Link copied!
Sign in / Sign up
51
Shares

ತಿಂಗಳಿಂದ ತಿಂಗಳಿಗೆ ನಿಮ್ಮ ಮಗು ಹೊಟ್ಟೆಯಲ್ಲಿ ಹೇಗೆ ಬೆಳೆಯುತ್ತದೆ ಎಂಬುದನ್ನು ಈ ಚಿತ್ರಗಳು ತೋರಿಸುತ್ತವೆ!

 

ಅಭಿನಂದನೆಗಳು ! ನೀವು ಈಗ ಗರ್ಭತಾಳಿದ್ದೀರ. ನಿಮ್ಮ ಮಗುವು ಹೊಟ್ಟೆಯಲ್ಲಿ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದು ಕುತೂಹಲ ನಿಮಗಿದೆಯೇ? ನಿಮ್ಮ ಮಗು ತಿಂಗಳಿಂದ ತಿಂಗಳಿಗೆ ಹೇಗೆ ಬೆಳೆಯುತ್ತಿದೆ ಎಂಬುದರ ಒಂದು ಇಣುಕುನೋಟ ಇಲ್ಲಿದೆ, ನೀವು ನೋಡಿ ಕಣ್ಣು ತುಂಬಿಕೊಳ್ಳಿ.

೧. ಗರ್ಭತಾಳುವಿಕೆ

ವೀರ್ಯವು ಅಂಡಾಣು ಜೊತೆಗೆ ಕೂಡಿದಾಗ ಫಲೀಕರಣ ಆಗುತ್ತದೆ. ಈ ಸಮಯದಲ್ಲೇ ಮಗುವಿನ ಲಿಂಗದ ನಿರ್ಣಯ ಆಗುತ್ತದೆ. ಗರ್ಭತಾಳಿದ ಮೂರು ದಿನಗಳಲ್ಲಿ ಫಲೀಕರಣ ಹೊಂದಿದ ಅಂಡಾಣು ವಿಭಜನೆ ಹೊಂದಿ ಹಲವು ಕಣಗಳಾಗಿ ಮಾರ್ಪಾಡಾಗುತ್ತದೆ. ಇದು ನಂತರ ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುತ್ತದೆ. ಮಗುವಿನ ಪೋಷಣೆ ಮಾಡುವ ಹೊಕ್ಕುಳಬಳ್ಳಿ ಕೂಡ ಇಲ್ಲಿಂದ ರೂಪುಗೊಳ್ಳಲು ಶುರುವಾಗುತ್ತದೆ.

೨. 4 ವಾರಗಳ ವರೆಗಿನ ಬೆಳವಣಿಗೆ

ಈ ಸಮಯದಲ್ಲಿ ಮಗುವಿನ ಮುಖ ಹಾಗು ಕುತ್ತಿಗೆ ಆಗಿ ರೂಪುಗೊಳ್ಳುವ ರಚನೆಗಳ ಬೆಳವಣಿಗೆ ಶುರು ಆಗುತ್ತದೆ. ಹೃದಯ ಹಾಗು ರಕ್ತನಾಳಗಳು ಬೆಳೆಯುವುದನ್ನು ಮುಂದುವರೆಸುತ್ತವೆ. ಅಲ್ಲದೆ ಶ್ವಾಸಕೋಶ, ಹೊಟ್ಟೆ ಹಾಗು ಲಿವರ್ ನ ಬೆಳವಣಿಗೆ ಕೂಡ ಶುರು ಆಗುತ್ತದೆ.

೩. 8 ವಾರಗಳ ವರೆಗಿನ ಬೆಳವಣಿಗೆ

ಮಗುವು ಇವಾಗ ಅರ್ಧ ಇನ್ಚಿಂಗಿಂತ ಸ್ವಲ್ಪ ದೊಡ್ಡದಿರುತ್ತದೆ. ಕಣ್ಣರೆಪ್ಪೆ ಹಾಗು ಕಿವಿಗಳು ಬೆಳಯಲು ಶುರುವಾಗಿರುತ್ತದೆ. ಅಲ್ಲದೆ ನೀವು ನಿಮ್ಮ ಮಗುವಿನ ಮೂಗಿನ ಅಂಚನ್ನು ಕೂಡ ನೋಡಬಹುದು. ಕೈಗಳು ಹಾಗು ಕಾಲುಗಳು ಚೆನ್ನಾಗಿ ರೂಪುಗೊಂಡಿರುತ್ತವೆ. ಕೈಬೆರಳುಗಳು ಹಾಗು ಕಾಲಿನ ಬೆರಳುಗಳು ಉದ್ದವಾಗಿರುತ್ತದೆ ಹಾಗು ಬೇರೆ ಬೇರೆಯಾಗಿ ಸರಿಯಾಗಿ ಗೋಚರಿಸುತ್ತವೆ.

೪. 12 ವಾರಗಳ ವರೆಗಿನ ಬೆಳವಣಿಗೆ

ಮಗುವು ಈಗ 2 ಇಂಚುಗಳಷ್ಟು ಉದ್ದ ಬೆಳೆದಿರುತ್ತದೆ ಹಾಗು ಸ್ವಂತವಾಗಿ ಚಲನೆಗಳನ್ನ ಮಾಡಬಲ್ಲದು. ನಿಮ್ಮ ಹೊಟ್ಟೆಯಲ್ಲಿನ ಈ ಚಲನೆಗಳನ್ನು ನೀವು ಅನುಭವಿಸಬಹುದು. ವಿಶೇಷ ಉಪಕರಣಗಳ ಸಹಾಯದೊಂದಿಗೆ ವೈದ್ಯರು ನಿಮ್ಮ ಮಗುವಿನ ನಾಡಿಮಿಡಿತವನ್ನು ಗ್ರಹಿಸುವರು. ಈ ವೇಳೆಗೆ ಮಗುವಿನ ಗುಪ್ತಾಂಗಗಳು ಸಹ ಸ್ಪಷ್ಟವಾಗಿ ಗೋಚರಿಸುತ್ತವೆ.

೫. 16 ವಾರಗಳ ವರೆಗಿನ ಬೆಳವಣಿಗೆ

ಮಗುವು ಇವಾಗ ಸುಮಾರು 4.3 ರಿಂದ 4.6 ಇಂಚುಗಳ ವರೆಗೆ ಬೆಳೆದಿರುತ್ತದೆ ಹಾಗು ಸುಮಾರು 100ಗ್ರಾಂ ಅಷ್ಟು ತೂಕ ಹೊಂದಿರುತ್ತದೆ. ಮಗುವು ಈಗ ತನ್ನ ಕಣ್ಣುಗಳನ್ನು ಮಿಟುಕಿಸಬಹುದು ಹಾಗು ರಕ್ತನಾಳಗಳು, ಹೃದಯ ಎರೆಡು ಸಂಪೂರ್ಣವಾಗಿ ರೂಪುಗೊಂಡಿರುತ್ತವೆ. ಮಗುವಿನ ಕೈ ಹಾಗು ಕಾಲುಗಳ ಬೆರಳುಗಳ ಮೇಲೆ ಗೆರೆಗಳು ಕೂಡ ಮೂಡಿರುತ್ತವೆ.

೬. ೨೦ ವಾರಗಳ ವರೆಗಿನ ಬೆಳವಣಿಗೆ

ಮಗುವು ಇವಾಗ ಸುಮಾರು 6 ಇಂಚುಗಳಷ್ಟು ಉದ್ದ ಇರುತ್ತದೆ ಹಾಗು ಸುಮಾರು 280 ಗ್ರಾಂ ಅಷ್ಟು ತೂಕ ಇರುತ್ತದೆ. ಮಗುವು ಈಗ ತನ್ನ ಬೆರಳನ್ನ ಚೀಪುವುದು, ಆಕಳಿಸುವುದು, ಮೈಮುರಿಯುವುದು ಹಾಗು ಮುಖಭಾವಗಳನ್ನ ತೋರಿಸುವುದು ಮಾಡಬಹುದು. ಇಷ್ಟು ದಿನಗಳವರೆಗೆ ನಿಮಗೆ ನಿಮ್ಮ ಮಗುವಿನ ಚಲನೆಗಳ ಬಗ್ಗೆ ನಿಮಗೆ ಅನುಭವ ಆಗದಿದ್ದರೆ, ಇವಾಗಲಂತೂ ಖಂಡಿತ ಆಗುತ್ತದೆ.

೭. ೨೪ ವಾರಗಳ ವರೆಗಿನ ಬೆಳವಣಿಗೆ

ಇವಾಗ ಮಗುವು ಸುಮಾರು 630 ಗ್ರಾಂ ಅಷ್ಟು ತೂಕ ಇರುತ್ತದೆ. ಅಲ್ಲದೆ ಶಬ್ದಗಳಿಗೆ ಚಲನೆಯಿಂದ ಅಥವಾ ನಾಡಿಮಿಡಿತ ಹೆಚ್ಚಿಸಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡುತ್ತದೆ. ಮಗುವಿನ ಕಿವಿ ಈಗ ಪೂರ್ತಿ ಬೆಳವಣಿಗೆ ಹೊಂದಿದ್ದು, ತಾನು ತನ್ನ ಅಮ್ಮನ ಗರ್ಭದಲ್ಲಿ ತಲೆ ಕೆಳಗೆ ಮಾಡಿ ಕುಂತಿರುವೆ ಎಂದು ಅದಕ್ಕೆ ತಿಳಿಯುತ್ತದೆ.

೮. 28 ವಾರಗಳ ವರೆಗಿನ ಬೆಳವಣಿಗೆ

ಈಗ ಮಗುವು ಒಂದು ಕಿಲೋಗ್ರಾಮ್ ಗಿಂತ ಸ್ವಲ್ಪ ಹೆಚ್ಚಿನ ತೂಕ ಹೊಂದಿರುತ್ತದೆ. ಗರ್ಭಧಾರಣೆಯ ಈ ಸಮಯದಲ್ಲಿ ಮಗುವು ತನ್ನ ಸ್ಥಾನಗಳನ್ನ ಬದಲಾಯಿಸುತ್ತಿರುತ್ತದೆ. ಈ ಸಮಯದಲ್ಲಿ ನಿಮಗೆ ಅಕಾಲಿಕ ಹೆರಿಗೆ ಆದರೆ, ಮಗುವು ಬದುಕುಳಿಯುವ ಸಾಧ್ಯತೆಗಳು ಬಹಳ ಇರುತ್ತವೆ.

೯. 32 ವಾರಗಳ ವರೆಗಿನ ಬೆಳವಣಿಗೆ

ಮಗುವು ಇಷ್ಟೊತ್ತಿಗೆ ಸುಮಾರು 1.8 ಕಿಲೋಗ್ರಾಮ್  ಅಷ್ಟು ತೂಕ ಹೊಂದಿರುತ್ತದೆ. ಮಗುವಿನ ಚರ್ಮದ ಕೆಳಗೆ ಕೊಬ್ಬಿನ ಪದರ ಬೆಳೆಯಲು ಶುರುವಾಗುವ ಕಾರಣ ನಿಮ್ಮ ಮಗುವಿನ ಚರ್ಮದ ಮೇಲೆ ನೆರಿಗೆಗಳು ಕಾಣುತ್ತವೆ.

೧೦. 36 ವಾರಗಳ ವರೆಗಿನ ಬೆಳವಣಿಗೆ

ಶಿಶುಗಳ ಗಾತ್ರವು ಬೇರೇ ಬೇರೆಯಾಗಿರುತ್ತದೆ. ಇದು ಮಗುವಿನ ಲಿಂಗ, ಶಿಶುಗಳ ಸಂಖ್ಯೆ, ಪೋಷಕರ ಗಾತ್ರ ಹಾಗು ಇನ್ನು ಅನೇಕ ಅಂಶಗಳ ಮೇಲೆ ಇದು ಅವಲಂಬಿತವಾಗಿರುತ್ತದೆ. ಸರಾಸರಿ, ಈ ಸಮಯದಲ್ಲಿ ಮಗುವು ಸುಮಾರು 18.5 ಇಂಚುಗಳಷ್ಟು ಉದ್ದ ಇರುತ್ತದೆ ಹಾಗು ಸುಮಾರು 2.72 ಕಿಲೋಗ್ರಾಮ್ ಅಷ್ಟು ತೂಕ ಹೊಂದಿರುತ್ತದೆ. ಮೆದುಳು ತುಂಬಾ ವೇಗವಾಗಿ ಬೆಲ್ಯುತ್ತಿರುತ್ತದೆ. ಶ್ವಾಸಕೋಶವು ಹೆಚ್ಚುಕಮ್ಮಿ ಸಂಪೂರ್ಣವಾಗಿ ಬೆಳೆದಿರುತ್ತದೆ.

೧೧. ಜನನ

ಗರ್ಭಧಾರಣೆಯ 40ನೆ ವಾರವು ಹೆರಿಗೆಯ ದಿನದೊಂದಿಗೆ ಕೊನೆಗೊಳ್ಳುತ್ತದೆ. ಹೆರಿಗೆಯ ದಿನಾಂಕವನ್ನ ತಾಯಿಯ ಗರ್ಭಧಾರಣೆಯ ಮುಂಚಿನ ಕೊನೆಯ ಋತುಸ್ರಾವದ ಕೊನೆ ದಿನದಿಂದ ಲೆಕ್ಕ ಹಿಡಿಯುತ್ತಾರೆ. ಇದರ ಆಧಾರದ ಗರ್ಭಧಾರಣೆಯ ಸಮಯವು 38-42 ವಾರಗಳ ವರೆಗೆ ಇರಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon