Link copied!
Sign in / Sign up
4
Shares

ತಿಂಗಳಿಗೆ ಎಷ್ಟು ಬಾರಿ ಸೆಕ್ಸ್ ನಲ್ಲಿ ತೊಡಗಬೇಕು ?


ಅಮೆರಿಕಾದ ಖ್ಯಾತ ವೈದ್ಯನ ಬಳಿ ಜನ ಕೇಳುವ ಪ್ರೆಶ್ನೆ ಇದು. ಜನರಿಗೆ ತಾವು ತಮ್ಮ ಸೆಕ್ಸ್ ಜೀವನವನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದೇವೆಯೇ ಇಲ್ಲವೇ ಎನ್ನುವುದೇ ಅನುಮಾನ. ಯಾಕೆಂದರೆ ಎಲ್ಲರಿಗೂ ಕಾಡುವ ಪ್ರೆಶ್ನೆ ಇದು. ಜನರು ಬೇರೆ ದಂಪತಿ ಅಥವಾ ವ್ಯಕ್ತಿಗಳನ್ನು ನೋಡಿ ತಮಗೆ ತಾವೇ ಖಿನ್ನತೆಗೆ ಒಳಗಾಗುವುದೇ ಹೆಚ್ಚು. ಅದೇ ಜನರು ಮಾಡುವ ತಪ್ಪು.

ವಾರಕ್ಕೆ ಎಷ್ಟು ಬಾರಿ ಸೆಕ್ಸ್ ನಲ್ಲಿ ತೊಡಗಬೇಕು ?

ಕೆಲವು ದಂಪತಿಗಳು ಪ್ರತಿ ದಿನವೂ, ಇನ್ನು ಕೆಲವರು ವಾರಕ್ಕೆ ಮೂರು ಬಾರಿ. ಮತ್ತೆ ಕೆಲವರು ವಾರಕ್ಕೆ ಒಂದು ಬಾರಿ ಸೆಕ್ಸ್ ನಲ್ಲಿ ತೊಡಗುತ್ತಾರೆ. ಆದರೆ ಅಮೇರಿಕಾದಲ್ಲಿ ಮಾಡಿದ ಸರ್ವೇ ಪ್ರಕಾರ ವಾರಕ್ಕೆ ಒಂದು ಬಾರಿ ಸೆಕ್ಸ್ ನಲ್ಲಿ ತೊಡಗಿರುವವರು ತುಂಬಾ ಹ್ಯಾಪಿಯಾಗಿದ್ದಾರೆ  ಎಂದು  ತಿಳಿದುಬಂದಿದೆ.

ಎಷ್ಟು ಬಾರಿ ಸೆಕ್ಸ್ ಮಾಡುತ್ತೇವೆಂಬುದು ಮುಖ್ಯವಲ್ಲ..

ಮದುವೆಯ ಬಳಿಕ ದಂಪತಿಗಳು ಹೆಚ್ಚು ಆಸಕ್ತರಾಗಿರುತ್ತಾರೆ, ಆದರೆ ದಿನ ಕಳೆದಂತೆ ಸೆಕ್ಸ್ ನಲ್ಲಿ ನಿರಾಸಕ್ತಿ ಮೂಡುವುದು ಸಹಜ ಅದು ಸಾಮನ್ಯವಾಗಿ ಎಲ್ಲರಿಗೂ ಅನುಭವವಾಗಿರುತ್ತದೆ. ಏಕೆಂದರೆ ಅವರಿಗೆ ಸಂಸಾರದ ಜಂಜಾಟದಲ್ಲಿ ಮತ್ತು ಕೆಲಸದ ಒತ್ತಡಗಳಿಂದ ದಂಪತಿಗಳು ಮೊದಲಿನಂತೆ ಅನುಭವಿಸಲು ಸಾಧ್ಯವಾಗುವುದಿಲ್ಲ, ಕೆಲವು ಮಾನಸಿಕ ಬದಲಾವಣೆಗಳು ಕೂಡ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುತ್ತವೆ.

ಇಷ್ಟೇ ಬಾರಿ ತೊಡಗಬೇಕೆಂದೇನೂ ಇಲ್ಲ

ಪ್ರತಿಯೊಬ್ಬರ ಬೇಡಿಕೆಗಳು ವಿಭಿನ್ನ,ಕೆಲಸಗಳು ವಿಭಿನ್ನ ಹೀಗಿರುವಾಗ ಇಷ್ಟೇ ಬಾರಿ ಸೆಕ್ಸ್ ನಲ್ಲಿ ತೊಡಗಬೇಕು ಅಂತ ಯಾವುದೇ ರೂಲ್ಸ್ ಇಲ್ಲ. ಮೇಲೆ ಹೇಳಿದ ಹಾಗೆ ಸರ್ವೇ ಯಲ್ಲಿ ಜನ ತಿಳಿಸಿದ ಪ್ರಕಾರ ವಾರಕ್ಕೆ ಒಂದು ಬಾರಿ ಸೆಕ್ಸ್ ನಲ್ಲಿ ತೊಡಗಿದವರು ಸಂತೋಷದಿಂದ ಸೆಕ್ಸ್ ಜೀವನ ಅನುಭವಿಸುತ್ತಿದ್ದಾರೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon