿನೆಂಟು ತಿಂಗಳಲ್ಲಿ ಪೋಟಿ ಬಳಕೆಯಲ್ಲಿ ನಿಪುಣರಾದರೆ, ಕೆಲವು ಮಕ್ಕಳು ನಾಲ್ಕು ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳು ಪೋಟಿ ಬಳಕೆ ಮಾಡುವಷ್ಟರ ಮಟ್ಟಿಗೆ ಅದರಲ್ಲಿ ಹಿಡಿತ ಸಾಧಿಸಿದ್ದಾರೆಯೇ... ಎನ್ನುವ ಕೆಲವು ಸೂಚನೆಗಳನ್ನು ನೋಡಿ.

ಪೋಟಿ ಬಳಕೆಯಲ್ಲಿ ತೋರುವ ಉತ್ಸಾಹ

ಡಯಪರ್ ಒದ್ದೆಯಾದರೆ ತೋರುವ ಅಸಮಧಾನ

ಸ್ವತಃ ಬಟ್ಟೆಯ ಬದಲಾಯಿಸುವಿಕೆ

ನಿಗದಿತ ವೇಳೆಗೆ ಬಚ್ಚಲುಮನೆಯ ಪ್ರವೇಶ.

೨.ಮಗುವಿನ ಅಳತೆಗೆ ತಕ್ಕಂತೆ ಪೋಟಿ ಚೇರ್ ಅಥವಾ ಪೋಟಿ ಸೀಟಿನ ಖರೀದಿ

ಅಗತ್ಯ ಸಾಧನಗಳಿಗಾಗಿ ಹಣ ವ್ಯಯಿಸುವುದೇ ಜಾಣತನ. ಇದರಿಂದ ಮಗುವಿನ ಪೋಟಿ ಬಳಕೆಯ ಆಸಕ್ತಿಯೂ ಹೆಚ್ಚಬಹುದು. ಪೋಟಿ ಸೀಟ್ ಅಥವಾ ಅಡಾಪ್ಟರ್ ಸೀಟ್ ಅನ್ನು ಖರೀದಿಸಲು ಆಲೋಚಿಸಿದರೆ, ಅದು ಸುರಕ್ಷಿತ ಹಾಗೂ ಆರಾಮದಾಯಕವೇ ಎಂದು ಖಚಿತಪಡಿಸಿಕೊಳ್ಳಿ. ಸ್ಟೆಪ್ ಸ್ಟೂಲ್ಗಳ ಬಳಕೆಯೂ ಮಕ್ಕಳ ಕರುಳು ಹಾಗೂ ಮೂತ್ರಕೋಶಗಳಲ್ಲಿರುವ ಸಂಗ್ರಹಗಳನ್ನು ಸಂಪೂರ್ಣವಾಗಿ ವಿಸರ್ಜಿಸುವಂತೆ ಸಹಾಯ ಮಾಡುತ್ತದೆ.

೩.ದಿನಚರಿಯಾಗಿಸಿ

ದಿನವೂ ಮಗುವು ಮಲ ವಿಸರ್ಜಿಸುವ ಅದೇ ಹೊತ್ತಿಗೆ ಸರಿಯಾಗಿ ಮಗುವನ್ನು ಪೋಟಿಯ ಮೇಲೆ ಕುಳಿತುಕೊಳ್ಳಿಸಿ. ನೀವೆಲ್ಲಿದ್ದರೂ ಈ ಹೊತ್ತಿಗಂತೂ ಮಗುವು ಪೋಟಿಯ ಮೇಲೆ ಕುಳಿತುಕೊಂಡಿರುವಂತೆ ನಿಮ್ಮ ಕೆಲಸ ಕಾರ್ಯಗಳನ್ನು ಸರಿ ಹೊಂದಿಸಿಕೊಳ್ಳಿ. ಮೊದಮೊದಲು ಮಗುವಿಗೆ ಚಡ್ಡಿಯನ್ನು ಸಂಪೂರ್ಣವಾಗಿ ಕಳಚಿ ಕುಳಿತುಕೊಳ್ಳಿಸಿ ತಾಲೀಮು ನೀಡಿದ ಬಳಿಕ, ಒಳಚಡ್ಡಿಗಳನ್ನು ಅರ್ಧ ಭಾಗ ಮಾತ್ರವೇ ಕಳಚಿ ಕುಳಿತುಕೊಳ್ಳುವಂತೆ ಅಭ್ಯಾಸ ಮಾಡಿ . ಆದರೆ ಮಗು ಪೋಟಿಯನ್ನು ಬಳಸಲು ವಿಸಮ್ಮತಿಸುತ್ತಿದ್ದರೆ, ದಯವಿಟ್ಟು ಯಾವುದೇ ಒತ್ತಡ ನೀಡದಿರಿ. ಮಗುವೂ ಸ್ವಲ್ಪ ದೊಡ್ಡವನಾದ ಬಳಿಕ ಪುನಃ ಪೋಟಿ ಪ್ರಯೋಗವನ್ನು ಪರೀಕ್ಷಿಸಬಹುದು.

೪.ಪೋಟಿ ಬಳಕೆಯ ನೇರ ಪ್ರದರ್ಶನ

ಅನುಕರಣೆಯಿಂದಲೇ ಮಕ್ಕಳು ಬಹಳ ವಿಷಯಗಳನ್ನು ಕಲಿಯುತ್ತಾರೆ. ಆದ ಕಾರಣ ಮಕ್ಕಳ ಮುಂದೆ ಪೋಟಿಯ ಬಳಕೆ ಹೇಗೆಂದು ಪ್ರದರ್ಶಿಸಿದರೆ, ಅದರ ಅನುಕರಣೆಯಿಂದ ಮಕ್ಕಳು ಬಹಳ ಬೇಗನೇ ಪೋಟಿಯನ್ನು ಬಳಸಲು ತೊಡಗುವರು. ಪ್ರದರ್ಶನದ ವೇಳೆಯಲ್ಲಿ ಯಾವಾಗ ಬಾತ್ ರೂಂಗೆ ಹೋಗಬೇಕೆಂದೂ, ಚಡ್ಡಿಯನ್ನು ಕಳಚುವ ವಿಧಾನ, ವಿಸರ್ಜನೆ ಬಳಿಕ ನೀರಿನಿಂದ ಶುಚಿಗೊಳಿಸುವುದನ್ನೂ, ಒಳ ಉಡುಪುಗಳನ್ನು ಪುನಃ ಧರಿಸುವುದನ್ನೂ ತೋರಿಸಿಕೊಡಬೇಕು.

೫.ಸ್ವಚ್ಛತೆಯ ಬಗ್ಗೆ ಗಮನ

ಪೋಟಿಯ ಬಳಕೆಯ ಪ್ರಚೋನೆಯ ಸಮಯದಲ್ಲಿ ಸ್ವಚ್ಛತೆಯ ಬಗ್ಗೆಯೂ ತಿಳಿಹೇಳಬೇಕು. ಮಕ್ಕಳು ಗುಧದ್ವಾರವನ್ನು ಸರಿಯಾಗಿ ತೊಳೆಯುವಂತೆಯೂ,ಟಿಶ್ಯೂ ಪೇಪರಿನಿಂದ ಶುಚಿಗೊಳಿಸುವಂತೆಯೂ, ಫ್ಲಾಶ್ ಮಾಡುವಂತೆಯೂ, ಕೈ ಕಾಲುಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳುವಂತೆಯೂ ತರಬೇತಿ ನೀಡಬೇಕು. ಕೈ ತೊಳೆದುಕೊಳ್ಳುವತ್ತ ಮಕ್ಕಳು ಗಮನ ಹರಿಸುವಂತೆ ಮಕ್ಕಳ ಹ್ಯಾಂಡ್ವಾಶ್ ಅಥವಾ ಮಕ್ಕಳ ಸೋಪನ್ನು ಖರೀದಿಸುವುದು ಒಳ್ಳೆಯದು.

೬.ಪ್ರಶಂಸೆ ಹಾಗೂ ಬಹುಮಾನ

ಪೋಟಿಯ(ಟಾಯ್ಲೆಟ್) ಬಳಕೆಯನ್ನು ಪರಿಶೀಲಿಸುವ ಹಂತದಲ್ಲಿ ಮಕ್ಕಳಿಗೆ ಎಡವಟ್ಟಾಗುವುದು ಸಹಜ. ನಾಲ್ಕು ಐದು ವರ್ಷಗಳಾದರೂ ಕೆಲವೊಮ್ಮೆ ಚಡ್ಡಿಗಳಲ್ಲೇ ಎಲ್ಲಾ ಮುಗಿಸಿರಬಹುದು. ರಾತ್ರಿ ವೇಳೆಯಲ್ಲಿ ಹಾಸಿಗೆಯನ್ನು ಒದ್ದೆ ಮಾಡಿರಬಹುದು. ಆದರೆ, ಅದಕ್ಕಾಗಿ ಮಕ್ಕಳನ್ನು ಒಮ್ಮೆಯೂ ಶಿಕ್ಷಿಸದಿರೆ. ಇದರಿಂದ ಭಯಗೊಂಡ ಮಕ್ಕಳು ಪೋಟಿ ಬಳಕೆಯತ್ತ ವಿಮುಖರಾಗಬಹುದು. ಬದಲಿಗೆ ಮಗುವು ಪೋಟಿಯ ಬಳಕೆ ಮಾಡಿದಾಗಲೆಲ್ಲ, ಯಾವುದಾದರೊಂದು ಬಹುಮಾನ ನೀಡಿದರೆ, ಪೋಟಿ ಖರೀದಿಯೂ ಸದ್ವಿನಿಯೋಗವಾಗುವುದು. ಬಹುಮಾನವು ಕೇವಲ ಸ್ಟಿಕರ್ ಆಗಿದ್ದರೂ ತೊಂದರೆ ಇಲ್ಲ. ಚಿಕ್ಕದೊಂದು ಸ್ಟಿಕ್ಕರ್ ಅನ್ನು ತಯಾರಿಸಿ ಮಗುವು ಸರಿಯಾಗಿ ಪೋಟಿ ಬಳಸಿದಾಗಲೆಲ್ಲ ಈ ಸ್ಟಿಕ್ಕರನ್ನು ಪಾರಿತೋಷಕವಾಗಿ ನೀಡಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon