Link copied!
Sign in / Sign up
95
Shares

ಥೈರಾಯಿಡ್ ಸಮಸ್ಯೆ ಬಗ್ಗೆ A ಟು Z ಸಂಪೂರ್ಣ ವಿವರ!

ಸಂಗತಿಗಳು

ಥೈರಾಯಿಡ್ ಎನ್ನುವುದು ನಿಮ್ಮ ಗಂಟಲಿನ ಆಡಮ್ಸ್ ಆಪಲ್ ಕೆಳಗಿನ ಒಂದು ಗ್ರಂಥಿ. ಇದು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಥೈರಾಕ್ಸಿನ್ (T1) ಮತ್ತು ಟ್ರೈಐಓಡೋಥೈರೋನಿನ್ (T3) ಇದು ಬಿಡುಗಡೆ ಮಾಡುವ ಹಾರ್ಮೋನುಗಳು. ಇವುಗಳು ನಿಮ್ಮ ದೇಹವು ಉಪಯೋಗಿಸುವ ಆಮ್ಲಜನಕವನ್ನು ಹೆಚ್ಚಿಸಿ ನಿಮ್ಮ ಕಣಗಳು ಹೆಚ್ಚು ಪ್ರೋಟೀನ್ಸ್ ಅನ್ನು ತಯಾರಿಸಲು ಉತ್ತೇಜಿಸುತ್ತದೆ. ಈ ಹಾರ್ಮೋನುಗಳ ನಿಯಂತ್ರಣ ಥೈರಾಯಿಡ್ ಬಳಿ ಇರುವುದರಿಂದ, ನಿಮ್ಮ ದೇಹದ ಬಹುತೇಕ ಅಂಗಾಂಗಗಳ ಮೆಟಾಬಾಲಿಕ್ ರೇಟ್ ಅನ್ನು ಥೈರಾಯಿಡ್ ನಿರ್ಧರಿಸುತ್ತದೆ.

ಥೈರಾಯಿಡ್ ಅನ್ನು ಥೈರಾಯಿಡ್-ಸ್ಟಿಮ್ಯುಲೇಟಿಂಗ್ ಹಾರ್ಮೋನ್ (TSH) ಎಂಬುವ ಇನ್ನೊಂದು ಹಾರ್ಮೋನ್ ನಿಯಂತ್ರಿಸುತ್ತದೆ. ಈ ಹಾರ್ಮೋನ್ ಅನ್ನು ಮೆದುಳಿನಲ್ಲಿ ಇರುವ ಪಿಟ್ಯುಟರಿ ಗ್ರಂಥಿಯು ಉತ್ಪಾದನೆ ಮಾಡುತ್ತದೆ. ಸಾಮಾನ್ಯವಾಗಿ ದೇಹದಲ್ಲಿ TSH ಪ್ರಮಾಣವು ಹೆಚ್ಚು ಇದ್ದಾಗ, ಪಿಟ್ಯುಟರಿ ಗ್ರಂಥಿಯು TSH ಉತ್ಪಾದನೆ ಅನ್ನು ನಿಲ್ಲಿಸುತ್ತದೆ. ಇದರಿಂದ ಥೈರಾಯಿಡ್ ಕೂಡ T4 ಮತ್ತು T3 ಹಾರ್ಮೋನ್ ತಯಾರಿಸುವುದನ್ನು ನಿಲ್ಲಿಸುತ್ತದೆ.

ತೊಂದರೆ ಉಂಟಾಗುವುದು ಯಾವಾಗ ಎಂದರೆ ಥೈರಾಯಿಡ್ ಗ್ರಂಥಿಯು ಇರಬೇಕಾದಷ್ಟು ಸಕ್ರಿಯವಾಗಿ ಇರದಿದ್ದಾಗ (ಹೈಪೋಥೈರಾಯಿಡಿಸ್ಮ್) ಅಥವಾ ಇರಬೇಕಿರುವುದಕ್ಕಿಂತ ಹೆಚ್ಚು ಸಕ್ರಿಯವಾಗಿದ್ದಾಗ (ಹೈಪರ್ ಥೈರಾಯಿಡಿಸ್ಮ್). ಥೈರಾಯಿಡ್ ಸಮಸ್ಯೆಯು ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು. ಥೈರಾಯಿಡ್ ಗ್ರಂಥಿಯಲ್ಲಿ ಕ್ಯಾನ್ಸರ್ ಕೂಡ ಉಂಟಾಗಬಹುದು. ಪ್ರೆಗ್ನನ್ಸಿ ವೇಳೆ ಥೈರಾಯಿಡ್ ಹೇಗೆ ಪರಿಣಾಮ ಬೀರುತ್ತದೆ ಎಂದು ಇಲ್ಲಿ ಕ್ಲಿಕ್ ಮಾಡಿ ಓದಿ!

 

ಕಾರಣಗಳು

ಥೈರಾಯಿಡ್ ಸಮಸ್ಯೆಯು TSH ಪ್ರಮಾಣವು ಸರಿ ಇಲ್ಲದಿದ್ದಾಗ ಉಂಟಾಗಬಹುದು ಅಥವಾ ಕೆಲವೊಮ್ಮೆ ಥೈರಾಯಿಡ್ ಗ್ರಂಥಿಯಲ್ಲೇ ಸಮಸ್ಯೆ ಇದ್ದಾಗ ಉಂಟಾಗುತ್ತದೆ.

ಹೈಪೋಥೈರಾಯಿಡ್

ಹೈಪೋಥೈರಾಯಿಡ್ ಸಮಸ್ಯೆಗೆ ಅತ್ಯಂತ ಸಾಮಾನ್ಯ ಕಾರಣ ಎಂದರೆ ಅದು ಹಾಷಿಮೋಟೋಸ್ ಥೈರಾಯಿಡಿಟಿಸ್, ಇದರಲ್ಲಿ ನಮ್ಮ ದೇಹವೇ ನಮ್ಮ ಥೈರಾಯಿಡ್ ಗ್ರಂಥಿ ಮೇಲೆ ದಾಳಿ ಮಾಡಲು ಪ್ರತಿಕಾಯಗಳನ್ನ ತಯಾರಿಸುತ್ತದೆ. ಸರ್ಜರಿ ಬೇರ್ಪಡಿಸುವಿಕೆ ಮತ್ತು ಕೆಲವು ಔಷಧಿಗಳು ಕೂಡ ಹೈಪೋಥೈರಾಯಿಡಿಸ್ಮ್  ಅನ್ನು ಉಂಟು ಮಾಡಬಹುದು.

ಹೈಪೋಥೈರಾಯಿಡಿಸ್ಮ್ ನ ಇನ್ನಷ್ಟು ಕಾರಣಗಳು ಎಂದರೆ ಅದು ಪಿಟ್ಯುಟರಿ ತೊಂದರೆಗಳು, ಮೆದುಳಲ್ಲಿನ ಹೈಪೋಥಾಲಾಮಸ್ ಮತ್ತು ಅಯೋಡೀನ್ ಕೊರತೆ. ಕೆಲವೊಂದು ಮಕ್ಕಳಿಗೆ ಹುಟ್ಟುತ್ತಲೇ ಹೈಪೋಥೈರಾಯಿಡಿಸ್ಮ್ ಉಂಟಾಗಬಹುದು.

ಹೈಪರ್ ಥೈರಾಯಿಡ್ 

ಹೈಪರ್ ಥೈರಾಯಿಡಿಸ್ಮ್ ಗೆ ಹಲವಾರು ಕಾರಣಗಳಿವೆ. ಗ್ರೇವ್ಸ್ ಕಾಯಿಲೆಯು ಹೈಪರ್ ಥೈರಾಯಿಡಿಸ್ಮ್. ಇದು ಯಾವಾಗ ಆಗುತ್ತದೆ ಎಂದರೆ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮ ಥೈರಾಯಿಡ್ ಗ್ರಂಥಿಯನ್ನು ಉತ್ತೇಜಿಸುವಂತಹ ಪ್ರತಿಕಾಯಗಳನ್ನ ಉತ್ಪಾದಿಸಿದಾಗ. ಇದು ಥೈರಾಯಿಡ್ ಗ್ರಂಥಿಯು ಹೆಚ್ಚು ಸಕ್ರಿಯವಾಗಿರುವಂತೆ ಮಾಡಿ ದೇಹದಲ್ಲಿ ಥೈರಾಯಿಡ್ ಹಾರ್ಮೋನುಗಳನ್ನ ಹೆಚ್ಚಿಸುತ್ತದೆ.

ಇನ್ನು ಕೆಲವು ರೀತಿಯ ಹೈಪರ್ ಥೈರಾಯಿಡ್ಗಳು ಎಂದರೆ ಅವು ಅಡೆನೊಮಾ ಥೈರಾಯಿಡ್ಗಳು. ಅಡೆನೊಮಾಗಳು ಎಂದರೆ ಥೈರಾಯಿಡ್ ಅಲ್ಲಿ ಹುಟ್ಟಿಕೊಳ್ಳುವ ಅಸಹಜ ಅಂಗಾಂಶಗಳ ಗಂಟು. ಇವುಗಳು ಸೇರಿಕೊಂಡು ಅಗತ್ಯ ಇಲ್ಲದ ಸಮಯದಲ್ಲೂ ಥೈರಾಯಿಡ್ ಹಾರ್ಮೋನುಗಳನ್ನು ಉತ್ಪಾದಿಸುತ್ತಲೇ ಇರುತ್ತವೆ.

ಹೈಪರ್ ಥೈರಾಯಿಡಿಸ್ಮ್ ಗೆ ಇನ್ನೊಂದು ಕಾರಣ ಎಂದರೆ ಅದು ನಮ್ಮ ಪಿಟ್ಯುಟರಿ ಗ್ರಂಥಿಯು ಹೆಚ್ಚು TSH ಅನ್ನು ಉತ್ಪಾದನೆ ಮಾಡುವುದು. ಹೆಚ್ಚು TSH ಉತ್ಪಾದನೆ ಆದಷ್ಟು ಥೈರಾಯಿಡ್ ಗ್ರಂಥಿಯು ಹೆಚ್ಚು ಪ್ರಚೋದನೆಗೆ ಒಳಗಾಗುತ್ತದೆ. ಪಿಟ್ಯುಟರಿ ಗ್ರಂಥಿಯ ಈ ಸಮಸ್ಯೆಗೆ ಕಾರಣ ಕೆಲವೊಮ್ಮೆ ಗಡ್ಡೆ ಬೆಳವಣಿಗೆ ಆಗಿರಬಹುದು ಅಥವಾ ಕೆಲವೊಮ್ಮೆ ಪಿಟ್ಯುಟರಿ ಗ್ರಂಥಿಯು ಥೈರಾಯಿಡಿಗೆ ಸ್ಪಂದಿಸುವುದನ್ನೇ ನಿಲ್ಲಿಸಿಬಿಡುವುದು ಆಗಿರಬಹುದು.

ಹೈಪರ್ ಥೈರಾಯಿಡಿಸ್ಮ್ ಉಂಟಾಗಲು ಸಾಧ್ಯತೆ ಇರುವ ಇನ್ನೊಂದು ಕಾರಣ ಎಂದರೆ ಥೈರಾಯಿಡಿಟಿಸ್. ಥೈರಾಯಿಡ್ ಗ್ರಂಥಿಯಲ್ಲಿ ಉರಿತ ಕಾಣಿಸಿಕೊಂಡಾಗ ಉಂಟಾಗುತ್ತದೆ ಇದು. ಇದು ಯಾವ ರೀತಿಯ ಥೈರಾಯಿಡಿಟಿಸ್ ಎಂಬುದು ಅದು ತಾತ್ಕಾಲಿಕ ಹೈಪರ್ ಥೈರಾಯಿಡಿಸ್ಮ್ ಉಂಟು ಮಾಡುತ್ತದೋ ಅಥವಾ ಶಾಶ್ವತ ಹೈಪರ್ ಥೈರಾಯಿಡಿಸ್ಮ್ ಉಂಟು ಮಾಡುತ್ತದೋ ಎಂಬುದು ಅವಲಂಬಿಸಿರುತ್ತದೆ.

 

ಲಕ್ಷಣಗಳು ಮತ್ತು ತೊಂದರೆಗಳು

ರಕ್ತದಲ್ಲಿ T3 ಮತ್ತು T4 ಹಾರ್ಮೋನುಗಳ ಕೊರತೆ ಉಂಟಾದಾಗ ಹೈಪೋಥೈರಾಯಿಡಿಸ್ಮ್ ಉಂಟಾಗುತ್ತದೆ. ಅಗತ್ಯದಷ್ಟು T3, T4 ಹಾರ್ಮೋನುಗಳು ನಿಮ್ಮ ರಕ್ತದಲ್ಲಿ ಇಲ್ಲದಿದ್ದರೆ, ನಿಮ್ಮ ಮೆಟಾಬಾಲಿಸಂ (ಪಚನಕಾರ್ಯ) ನಿಧಾನಗೊಳ್ಳುತ್ತದೆ. ಇದರ ಸಾಮಾನ್ಯ ಲಕ್ಷಣಗಳು ಎಂದರೆ :

೧. ಒಣ ಮತ್ತು ಬಿಡಿ ಬಿಡಿ ಕೂದಲು

೨. ಗೊಂದಲ ಅಥವಾ ಮರೆಯುವುದು

೩. ಹೊಟ್ಟೆ ಕಟ್ಟಿಕೊಳ್ಳುವುದು

೪. ಖಿನ್ನತೆ

೫. ಒಣ ಅಥವಾ ಸುಕ್ಕಾದ ಚರ್ಮ

೬. ಆಯಾಸ

೭. ಕೂದಲು ಉದುರುವಿಕೆ

೮. ಅಧಿಕ ಋತುಸ್ರಾವ

೯. ಸ್ವಲ್ಪ ಚಳಿಯನ್ನು ತಡೆಯಲು ಆಗದಿರುವುದು

೧೦. ಇರಿಸು ಮುರಿಸು ಉಂಟಾಗುವುದು

೧೧. ಸ್ನಾಯು ಸೆಳೆತ

೧೨. ಕ್ಷೀಣಿಸಿದ ನಾಡಿಮಿಡಿತ

೧೩. ದುರ್ಬಲತೆ

೧೪. ತೂಕ ಗಳಿಕೆ

ಒಂದು ವೇಳೆ ಹೈಪೋಥೈರಾಯಿಡಿಸ್ಮ್ ಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ, ತುಂಬಾ ವಿರಳವಾಗಿ, ತೀವ್ರ ಸ್ವರೂಪದ ಹೈಪೋಥೈರಾಯಿಡಿಸ್ಮ್ ಆದ ಮಿಕ್ಸೆಡಿಮಾ ಉಂಟಾಗುವ ಸಾಧ್ಯತೆಗಳಿರುತ್ತವೆ. ಮಿಕ್ಸೆಡಿಮಾ ಲಕ್ಷಣಗಳು ಎಂದರೆ :

೧. ದೇಹದ ತಾಪಮಾನ ಕಡಿಮೆ ಆಗುವುದು

೨. ಕ್ಷೀಣಿಸಿದ ಮಾನಸಿಕ ಪ್ರಕ್ರಿಯೆಗಳು

೩. ಸಂಕೋಚನದಿಂದ ಹೃದಯ ವೈಫಲ್ಯತೆ

ರಕ್ತದಲ್ಲಿ T4 ಮತ್ತು T3 ಹಾರ್ಮೋನುಗಳ ಪ್ರಮಾಣ ಹೆಚ್ಚಾದಾಗ ಹೈಪರ್ ಥೈರಾಯಿಡಿಸ್ಮ್ ಉಂಟಾಗುತ್ತದೆ. ಈ ಹಾರ್ಮೋನುಗಳು ನಿಮ್ಮ ಮೆಟಬೋಲಿಸಂ ಅನ್ನು ವೇಗವಾಗಿಸುತ್ತವೆ. ಹೈಪರ್ ಥೈರಾಯಿಡಿಸ್ಮ್ ನ ಸಾಮಾನ್ಯ ಲಕ್ಷಣಗಳು ಎಂದರೆ :

೧. ಏರಿದ ನಾಡಿಮಿಡಿತ

೨. ಏರಿದ ರಕ್ತದೊತ್ತಡ

೩. ಏರಿದ ದೇಹದ ತಾಪಮಾನ

೪. ಹೆಚ್ಚು ಬೆವೆಯುವುದು

೫. ಆತಂಕಕ್ಕೆ ಒಳಗಾಗುವುದು

೬. ಕೈಗಳು ನಡುಗುವುದು

೭. ಸುಸ್ತಾಗಿದ್ದರು ಅಥವಾ ಬಲಹೀನ ಆಗಿದ್ದರೂ ಚಡಪಡಿಸುವುದು

೮. ತೂಕ ಇಳಿಕೆ ಮತ್ತು ಹಸಿವು ಹೆಚ್ಚುವುದು

೯. ನಿದ್ದೆಗೆಡುವುದು

೧೦. ಪದೇ ಪದೇ ಮಲವಿಸರ್ಜನೆ, ಕೆಲವೊಮ್ಮೆ ಬೇಧಿ ಉಂಟಾಗುವುದು

೧೧. ಕಣ್ಣಿನ ಸುತ್ತಲಿನ ಪ್ರದೇಶ ಊದಿಕೊಳ್ಳುವುದು, ಕಣ್ಣಲ್ಲಿ ನೀರು ತುಂಬಿರುವುದು, ಬೆಳಕಿಗೆ ತುಂಬಾ ಸೂಕ್ಷ್ಮವಾಗಿರುವುದು.

೧೨. ಒಸ್ಟಿಯೊಪೊರೊಸಿಸ್

೧೩. ಋತುಚಕ್ರ ನಿಂತುಕೊಳ್ಳುವುದು

ಹೈಪರ್ ಥೈರಾಯಿಡಿಸ್ಮ್ ಗೆ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ, ಜೀವಕ್ಕೆ ಕುತ್ತು ತರುವಂತಹ ಕಾಯಿಲೆ ಆದ ಥೈರಾಯಿಡ್ ಸ್ಟಾರ್ಮ್ ಉಂಟಾಗಬಹುದು. ಥೈರಾಯಿಡ್ ಸ್ಟಾರ್ಮಿನ ಲಕ್ಷಣಗಳು ಎಂದರೆ :

೧. ಗೊಂದಲ

೨. ಕೋಮಾ

೩. ಜ್ವರ

೪. ಹೆಚ್ಚಿದ ರಕ್ತದೊತ್ತಡ

೫. ಅನಿಯಮಿತ ನಾಡಿಮಿಡಿತ (ಇದು ಜೀವಕ್ಕೆ ಕುತ್ತು ತರುವಂತದ್ದು)

೬. ಜಾಂಡೀಸ್ ಆಗಿ ಲಿವರ್ ಹಿಗ್ಗಿಕೊಳ್ಳುವುದು

೭. ಚಿತ್ತಚಂಚಲತೆ

೮. ಸ್ನಾಯು ನೋವು

೯. ಚಡಪಡಿಕೆ

೧೦. ಗಾಬರಿ

೧೧. ದುರ್ಬಲತೆ

 

ಥೈರಾಯಿಡ್ ತಪಾಸಣೆ

ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಹಿನ್ನಲೆಯಿಂದ ಥೈರಾಯಿಡ್ ಇದೆ ಎಂಬ ಸಂದೇಹವಿದ್ದರೆ, ಅದನ್ನು ಲ್ಯಾಬ್ ಪರೀಕ್ಷೆಗಳ ಮೂಲಕ ದೃಢಪಡಿಸಲಾಗುತ್ತದೆ. ಲ್ಯಾಬ್ ಪರೀಕ್ಷೆಗಲ್ಲಿ ರಕ್ತದಲ್ಲಿನ TSH ಮತ್ತು ಥೈರಾಯಿಡ್ ಹಾರ್ಮೋನುಗಳ ಪ್ರಮಾಣವನ್ನು ಕಂಡು ಹಿಡಿಯುವುದನ್ನು ಒಳಗೊಂಡಿರುತ್ತವೆ. ಸೇರೊಲೊಜಿ ಪರೀಕ್ಷೆಗಳನ್ನ ನಡೆಸಿ ನಿಮ್ಮ ದೇಹದಲ್ಲಿನ ಆಂಟಿಬಾಡೀಸ್ (ಪ್ರತಿಕಾಯಕಗಳು) ಪರಿಶೀಲಿಸಿ, ನಿಮಗಿರುವುದು ಹೈಪೋಥೈರಾಯಿಡಿಸ್ಮಾ ಅಥವಾ ಹೈಪರ್ ಥೈರಾಯಿಡಿಸ್ಮಾ  ಎಂದು ಕಂಡು ಹಿಡಿಯಲಾಗುತ್ತದೆ. ಒಂದು ವೇಳೆ ನಿಮಗೇನಾದರೂ ಥೈರಾಯಿಡ್ ಕ್ಯಾನ್ಸರ್ ಇರಬಹುದು ಎಂಬ ಸಂಶಯವನ್ನು ವೈದ್ಯರು ವ್ಯಕ್ತಪಡಿಸಿದರೆ, ಬಯಾಪ್ಸಿ ಮಾಡಿ ಥೈರಾಯಿಡ್ ಅಂಗಾಂಶದ ತುಂಡನ್ನು ತೆಗೆದುಕೊಂಡು ಕ್ಯಾನ್ಸರ್ ಇರಬಹುದೇ ಎಂದು ಕಂಡು ಹಿಡಿಯಲು ಪರೀಕ್ಷೆಗಳನ್ನ ನಡೆಸಬಹುದು.

ಇನ್ನೊಂದು ವಿಧಾನವಾದ ಫಂಕ್ಶನಲ್ ಸ್ಟಿಮ್ಯುಲೇಷನ್ ಟೆಸ್ಟ್ ಅನ್ನು ಈ ಥೈರಾಯಿಡ್ ಲಕ್ಷಣಗಳಿಗೆ ಕಾರಣ ಆಗಿರುವುದು ಪಿಟ್ಯುಟರಿ ಮತ್ತು ಥೈರಾಯಿಡ್ ಗ್ರಂಥಿಗಳೇ ಎಂದು ತಿಳಿದುಕೊಳ್ಳಲು ನಡೆಸಲಾಗುತ್ತದೆ. ಇದರ ನಂತರ ಅಲ್ಟ್ರಾಸೌಂಡ್ ಮತ್ತು ನ್ಯೂಕ್ಲಿಯರ್ ಥೈರಾಯಿಡ್ ಪರೀಕ್ಷೆಗಳನ್ನ ನಡೆಸಲಾಗುವುದು.

 

ಚಿಕಿತ್ಸೆ ಮತ್ತು ನಿವಾರಣೆ

ಹೈಪೋಥೈರಾಯಿಡಿಸ್ಮ್ ಗೆ ಸಾಮಾನ್ಯವಾಗಿ ನೀಡುವ ಚಿಕಿತ್ಸೆ ಎಂದರೆ ಅದು ಹಾರ್ಮೋನ್ ರಿಪ್ಲೇಸೆಮೆಂಟ್ ಥೆರಪಿ. ಈ ವಿಧಾನದಲ್ಲಿ ದೇಹದಲ್ಲಿ ಉಂಟಾಗಿರುವ ಥೈರಾಯಿಡ್ ಹಾರ್ಮೋನ್ ಕೊರತೆಯನ್ನು ನೀಗಿಸಲು ಕೃತಕ ಥೈರಾಯಿಡ್ ಹಾರ್ಮೋನ್ (ಉದಾಹರಣೆಗೆ ಲೆವೊಥೈರಾಕ್ಸಿನ್) ಅನ್ನು ಬಾಯಿಯ ಮೂಲಕ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜೀವನ ಪರ್ಯಂತದ ಚಿಕಿತ್ಸೆ ಆಗಿರುತ್ತದೆ.

ಈ ಚಿಕಿತ್ಸೆಯನ್ನು ಪಡೆಯುವ ಬಹುತೇಕ ಜನರು ಯಾವುದೇ ಅಡ್ಡ ಪರಿಣಾಮಗಳನ್ನ ಎದುರಿಸುವುದಿಲ್ಲ. ಆದರೆ ತುಂಬಾ ಹೆಚ್ಚು ಥೈರಾಯಿಡ್ ಹಾರ್ಮೋನ್ ಅನ್ನು ಸೇವಿಸಿದರೆ, ಅದು ನಿಮ್ಮಲ್ಲಿ ನಡುಕ, ನಾಡಿಮಿಡಿತ ಏರಿಳಿತಗಳು ಮತ್ತು ನಿದ್ರಾಹೀನತೆ ಉಂಟು ಮಾಡಬಹುದು. ಹೆಂಗಸರು ಗರ್ಭಿಣಿಯಾದಾಗ ಈ ಕೃತಕ ಹಾರ್ಮೋನ್ ಅನ್ನು 50% ಅಷ್ಟು ಹೆಚ್ಚಾಗಿ ನೀಡಬೇಕಾಗುತ್ತದೆ.

ಹೈಪರ್ ಥೈರಾಯಿಡಿಸ್ಮ್ ಅನ್ನು ಅಯೋಡೀನ್ (ಅದು ರೇಡಿಯೋಆಕ್ಟಿವ್ ಅಯೋಡೀನ್ ಕೂಡ ಆಗಿರಬಹುದು), ಆಂಟಿ-ಥೈರಾಯಿಡ್ ಔಷಧಿಗಳು ಅಥವಾ ಸರ್ಜರಿ ಮೂಲಕ ಸರಿಪಡಿಸಬಹುದು. ಕಡಿಮೆ ಅಂದರೂ 80% ಅಷ್ಟು ಕೇಸುಗಳಲ್ಲಿ, ಕೇವಲ ಒಂದು ಡೋಸ್ ರೇಡಿಯೋಆಕ್ಟಿವ್ ಅಯೋಡೀನ್ ಹೈಪರ್ ಥೈರಾಯಿಡಿಸ್ಮ್ ವಾಸಿ ಮಾಡಲು ಸಾಕು. ಆದರೆ ತುಂಬಾ ಥೈರಾಯಿಡ್ ನಾಶ ಆಗಿಬಿಟ್ಟರೆ, ಅದು ಹೈಪೋಥೈರಾಯಿಡಿಸ್ಮ್ ಆಗಿ ಪರಿವರ್ತನೆ ಆಗಿಬಿಡುತ್ತದೆ. ದೇಹದ ಇತರೆ ಭಾಗಗಳಿಗೆ ತೊಂದರೆ ಆಗದಂತೆ ರೇಡಿಯೋಆಕ್ಟಿವ್ ಅಯೋಡೀನ್ ಅನ್ನು ನೀಡಲಾಗುತ್ತದೆ. ಆದರೆ ಇದನ್ನು ಗರ್ಭಿಣಿ ಹೆಂಗಸರಿಗೆ ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಏಕೆಂದರೆ ಇದು ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿ ಉಂಟು ಮಾಡಬಹುದು.

ಸಾಮಾನ್ಯ ಅಯೋಡೀನಿನ ಜಾಸ್ತಿ ಡೋಸ್ - ಇದು ಥೈರಾಯಿಡ್ ಗ್ರಂಥಿಗೆ ಹಾನಿ ಮಾಡದೆ, ಥೈರಾಯಿಡ್ ಹಾರ್ಮೋನುಗಳ ಬಿಡುಗಡೆಯನ್ನು ತಡೆಯುತ್ತದೆ. ಇದನ್ನು ಮೊದಲು ತಿಳಿಸಿದ ಥೈರಾಯಿಡ್ ಸ್ಟಾರ್ಮಿನ ತುರ್ತು ಪರಿಸ್ಥಿತಿಗಳಲ್ಲಿ ನೀಡಲಾಗುತ್ತದೆ ಮತ್ತು ಯಾವುದಾದರೂ ಸರ್ಜರಿ ಮುನ್ನ ದೇಹದಲ್ಲಿ ಥೈರಾಯಿಡ್ ಪ್ರಮಾಣ ಕಡಿಮೆ ಆಗಬೇಕೆಂದರೆ ನೀಡಲಾಗುತ್ತದೆ.

ಆಂಟಿ-ಥೈರಾಯಿಡ್ ಔಷಧಿಗಳು - ಇವುಗಳು ಹೈಪರ್ ಥೈರಾಯಿಡಿಸ್ಮ್ ಅನ್ನು 6 ವಾರಗಳಿಂದ 3 ತಿಂಗಳುಗಳ ಒಳಗೆ ನಿಯಂತ್ರಣಕ್ಕೆ ತರುತ್ತವೆ. ಈ ಔಷಧಿಗಳು ಥೈರಾಯಿಡ್ ಗ್ರಂಥಿಯು ಉತ್ಪಾದನೆ ಮಾಡುವ ಥೈರಾಯಿಡ್ ಹಾರ್ಮೋನುಗಳ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಇದರಲ್ಲಿ ಹೆಚ್ಚಿನ ಡೋಸ್ ಬೇಗ ಕೆಲಸ ಮಾಡುತ್ತೆ ಆದರೂ ಅದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು.

ಸರ್ಜರಿ ಮೂಲಕ ಥೈರಾಯಿಡ್ ಗ್ರಂಥಿಯನ್ನು ತೆಗೆದುಹಾಕುವುದು - ಇದನ್ನು ಥೈರಾಯಿಡೆಕ್ಟಮಿ ಎನ್ನುತ್ತಾರೆ ಮತ್ತು ಕೆಲವೊಮ್ಮೆ ಇದು ಅನಿವಾರ್ಯ ಆಗುತ್ತದೆ. ಥೈರಾಯಿಡ್ ಅಲ್ಲಿ ಕ್ಯಾನ್ಸರ್ ಗಡ್ಡೆಗಳು ಇದ್ದರೆ; ಅಥವಾ ಕ್ಯಾನ್ಸರ್ ಕಾರಕ ಗಡ್ಡೆ ಅಲ್ಲದಿದ್ದರೂ ಉಸಿರಾಟ ಮತ್ತು ಆಹಾರ ನುಂಗಲು ತೊಂದರೆ ಮಾಡುತ್ತಿದ್ದರೆ; ಅಥವಾ ಆ ವ್ಯಕ್ತಿಗೆ ರೇಡಿಯೋಆಕ್ಟಿವ್ ಅಯೋಡೀನ್ ಅಥವಾ ಆಂಟಿ-ಥೈರಾಯಿಡ್ ಔಷಧಿಗಳು ಸೇವಿಸಲು ಸಾಧ್ಯವಾಗದೆ ಇದ್ದಾಗ ಅಥವಾ ಅವುಗಳು ಕೆಲಸ ಮಾಡದೆ ಇದ್ದರೆ; ಅಥವಾ ಥೈರಾಯಿಡ್ ಗಡ್ಡೆಯು ದ್ರವ್ಯವನ್ನು ತುಂಬಿಕೊಂಡಿದ್ದರೆ; ಈ ಸರ್ಜರಿ ಬೇಕಾಗುತ್ತದೆ. ಈ ರೀತಿ ಸರ್ಜರಿ ಮಾಡಿ ಥೈರಾಯಿಡ್ ಗ್ರಂಥಿಯನ್ನು ತೆಗೆದು ಹಾಕಿದ ಮೇಲೆ, ಆ ವ್ಯಕ್ತಿಗೆ ಹೈಪೋಥೈರಾಯಿಡಿಸ್ಮ್ ಉಂಟಾಗಬಹುದು, ಇದಕ್ಕೆ ಚಿಕಿತ್ಸೆಯಾಗಿ ಆ ವ್ಯಕ್ತಿಯು ತನ್ನ ಜೀವನ ಪರ್ಯಂತ ಥೈರಾಯಿಡ್ ಹಾರ್ಮೋನ್ ಥೆರಪಿ ಅನ್ನು ಸ್ವೀಕರಿಸಬೇಕಾಗುತ್ತದೆ.

ಕೆಲವೊಮ್ಮೆ ನಿಮ್ಮ ವೈದ್ಯರು ಹೈಪರ್ ಥೈರಾಯಿಡಿಸ್ಮ್ ನ ಇತರೆ ಲಕ್ಷಣಗಳಾದ ನಡುಕ, ಏರಿದ ನಾಡಿಮಿಡಿತ, ಆತಂಕ ಮತ್ತು ಭಯವನ್ನು ಕಡಿಮೆ ಮಾಡಲು ಇತರೆ ಔಷಧಿಗಳನ್ನು ಕೂಡ ಶಿಫಾರಸು ಮಾಡಬಹುದು. ಆದರೆ ಈ ಔಷಧಿಗಳು ಥೈರಾಯಿಡ್ ಸಮಸ್ಯೆಯನ್ನು ವಾಸಿ ಮಾಡುವುದಿಲ್ಲ.

ಥೈರಾಯಿಡ್ ಕ್ಯಾನ್ಸರಿಗೆ ಚಿಕಿತ್ಸೆ - ಇದು ಸಾಧಾರಣವಾಗಿ ಯಾವುದಾದರೂ ಎರಡು ವಿಧಾನಗಳ ಕಾಂಬಿನೇಶನ್ ಆಗಿರುತ್ತದೆ. ಥೈರಾಯಿಡೆಕ್ಟಮಿ, ರೇಡಿಯೋಆಕ್ಟಿವ್ ಅಯೋಡೀನ್, ರೇಡಿಯೇಶನ್ ಥೆರಪಿ, ಆಂಟಿ-ಕ್ಯಾನ್ಸರ್ ಔಷಧಿಗಳು, ಮತ್ತು ಹಾರ್ಮೋನ್ ನಿಯಂತ್ರಣ. ಇಷ್ಟು ವಿಧಾನಗಳಲ್ಲಿ ಸಾಮಾನ್ಯವಾಗಿ ಯಾವುದಾದರೂ ಎರಡು ವಿಧಾನಗಳನ್ನ ಆಯ್ದುಕೊಳ್ಳಲಾಗುತ್ತದೆ.

 ---------------------------------------------------------------------------------------------------------------------------------------------------------------------------

ಅಮ್ಮಂದಿರೆ! ನಿಮಗೆಲ್ಲಾ ಒಂದು ಸಿಹಿ ಸುದ್ದಿ ಇದೆ!

ನಾವು, ಅಂದರೆ ಟೈನಿಸ್ಟೆಪ್ ಸಂಪೂರ್ಣ ನೈಸರ್ಗಿಕ ಫ್ಲೋರ್ ಕ್ಲೀನರ್ ಅನ್ನು ಲಾಂಚ್ ಮಾಡಿದ್ದು, ಇದು ನಿಮಗೆ, ನಿಮ್ಮ ಮಗುವಿಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಕ್ಷಣವೇ ಕೀಟಾಣುಗಳಿಗೆ ಮತ್ತು ರಾಸಾಯನಿಕಗಳಿಗೆ ವಿದಾಯ ಹೇಳಿಬಿಡಿ!

ಒಮ್ಮೆ ನಮ್ಮ ಈ ಉತ್ಪನ್ನವನ್ನು ಪ್ರಯತ್ನಿಸಿ ಮತ್ತು ನಿಮಗೆ ಇಷ್ಟವಾಯಿತೇ ಎಂದು ತಿಳಿಸಿ. ಇದನ್ನು ಈಗಲೇ ಆರ್ಡರ್  ಮಾಡಲು ಇಲ್ಲಿ ಕ್ಲಿಕ್ ಮಾಡಿ!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon