Link copied!
Sign in / Sign up
25
Shares

ಎಲ್ಲಾ ತಾಯಂದಿರು ಗರ್ಭಧಾರಣೆ ವೇಳೆ ವೈದ್ಯರಿಗೆ ಕೇಳುವ 7 ಪ್ರಶ್ನೆಗಳು

ಗರ್ಭಧಾರಣೆಯು ಅನನ್ಯವಾದುದು ಮತ್ತು ಉತ್ತೇಜಕವಾದುದು. ಅದು ಖಚಿತವಾಗಿ ನಿಮ್ಮಲ್ಲಿ (ಮತ್ತು ನಿಮ್ಮ ಸಂಗಾತಿಯಲ್ಲಿ) ಹೆಚ್ಚಿನ ಅನುಮಾನಗಳನ್ನು ಹುಟ್ಟುಹಾಕುತ್ತದೆ.  ಸ್ತ್ರೀರೋಗತಜ್ಞರ ಪ್ರಕಾರ  ಗರ್ಭಿಣಿ ಮಹಿಳೆಯರು  ವೈದ್ಯರೊಂದಿಗೆ  ಕೆಲವು ವಿಷಯಗಳ ಬಗ್ಗೆ ಖಂಡಿತವಾಗಿ ಚರ್ಚಿಸಲೇಬೇಕು.

ಗರ್ಭಿಣಿಯರು ಒಂಬತ್ತು  ತಿಂಗಳು ತುಂಬುವವರೆಗು, ಹೆರಿಗೆಯ ನೋವು ಕಾಣಿಸಿಕೊಳ್ಳುವವರೆಗೂ ವೈದ್ಯರನ್ನು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ಮತ್ತು ಆ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.

೧. ಮಾಂಸಖಂಡದ ಸೆಳೆತ ಹಾಗು ರಕ್ತಸ್ರಾವ ಸಾಮಾನ್ಯವೇ?

ಮೊದಲ ತ್ರೈಮಾಸಿಕದಲ್ಲಿ ಸ್ವಲ್ಪ ರಕ್ತಸ್ರಾವ ಅಥವಾ  ಮಾಂಸಖಂಡದ ಸೆಳೆತ ಕಂಡುಬಂದಲ್ಲಿ ಹೆದರುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ   ಸಮಯದಲ್ಲಿ  ಭ್ರೂಣವು  ಗರ್ಭಕೋಶದ  ಒಳಗೆ ಬೆಳೆಯಲು ಪ್ರಾರಂಭಿಸುತ್ತದೆ. ಮಾಂಸಖಂಡದ ಸೆಳೆತ  ಅಥವಾ ರಕ್ತಸ್ರಾವ ನಿರಂತರವಾಗಿದ್ದಲ್ಲಿ, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಕೆಲವೊಮ್ಮೆ  ಅದು ಯೋನಿ ಅಥವಾ ಗರ್ಭಾಶಯದ ಸೋಂಕು ಆಗಿರಬಹುದು ಹಾಗು  ಅತ್ಯಂತ ವಿರಳವಾಗಿ, ಸ್ವಲ್ಪ ಗಂಭೀರವಾದಂತ ಅಪಸ್ಥಾನೀಯ ಗರ್ಭಧಾರಣೆಯೂ  ಆಗಿರಬಹುದು.

೨. ಗರ್ಭಾವಸ್ಥೆಯಲ್ಲಿ ಎಷ್ಟು ತೂಕ ಹೆಚ್ಚಳವು ಒಪ್ಪುವಂತದ್ದು?

ಗರ್ಭಾವಸ್ಥೆಯಲ್ಲಿ ನೀವು ಹೆಚ್ಚಾಗಬಹುದಾದಂತಹ ತೂಕವು ಸಾಮಾನ್ಯವಾಗಿ ನಿಮ್ಮ ಪೂರ್ವಗರ್ಭಧಾರಣೆಯ ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ಬಳಸಿಕೊಂಡು ಲೆಕ್ಕ ಹಾಕಲಾಗುವುದು. ನಿಮ್ಮ ಎತ್ತರ ಹಾಗು ತೂಕವನ್ನು ಇಲ್ಲಿ ಪರಿಗಣಿಸಲಾಗುವುದು. ವೈದ್ಯರು ನಿಮ್ಮ ತ್ರೈಮಾಸಿಕದ ಆಧಾರದ ಮೇಲೆ, ತೂಕಕ್ಕೆ ಸಂಬಂಧಿಸಿದಂತೆ  ನಿಮಗೊಂದು ಶ್ರೇಣಿಯನ್ನು ಒದಗಿಸಬೇಕು ಮತ್ತು ನಿಮ್ಮ ತೂಕವನ್ನು ನೇಮಕಾತಿಯ ವೇಳೆಯಲ್ಲಿ ಪರೀಕ್ಷಿಸಬೇಕು. BMI ಪ್ರಕಾರವಾಗಿ ತೂಕ ಹೆಚ್ಚಳದ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲಿದೆ -

ಕಡಿಮೆ ತೂಕ (BMI <೧೮.೫):
 
೧೨ ರಿಂದ ೧೮ ಕೆಜಿ

ಸಾಧಾರಣ ತೂಕ (BMI ೧೮.೫ ರಿಂದ ೨೪.೯):
೧೧ ರಿಂದ ೧೫ ಕೆಜಿ

ಅತಿಯಾದ ತೂಕ (BMI ೨೫.೦ ರಿಂದ ೨೯.೯):
ರಿಂದ ೧೧ ಕೆಜಿ

ಬೊಜ್ಜು (BMI ≥೩0.0):
ರಿಂದಕೆಜಿ

೩. ಗರ್ಭಾವಸ್ಥೆಯಲ್ಲಿ ಮಾಡಬಹುದಾದ ವ್ಯಾಯಾಮಗಳು ಯಾವುವು?

ಗರ್ಭಾವಸ್ಥೆಯಲ್ಲಿ ಸಕ್ರಿಯವಾಗಿದ್ದರೆ ನೀವು  ಮತ್ತು ನಿಮ್ಮ ಮಗುವು  ಆರೋಗ್ಯವಾಗಿರಬಹುದು. ವಾಯುವಿಹಾರ, ಈಜು ಮತ್ತು ಯೋಗದಂತಹ ಆರೋಗ್ಯಕರವಾದ ಚಟುವಟಿಕೆಗಳು ಗರ್ಭಾವಸ್ಥೆಯಲ್ಲಿ ಸಹಾಯಕಾರಿಯಾಗಿವೆ. ಆದರೆ ನೀವು ಇಂತಹ ಚಟುವಟಿಕೆಯಲ್ಲಿ ತೊಡಗಿದಾಗ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.  ಕೆಳಗೆ ಬೀಳುವ ಸಾಧ್ಯತೆಗಳಿರುವಂತಹ  ಒರಟಾದ ವ್ಯಾಯಾಮಗಳನ್ನಾಗಲಿ, ಬಲವಂತವಾಗಿ ಕಷ್ಟಪಟ್ಟು ಮಾಡುವಂತಹ ವ್ಯಾಯಾಮಗಳನ್ನಾಗಲಿ ಮಾಡಬೇಡಿ.

೪. ಗರ್ಭಾವಸ್ಥೆಯಲ್ಲಿ ನಾನು ಎಷ್ಟು ಕಾಲ ಕೆಲಸ ಮಾಡಬಹುದು?

ಇದು ನೀವು ಮಾಡುವ ಕೆಲಸದ ಮೇಲೆ  ಅವಲಂಭಿಸುತ್ತದೆ. ಆದರೆ ನಿಮ್ಮ ಕೊನೆಯ ತಿಂಗಳ ತನಕ ನೀವು ಕೆಲಸವನ್ನು ಮುಂದುವರಿಸುವ ಸಾಧ್ಯತೆಗಳಿವೆ. ನಿಮ್ಮ ಕೆಲಸವೇನಾದರು ದೈಹಿಕವಾಗಿ ಶ್ರಮಪಡುವಂತಹದಿದ್ದರೆ ಅಥವಾ ಗರ್ಭಾವಸ್ಥೆಯಲ್ಲಿ ತೊಡಕುಗಳನ್ನು ಉಂಟುಮಾಡುವಂತದ್ದಾಗಿದ್ದರೆ ನಿಮ್ಮ ಮತ್ತು ನಿಮ್ಮ ಮಗುವಿನ ಸುರಕ್ಷತೆಗಾಗಿ ಕೆಲವು ನಿರ್ಬಂಧಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ನೀವು ಕೆಲಸದಲ್ಲಿ ಅನುಭವಿಸಬಹುದಾದ ಮಾನಸಿಕ ಒತ್ತಡಗಳನ್ನೂ ಕೂಡ ನಿರ್ಲಕ್ಷಿಸಬಾರದು. ನಿಮಗೆ ಕೆಲಸ ನಿಭಾಯಿಸಲು ಸಾಧ್ಯವಾಗದಿದ್ದರೆ  ರಜೆ ತೆಗೆದುಕೊಳ್ಳುವುದು ಉತ್ತಮ.

೫. ಜನನ ಯೋಜನೆಯ ಬಗ್ಗೆ ಚರ್ಚಿಸಬಹುದೇ?

ಜನನ ಯೋಜನೆ ಅಗತ್ಯವಾದದ್ದೇನಲ್ಲ (ಆ ದಿನ ಬಂದಾಗ, ನೀವು ಅದನ್ನು ಅನುಸರಿಸದೆ  ಹೋಗಬೊಹುದು). ಬಹಳಷ್ಟು ಮಹಿಳೆಯರು ವಿತರಣಾ ಪ್ರಕ್ರಿಯ ಮತ್ತು ಹೆರಿಗೆ ನೋವಿನ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಯೋಜನೆಯನ್ನು ರಚಿಸುತ್ತಾರೆ. ಯೋಜನೆಯ ಇನ್ನೊಂದು ಉದ್ದೇಶವೇನೆಂದರೆ ಸಂಬಂಧಪಟ್ಟ ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಆದ್ಯತೆಗಳ ಬಗ್ಗೆ ತಿಳಿಸಿಕೊಡುವುದು. ಹೆರಿಗೆ ನೋವು ಕಾಣಿಸಿಕೊಳ್ಳುವ ಮುನ್ನ ನಿಮ್ಮ ಜನನ ಯೋಜನೆಯನ್ನು ನಿಮ್ಮ ವೈದ್ಯರೊಂದಿಗೆ ಪರಿಶೀಲಿಸುವುದರಿಂದ ಮುಂದೆ ಎದುರಿಸಬಹುದಾದ  ಸನ್ನಿವೇಶಗಳನ್ನು ಚರ್ಚಿಸುವ ಅವಕಾಶ ದೊರೆಯುತ್ತದೆ. ವಿಶೇಷವಾಗಿ ಅದೇನಾದರು ಹೆಚ್ಚು  ಅಪಾಯಕಾರಿ ಗರ್ಭಧಾರಣೆಯಾಗಿದ್ದಲ್ಲಿ ಮತ್ತು ನಿಮಗೇನಾದರೂ ಜನನ ಯೋಜನೆಯ ಬಗ್ಗೆ ಹೆಚ್ಚಿನ ಚಿಂತೆಯಿದ್ದಲ್ಲಿ, ವೈದ್ಯರೊಂದಿಗೆ ಚರ್ಚಿಸಬೇಕಾಗುತ್ತದೆ.

೬. ನನ್ನ ಹೆರಿಗೆಯ  ಸಮಯದಲ್ಲಿ ಏನನ್ನು ನಿರೀಕ್ಷಿಸಬೇಕು?

ನಿಮ್ಮ ನಿರೀಕ್ಷೆಯು ಹೆರಿಗೆಯ  ಸ್ಥಳದ ಮೇಲೆ ಅವಲಂಭಿಸಿರುತ್ತದೆ. ಆಸ್ಪತ್ರೆ, ಜನನ ಕೇಂದ್ರ ಅಥವಾ ಮನೆ ಇವುಗಳ್ಳಲ್ಲಿ ಯಾವುದು ನಿಮ್ಮ ಹೆರಿಗೆಯ  ಸ್ಥಳ ಎಂಬುದರ ಮೇಲೆ ಹೆರಿಗೆಯ  ಪ್ರಕ್ರಿಯೆಯು ಮತ್ತು ಹೆರಿಗೆ ಬೇನೆಯು ಬಹಳಷ್ಟು ಬದಲಾಗುವುದು. ಗರ್ಭಕಂಠದ ಹಿಗ್ಗುವಿಕೆ ಮತ್ತು ದೌರ್ಬಲ್ಯವನ್ನು ಖಚಿತಪಡಿಸಲು   ನರ್ಸ್ ಅಥವಾ ವೈದ್ಯರು ಗರ್ಭಕಂಠವನ್ನು ಸಾಂದರ್ಭಿಕವಾಗಿ ಪರಿಶೀಲಿಸುವರು. ನಿಮ್ಮ ಮತ್ತು  ನಿಮ್ಮ ಮಗುವಿನ ಯೋಗಕ್ಷೇಮಕ್ಕಾಗಿ ವೈದ್ಯರು ಕೆಲವು ಶಿಫಾರಸು ಮಾಡಲ್ಪಟ್ಟ ಕಾರ್ಯವಿಧಾನಗಳನ್ನು  ಮಾಡಬಹುದು. ಎಲೆಕ್ಟ್ರಾನಿಕ್ ಭ್ರೂಣದ ಮೇಲ್ವಿಚಾರಣೆ ಮತ್ತು IV ಸೇರಿದಂತೆ  ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ತಾಯಿಯ ಆರೈಕೆ ಮಾಡಲಾಗುವುದು.

೭. ನನಗೆ ಸಿಸೇರಿಯನ್ ಮಾಡಬೇಕಾದ ಸಾಧ್ಯತೆಗಳೆಷ್ಟು?

ಸುಮಾರು ಮೂರು ಮಹಿಳೆಯರಲ್ಲಿ ಒಬ್ಬರಿಗೆ ಸಿಸೇರಿಯನ್ ಆಗುವ ಸಾಧ್ಯತೆವಿರುತ್ತದೆ. ನೈಸರ್ಗಿಕ ಜನ್ಮಕ್ಕಾಗಿ ನೀವು ಆಶಿಸುತ್ತಿದ್ದರೆ  ನಿಮ್ಮ ವೈದ್ಯರ ಜೊತೆ ನೀವು  ಮಾತನಾಡುವುದು ಉತ್ತಮ.  ವೈದ್ಯರೊಂದಿಗೆ  ನೀವು  ಎದುರಿಸಬೇಕಾಗಿರುವ  ವ್ಯಯಕ್ತಿಕ    ಅಪಾಯಗಳನ್ನು ಪರಿಶೀಲಿಸುವುದರಿಂದ ನೀವು ಏನನ್ನು ನಿರೀಕ್ಷಿಸಬೇಕೆಂದು ಗೊತ್ತಾಗುತ್ತದೆ. ಈ ಪ್ರಶ್ನೆಗೆ ನೇರವಾದ ಉತ್ತರವಿಲ್ಲದಿರುವುದರಿಂದ  ಎಲ್ಲ ತಾಯಂದಿರು ಕೂಡ ಆಶಾವದಿಗಳಾಗಿರುವುದೇ ಉತ್ತಮ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon